ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಅಮಾಯಕ ನೋಬೆಲ್ ಪ್ರಶಸ್ತಿ ಪ್ರದಾನ ಮಾಡಬೇಕು ಎಂದು ಕಂದಾಯ ಸಚಿವ ಆರ್. ಅಶೋಕ್ ವ್ಯಂಗ್ಯವನ್ನು ವ್ಯಕ್ತಪಡಿಸಿದ್ದಾರೆ.
ಹಾವೇರಿ (ಡಿ.18): ಕುಕ್ಕರ್ ಬಾಂಬ್ ಸ್ಪೋಟ ಮಾಡಿದ ಶಂಕಿತ ಉಗ್ರ ವ್ಯಕ್ತಿಗೆ ಬೆಂಬಲ ಸೂಚಿಸುತ್ತಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಅಮಾಯಕ ನೋಬೆಲ್ ಪ್ರಶಸ್ತಿ ಪ್ರದಾನ ಮಾಡಬೇಕು ಎಂದು ಕಂದಾಯ ಸಚಿವ ಆರ್. ಅಶೋಕ್ ವ್ಯಂಗ್ಯವನ್ನು ವ್ಯಕ್ತಪಡಿಸಿದ್ದಾರೆ.
ಹಾವೇರಿ ಜಿಲ್ಲೆಯ ಕನಕದಾಸರು ಹುಟ್ಟಿದ ಬಾಡ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ವೇಳೆ ದಲಿತರ ಮನೆಯಲ್ಲಿ ಉಪಾಹಾರ ಸೇವಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಬಾಂಬ್ ಸ್ಫೋಟಿಸಿದ ವ್ಯಕ್ತಿ ಅಮಾಯಕ ಎಂದು ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ. ಒಬ್ಬ ಭಯೋತ್ಪಾದಕನಿಗೆ ಅಮಾಯಕ ಎನ್ನುವುದಕ್ಕೆ ಏನು ಹೇಳಬೇಕು. ಕಾಂಗ್ರೆಸ್ ಮುಖಂಡರು ಯಾವತ್ತೂ ಬಹುಸಂಖ್ಯಾತರ ಬಗ್ಗೆ ಮಾತನಾಡಿಯೇ ಇಲ್ಲ. ಬರೀ ಅಲ್ಪ ಸಂಖ್ಯಾತರನ್ನು ಓಲೈಸುತ್ತಾರೆ. ಇಂಥವರಿಗೆ ಜಾಗತಿಕ ಮಟ್ಟದಲ್ಲಿ ಅಮಾಯಕ ನೋಬೆಲ್ ಪ್ರಶಸ್ತಿಯನ್ನು ನೀಡಬೇಕು ಎಂದು ಕಿಡಿ ಕಾರಿದ್ದಾರೆ.
undefined
Grama Vastavya: ಗ್ರಾಮ ವಾಸ್ತವ್ಯ ಕ್ರಾಂತಿಕಾರಿ ಹೆಜ್ಜೆ: ಸಿಎಂ ಬೊಮ್ಮಾಯಿ
ಎಸ್‌ಸಿ-ಎಸ್‌ಟಿ ಭೂಮಿ ಖರೀದಿಗೆ ಅವಕಾಶ: ಇಂದು ನಾನು ಕನಕದಾಸರ ಜನ್ಮಸ್ಥಳಕ್ಕೆ ಬಂದಿದ್ದೇನೆ. ಜಾತಿ ಮೇಲು ಕೀಳು ಭಾವನೆ ತೆಗೆದು ಹಾಕಬೇಕು. ಎಲ್ಲರೂ ಮುಖ್ಯವಾಹಿನಿಗೆ ಬರಬೇಕು. ದಲಿತರ ಮನೆಯಲ್ಲಿ ಏನು ಮಾಡಿದ್ದಾರೊ ಅದನ್ನೇ ಉಪಹಾರ ಮಾಡಿದ್ದೇನೆ. ಜನರಿಗೋಸ್ಕರ ಗ್ರಾಮ ವ್ಯಾಸ್ತವ್ಯ ಕಾರ್ಯಕ್ರಮ ಮಾಡಿದ್ದೆನೆ. ಜಮೀನು ಖಾತಾ ಪೋತಿ ಖಾತೆ ಯೋಜನೆ ಮಾಡಿದ್ದೇನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹ ಈ ಕ್ಷೇತ್ರದಲ್ಲಿ ಜನರ ಪ್ರೀತಿ ನೋಡಿ ಕಣ್ಣೀರು ಹಾಕಿದ್ದು ನೋಡಿದರೆ ಅವರು ಜನರ ಮೇಲೆ ಅಭಿಮಾನ ಇಟ್ಟಿದ್ದಾರೆ ಎಂದು ತಿಳಿಯುತ್ತದೆ. ಈ ಕ್ಷೇತ್ರದ ಮೇಲೆ ಸಾಕಷ್ಟು ಅಭಿಮಾನ ಇಟ್ಟಿದ್ದಾರೆ. ಇನ್ನುಎಸ್‌ಸಿ- ಎಸ್‌ಟಿ ಭೂಮಿ ಖರೀದಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಜೋಳದ ರೊಟ್ಟಿ, ಪಲ್ಯ ರುಚಿಯಾಗಿತ್ತು: ಬಾಡ ಗ್ರಾಮದಲ್ಲಿ ದಲಿತ ದಂಪತಿ ಪಕ್ಕೀರಪ್ಪ, ಪವಿತ್ರಾ ಮನೆಯಲ್ಲಿ ಉಪಾಹಾರ ಸೇವಿಸಿದ್ದೇನೆ. ಜೋಳದ ರೊಟ್ಟಿ, ಚಟ್ನಿ, ತಿನ್ನೋದು ಹೊಸದಾಗಿದೆ. ಬೆಂಗಳೂರಿನಲ್ಲಿ ದೋಸೆ, ಇಡ್ಲಿ ತಿನ್ನುತ್ತಿದ್ದೆವು. ನನಗೆ ಜೋಳದ ರೊಟ್ಟಿ, ಮಡಿಕೆ ಕಾಳು, ಮೊಸರು ಚೆನ್ನಾಗಿತ್ತು. ಗ್ರಾಮ ವಾಸ್ತವ್ಯದಿಂದ ಸಾಕಷ್ಟು ಕಲಿಯುತ್ತಿದ್ದೇನೆ. ಬಡವರಪರವಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
Grama Vastavya: ಅಶೋಕ್ ವಾಸ್ತವ್ಯದ ಹಳ್ಳಿಗಳಿಗೆ 1 ಕೋಟಿ: ಸಿಎಂ ಬೊಮ್ಮಾಯಿ ಘೋಷಣೆ
ಒಕ್ಕಲಿಗರ ಮೀಸಲಾತಿಗೆ ವರದಿ ಸಿದ್ಧಪಡಿಸಲು ಸೂಚನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ನಮ್ಮ ಸರ್ಕಾರ ಕ್ಲೀನ್ ಸರ್ಕಾರ. ವಿರೋಧ ಪಕ್ಷ ವಿರೋಧ ಮಾಡುತ್ತಿದೆಯೇ ಹೊರತು ಯಾವುದೇ ದಾಖಲೆ ಇಲ್ಲ. ಬೇರೆ ಬೇರೆ ಸಮುದಾಯಗಳಿಗೆ ಮೀಸಲಾತಿ ನೀಡುವ ಉದ್ದೇಶ ಹೊಂದಿದೆ. ಒಕ್ಕಲಿಗರ ಮೀಸಲಾತಿ, ಲಿಂಗಾಯತ ಮೀಸಲಾತಿ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಇನ್ನು ನಮ್ಮ ಸರ್ಕಾರದ ದೊಡ್ಡ ಸಾಧನೆ ಮಾಡಿದೆ. ಒಕ್ಕಲಿಗರ ಮೀಸಲಾತಿ ಬಗ್ಗೆ ಹಿಂದುಳಿದ ವರ್ಗದ ಆಯೋಗದ ವರದಿಗೆ ಸೂಚನೆ ನೀಡಲಾಗಿದೆ. ಶೇ.10 ರಷ್ಟು ಮೀಸಲಾತಿ ನೀಡಲು ಬೇಡಿಕೆ ಇದೆ. ಇದಕ್ಕೆ ಮುಖ್ಯಮಂತ್ರಿಗಳುನ ಕೂಡ ಸ್ಪಂದನೆ ಮಾಡಿದ್ದಾರೆ. ಜೇನುಗೂಡಿಗೆ ಕಲ್ಲು ಹೊಡೆಯುವ ಕೆಲಸವನ್ನ ಸರ್ಕಾರ ಮಾಡುತ್ತಿದೆ ಅಂತಾ ವಿರೋಧ ಪಕ್ಷ ಆರೋಪ ಮಾಡುತ್ತಿದೆ. ಅದರೆ ನಾವು ಜೇನುತುಪ್ಪ ಸುರಿಸುತ್ತಿದ್ದೇವೆ ಎಂದು ಹೇಳಿದರು.