ಆರ್. ಅಶೋಕ್‌ಗೆ ಅಭಿವೃದ್ಧಿ ಎಂದರೆ ಏನೆಂದು ಗೊತ್ತಿದೆಯಾ.?: ಸಂಸದ ಡಿ.ಕೆ. ಸುರೇಶ್‌ ಆರೋಪ

By Sathish Kumar KH  |  First Published Mar 5, 2023, 8:42 PM IST

ರಾಜ್ಯದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಅಭಿವೃದ್ಧಿ ಎಂದರೆ ಏನೆಂದು ಗೊತ್ತಿದೆಯಾ ಕೇಳಿ. ತಾಲೂಕು ಕಚೇರಿ, ಸರ್ವೇ, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಡೆಯುತ್ತಿರುವ ಲಂಚವನ್ನ ತಡೆಯಲು ಹೇಳಿ.


ರಾಮನಗರ (ಮಾ.05): ರಾಜ್ಯದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಅಭಿವೃದ್ಧಿ ಎಂದರೆ ಏನೆಂದು ಗೊತ್ತಿದೆಯಾ ಕೇಳಿ. ತಾಲೂಕು ಕಚೇರಿ, ಸರ್ವೇ, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಡೆಯುತ್ತಿರುವ ಲಂಚವನ್ನ ತಡೆಯಲು ಹೇಳಿ. ಆಮೇಲೆ ಅಭಿವೃದ್ಧಿ ಬಗ್ಗೆ ಅಶೋಕ್ ಮಾತಾಡಲಿ ಎಂದು ಸಂಸದ ಡಿ.ಕೆ. ಸುರೇಶ್‌ ತಿರುಗೇಟು ನೀಡಿದ್ದಾರೆ. 

ಈ ಕುರಿತು ಕೆಂಗಲ್ ಆಂಜನೇಯ ಸ್ವಾಮಿ ಖಾಸಗಿ ಕಲ್ಯಾಣಮಂಟಪದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಆರ್.ಅಶೋಕ್ ಅವರಿಗೆ ಅಭಿವೃದ್ಧಿ ಎಂದರೆ ಏನೆಂದು ಗೊತ್ತಿದೆಯಾ ಕೇಳಿ. ತಾಲೂಕು ಕಚೇರಿ, ಸರ್ವೇ, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಡೆಯುತ್ತಿರುವ ಲಂಚವನ್ನ ತಡೆಯಲು ಹೇಳಿ. ಆಮೇಲೆ ಅಭಿವೃದ್ಧಿ ಬಗ್ಗೆ ಅಶೋಕ್ ಮಾತಾಡಲಿ. ರಾಜ್ಯದಲ್ಲಿ ಚುನಾವಣೆ ಹತ್ತಿರವಾಗ್ತಿದ್ದಂತೆ ಬಿಜೆಪಿ, ಜೆಡಿಎಸ್ ಎರಡೂ ಪಕ್ಷಗಳು ಪ್ರಚಾರಕ್ಕೆ ಹೊರಟಿದ್ದಾರೆ. ಒಂದು ಕಡೆ ಜೆಡಿಎಸ್ ಪಂಚರತ್ನಯಾತ್ರೆ ಅಂತ ಹೋಗ್ತಿದ್ದಾರೆ, ಅದು ಪಂಚತಂತ್ರ ಎನ್ನಬಹುದು. ಬಿಜೆಪಿಯವರು ವಿಜಯಸಂಕಲ್ಪ ಯಾತ್ರೆ ಮೂಲಕ 40% ಸರ್ಕಾರ ಕೊಡುವುದಾಗಿ ಹೊರಟಿದ್ದಾರೆ. ಆದರೆ, ಕಾಂಗ್ರೆಸ್ ಅಭಿವೃದ್ಧಿ, ಭ್ರಷ್ಟಾಚಾರಮುಕ್ತ ಆಡಳಿತ ಕೊಡುವುದಾಗಿ ಜನರ ಮುಂದೆ ಹೋಗಿದ್ದೇವೆ ಎಂದು ಹೇಳಿದರು.

Tap to resize

Latest Videos

ಹಾಸನ ಕೋಟೆಯೊಳಗೆ ಕೈ-ತೆನೆ, ಅಣ್ತಮ್ಮಾಸ್ ಸಂಘರ್ಷ: ರೇವಣ್ಣ ರಣರಂಗಕ್ಕೆ ನುಗ್ಗಿದ ಕನಕಪುರದ ಡಿಕೆ ಬ್ರದರ್ಸ್!

ಡಿ.ಕೆ. ಶಿವಕುಮಾರ್, ಕುಮಾರಸ್ವಾಮಿ ಕುಂಟೆತ್ತುಗಳು: ಡಿ.ಕೆ. ಶಿವಕುಮಾರ್‌ ಹಾಗೂ ಎಚ್.ಡಿ. ಕುಮಾರಸ್ವಾಮಿ ಈಗ ಜೋಡೆತ್ತುಗಳಲ್ಲ. ಅವರು ಈಗ ಕುಂಟೆತ್ತು ಆಗಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಆದರೆ, ಅವರ ಜೊತೆಯಲ್ಲಿರುವವರೆಲ್ಲಾ ಕುಂಟುಕೊಂಡೇ ಓಡಾಡುತ್ತಾರೆ. ಬಿಜೆಪಿ ಎಲ್ಲಾ ವಿಚಾರದಲ್ಲೂ ಕುಂಟುಕೊಂಡು ಬಂದಿದೆ. ಮಾಧ್ಯಮದಲ್ಲಿ ತೋರಿಸಿದ್ದೀರಾ ಯಾರು ಯಾರ ಸಿಡಿ ಬಂತು. ಯಾರು ಲಂಚದಲ್ಲಿ ಸಿಕ್ಕಿಹಾಕಿಕೊಂಡು ರಾಜೀನಾಮೆ ಕೊಟ್ಟರು..? ಎಂಬುದು ಎಲ್ಲರಿಗೂ ಗೊತ್ತಿದೆ. ಬಿಜೆಪಿ ಕಾರ್ಯಕರ್ತರ ಆತ್ಮಹತ್ಯೆಗೆ ಯಾರು ಕಾರಣ ಆದರು ಎಂದು ಎಲ್ಲರಿಗೂ ಗೊತ್ತಿದೆ. ಸುಮಾರು 8 ಕೋಟಿ ಹಣ ವಿಚಾರದಲ್ಲಿ ಅವರ ಕುಂಟೆತ್ತು. ಜೋಡೆತ್ತು ಹೇಳಬೇಕೇ ಹೊರತು ಬೇರೆ ಅಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ, ಡಿಕೆಶಿ ನಿರುದ್ಯೋಗಿಗಳು: ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ನಿರುದ್ಯೋಗಿಗಳಾಗುತ್ತಾರೆ ಎಂದು ಬಿಜೆಪಿ ರಾಜ್ಯಾದ್ಯಕ್ಷ ನಳೀಲ್ ಕುಮಾರ್ ಕಟೀಲು ಹೇಳಿಕೆ ಬಗ್ಗೆ ಮಾತನಾಡಿ, ಬಿಜೆಪಿ ಅವರಿಗೆ ಭಯ ಇದೆ, ರಾಜ್ಯದ ದೇಶದ ಜನ ನಿರುದ್ಯೋಗಿಗಳಾಗಿ ಮಾಡಿದ್ದೇವೆ ಅಂತ ಗೊತ್ತಿದೆ. ಯುವಕರು ಬುದ್ದಿವಂತರಾಗಿದ್ದಾರೆ. ನೀವು ಹಾಕಿದ ನಿರುದ್ಯೋಗ ಟೋಪಿಯನ್ನ ಯುವಕರು ನಿಮಗೆ ಹಾಕುತ್ತಾರೆ. ಜಿಲ್ಲೆಯ ಅಭಿವೃದ್ಧಿ ಮಾಡದ ಇವರು ಜಗಳಕ್ಕೆ ಮಾತ್ರ ಸೀಮಿತ ಆಗಿದ್ದಾರೆ ಎಂದು ಕಿಡಿ ಕಾರಿದರು.

ಬಿಜೆಪಿ ಸಚಿವರು, ಶಾಸಕರು ರಾಜಿನಾಮೆ ಕೊಡುವ ಕಾಲ: ಬಿಜೆಪಿ ಸರ್ಕಾರದಲ್ಲಿ ಅನೇಕ ಶಾಸಕರು, ಮಂತ್ರಿಗಳು ರಾಜೀನಾಮೆ ಕೊಡುವ ಸಮಯ ಬಂದಿದೆ. ಈ ರಾಜ್ಯದಲ್ಕಿ ಸಿಡಿಗೆ ಬಿಜೆಪಿ ಸರ್ಕಾರ ಹೆಸರುವಾಸಿಯಾಗಿದೆ. ಜನತಾದಳದವರು ಒಂದೇ ಒಂದು ನಿರುದ್ಯೋಗ ಬಗ್ಗೆ ಧ್ವನಿ ಎತ್ತಿದ್ದಾರಾ..? ಹಿಂದೆ ಜನತಾದಳದವರು ಸೀಮೆಎಣ್ಣೆ ಡಬ್ಬ ತಲೆಮೇಲೆ ಎತ್ತುಕೊಂಡು ಹೋಗಿದ್ದರು. ಇವತ್ತು ಗ್ಯಾಸ್ ಬೆಲೆ ಏರಿಕೆ ಬಗ್ಗೆ ಒಂದೇ ಒಂದು ಹೋರಾಟ ಇಲ್ಲ‌‌. ಡಿ.ಕೆ ಶಿವಕುಮಾರ್ ಗೆ ನೀವು ಬಲ ಕೊಟ್ಟಿದ್ದೇ ಆದಲ್ಲಿ ರಾಜ್ಯದ ಚುಕ್ಕಾಣಿ ಹಿಡಿಯುತ್ತಾರೆ‌. ಜನತಾದಳದವರು ಕರೆಂಟ್ ಕೊಡೋದಕ್ಕೆ ಹಣ ಎಲ್ಲಿಂದ ತರ್ತಾರೆ ಅಂತ ಹೇಳ್ತಾರೆ. ವಿದ್ಯುತ್ ಸಮಸ್ಯೆ ಹೆಚ್ಚಾಗಿತ್ತು ಅದನ್ನ ನೀಗಿಸಿದ್ದರು.

ಮೋದಿಯ ಸುಳ್ಳುಗಳ ಸರಮಾಲೆಗೆ 9 ವರ್ಷಗಳಾಗಿವೆ: ಸಂಸದ ಡಿ.ಕೆ ಸುರೇಶ್

ಪಾವಗಡ ಸೋಲಾರ್‌ ಪ್ಲಾಟ್‌ ಏಷ್ಯಾಕ್ಕೆ ಮಾಡೆಲ್: ನೀರು ಕಾಲುವೆ ಮೇಲೆ ಸೋಲಾರ್ ಹಾಕಿ ಮಾಡಲ್ ಎಂದರು. ಆದರೆ, ನಾವು ಪಾವಗಡದಲ್ಲಿ ಮಾಡಿದ ಸೋಲಾರ್ ಇಡೀ ಏಷ್ಯಾಗೆ ಮಾಡೆಲ್ ಆಗಿದೆ. ರಾಮನಗರ ಜಿಲ್ಲೆಯಲ್ಲಿ 3 ಸಾವಿರ ಜನರು ಹೊರತುಪಡಿಸಿ ಉಳಿದವರಿಗೆಲ್ಲಾ ಕರೆಂಟ್ ಉಚಿತವಾಗಿ ಸಿಗಲಿದೆ. ನರೇಂದ್ರ ಮೋದಿಯವರು ಎಲ್ಲರ ಮನೆಗೆ ಗ್ಯಾಸ್ ಕೊಟ್ಟಿದ್ದರು. ಗ್ಯಾಸ್ ಕೊಟ್ಟ ನಂತರ ಸಬ್ಸಿಡಿ ಕೊಡ್ತೀವಿ ಅಂತ ನಾಮ ಹಾಕಿದರು. ಪ್ರಧಾನಿ ಮೋದಿಯವರು ಎಲ್ಲಾ ಜನರಿಗೆ ನಾಮದ ಜೊತೆಗೆ ಕೇಸರಿ ಟೋಪಿ ಹಾಕಿದರು.

ಡಿ.ಕೆ. ಶಿವಕುಮಾರ್‌ ಅವರ ಸಿಎಂ ಸ್ಥಾನಕ್ಕೆ ಬಂಬಲಿಸಿ: ಕಳೆದ ಚುನಾವಣೆಗೂ ಮೊದಲು ನರೇಂದ್ರ ಮೋದಿ, ಯಡಿಯೂರಪ್ಪ, ಜೊತೆಗೆ ಎಚ್.ಡಿ. ಕುಮಾರಸ್ವಾಮಿ ಕಾಂಗ್ರೆಸ್ ಅನ್ನು ಬೈಯ್ದಿದ್ದರು. ಆದರೆ ದಿಬಳಕೆ ವಸ್ತುಗಳ ಬೆಲೆ ಮಾತ್ರ ಗಗನಕ್ಕೆ ಹೋಗುತ್ತಿದೆ. ದೇವೇಗೌಡರ ಪಾರ್ಟಿ ಸಹ ಮಾತಾಡ್ತಿಲ್ಲ. ಜಿಲ್ಲೆಯಲ್ಲಿ ನಾಲ್ಕಕ್ಕೆ ನಾಲ್ಕೂ ಸ್ಥಾನಗಳನ್ನ ಗೆಲ್ಲಿಸಬೇಕು. ಕೆಂಗಲ್ ಹನುಮಂತಯ್ಯನವರು, ದೇವೇಗೌಡರು, ಕುಮಾರಸ್ವಾಮಿ ಸೇರಿದಂತೆ ಹಲವರಿಗೆ ಸಿಎಂ ಸ್ಥಾನ ಕೊಡಿಸಿದ್ದೀರಿ. ಈ ಬಾರಿ ನಾಲ್ಕೂ ಸ್ಥಾನ ಗೆಲ್ಲಿಸುವ ಮೂಲಕ ಡಿ.ಕೆ ಶಿವಕುಮಾರ್ ಸಿಎಂ ಚುಕ್ಕಾಣಿಗೆ ಬಲ ತುಂಬಿಸಬೇಕು ಎಂದು ಹೇಳಿದರು. 

click me!