ಬಿಜೆಪಿ ಟಿಕೆಟ್‌ಗಾಗಿ ಲಾಬಿ ಬೇಡ: ಬಿ.ಎಲ್‌.ಸಂತೋಷ

By Kannadaprabha News  |  First Published Oct 12, 2022, 6:17 AM IST

ಬಿಜೆಪಿಯಲ್ಲಿ ಪ್ರತಿಯೊಬ್ಬ ಕಾರ್ಯಕರ್ತನಿಗೂ ತನ್ನದೇ ಆದ ಗೌರವ ಇದೆ. ಯಾರೂ ಯಾರಿಗೂ ಜೀ ಹೂಜೂರ್‌ ಎನ್ನುವ ಅವಶ್ಯಕತೆ ಇಲ್ಲವೇ ಇಲ್ಲ ಎಂದು ಹೇಳಿದ ಬಿ.ಎಲ್‌.ಸಂತೋಷ 


ಬೆಳಗಾವಿ(ಅ.12):  ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲರೂ ನಿರಪೇಕ್ಷಿತರಾಗಿ ಕೆಲಸ ಮಾಡಬೇಕು. ಟಿಕೆಟ್‌ಗಾಗಿ ಯಾರೂ ಯಾರ ಪರ ಲಾಭಿ ಮಾಡುವಂತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ ಅವರು ಖಡಕ್‌ ಸೂಚನೆ ನೀಡಿದರು.

ನಗರದ ಹೊರವಲಯದಲ್ಲಿರುವ ಸಾವಗಾಂವನ ಅಂಗಡಿ ಕಾಲೇಜಿನಲ್ಲಿ ಸೋಮವಾರ ರಾತ್ರಿ ನಡೆದ ಬಿಜೆಪಿ ಟಿಕೆಟ್‌ ಅಪೇಕ್ಷಿತರ ಸಭೆಯಲ್ಲಿ ಪಕ್ಷದ ನಾಯಕರು, ಕಾರ್ಯಕರ್ತರಿಗೆ ಅವರು ಪಕ್ಷದ ಸಂಘಟನೆಯ ಕುರಿತು ಸುಮಾರು ಎರಡೂವರೆ ಗಂಟೆ ಕಾಲ ಅವರು ಪಾಠ ಮಾಡಿದರು. ಟಿಕೆಟ್‌ಗಾಗಿ ಯಾರೂ ಯಾರ ಪರ ಲಾಬಿ ಮಾಡಬೇಡಿ ಎಂದು ಟಿಕೆಟ್‌ ಆಕಾಂಕ್ಷಿಗಳಿಗೆ, ಹಾಲಿ, ಮಾಜಿ ಶಾಸಕರು, ಸಚಿವರು, ಸಂಸದರಿಗೆ ಖಡಕ್‌ ಸಂದೇಶ ರವಾನಿಸಿದರು.

Tap to resize

Latest Videos

ಜನನಿ, ಜನ್ಮಭೂಮಿ ಗೌರವಿಸುವುದು ನಮ್ಮ ಧರ್ಮ: ಸಿಎಂ ಬೊಮ್ಮಾಯಿ

ನಿಮ್ಮ ಅಭಿಪ್ರಾಯಕ್ಕೆ ಬಹಳ ದೊಡ್ಡ ಬೆಲೆ ಇದೆ. ಆದರೆ, ಲಾಬಿಗೆ ಇಲ್ಲ. ಇಲ್ಲಿ ಕುಳಿತ ಪ್ರತಿಯೊಬ್ಬರಿಂದ ನಾನು ಅಭಿಪ್ರಾಯ ಸಂಗ್ರಹಿಸುತ್ತೇನೆ. ಯಾರೂ ಯಾರ ಪರವೂ ಲಾಬಿ ಮಾಡಲು ಗುಂಪುಗೂಡಿ ಪಕ್ಷದ ಕಚೇರಿಗೆ ಬರಬಾರದು. ನಮ್ಮ ಮನೆಯಲ್ಲಿ 70 ಲೀಟರ್‌ ಪ್ರಿಡ್ಜ್‌ ಇದೆ. ಪಕ್ಕದ ಮನೆಯಲ್ಲಿ 110 ಲೀಟರ್‌ ಫ್ರಿಡ್ಜ್‌ ತೆಗೆದುಕೊಂಡಿದ್ದಾರೆ ಎಂದು ಯಾರೂ ಬೇಜಾರಾಗಬಾರದು. ನಮ್ಮ ಮನೆಯಲ್ಲಿ 70 ಲೀಟರ್‌ ಫ್ರಿಜ್ಡ್‌ ಇದೆಯಲ್ಲ ಎಂದು ಖುಷಿಪಡಬೇಕು ಎಂದರು.
ನಾನು ಕೇವಲ ಎಂಎಲ್‌ಎ ಆಗಿ ಉಳಿದೇ ಸಚಿವನಾಗಲಿಲ್ಲ. ನಾನು ಕೇವಲ ಪಕ್ಷದ ಪದಾಧಿಕಾರಿ, ಕಾರ್ಯಕರ್ತ ಆಗಿ ಉಳಿದೆ, ಎಂಎಲ್‌ಎ ಆಗಲಿಲ್ಲ ಹೀಗೆಲ್ಲ ಬೇಜಾರಾಗಬಾರದು. ಬಿಜೆಪಿಯಲ್ಲಿ ಪ್ರತಿಯೊಬ್ಬ ಕಾರ್ಯಕರ್ತನಿಗೂ ತನ್ನದೇ ಆದ ಗೌರವ ಇದೆ. ಯಾರೂ ಯಾರಿಗೂ ಜೀ ಹೂಜೂರ್‌ ಎನ್ನುವ ಅವಶ್ಯಕತೆ ಇಲ್ಲವೇ ಇಲ್ಲ ಎಂದು ಹೇಳಿದರು.

ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಕಾಂಗ್ರೆಸ್‌ ಕ್ಷೇತ್ರಗಳಿವೆ. ಮುಂಬರುವ ಚುನಾವಣೆಯಲ್ಲಿ ಆ ಎಲ್ಲ ಕ್ಷೇತ್ರಗಳನ್ನು ಗೆಲ್ಲಲು ನಿಮ್ಮೆಲ್ಲರ ಮುಂದೆ ಟಾಸ್‌್ಕ ಇದೆ. ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನರ ಬಳಿ ಮುಟ್ಟಿಸಬೇಕು ಎಂದು ಕರೆ ನೀಡಿದರು.

ಜಿಲ್ಲೆಯಿಂದ ಹೊರಗಿಡಲು ನಾನೇನು ಟೆರರಿಸ್ಟಾ?: ವಿನಯ್‌ ಕುಲಕರ್ಣಿ

ಕನ್ನಡಮಯ ಕಾರ್ಯಕ್ರಮ: ಅಭಿನಂದನೆ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ ಅವರ ಕಾರ್ಯಕ್ರಮ ಕನ್ನಡಮಯವಾಗಿತ್ತು. ವೇದಿಕೆಯ ಬ್ಯಾನರ್‌ನಲ್ಲಿ ಕೇವಲ ಕನ್ನಡಕ್ಕೆ ಆದ್ಯತೆ ನೀಡಲಾಗಿತ್ತು. ಪ್ರಾದೇಶಿಕ ಭಾಷೆಗಳ ಬಗ್ಗೆ ಯಾವಾಗಲೂ ಒತ್ತು ಕೊಡುತ್ತಲೇ ಬಂದಿರುವ ಸಂತೋಷ ಅವರ ಕಾರ್ಯಕ್ರಮದ ವೇದಿಕೆಯ ಬ್ಯಾನರ್‌ನಲ್ಲಿ ಕೇವಲ ಕನ್ನಡಕ್ಕೆ ಮಾತ್ರ ಸ್ಥಾನ ಸಿಕ್ಕಿತ್ತು. ಅಲ್ಲದೇ, ಅವರು ಕನ್ನಡದಲ್ಲಿಯೇ ಮಾತನಾಡಿದರು ಬೆಳಗಾವಿಯ ಬಿಜೆಪಿಯ ನೂರಾರು ಕಾರ್ಯಕ್ರಮಗಳಲ್ಲಿ ಮೊದಲು ಮರಾಠಿಗೆ ಆದ್ಯತೆ ನೀಡಿ ನಂತರ ಕನ್ನಡಕ್ಕೆ ಸ್ಥಾನ ನೀಡುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಇಂಥ ಪರಿಸ್ಥಿತಿ ತಲ್ಲಿ ಸಂತೋಷ ಅವರ

ಕಾರ್ಯಕ್ರಮ ಕನ್ನಡಮಯವಾಗಿ ನಡೆದಿದ್ದು ಇಲ್ಲಿಯ ಬಿಜೆಪಿ ನಾಯಕರಿಗೆ ಒಂದು ಪಾಠವಾಗಿದೆ. ಕನ್ನಡಮಯ ಕಾರ್ಯಕ್ರಮ ನಡೆಸಿದ್ದಕ್ಕಾಗಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರು ಬಿ.ಎಲ್‌.ಸಂತೋಷ ಅವರನ್ನು ಅಭಿನಂದಿಸಿದ್ದಾರೆ.
 

click me!