ಮೋದಿಗೆ ನಿಂದಿಸಿದ ಖರ್ಗೆ ಪುತ್ರನ ಠೇವಣಿ ಕಳೆಯಿರಿ: ತಂದೆ ರೀತಿ ಪ್ರಿಯಾಂಕ್‌ರನ್ನೂ ಸೋಲಿಸಿ: ಯೋಗಿ ಕರೆ

By Kannadaprabha News  |  First Published May 1, 2023, 10:40 AM IST

ಚಿತ್ತಾಪುರ ಕ್ಷೇತ್ರ ವ್ಯಾಪ್ತಿಯ ವಾಡಿ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್‌ ಪರ ಬಹಿರಂಗ ಸಮಾವೇಶದಲ್ಲಿ ಭಾನುವಾರ ಮಾತನಾಡಿ, ದೇಶಕ್ಕೆ ಅಪಮಾನ ಮಾಡಿದವರು ಅಧ್ಯಕ್ಷರಾಗಿರುವ ಕಾಂಗ್ರೆಸ್‌ ಈ ಚುನಾವಣೆಯಲ್ಲಿ ಗೆಲ್ಲಬೇಕಾ? ಆ ಪಕ್ಷದವರನ್ನು ಹೀನಾಯವಾಗಿ ಸೋಲಿಸುವ ಮೂಲಕ ದೇಶ ವಿರೋಧಿ ಮಾತು ಆಡುವವರಿಗೆ ತಕ್ಕ ಶಾಸ್ತಿ ಮಾಡಿ ಎಂದರು.


ಕಲಬುರಗಿ (ಮೇ 1, 2023): ಕೆಪಿಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಮೋದಿಗೆ ವಿಷ ಸರ್ಪ ಎಂದು ಹೇಳಿ ಅವಮಾನ ಮಾಡಿದ್ದಾರೆ. ಮೋದಿಯವರನ್ನು ಅವಮಾನ ಮಾಡುವುದು ಅಂದರೆ ಅದು ದೇಶಕ್ಕೆ ಅವಮಾನ ಮಾಡಿದಂತೆ. ಮೋದಿ ಅವರನ್ನು ವಿಷ ಸರ್ಪಕ್ಕೆ ಹೋಲಿಸುವ ಮೂಲಕ ಖರ್ಗೆ ದೇಶಕ್ಕೇ ಅವಮಾನ ಮಾಡಿದ್ದಾರೆ. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್‌ ಖರ್ಗೆ ಈ ವಿಧಾನಸಭಾ ಚುನಾವಣೆಯಲ್ಲಿ ಠೇವಣಿ ಕಳೆದುಕೊಳ್ಳುವಂತೆ ಮಾಡಿ, ಹೀನಾಯವಾಗಿ ಸೋಲಿಸಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕರೆಕೊಟ್ಟರು.

ಚಿತ್ತಾಪುರ ಕ್ಷೇತ್ರ ವ್ಯಾಪ್ತಿಯ ವಾಡಿ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್‌ ಪರ ಬಹಿರಂಗ ಸಮಾವೇಶದಲ್ಲಿ ಭಾನುವಾರ ಮಾತನಾಡಿ, ದೇಶಕ್ಕೆ ಅಪಮಾನ ಮಾಡಿದವರು ಅಧ್ಯಕ್ಷರಾಗಿರುವ ಕಾಂಗ್ರೆಸ್‌ ಈ ಚುನಾವಣೆಯಲ್ಲಿ ಗೆಲ್ಲಬೇಕಾ? ಆ ಪಕ್ಷದವರನ್ನು ಹೀನಾಯವಾಗಿ ಸೋಲಿಸುವ ಮೂಲಕ ದೇಶ ವಿರೋಧಿ ಮಾತು ಆಡುವವರಿಗೆ ತಕ್ಕ ಶಾಸ್ತಿ ಮಾಡಿ ಎಂದರು.
ಭಗವಾನ್‌ ರಾಮನ ಭೂಮಿ ಅಯೋಧ್ಯೆಯಿಂದ ಇಲ್ಲಿಗೆ ಬಂದಿದ್ದೇನೆ. ಭಗವಾನ್‌ ರಾಮನಿಗೆ ಆಂಜನೇಯ ಸಿಕ್ಕಿರುವುದು ಇದೇ ಕರ್ನಾಟಕದ ಭೂಮಿಯಲ್ಲಿ. ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತ ಬಲಿಷ್ಠ ರಾಷ್ಟ್ರವಾಗಿದೆ. ರಾಮನಿಗೆ ಸಂಕಟ ಬಂದಾಗ ಹನುಮ ಹೇಗಿದ್ದನೋ ಹಾಗೆಯೇ ದೇಶಕ್ಕೆ ಸಂಕಟ ಬಂದಾಗ ಪ್ರಧಾನಿ ಮೋದಿ ಹನುಮನ ರೀತಿ ರಕ್ಷಣೆಗೆ ಧಾವಿಸುತ್ತ ದೇಶದ ಜೊತೆಗಿದ್ದಾರೆ. ಇಂಥ ದೇಶಭಕ್ತನಿಗೆ ನಿಂದಿಸೋದು ಮಹಾ ಅಪರಾಧ ಎಂದರು.

Tap to resize

Latest Videos

ಇದನ್ನು ಓದಿ: ‘ಶೀಘ್ರದಲ್ಲೇ ಯೋಗಿಯನ್ನು ಕೊಲ್ಲುತ್ತೇನೆ’: ಮಾಫಿಯಾಗೆ ಕೊನೆಮೊಳೆ ಹೊಡೀತಿರೋ ಯುಪಿ ಸಿಎಂಗೆ ಹತ್ಯೆ ಬೆದರಿಕೆ

ಚಿತ್ತಾಪುರ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕ್‌ ಖರ್ಗೆ ಕೊರೋನಾ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಕೂತಿದ್ದರು. ಆದರೆ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್‌ ನಿಮ್ಮ ಪರವಾಗಿ ಕೆಲಸ ಮಾಡಿದ್ದಾರೆ. ಮೋದಿಗೆ ಅಪಮಾನ ಮಾಡಿದ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್‌ ಖರ್ಗೆ ಠೇವಣಿ ಕಳೆದುಕೊಳ್ಳೊದು ನಿಶ್ಚಿತ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ಅವರನ್ನು 1.25 ಲಕ್ಷ ಮತಗಳ ಅಂತರದಿಂದ ಸೋಲಿಸಿದಂತೆ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಅವರ ಪುತ್ರ ಪ್ರಿಯಾಂಕ್‌ ಖರ್ಗೆ ಅವರನ್ನೂ ಹೀನಾಯವಾಗಿ ಸೋಲಿಸಬೇಕು. ಪ್ರಿಯಾಂಕ್‌ ಖರ್ಗೆ ಅವರ ಠೇವಣಿ ಜಪ್ತಿಯೂ ಆಗಬೇಕು ಎಂದರು.

ಬಿಜೆಪಿ ಕುಟಂಬ, ಜಾತಿವಾದ, ಅಸ್ಪೃಶ್ಯತೆಗೆ ಪ್ರಾಮುಖ್ಯತೆ ನೀಡುವುದಿಲ್ಲ. ಮೋದಿ ನೇತೃತ್ವದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ರಾಜ್ಯ ಅಭಿವೃದ್ಧಿ ಹೊಂದುತ್ತಿದೆ. ಅನ್ನದಾತ ತಲೆ ತಗ್ಗಿಸಿ ನಡೆಯುವ ಬದಲು ತಲೆ ಎತ್ತಿ ನಡೆಯುವ ಹಾಗೆ ಅವರು ಮಾಡಿದ್ದಾರೆ. 45 ಕೋಟಿ ಜನರಿಗೆ ಜನಧನ್‌ ಖಾತೆ ಮೂಲಕ ಹಣ ಸಂದಾಯ ಮಾಡಿದ್ದಾರೆ. ನಾವು ತುಷ್ಟೀಕರಣ ಮಾಡುವುದಿಲ್ಲ. ಸಶಕ್ತೀಕರಣದ ದಾರಿಯಲ್ಲಿ ನಡೆಯುತ್ತೇವೆ. ನನಗೆ ಬಹಳ ಜನ ಕೇಳುತ್ತಾರೆ ಉತ್ತರಪ್ರದೇಶದಲ್ಲಿ ಯಾಕೆ ಅಷ್ಟು ಜನ ನಿಮ್ಮನ್ನು ಗೌರವಿಸುತ್ತಾರೆ ಎಂದು. ಅದೆಲ್ಲ ಡಬಲ್‌ ಎಂಜಿನ್‌ ಸರ್ಕಾರದಿಂದ ಸಾಧ್ಯವಾಗಿದೆ. ಡಬಲ್‌ ಎಂಜಿನ್‌ ಸರ್ಕಾರದಿಂದ ಪಿಎಫ್‌ಐ ಕತ್ತು ಮುರಿಯುವ ಹಾಗೆ ಮಾಡಿದ್ದೇವೆ ಎಂದೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಹೇಳಿದರು. 

ಇದನ್ನೂ ಓದಿ: ಯುಪಿಯಲ್ಲಿ ಗುಂಡಿನ ದಾಳಿಗೆ ಯುವತಿ ಬಲಿ: ಅತೀಕ್‌ ಹತ್ಯೆಯಂತೆ ಈ ಸಾವನ್ನೂ ಸಂಭ್ರಮಿಸುತ್ತೀರಾ ಎಂದು ಟೀಕೆ

click me!