DK Shivakumar: ಡಿಕೆಶಿ ಸಿಎಂ ಆಗುವುದು ಖಚಿತವಾಗುತ್ತಿದ್ದಂತೆ ಸರ್ಕಾರ ಮತ್ತು ಪಕ್ಷದಲ್ಲಿ ಮಹತ್ವದ ಬದಲಾವಣೆ!

Kannadaprabha News   | Kannada Prabha
Published : May 30, 2026, 01:56 PM IST
DK Shivakumar KPCC president resignation soon

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಬೆನ್ನಲ್ಲೇ, ಡಿ.ಕೆ. ಶಿವಕುಮಾರ್  ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಖಚಿತವಾಗಿದೆ. ಈ ಬದಲಾವಣೆಯು ಸರ್ಕಾರ ಮತ್ತು ಕೆಪಿಸಿಸಿ ಹಂತದಲ್ಲಿ ಸಚಿವ ಸಂಪುಟ, ಸಭಾಧ್ಯಕ್ಷ, ಕೆಪಿಸಿಸಿ ಅಧ್ಯಕ್ಷರು ಸೇರಿದಂತೆ ಹಲವು ಪ್ರಮುಖ ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ಚಾಲನೆ..

ಬೆಂಗಳೂರು (ಮೇ.30): ಮುಖ್ಯಮಂತ್ರಿ ಬದಲಾಗುತ್ತಿರುವ ಬೆನ್ನಲ್ಲೇ ಉಪಮುಖ್ಯಮಂತ್ರಿ ಸ್ಥಾನ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಸೇರಿದಂತೆ ಸರ್ಕಾರ ಹಾಗೂ ಕೆಪಿಸಿಸಿ ಹಂತದಲ್ಲಿ ಹಲವು ಖಾಲಿ ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ.

ಸಿದ್ದರಾಮಯ್ಯ(Siddaramaiah) ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಶನಿವಾರ ಕಾಂಗ್ರೆಸ್‌ನ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಡಿ.ಕೆ. ಶಿವಕುಮಾರ್‌(DK Shivakumar) ಆಯ್ಕೆಯಾಗುವುದು ಖಚಿತವಾಗಿದೆ.

ಬಳಿಕ ಶಿವಕುಮಾರ್‌ ಅವರು ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದು, ಈ ವೇಳೆಯೇ ಸಂಪುಟ ಸಚಿವರ ಪ್ರಮಾಣ ವಚನ ಸ್ವೀಕಾರವೂ ನಡೆಯಲಿದೆ.

ನಂತರ ವಿಧಾನಸಭೆ ಸಭಾಧ್ಯಕ್ಷರ ಆಯ್ಕೆ, ಸರ್ಕಾರದ ಮುಖ್ಯಸಚೇತಕರ ನೇಮಕ, ಶಾಸಕಾಂಗ ಪಕ್ಷದ ಕಾರ್ಯದರ್ಶಿ ನೇಮಕ ನಡೆಯಲಿದ್ದು, ಜತೆಗೆ ವಿವಿಧ ನಿಗಮ-ಮಂಡಳಿಗಳಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಲ್ಲೂ ಬದಲಾವಣೆಗಳು ಆಗಲಿವೆ.

ಕೆಪಿಸಿಸಿ ಅಧ್ಯಕ್ಷ(KPCC President)ರಾಗಿರುವ ಡಿ.ಕೆ. ಶಿವಕುಮಾರ್‌ ಅವರು ಸದ್ಯದಲ್ಲೇ ಕೆಪಿಸಿಸಿ ಜವಾಬ್ದಾರಿಗೆ ರಾಜೀನಾಮೆ ನೀಡಲಿದ್ದಾರೆ. ಬಳಿಕ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. 2028ರ ಚುನಾವಣೆ ಗಮನದಲ್ಲಿಟ್ಟುಕೊಂಡು ಕೆಪಿಸಿಸಿ ಕಾರ್ಯಾಧ್ಯಕ್ಷರಲ್ಲೂ ಬದಲಾವಣೆಗಳನ್ನು ಮಾಡಬಹುದು. ಕೆಪಿಸಿಸಿ ಪ್ರಚಾರ ಸಮಿತಿ, ಸಂಘಟನೆ ವಿಭಾಗ, ಸಮನ್ವಯ ಸಮಿತಿ ಹುದ್ದೆಗಳನ್ನು ನೇಮಕದ ಜತೆಗೆ ಕೆಲವು ಜಿಲ್ಲಾ ಘಟಕಗಳೂ ಬದಲಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Photos: ಡಿಕೆಶಿ ಸಿಎಂ ಆಗಲೆಂದು 3 ವರ್ಷದಿಂದ ಗಡ್ಡ ಕೂದಲು ಕತ್ತರಿಸದೇ ಹರಕೆ; ಕೊನೆಗೂ ಅಭಿಮಾನಿಯ ತಪಸ್ಸು ಫಲಿಸಿತು!
ಡಿಕೆ ಶಿವಕುಮಾರ್ ಸಂಪುಟದ ಸಂಭಾವ್ಯ ಸಚಿವರ ಪಟ್ಟಿ: ಕಾಂಗ್ರೆಸ್ 2.O ಸರ್ಕಾರದಲ್ಲಿ ಯಾರಿಗೆ ಅದೃಷ್ಟ?