ಪಕ್ಷದ ನಾಯಕರ ಹೊಂದಾಣಿಕೆ ರಾಜಕಾರಣ ಸೇರಿದಂತೆ ಪಕ್ಷದ ಆಂತರಿಕ ವಿಚಾರದ ಬಗ್ಗೆ ಪಕ್ಷದ ನಾಯಕರು ಹೊರಗಡೆ ನಿಂತು ಮಾತನಾಡುವುದು ಸರಿಯಲ್ಲ. ಬಿಜೆಪಿ ಎಂದರೆ ಶಿಸ್ತಿನ ಪಕ್ಷ ದೇಶದಲ್ಲಿ ಪಕ್ಷಕ್ಕೆ ತನ್ನದೇ ಆದ ಗೌರವವಿದೆ.
ಶಿವಮೊಗ್ಗ (ಜೂ.29): ಪಕ್ಷದ ನಾಯಕರ ಹೊಂದಾಣಿಕೆ ರಾಜಕಾರಣ ಸೇರಿದಂತೆ ಪಕ್ಷದ ಆಂತರಿಕ ವಿಚಾರದ ಬಗ್ಗೆ ಪಕ್ಷದ ನಾಯಕರು ಹೊರಗಡೆ ನಿಂತು ಮಾತನಾಡುವುದು ಸರಿಯಲ್ಲ. ಬಿಜೆಪಿ ಎಂದರೆ ಶಿಸ್ತಿನ ಪಕ್ಷ ದೇಶದಲ್ಲಿ ಪಕ್ಷಕ್ಕೆ ತನ್ನದೇ ಆದ ಗೌರವವಿದೆ. ಸಾರ್ವಜನಿಕವಾಗಿ ಪಕ್ಷಕ್ಕೆ ಮುಜುಗರ ತರುವ ರೀತಿಯ ಹೇಳಿಕೆ ನೀಡಬೇಡಿ ಎಂದು ಸಿ.ಟಿ. ರವಿ, ಪ್ರತಾಪ್ ಸಿಂಹ, ಬಸವನ ಗೌಡ ಯತ್ನಾಳ್, ರೇಣುಕಾಚಾರ್ಯ ಎಲ್ಲರಿಗೂ ಪ್ರಾರ್ಥನೆ ಮಾಡುತ್ತೇನೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದರು. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮುಂದೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಲೋಕಸಭಾ ಚುನಾವಣೆಗಳು ಬರುತ್ತಿವೆ.
ಈ ಸಂಬಂಧ ರಾಜ್ಯಾದ್ಯಂತ ಕಾರ್ಯಕರ್ತರ ಸಭೆ ನಡೆಸಲಾಗಿದೆ. ಸಭೆಯಲ್ಲಿ ಕೆಲವರು ಗೊಂದಲ ಮೂಡಿಸಿದ್ದಾರೆ. ಅದನ್ನು ಸರಿಮಾಡಿ ಲೋಕಸಭಾ ಚುನಾವಣೆ ಗೆಲ್ಲುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು. ಕಾಂಗ್ರೆಸ್ ಗ್ಯಾರಂಟಿ ವೈಫಲ್ಯದ ವಿರುದ್ಧ ಬಿಜೆಪಿ ಪಕ್ಷದಿಂದ ಸದನದಲ್ಲ, ಸದಸದ ಹೊರಗಡೆಯೂ ಹೋರಾಟ ಮಾಡುತ್ತೇವೆ. ಎಲ್ಲಿಂದ ಅಕ್ಕಿ ತರಬೇಕು ಎಂಬುವುದು ಅವರಿಗೆ ಬಿಟ್ಟವಿಚಾರ. ಎಲ್ಲಿದಾದರೂ ತನ್ನಿ ಒಟ್ಟಿನಲ್ಲಿ ಜನರಿಗೆ ಅಕ್ಕಿ ಕೊಡಿ ಎಂಬುದು ನಮ್ಮ ಒತ್ತಾಯ ಎಂದರು. ಸುದ್ದಿಗೋಷ್ಠಿಯಲ್ಲಿ ಶಾಸಕ ಡಿ.ಎಸ್. ಅರುಣ್, ಎಸ್. ದತ್ತಾತ್ರಿ, ಎಸ್. ಜ್ಞಾನೇಶ್ವರ್, ಕೆ.ವಿ. ಅಣ್ಣಪ್ಪ, ಎನ್.ಜೆ. ನಾಗರಾಜ್, ಚಂದ್ರಶೇಖರ್, ಬಳ್ಳೆಕೆರೆ ಸಂತೋಷ್ ಮತ್ತಿತರರು ಇದ್ದರು.
ಕೊಡಗಿನಲ್ಲಿ ಬೆಟ್ಟ ಕುಸಿಯುವ ಆತಂಕ: ತೋರಾ ಗ್ರಾಮದ 20 ಕುಟುಂಬಗಳಿಗೆ ನೋಟಿಸ್!
ಬಾಂಬೆ ಬಾಯ್ಸ್ ಎಂದು ನಾನು ಹೇಳಿಲ್ಲ: ಹುಬ್ಬಳಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷ ಅಶಿಸ್ತಿಗೆ ಹೆಸರಾಗಿದೆ. ಅವರ ಗಾಳಿ ನಮ್ಮ ಪಕ್ಷಕ್ಕೂ ಬೀಸಿದೆ ಎಂದು ಹೇಳಿದ್ದೇನೆ. ಎಲ್ಲಿಯೂ ನಾನು ಬಾಂಬೆ ಬಾಯ್ಸ್ ಎಂದು ಪದವೇ ಬಳಿಸಿಲ್ಲ. ಆದರೆ, ಸುದ್ದಿ ವಾಹಿನಿಯಲ್ಲಿ ನಾನು ಹೇಳದ್ದನ್ನು, ನಾನು ಹೇಳಿದ್ದೇನೆ ಎಂದು ತೋರಿಸಿದ್ದು ನನಗೆ ನೋವುಂಟು ಮಾಡಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಎಲ್ಲಿಯೂ ನಾನು ಬಾಂಬೆ ಬಾಯ್ಸ್ ವಿಚಾರ ಪ್ರಸ್ತಾಪ ಮಾಡಿಲ್ಲ.
Chitradurga: ಬೊಮ್ಮದೇವರಹಟ್ಟಿ ಬಳಿ ದೇವರ ಎತ್ತುಗಳಿಗೆ ಕಾಡ್ತಿದೆ ಮೇವಿನ ಅಭಾವ
ನಾನು ಬಾಂಬೆ ಬಾಯ್ಸ್ ಎಂದು ಹೇಳಿದ್ದೇನೆ ಎಂದು ತೋರಿಸಿದ ಸುದ್ದಿ ವಾಹಿನಿಯವರ ಜೊತೆ ಮಾತನಾಡಿದಾಗ ತಪ್ಪಾಗಿದೆ, ಬದಲಾವಣೆ ಮಾಡುತ್ತೇವೆ ಎಂದು ಹೇಳಿದರು. ಆದರೆ, ಬದಲಾವಣೆ ಮಾಡುವುದರೊಳಗೆ ಇಡೀ ದೇಶಕ್ಕೆ ಸುದ್ದಿ ಮುಟ್ಟಿತ್ತು. ನಮಗೆ ನೋವು ಉಂಟುಮಾಡಿದೆ ಎಂದ ಅವರು, ಕಾಂಗ್ರೆಸ್ ಒಂದು ಅಶಿಸ್ತಿನ ಪಕ್ಷ. ಕಾಂಗ್ರೆಸ್ ಗಾಳಿ ನಮ್ಮ ಮೇಲೆ ಬೀಸಿದೆ ಎಂದು ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು. ಹಾವೇರಿಯಲ್ಲಿ ಲೋಕಸಭಾ ಚುನಾವಣೆಗೆ ಕಾಂತೇಶ್ ನಿಲ್ಲಬೇಕೆಂಬ ಅಪೇಕ್ಷೆ ಇದೆ. ಅನೇಕ ಹಿರಿಯರು ಈ ಲೋಕಸಭಾ ಕ್ಷೇತ್ರದಲ್ಲಿ ಸಂಚರಿಸಿ ಕೆಲಸ ಮಾಡಲು ಸೂಚಿಸಿದ್ದಾರೆ. ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೆ ನೋಡೋಣ ಎಂದರು.