ಸಾರ್ವಜನಿಕರಿಗೆ ತೊಂದರೆ ಆಗದಂತೆ ಕಾರ್ಯನಿರ್ವಹಿಸಿ: ಅಧಿಕಾರಿಗಳಿಗೆ ಸಚಿವ ಮಹದೇವಪ್ಪ ಸೂಚನೆ

By Kannadaprabha News  |  First Published Jun 19, 2023, 10:02 PM IST

ಜಿಲ್ಲೆಯಲ್ಲಿ ಸಾರ್ವಜನಿಕರ ಕೆಲಸಗಳಿಗೆ ಯಾವುದೇ ತೊಂದರೆ ಆಗದಂತೆ ಅಧಿಕಾರಿ ಕಾರ್ಯ ನಿರ್ವಹಿಸಬೇಕು. ಮಧ್ಯವರ್ತಿಗಳಿಗೆ ಅವಕಾಶ ಇಲ್ಲದೆ ಸಾರ್ವಜನಿಕ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಖಡಕ್‌ ಸೂಚನೆ ನೀಡಿದರು.


ಮೂಗೂರು (ಜೂ.19): ಜಿಲ್ಲೆಯಲ್ಲಿ ಸಾರ್ವಜನಿಕರ ಕೆಲಸಗಳಿಗೆ ಯಾವುದೇ ತೊಂದರೆ ಆಗದಂತೆ ಅಧಿಕಾರಿ ಕಾರ್ಯ ನಿರ್ವಹಿಸಬೇಕು. ಮಧ್ಯವರ್ತಿಗಳಿಗೆ ಅವಕಾಶ ಇಲ್ಲದೆ ಸಾರ್ವಜನಿಕ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಖಡಕ್‌ ಸೂಚನೆ ನೀಡಿದರು. ಮೂಗೂರು ಗ್ರಾಪಂ ಅವರಣದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಕೃತಜ್ಞತೆ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಎಲ್ಲಾ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿವ ಕುರಿತು ಪ್ರಸ್ತಾಪಿಸಿದ ಅವರು, ಇದರಿಂದ ಸಾರ್ವಜನಿಕರ ಸುಲಿಗೆ ಮತ್ತು ಸಾರ್ವಜನಿಕರ ಕೆಲಸ ವಿಳಂಬವಾಗುತ್ತಿದೆ. 

ಹಾಗಾಗಿ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಸಾರ್ವಜನಿಕರ ಕೆಲಸವನ್ನು ಮಧ್ಯವರ್ತಿಗಳ ಸಂಪರ್ಕವಿಲ್ಲದೆ ಕೆಲಸ ಮಾಡಬೇಕು ಎಂದರು. ಮೇಲಾಧಿಕಾರಿಗಳು ಅಧೀನ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿಸಬೇಕು. ನಿಗದಿತ ಅವಧಿಯಲ್ಲಿ ಸಾರ್ವಜನಿಕ ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ಚುನಾವಣೆ ಎಂದ ಮೇಲೆ ಗೆಲುವು -ಸೋಲು ಸಹಜ. ನನಗೆ ಕ್ಷೇತ್ರದ ಅಭಿವೃದ್ಧಿ ಬಹಳ ಮುಖ್ಯ. ನಾನು ಸೋತ ಅವಧಿಯಲ್ಲೂ ಕ್ಷೇತ್ರದ ಜನತೆಯ ಜೊತೆ ಒಡನಾಟದಲ್ಲಿದ್ದೆ. ಹಾಗಾಗಿ ಈ ಚುನಾವಣೆಯಲ್ಲಿ ಮತದಾರರು ನನ್ನ ಕೈ ಹಿಡಿದಿದ್ದಾರೆ. 

Tap to resize

Latest Videos

ಸಾಂಸ್ಕೃತಿಕ, ಚಾರಿತ್ರಿಕ, ಬೌದ್ಧಿಕ ನೆಲೆಗಟ್ಟಿನಲ್ಲಿ ಮೈಸೂರು ಅಭಿವೃದ್ಧಿ: ಸಚಿವ ಮಹದೇವಪ್ಪ

ಈ ಚುನಾವಣೆಯಲ್ಲಿ ಕಾರ್ಯಕರ್ತರು ಅತಿ ಉತ್ಸಹದಿಂದ ಕೆಲಸ ಮಾಡಿದರು. ಮೂಗೂರು ಹೋಬಳಿಯ ಜನತೆ ಅತ್ಯಂತ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನಶಕ್ತಿಗೆ ಹೆಚ್ಚು ಆದ್ಯತೆ ನೀಡಬೇಕು. ಕ್ಷೇತ್ರದಲ್ಲಿ ಜನನಾಯಕರು ಜನಪರವಾಗಿದ್ದರೆ ಅನಿರೀಕ್ಷಿತವಾಗಿ ಸೋತರೂ ಜನತೆ ಪ್ರೀತಿಯಿಂದ ಕಾಣುತ್ತಾರೆ. ಜನಪ್ರತಿನಿಧಿ ಆದವರು ಜನಸೇವೆಗೆ ಹೆಚ್ಚು ಅವಧಿ ಮೀಸಲಿಡಬೇಕು ಎಂದರು. ಟಿ. ನರಸೀಪುರ ಕ್ಷೇತ್ರದಲ್ಲಿ ಹಿರಿಯ ಮುತ್ಸದಿ ರಾಜಶೇಖರಮೂರ್ತಿ ಅವರ ನಂತರ ಕ್ಷೇತ್ರದಲ್ಲಿ ದೀರ್ಘ ರಾಜಕಾರಣದಲ್ಲಿ ಮತದಾರರ ಆಶೀರ್ವಾದದಿಂದ 5 ಬಾರಿ ಸಚಿವರನ್ನಾಗಿ ರಾಜ್ಯದಲ್ಲಿ ಉತ್ತಮ ಕೆಲಸ ಮಾಡಿ ಉತ್ತಮ ರಾಜಕಾರಣಿ ಎಂಬ ಹೆಗ್ಗಳಿಕೆಗೆ ನನ್ನದಾಗಿದೆ ಎಂದರು.

ನಾನು ಗೆದ್ದ ಅವಧಿಯಲ್ಲಿ ಕ್ಷೇತ್ರ ಮತ್ತು ರಾಜ್ಯವ್ಯಾಪಿ ಉತ್ತಮ ಕೆಲಸ ಮಾಡಿದ್ದೇನೆ. ಬನ್ನೂರು, ತಲಕಾಡು, ಮೂಗೂರು ಹಲವು ಹೋಬಳಿಗಳಲ್ಲಿ ಹೆಚ್ಚು ಮತಗಳು ಬರುವ ನಿರೀಕ್ಷೆ ಇರಲಿಲ್ಲ. ಆದರೆ ಹೋಬಳಿಯ ಎಲ್ಲಾ ಸಮುದಾಯದ ಜನರು ಅಭೂತಪೂರ್ವ ಬೆಂಬಲ ನೀಡಿ ಆಶೀರ್ವದಿಸಿದ್ದಾರೆ ಎಂದು ಅವರು ಹೇಳಿದರು. ನಾನು ವೋಟಿನ ಆಧಾರದ ಮೇಲೆ ಕೆಲಸ ಮಾಡುವುದಿಲ್ಲ. ಕ್ಷೇತ್ರದ ಬಡವರು, ದುರ್ಬಲರಿಗೆ ನನ್ನ ಮೊದಲ ಆದ್ಯತೆ. ಕ್ಷೇತ್ರದ ನೀರಾವರಿ ಕೆಲಸಗಳಿಗೆ ನೀಲಿ ನಕ್ಷೆ ತಯಾರಿದ್ದೇನೆ. ನೀರಾವರಿ ಕೆಲಸಗಳನ್ನು ತುರ್ತು ಮುಗಿಸುವಂತೆ ಮುಖ್ಯ ಎಂಜಿನಿಯರ್‌ಗೆ ಸೂಚಿಸಿದ್ದೇನೆ. ರಾಜ್ಯ ಮತ್ತು ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡಲು ಸದಾಸಿದ್ದ ಎಂದರು.

ಹಿಂದಿನ ಸರ್ಕಾರ ಜನಪರ ಕೆಲಸ ಮಾಡಿಲ್ಲ. ಹಾಗಾಗಿ ಜನರು ಬಿಜೆಪಿ ಪಕ್ಷವನ್ನು ತಿರಸ್ಕರಿಸಿದ್ದಾರೆ. ಕಾಲೇಜುಗಳಲ್ಲಿ ಪ್ರತಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬೇಕು. ಶುಲ್ಕದ ಕಾರಣ ಮುಂದಿಟ್ಟುಕೊಂಡು ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸುವಂತಿಲ್ಲ. ಎಲ್ಲಾ ಕಚೇರಿಗಳಲ್ಲಿ ಸಂವಿಧಾನ ಪೀಠಿಕೆ ಇರಬೇಕು ಎಂದರು. ರಾಜ್ಯದ ಜನತೆ ಕಾಂಗ್ರೆಸ್‌ ಪಕ್ಷಕ್ಕೆ 135 ಸೀಟುಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಆದರಿಂದ ಪಕ್ಷ ಅವರಿಗೆ ಆಭಾರಿಯಾಗಿರುತ್ತದೆ. ಆಹಾರ ಭದ್ರತೆ ಕಾಯ್ದೆಯು ಬದುಕು ನನ್ನ ಹಕ್ಕು ಎನ್ನುವುದರ ಮೇಲೆ ಜಾರಿಗೆ ಬಂದಿತು. ಶಿಕ್ಷಣ ಅರೋಗ್ಯ ಮೂಲಭೂತ ಹಕ್ಕು ಆಗಬೇಕು.ಮಾಹಿತಿ ಹಕ್ಕು ಕಾಯ್ದೆ ಸರ್ಕಾರ, ಅಧಿಕಾರಿಗಳು ಪಾರದರ್ಶಕ ಆಡಳಿತ ನಡೆಸಲು ನಿಯಂತ್ರಿಸುತ್ತದೆ ಎಂದರು.

ರಾಜ್ಯದ ಮತದಾರರಿಂದ ಬಿಜೆಪಿಗೆ ತಕ್ಕ ಪಾಠ ಸಿಕ್ಕಿದೆ: ಸಚಿವ ಮಹದೇವಪ್ಪ

ಮಾಜಿ ಶಾಸಕಿ ಜೆ. ಸುನೀತಾ ವೀರಪ್ಪಗೌಡ, ಮುಖಂಡ ಸುನಿಲ್‌ ಬೋಸ್‌, ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಡಿ. ಬಸವರಾಜು, ಜಿಲ್ಲಾ ಎಸ್‌ಸಿ, ಎಸ್‌ಟಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ. ಮಲ್ಲು, ಸುಧಾ ಮಹಾದೇವಯ್ಯ, ಕಲಿಯೂರು ಚಂದ್ರಶೇಖರ, ಹೊನ್ನನಾಯಕ, ತಾಪಂ ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನಸ್ವಾಮಿ, ಹ್ಯಾಕನೂರು ಉಮೇಶ್‌, ಕ್ಷೇತ್ರ ಅಧ್ಯಕ್ಷ ಬಸವರಾಜು, ಮಾಡ್ರಹಳ್ಳಿ ಶಿವಮೂರ್ತಿ, ಹೆಮ್ಮಿಗೆ ಶೇಷಾದ್ರಿ, ಕೊತ್ತೇಗಾಲ ಬಸವರಾಜು, ಸೋಸಲೆ ಪರಶಿವಮೂರ್ತಿ, ಡೈರಿ ಅಧ್ಯಕ್ಷ ಎಂ.ಎಂ. ಬಸವಣ್ಣ, ಕಾರ್ಯದರ್ಶಿ ನಾಗೇಂದ್ರ, ಕೋತ್ತೇಗಾಲ ಗ್ರಾಪಂ ಅಧ್ಯಕ್ಷ ಕನ್ನಹಳ್ಳಿ ಲಕ್ಶ್ಮಣ, ಎಂ.ಬಿ. ಸಾಗರ್‌, ಎಂ. ರಾಜು, ಎಂ. ಜಗದೀಶ್‌ಮೂರ್ತಿ, ಶಿವಣ್ಣ, ಎಂ.ಬಿ. ಕೃಷ್ಣಸ್ವಾಮಿ, ಎಸ್‌. ಸಿದ್ದರಾಜು ದಿಲೀಪ, ಪುಟ್ಟರಾಜು, ರಮೇಶ್‌, ಜ್ಞಾನಪ್ರಕಾಶ್‌, ಮೂಗೂರು ಕುಮಾರಸ್ವಾಮಿ, ಕುಕ್ಕೂರು ಗಣೇಶ್‌, ಎಂ.ಬಿ. ಶಿವಮೂರ್ತಿ, ತಹಸೀಲ್ದಾರ್‌ ಗೀತಾ ಮೊದಲಾದವರು ಇದ್ದರು.

click me!