* ಡ್ಯಾಂ ಕ್ರೆಡಿಟ್ ಕಾಂಗ್ರೆಸ್ಸಿಗೆ ಸಿಗಬಾರದೆಂದು ಬಿಜೆಪಿ ಅಡ್ಡಿ
* ಈ ಯೋಜನೆಯಿಂದ ತಮಿಳುನಾಡು ಸೇರಿದಂತೆ ಯಾರೊಬ್ಬರಿಗೂ ತೊಂದರೆ ಆಗುವುದಿಲ್ಲ
* ಈ ಯೋಜನೆಗೆ ಯಾವುದೇ ಅಡೆತಡೆ ಎದುರಾಗಬಾರದು
ಸಂಗಮ(ಜ.10): ಮೇಕೆದಾಟು ಯೋಜನೆಯ(Mekedatu Project) ಶ್ರೇಯಸ್ಸು ಕಾಂಗ್ರೆಸ್‌ಗೆ(Congress) ಹೋಗಬಾರದು ಎಂಬ ಕಾರಣಕ್ಕೆ ಪಾದಯಾತ್ರೆ ತಡೆಯಲು ಬಿಜೆಪಿ(BJP), ಜೆಡಿಎಸ್(JDS) ಪ್ರಯತ್ನಿಸುತ್ತಿವೆ. ಎಷ್ಟೇ ಅಡ್ಡಿ ಉಂಟಾದರೂ ಯಾವುದೇ ಕಾರಣಕ್ಕೂ ಹೋರಾಟ ನಿಲ್ಲಿಸಬೇಡಿ ಎಂದು ರಾಜ್ಯಸಭೆ ವಿರೋಧಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಕರೆ ನೀಡಿದರು. ಈ ಯೋಜನೆಯಿಂದ ತಮಿಳುನಾಡು(Tamil Nadu) ಸೇರಿದಂತೆ ಯಾರೊಬ್ಬರಿಗೂ ತೊಂದರೆ ಆಗುವುದಿಲ್ಲ. ಎರಡೂ ರಾಜ್ಯಗಳ ಜನರಿಗೆ ಈ ಯೋಜನೆ ನೆರವಾಗಲಿದೆ. ಹೀಗಾಗಿ ಈ ಯೋಜನೆಗೆ ಯಾವುದೇ ಅಡೆತಡೆ ಎದುರಾಗಬಾರದು ಎಂದರು.
ಪಾದಯಾತ್ರೆ(Padayatra) ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯೋಜನೆಯಿಂದ ಬೆಂಗಳೂರಿಗೆ(Bengaluru) ಹಾಗೂ ಸುಮಾರು ಹಳ್ಳಿಗಳಿಗೆ 62 ಟಿಎಂಸಿ ಕುಡಿಯುವ ನೀರು(Drinking Water) ಸಿಗುತ್ತದೆ. ಜತೆಗೆ 400 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಮಾಡಬಹುದು. ಜತೆಗೆ ತಮಿಳುನಾಡಿನ ಪಾಲಿನ ನೀರನ್ನು ಎಲ್ಲಾ ಕಾಲದಲ್ಲೂ ಬಿಡಲು ಸಹ ನೆರವಾಗುತ್ತದೆ. ಇಂತಹ ಉತ್ತಮ ಯೋಜನೆಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ಎಂ.ಬಿ. ಪಾಟಿಲ್ ರೂಪ ಕೊಟ್ಟಿದ್ದರು. ಡಿ.ಕೆ. ಶಿವಕುಮಾರ್(DK Shivakumar) ಅವರು ಜಲ ಸಂಪನ್ಮೂಲ ಸಚಿವರಾದಾಗ ಪರಿಷ್ಕೃತ ಡಿಪಿಆರ್‌ನ್ನು ಕೇಂದ್ರಕ್ಕೆ ಕಳುಹಿಸಿದ್ದಾರೆ. ಈ ಯೋಜನೆ ಜಾರಿಯಾದರೆ ಬೆಂಗಳೂರಿನ ನೀರಿನ ಸಮಸ್ಯೆ ನೀಗುತ್ತದೆ ಎಂದರು.
PM Modi Security Breach: ಪ್ರಧಾನಿ ಭದ್ರತಾ ವೈಫಲ್ಯಕ್ಕೆ ಕೇಂದ್ರ ಪಡೆ ಕಾರಣ: ಖರ್ಗೆ
ಪಾದಯಾತ್ರೆ ವಿಫಲಗೊಳಿಸಿ ಕಾಂಗ್ರೆಸ್ಸಿಗೆ ಶ್ರೇಯಸ್ಸು ಧಕ್ಕದಂತೆ ಮಾಡಲು ಬಿಜೆಪಿ, ಜೆಡಿಎಸ್, ಇನ್ನಿತರರು ಯತ್ನಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಈ ಹೋರಾಟ ನಿಲ್ಲಬಾರದು. ಅಂತಿಮ ಜಯ ಸಿಗುವವರೆಗೂ ಹೋರಾಟ ಮುಂದುವರೆಯಬೇಕು ಎಂದು ಕರೆ ನೀಡಿದರು.
ಜಾಹೀರಾತು ಮೂಲಕವೇ ಪ್ರತ್ಯುತ್ತರ: ಎಂಬಿಪಾ ಕಿಡಿ
ಸಂಗಮ: ನಾನು ಜಲಸಂಪನ್ಮೂಲ ಸಚಿವರಾಗಿದ್ದ ಸಮಯದಲ್ಲಿ ತಮಿಳುನಾಡಿನ ವಿರುದ್ಧ ಕಾನೂನು ಹೋರಾಟ ಮಾಡಿಕೊಂಡೇ ಮೇಕೆದಾಟು ಯೋಜನೆಗೆ ಡಿಪಿಆರ್ ಮಾಡಿದ್ದೇವೆ. ನಾವು ಸಲ್ಲಿಸಿರುವ ಡಿಪಿಆರ್‌ಗೆ ಪರಿಸರ ಇಲಾಖೆ(Department of the Environment) ಅನುಮೋದನೆ ಕೊಡಿಸಲು ಬಿಜೆಪಿ ಡಬಲ್ ಇಂಜಿನ್ ನಿರ್ಲಕ್ಷ್ಯ ತೋರಿದೆ. ಈ ಹೋರಾಟ ತಡೆಯಲು ಮಾಧ್ಯಮಗಳಲ್ಲಿ ಅನಾಮಧೇಯ ಜಾಹೀರಾತು ನೀಡಿ ಸಚಿವ ಗೋವಿಂದ ಕಾರಜೋಳ ಅವರು ಜನರಿಗೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಈ ವಿಚಾರವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದು, ಈ ಸುಳ್ಳು ಪ್ರಚಾರಕ್ಕೆ ಜಾಹಿರಾತು ಮೂಲಕವೇ ತಕ್ಕ ಉತ್ತರ ನೀಡುತ್ತೇವೆ ಎಂದು ಕಾಂಗ್ರೆಸ್ ಶಾಸಕ ಎಂ.ಬಿ.ಪಾಟೀಲ್(MB Patil) ವಾಗ್ದಾಳಿ ನಡೆಸಿದ್ದಾರೆ.
Mekedatu Padayatre: ಡಿಕೆ ಸೋದರರಿಗೆ ಅದ್ಧೂರಿ ಸ್ವಾಗತ: ಮೊದಲ ದಿನ 15 ಕಿಮೀ ನಡಿಗೆ, 8000 ಜನ ಭಾಗಿ!
ರ‍್ಯಾಲಿ, ಪಾದಯಾತ್ರೆ ರದ್ದು, ವಿರೋಧಪಕ್ಷಗಳ ಗುದ್ದು!
ನವದೆಹಲಿ: ಕೋವಿಡ್ ಮೂರನೇ ಅಲೆಯ ಆತಂಕದ ನಡುವೆ ದೇಶದ ಮಹತ್ವದ ಪಂಚರಾಜ್ಯದ ಚುನಾವಣೆಗೆ(Five States Elections ) ಭಾರತ ಸಿದ್ಧವಾಗಿದೆ. ದೇಶದ ಅತೀದೊಡ್ಡ ರಾಜ್ಯ ಉತ್ತರ ಪ್ರದೇಶಕ್ಕೆ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಶನಿವಾರ ಉತ್ತರ ಪ್ರದೇಶ (Uttar Pradesh), ಮಣಿಪುರ (Manipur), ಪಂಜಾಬ್ (Punjab), ಗೋವಾ (Goa) ಹಾಗೂ ಉತ್ತರಾಖಂಡ (Uttarakhand) ರಾಜ್ಯಗಳ ಚುನಾವಣೆ ದಿನಾಂಕ ಪ್ರಕಟಿಸಿದ ಕೇಂದ್ರ ಚುನಾವಣಾ ಆಯೋಗ (Election Commission), ಕೋವಿಡ್-19 ಕಾರಣದಿಂದಾಗಿ ಸಮಾವೇಶಗಳು, ಪಾದಯಾತ್ರೆ ಹಾಗೂ ರೋಡ್ ಶೋಗಳನ್ನು ರದ್ದು ಮಾಡಿದ್ದಾಗಿ ತಿಳಿಸಿದೆ. ಆದರೆ, ಕೇಂದ್ರ ಚುನಾವಣಾ ಆಯೋಗದ ನಿರ್ಧಾರಕ್ಕೆ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೆಚ್ಚುತ್ತಿರುವ ಕೋವಿಡ್-19 (COVID-19) ಪ್ರಕರಣಗಳ ಮಧ್ಯೆ, ಚುನಾವಣಾ ಆಯೋಗ ಜನವರಿ 15 ರವರೆಗೆ ಭೌತಿಕ ರ‍್ಯಾಲಿಗಳನ್ನು ಸ್ಥಗಿತಗೊಳಿಸಿದೆ. ಆ ಬಳಿಕ ರ‍್ಯಾಲಿಗಳ ಕುರಿತಾಗಿ ಪರಿಶೀಲನೆ ನಡೆಸಿ ನಿರ್ಧರಿಸಲಾಗುತ್ತದೆ ಎಂದು ಹೇಳಿದೆ. ಚುನಾವಣೆ ಫಲಿತಾಂಶಗಳು ಪ್ರಕಟವಾದ ಬಳಿಕ ಯಾವುದೇ ರೀತಿಯ ವಿಜಯೋತ್ಸವಗಳಿಗೆ ಅವಕಾಶ ಇರುವುದಿಲ್ಲ ಎಂದು ಕಟ್ಟುನಿಟ್ಟಾಗಿ ತಿಳಿಸಿದ್ದು, ಬೆಳಗ್ಗ 8 ರಿಂದ ರಾತ್ರಿ 8ರವರೆಗೆ ಯಾವುದೇ ಸಾರ್ವಜನಿಕ ಸಭೆಗಳನ್ನು ನಡೆಸುವಂತಿಲ್ಲ ಎಂದು ಹೇಳಿದೆ. ಅದರೊಂದಿಗೆ ಮನೆ ಮನೆಗೆ ನಡೆಸುವ ಪ್ರಕಾರದಲ್ಲಿ 5ಕ್ಕಿಂತ ಹೆಚ್ಚಿನ ಜನ ಇರಕೂಡದು ಎಂದು ಎಚ್ಚರಿಸಿದೆ.