ಮುಖ್ಯಮಂತ್ರಿಗಳೇ ನಿಮ್ಮ ಜಿಲ್ಲೆಯ ಶಾಸಕರೇ ಕಾಂಗ್ರೆಸ್ ಸೇರೋಕೆ ಸಿದ್ದರಾಗಿದ್ದಾರೆ. ಜಾಗ ಇಲ್ಲ ಸ್ವಲ್ಪ ತಡೆಯಿರಿ ಎಂದು ನಾನೇ ಹೇಳಿದ್ದೇನೆ ಎಂದು ನಿನ್ನೆ ಡಿ.ಕೆ ಶಿವಕುಮಾರ್ ಹೇಳಿದ್ದು ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ.
ವರದಿ: ಪವನ್ ಕುಮಾರ್ , ಏಷ್ಯಾನೆಟ್ ಸುವರ್ಣ ನ್ಯೂಸ್
ಹಾವೇರಿ(ಜ.20): ಮುಖ್ಯಮಂತ್ರಿಗಳೇ ನಿಮ್ಮ ಜಿಲ್ಲೆಯ ಶಾಸಕರೇ ಕಾಂಗ್ರೆಸ್ ಸೇರೋಕೆ ಸಿದ್ದರಾಗಿದ್ದಾರೆ. ಜಾಗ ಇಲ್ಲ ಸ್ವಲ್ಪ ತಡೆಯಿರಿ ಎಂದು ನಾನೇ ಹೇಳಿದ್ದೇನೆ ಎಂದು ನಿನ್ನೆ ಡಿ.ಕೆ ಶಿವಕುಮಾರ್ ಹೇಳಿದ್ದು ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಹಾವೇರಿ ನಗರದಲ್ಲಿ ನಿನ್ನೆ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಭಾಷಣ ಮಾಡ್ತಾ ಮಾತನಾಡಿದ ಡಿ.ಕೆ ಶಿವಕುಮಾರ್ , ಮಾಜಿ ಶಾಸಕ ಯು.ಬಿ ಬಣಕಾರ್ ಏನು ದಡ್ಡರಾ? ಅವರು ಬಿ.ಎಸ್ ಯಡಿಯೂರಪ್ಪ ಬಲಗೈ ಬಂಟರಾಗಿದ್ರು. ಇದೇ ಬಸವರಾಜ ಬೊಮ್ಮಾಯಿ ಬಂಟರಾಗಿದ್ದವರು. ಈಗ ಕಾಂಗ್ರೆಸ್ ಸೇರಿ ನಮ್ಮ ಜೊತೆ ಇದ್ದಾರೆ. ನಿಮ್ಮ ಜಿಲ್ಲೆಯ ಶಾಸಕರೇ ಕಾಂಗ್ರೆಸ್ ಸೇರೋಕೆ ರೆಡಿಯಾಗಿದ್ದಾರೆ ನೋಡ್ತಾ ಇರಿ ಅಂತ ಹೇಳಿದ್ದು ಹಲವು ಆಯಾಮಗಳಲ್ಲಿ ಚರ್ಚೆಯಾಗ್ತಿದೆ. ಬಿಜೆಪಿ ಪಾಳಯದಲ್ಲೂ ಸಾಕಷ್ಟು ತಳಮಳ ಸೃಷ್ಟಿಸಿದೆ. ಹಾಗಾದರೆ ಸಿಎಂ ತವರು ಜಿಲ್ಲೆಯಲ್ಲೇ ಆಪರೇಶನ್ ಹಸ್ತ ಶುರುವಾಗಿದೆಯಾ? ಹಿರೇಕೇರೂರು ಮಾಜಿ ಶಾಸಕ ಬಣಕಾರ್ ಬಳಿಕ ಮತ್ತೆ ಕಾಂಗ್ರೆಸ್ ಸೇರೋ ಬಿಜೆಪಿ ಮುಖಂಡರು ಯಾರು? ಅದ್ರಲ್ಲೂ ಶಾಸಕರು ಯಾರು? ಎಂಬ ಚರ್ಚೆ ಜೋರಾಗೇ ನಡೆದಿದೆ.
undefined
ಹಾವೇರಿ ಜಿಲ್ಲೆಯಲ್ಲಿ 6 ವಿಧಾನಸಭಾ ಕ್ಷೇತ್ರಗಳಿವೆ. 6 ಕ್ಷೇತ್ರಗಳಲ್ಲಿ ಒಂದಾದ ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಮಾನೆ ಇದ್ದರೆ ಉಳಿದ 5 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಐವರು ಬಿಜೆಪಿ ಶಾಸಕರಲ್ಲಿ ಕಾಂಗ್ರೆಸ್ ಸಂಪರ್ಕದಲ್ಲಿ ಇರೋ ಶಾಸಕರ್ಯಾರು ಎಂಬ ಚರ್ಚೆ ನಡೆದಿದೆ.
ಶಿಗ್ಗಾವಿಯಲ್ಲಿ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಶಾಸಕರು. ಸಿಎಂ ಅಂತೂ ಕೈ ಪಡೆ ಸೇರೋ ಸನ್ನಿವೇಶಗಳೇನೂ ಇಲ್ಲ. ಇನ್ನು ಹಾನಗಲ್ ನಲ್ಲಿ ಶಾಸಕ ಶ್ರೀನಿವಾಸ್ ಮಾನೆ ಕಾಂಗ್ರೆಸ್ ನವರೇ ಇದ್ದಾರೆ. ಹಿರೇಕೇರೂರಿನಲ್ಲಿ ಬಿಜೆಪಿ ತೊರೆದು ಮಾಜಿ ಶಾಸಕ ಬಣಕಾರ್ ಈಗಾಗಲೇ ಕಾಂಗ್ರೆಸ್ ಸೇರಿದ್ದಾರೆ. ಉಳಿದಿರೋದು ರಾಣೆಬೆನ್ನೂರು, ಬ್ಯಾಡಗಿ, ಹಾವೇರಿ ವಿಧಾನಸಭಾ ಕ್ಷೇತ್ರಗಳು ಮಾತ್ರ. ರಾಣೆಬೆನ್ನೂರಿನಲ್ಲಿ ಕಾಂಗ್ರೆಸ್ ನಿಂದ ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡ ಪುತ್ರ ಪ್ರಕಾಶ್ ಕೋಳಿವಾಡ ಕಾಂಗ್ರೆಸ್ ಪ್ರಬಲ ಟಿಕೇಟ್ ಆಕಾಂಕ್ಷಿ.
ಸದ್ಯ ಬಿಜೆಪಿಗೆ ಬಂದು ಅತೃಪ್ತಿಯಲ್ಲೇ ಇರುವ ಆರ್ ಶಂಕರ್ ಮಾತ್ರ ಇನ್ನೂ ಡೋಲಾಯಮಾನ ಸ್ಥಿತಿಯಲ್ಲೇ ಇದ್ದಾರೆ. ಸದ್ಯ ರಾಣೆಬೆನ್ನೂರು ಬಿಜೆಪಿ ಶಾಸಕ ಅರುಣ್ ಕುಮಾರ್ ಮತ್ತೆ ಬಿಜೆಪಿ ಟಿಕೇಟ್ ಪಡೆಯೋ ಸಾಧ್ಯತೆ ಇದೆ. ಹೀಗಾಗಿ ಬಿಜೆಪಿಯಲ್ಲಿ ಟಿಕೇಟ್ ಮಿಸ್ ಆದರೆ ಆರ್ ಶಂಕರ್ ಕಾಂಗ್ರೆಸ್ ಕದ ತಟ್ಟುತ್ತಾರಾ? ಇದೇ ಅವಕಾಶ ಕಾಂಗ್ರೆಸ್ ಬಳಸಿಕೊಳ್ಳುತ್ತಾ? ಬಿಜೆಪಿ ಶಾಸಕ ಅರುಣ್ ಕುಮಾರ್ ಗೆ ಪ್ರಬಲ ಪೈಪೋಟಿ ಒಡ್ಡಬಲ್ಲ ಸಾಮರ್ಥ ಆರ್ ಶಂಕರ್ ಗೂ ಇದೆ. ಹೀಗಾಗಿ ಯಾವುದನ್ನೂ ಅಲ್ಲಗಳೆಯುವಂತಿಲ್ಲ.
ಸೀತೆಗೆ ಹೆಂಡ ಕುಡಿಸಿದ ರಾಮನನ್ನು ಹೇಗೇ ಆದರ್ಶ ವ್ಯಕ್ತಿ ಎನ್ನುತ್ತೀರಿ?: ಕೆಎಸ್ ಭಗವಾನ್
ಇತ್ತ ಹಾವೇರಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ನೆಹರೂ ಓಲೆಕಾರ್ ಬಿಜೆಪಿ ಆಕಾಂಕ್ಷಿ ಆಗೋದು ಪಕ್ಕಾ.. ಓಲೆಕಾರ್ ಕಾಂಗ್ರೆಸ್ ಸೇರ್ತಾರಾ ಅಂತ ತಾಳೆ ಹಾಕಿ ನೋಡಿದರೆ ಅದೂ ದೂರದ ಮಾತಯಕಾಂಗ್ರೆಸ್ ಪಕ್ಷದಲ್ಲಿ ಮಾಜಿ ಸಚಿವ ರುದ್ರಪ್ಪ ಲಮಾಣಿ ಕಾಂಗ್ರೆಸ್ ಅಭ್ಯರ್ಥಿಯಾಗೋದು ಪಕ್ಕಾ ಆಗಿದೆ. ಯಡಿಯೂರಪ್ಪ ಜೊತೆ ಕೆ.ಜೆ.ಪಿ ಗೆ ಹೋಗಿ ಮತ್ತೆ ಕಮಲ ಹಿಡಿದಿದ್ದ ಓಲೆಕಾರ್ ಯಡಿಯೂರಪ್ಪ ಬೆಂಬಲಿಗರೂ. ಸದ್ಯದ ಮಟ್ಟಿಗೆ ಬಸವರಾಜ ಬೊಮ್ಮಾಯಿ ಜೊತೆ ಕೆಲ ಭಿನ್ನಾಭಿಪ್ರಾಯ ಕೂಡಾ ಇಟ್ಟುಕೊಂಡಿದ್ದಾರೆ. ಆದರೆ ಅದು ಬಿಜೆಪಿ ಬಿಡುವಷ್ಟು ತೀವ್ರವಾಗಿಯೇನೂ ಇಲ್ಲ.
ಸೋಲಿಲ್ಲದ ಸರದಾರ ಅಂಗಾರ ರಾಜಕೀಯ ನಿವೃತ್ತಿ!?, ಯುವ ನಾಯಕರಿಗೆ ಮಣೆ ಹಾಕಿದ ಸುಳ್ಯ
ಇತ್ತ ಬ್ಯಾಡಗಿ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮತ್ತೆ ಬಿಜೆಪಿ ಅಭ್ಯರ್ಥಿಯಾಗೋದು ಪಕ್ಕಾ ಆಗಿದೆ. ಬ್ಯಾಡಗಿ ಕಾಂಗ್ರೆಸ್ ಟಿಕೇಟ್ ಬಸವರಾಜ ಶಿವಣ್ಣನವರ, ಹಾಗೂ ಎಸ್ ಆರ್ ಪಾಟೀಲ್ ನಡುವೆ ಟಿಕೇಟ್ ಪೈಪೋಟಿ ಇದೆ. ಇಬ್ಬರಲ್ಲಿ ಒಬ್ಬರಿಗೆ ಟಿಕೇಟ್ ಕೂಡಾ ಕನ್ಫರ್ಮ್ ಆಗಬಹುದು. ಹೀಗಾಗಿ ಸದ್ಯ ಬಿಜೆಪಿ ಟಿಕೇಟ್ ಸಿಗುವಾಗ ಕಾಂಗ್ರೆಸ್ ಗೆ ಸೇರುವ ಅನಿವಾರ್ಯತೆ ವಿರೂಪಾಕ್ಷಪ್ಪ ಬಳ್ಳಾರಿ ಅವರಿಗಿಲ್ಲ. ಆದರೆ ಡಿಕೆಶಿ ಹೇಳಿಕೆ ಮಾತ್ರ ಇಷ್ಟೆಲ್ಲಾ ಚರ್ಚೆಗೆ ಗ್ರಾಸವಾಗಿದೆ.