ರಾಹುಲ್ ಗಾಂಧಿಯಿಂದ ದೇಶದ ಒಡೆದ ಮನಸ್ಸುಗಳ ಒಗ್ಗೂಡಿಸುವಿಕೆ: ಮಾಜಿ ಸಂಸದ ಧ್ರುವನಾರಾಯಣ್
ಹೊನ್ನಾಳಿ(ಅ.11): ಕಾಂಗ್ರೆಸ್‌ನಲ್ಲಿ ದಲಿತರಿಗೆ ಕೊಟ್ಟಂತಹ ಸ್ಥಾನ-ಮಾನಗಳು ಬೇರೆ ಯಾವ ಪಕ್ಷಗಳಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಂಸದ ಧ್ರುವನಾರಾಯಣ್ ಹೇಳಿದರು.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರ ಪಾದಯಾತ್ರೆ ಅ.11ರಂದು ಹಿರಿಯೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಮತ್ತು ಹಿರಿಯ ಮುಖಂಡರ ನೇತತೃತ್ವದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾಂಗ್ರೆಸ್ ಪಕ್ಷ ಜಾತ್ಯತೀತ ಸಿದ್ಧಾಂತದಲ್ಲಿ ನಂಬಿಕೆ ಇರುವ ಪಕ್ಷ. ಇಲ್ಲಿ ಎಲ್ಲಾ ಜಾತಿ ಧರ್ಮ,ಪಂಗಡದ ಜನರೂ ಒಂದೇಯಾಗಿದ್ದಾರೆ. ರಾಹುಲ್ ಗಾಂಧಿಯವರು ಸೆ.30ರಿಂದ ರಾಜ್ಯದಲ್ಲಿ ಒಟ್ಟು 22 ದಿನಗಳ ಪಾದಯಾತ್ರೆ ನಡೆಸುತ್ತಿದ್ದಾರೆ, ರಾಜ್ಯದ 8 ಜಿಲ್ಲೆಗಳ ಮೂಲಕ ಈ ಪಾದಯಾತ್ರೆ ಸಾಗುತ್ತಿದ್ದು ಇದರಲ್ಲಿ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳೂ ಕೂಡ ಸೇರಿರುವುದು ಸಂತಸದ ಸಂಗತಿ ಎಂದು ಹೇಳಿದರು.
ರಾಯಚೂರಿನಿಂದ ರಾಮನಗರವರೆಗೆ ಬಿಜೆಪಿ Jana Sankalpa Yatre ಶುರು
ಪ್ರಸ್ತುತ ಬೇರೆ ಬೇರೆ ಪಕ್ಷಗಳು ಜಾತಿ,ಧರ್ಮ, ಪಂಗಡಗಳ ಆಧಾರದ ಮೇಲೆ ದೇಶ ಒಡೆಯುವ ಕೆಲಸ ಮಾಡುತ್ತಿದ್ದು ಆದರೆ ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿಯರ ನೇತೃತ್ವದಲ್ಲಿ ದೇಶದ ಒಡೆದ ಮನಸ್ಸುಗಳನ್ನು ಒಂದುಗೂಡಿಸುವ, ದೇಶದಲ್ಲಿ ಶಾಂತಿಯನ್ನು ನೆಲೆಸುವಂತೆ ಮಾಡುವ.ಸಂವಿಧಾನದ ಆಶಯಗಳನ್ನು ಉಳಿಸುವ ಉದ್ದೇಶಗಳಿಗಾಗಿ ಹಾಗೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಿತಿ ಮೀರಿರುವ ಬೆಲೆ ಏರಿಕೆ, ಭ್ರಷ್ಛಾಚಾರ, ನಿರುದ್ಯೋಗ ಸಮಸ್ಯೆಗಳ ಬಗ್ಗೆ ಜನಜಾಗೃತಿ ಮೂಡಿಸುವ ಸಲಸುವಾಗಿ ಪಾದಯಾತ್ರೆ ಕೈಗೊಂಡಿದೆ ಎಂದು ಹೇಳಿದರು.
15ರಂದು ಬಳ್ಳಾರಿಯಲ್ಲಿ ಬೃಹತ್ ಸಮಾವೇಶಃ
ಅ.11ರಂದು ಹಿರಿಯೂರಿಗೆ ಅಗಮಿಸಿ ನಂತರ ಚಿತ್ರ¨ಜಿಲ್ಲೆ ಮೂಲಕ ್ರಅ. 15ರಂದು ಬಳ್ಳಾರಿಯಲ್ಲಿ ವಿಶೇಷವಾಗಿ ರಾಹುಲ್ ಗಾಂಧಿಯವರು ಬೃಹತ್ ಬಹಿರಂಗ ಸಭೆ ನಡೆಸಲಾಗುತ್ತಿದ್ದು ಕರ್ನಾಟಕ ರಾಜ್ಯದಲ್ಲಿ ಎಲ್ಲಿಯೂ ಬಹಿರಂಗ ಸಭೆ ನಡೆಸಿಲ್ಲ ಬಳ್ಳಾರಿಯಲ್ಲಿ ನಡೆಸಲಾಗುವುದು ಎಂದು ಮಾಹಿತಿ ನೀಡಿದರು. ಪ್ರತಿದಿನ ಬೆಳಗ್ಗೆ 6.30ರಿಂದ 11ರವರೆಗೆ ನಂತರ ಸಂಜೆ 4 ಗಂಟೆಯಿಂದ 7 ಗಂಟೆಯವರೆಗೆ ಪಾದಯಾತ್ರೆ ನಡೆಯಲಿದ್ದು ಮಧ್ಯದ ಅವಧಿಯಲ್ಲಿ ಸಾಹಿತಿಗಳು ಸಮಾಜ ಚಿಂತಕರೊಂದಿಗೆ ಸಂವಾದ ಕಾರ್ಯಕ್ರಮಗಳು ನಡೆಯುತ್ತಿವೆ ಎಂದ ಅವರು ರೈತ ಮುಖಂಡ ಯೋಗೇಂದ್ರ ಯಾದವ್, ಲಂಕೇಶ್ ಪುತ್ರಿ ಕೂಡ ಈ ಪಾದಯಾತ್ರೆಗೆ ಬೆಂಬಲ ಸೂಚಿಸಿದ್ದಾರೆ ಎಂದು ಹೇಳಿದರು.
SC-ST Reservation: ಸಿದ್ದರಾಮಯ್ಯಗೆ ಮೀಸಲಾತಿ ಕೊಡೋ ಯೋಗ್ಯತೆ ಇರಲಿಲ್ಲ: ಕಟೀಲ್
ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ ಹಿರಿಯೂರಿಗೆ ಅಗಮಿಸುತ್ತಿರುವ ಪಾದಯಾತ್ರೆ ಕಾರ್ಯಕ್ರಮದಲ್ಲಿ ಹೊನ್ನಾಳಿ,ಚನ್ನಗಿರಿ,ದಾವಣಗೆರೆ ಉತ್ತರ ಮತ್ತು ದಕ್ಷಿಣ ಭಾಗಗಗಳಿಂದ 5 ರಿಂದ 6 ಸಾವಿರಕ್ಕೂ ಹಚ್ಚಿನ ಜನ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಡಿ.ಜಿ.ಶಾಂತನಗೌಡ, ಕಾಂಗ್ರೆಸ್ ತಾಲೂಕು ಅಧ್ಯಕ್ಷರಾದ ಸಣ್ಣಕ್ಕಿ ಬಸವನಗೌಡ, ಎಚ್.ಎ.ಗದ್ದಿಗೇಶ್, ಜಿ.ಪಂ,ಮಾಜಿ ಸದಸ್ಯ ಎಂ,ರಮೇಶ್,ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಎಚ್.ಎ. ಉಮಾಪತಿ,ಕೆ.ಪಿ.ಸಿ.ಸಿ.ಸದಸ್ಯ ಡಾ. ಈಶ್ವರ ನಾಯ್ಕ, ಹಿರಿಯ ಮುಖಂಡ ಬಿ.ಸಿದ್ದಪ್ಪ, ಯುವ ಕಾಂಗ್ರೇಸ್ ಜಿಲ್ಲಾ ಉಪಾಧ್ಯಕ್ಷ ಎಚ್.ಎಸ್. ರಂಜಿತ್, ತಾಲೂಕು ಅಧ್ಯಕ್ಷ ಪ್ರಶಾಂತ್ ಬಣ್ಣಜ್ಜಿ, ಎನ್.ಎಸ.ಯು.ಐ ಮುಖಂಡ ಮನುವಾಲಜ್ಜಿ, ದರ್ಶನ್ ಬಳ್ಳೇಶ್ವರ ಮುಂತಾದವರು ಇದ್ದರು.