
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಇಂದು 63ನೇ ಹುಟ್ಟುಹಬ್ಬದ ಸಂಭ್ರಮ. ಇದಾಗಲೇ ವಿವಿಧ ಕ್ಷೇತ್ರಗಳ ಗಣ್ಯರು ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುತ್ತಿದ್ದಾರೆ. ಅವರ ಮುದ್ದಿನ ಮಗಳು ಐಶ್ವರ್ಯಾ ಕೂಡ ವಿಶೇಷ ರೀತಿಯಲ್ಲಿ ವಿಶ್ ಮಾಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಮತ್ತು ಅಪ್ಪನ ಸಂಬಂಧದ ಬಗೆಗಿನ ವಿಶೇಷ ವಿಡಿಯೋ ಶೇರ್ ಮಾಡಿಕೊಂಡಿರುವ ಐಶ್ವರ್ಯಾ ಅವರು ಹ್ಯಾಪ್ಪಿ ಬರ್ತ್ಡೇ ಅಪ್ಪಾ ಎಂದು ಬರೆದುಕೊಂಡಿದ್ದಾರೆ.
ಈ ರೀಲ್ ಅನ್ನು ನಿಮ್ಮ ನೆಚ್ಚಿನ ಹಾಡಿನೊಂದಿಗೆ ಸೇರಿಸಿದ್ದೇನೆ. ಏಕೆಂದರೆ ಅದರ ಪ್ರತಿಯೊಂದು ಬಡಿತವು ನನ್ನ ಜೀವನದಲ್ಲಿ ನೀವು ತಂದಿರುವ ಶಕ್ತಿ, ಪ್ರೀತಿ ಮತ್ತು ಲಯವನ್ನು ನೆನಪಿಸುತ್ತದೆ. ನಿಮ್ಮ ಮೌನ ತ್ಯಾಗಗಳಿಂದ ಹಿಡಿದು ನನಗೆ ನೀವು ನೀಡಿದ ಅಬ್ಬರದ ಜಯಘೋಷಗಳವರೆಗೆ, ನೀವು ಯಾವಾಗಲೂ ನನ್ನ ಆಧಾರಸ್ತಂಭ ಮತ್ತು ನನ್ನ ದೊಡ್ಡ ಸ್ಫೂರ್ತಿ. ಇಂದು, ನಾನು ನಿಮ್ಮ ಜನ್ಮದಿನವನ್ನು ಮಾತ್ರವಲ್ಲ, ನೀವು ನಮ್ಮೆಲ್ಲರಿಗೂ ಇದ್ದ ಅದ್ಭುತ ವ್ಯಕ್ತಿ, ತಂದೆ ಮತ್ತು ಸ್ನೇಹಿತನ ಜನ್ಮದಿನವನ್ನು ಆಚರಿಸುತ್ತೇನೆ ಎಂದು ಐಶ್ವರ್ಯಾ ಬರೆದುಕೊಂಡಿದ್ದಾರೆ. ಇದು ಇಂಗ್ಲಿಷ್ ಹಾಡಾಗಿದೆ. Boney M ಹಾಡಿರುವ Rasputin ಹಾಡಿನ ಹಿನ್ನೆಲೆಯಲ್ಲಿ ತಮ್ಮ ಮತ್ತು ಅಪ್ಪನ ಜೊತೆಗಿನ ಒಡನಾಟವನ್ನು ಐಶ್ವರ್ಯಾ ತಿಳಿಸಿದ್ದಾರೆ. ಈ ಹಾಡಿನಲ್ಲಿ ಸ್ಟ್ರಾಂಗ್ ವ್ಯಕ್ತಿತ್ವದ ಬಗ್ಗೆ ಉಲ್ಲೇಖಿಸಲಾಗಿದೆ.
ಸಿಎಂ ಬದಲಾವಣೆ ಚರ್ಚೆ ಮಧ್ಯೆಯೇ ಡಿಕೆಶಿ ಪುತ್ರಿ ಐಶ್ವರ್ಯ ಹೇಳಿದ್ದೇನು? ಜೈಲಿನಿಂದ ಬಂದಾಗ ಮಾತು ಬಿಟ್ಟಿದ್ದೇಕೆ?
ಇನ್ನು ಐಶ್ವರ್ಯ ಅವರ ಕುರಿತು ಹೇಳುವುದಾದರೆ, ಇವರು, ಡಿ.ಕೆ ಶಿವಕುಮಾರ್ ಅವರ ಹಿರಿಯ ಪುತ್ರಿ. ಕಾಫಿ ಕೆಫೆ ಡೇಯ ಸಂಸ್ಥಾಪಕ ಸಿದ್ಧಾರ್ಥ್ ಹೆಗ್ಡೆ ಅವರ ಪುತ್ರ ಅಮರ್ಥ್ಯ ಹೆಗ್ಡೆ ಅವರ ಪತ್ನಿ. ಐಶ್ವರ್ಯ ಅವರು ಎಂಜಿನಿಯರಿಂಗ್ ಪದವೀಧರೆಯಾಗಿದ್ದು, ಡಿ.ಕೆ ಶಿವಕುಮಾರ್ ಒಡೆತನದ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯ ಟ್ರಸ್ಟಿ ಕೂಡ ಆಗಿದ್ದಾರೆ. ಸದ್ಯ ಸ್ವತಂತ್ರವಾಗಿ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಶಿಕ್ಷಣದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಶಿಕ್ಷಣ ಸಂಸ್ಥೆ, ಫ್ಯಾಷನ್ ಬ್ರ್ಯಾಂಡ್ ಸೇರಿದಂತೆ ಹಲವು ಸಂಸ್ಥೆಗಳನ್ನು ಐಶ್ವರ್ಯ ಮುನ್ನಡೆಸುತ್ತಿದ್ದಾರೆ. ಚಿಕ್ಕಮಗಳೂರಿನ ಅಂಬರ್ ವ್ಯಾಲಿ ಸ್ಕೂಲ್ ಹೊಣೆಯನ್ನು ಐಶ್ವರ್ಯ ಹೊತ್ತುಕೊಂಡಿದ್ದಾರೆ. ಉಡುಪುಗಳ ಫ್ಯಾಷನ್ ಬ್ರ್ಯಾಂಡ್ ಸಂಸ್ಥೆ ನಡೆಸುತ್ತಿದ್ದಾರೆ. ಈ ಕಂಪೆನಿಯ ಬ್ರ್ಯಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ.
ತಮ್ಮ ಅಪ್ಪ, ಮುಖ್ಯಮಂತ್ರಿಯಾಗುವ ಹಂಬಲವನ್ನು ಹೊತ್ತಿದ್ದಾರೆ ಐಶ್ವರ್ಯಾ. ಈ ಬಗ್ಗೆ ಇದಾಗಲೇ ಹಲವು ಬಾರಿ ಮಾತನಾಡಿದ್ದಾರೆ. ಅವರು ಸಿಎಂ ಆಗಬೇಕು, ಆಗಿಯೇ ಆಗುತ್ತಾರೆ ಎಂದು ಐಶ್ವರ್ಯಾ ಅವರು ಸುವರ್ಣ ಟಿವಿಗೆ ಕೊಟ್ಟಿರುವ ಸಂದರ್ಶನದಲ್ಲಿಯೂ ಹೇಳಿದ್ದಾರೆ. 'ನಾನು ಅವರ ಮಗಳಾಗಿನೋ ಅಥವಾ ಅವರು ನನ್ನ ಅಪ್ಪ ಎಂದೋ ಈ ಮಾತನ್ನು ನಾನು ಹೇಳುತ್ತಿಲ್ಲ. ಅವರು ಹಾಕುತ್ತಿರುವ ಎಫರ್ಟ್ಗಳು, ಜನರ ಮೇಲೆ ಅವರು ಇಟ್ಟಿರುವ ವಿಶ್ವಾಸ, ಕುಟುಂಬಕ್ಕಿಂತಲೂ ಜನರನ್ನೇ ಅತಿಹೆಚ್ಚು ಪ್ರೀತಿಸುವ ಅವರ ಪರಿ, ಪಕ್ಷಕ್ಕಾಗಿ ಅವರು ದುಡಿಯುತ್ತಿರುವ ರೀತಿ ಎಲ್ಲವನ್ನೂ ನೋಡಿದ ಮೇಲೆ ನಾನು ಈ ಮಾತನ್ನು ಹೇಳುತ್ತಿದ್ದೇನೆ. ಮುಖ್ಯಮಂತ್ರಿಯಾಗುವ ಅವರ ಕನಸು ನನಸಾಗುತ್ತದೆ, ಅದು ಆಗಬೇಕು ಕೂಡ' ಎಂದು ಐಶ್ವರ್ಯ ಹೇಳಿದ್ದಾರೆ.
ಮನಗೆದ್ದ ಸೊಸೆ ಐಶ್ವರ್ಯಗೆ ಅತ್ತೆಯ ಉಡುಗೊರೆ, ಡಿಕೆಶಿ ಪುತ್ರಿ ಹೆಗಲಿಗೆ ಹೊಸ ಜವಾಬ್ದಾರಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.