
ಮೈಸೂರು (ನ.25): ಕೇವಲ ಇನ್ನೆರಡು ದಿನ ಮಾತ್ರ. ಇನ್ನೆರಡು ದಿನಗಳಲ್ಲಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು. ಇಲ್ಲದೆ ಇದ್ದಲ್ಲಿ ಈ ಜನ್ಮದಲ್ಲಿ ಅವರು ಮುಖ್ಯಮಂತ್ರಿ ಆಗೋಕೆ ಸಾಧ್ಯವಿಲ್ಲ. ಇದನ್ನ ಅವರ ಗ್ರಹಗತಿಗಳೇ ಹೇಳುತ್ತಿವೆ ಎಂದು ಮೈಸೂರಿನಲ್ಲಿ ಲಲಿತಾ ಭಾರತಿ ವಿಜಯೇಂದ್ರ ತೀರ್ಥ ಗುರುಗಳು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಡಿಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲಿ ಎಂದು ಮೈಸೂರಿನಲ್ಲಿ ವಿಶೇಷ ಪೂಜೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು. ರಾಜ್ಯಲಕ್ಷ್ಮಿ ಪೀಠ ಪ್ರಾಪ್ತ್ಯರ್ಥ ಸಂಕಲ್ಪ ಪೂಜೆ ನೆರನೇರಿಕೆ ಮಾಡಲಾಗಿದೆ. ಹುಡ್ಕೋ ಬಡಾವಣೆಯ ನವಗ್ರಹ ಸಹಿತ ಬಲಮುರಿ ಶಕ್ತಿ ಗಣಪತಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸಲಾಗಿದೆ. ಗಣಪತಿ ಹಾಗೂ ಲಲಿತಾ ತ್ರಿಪುರಸುಂದರಿ ದೇವಿಗೆ ಪೂಜೆ ಮಾಡಲಾಗಿದೆ. ಪೂಜೆ ಮೂಲಕ ಮುಖ್ಯಮಂತ್ರಿ ಪದವಿ ಪ್ರಾಪ್ತಿಗೆ ಸಂಕಲ್ಪ ಮಾಡಿಕೊಳ್ಳಲಾಗಿದೆ.
ಪೂಜೆಯ ಬಳಿಕ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಲಲಿತಾ ಭಾರತಿ ವಿಜಯೇಂದ್ರ ತೀರ್ಥ ಗುರುಗಳು, ಇನ್ನು ಎರಡು ದಿನಗಳಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು. ಅದಕ್ಕಾಗಿ ಸಂಕಲ್ಪ ಪೂಜೆ ಮಾಡಿದ್ದೇವೆ. ದೇವಿ ಕೂಡ ಬಲಗಡೆಯಿಂದ ಹೂ ವರ ಕೊಟ್ಟು ಆಶಿರ್ವಾದ ಮಾಡಿದ್ದಾಳೆ. ಡಿ.ಕೆ.ಶಿವಕುಮಾರ್ ಖಂಡಿತ ಮುಖ್ಯಮಂತ್ರಿ ಆಗುತ್ತಾರೆ. ಇದು ನೂರಕ್ಕೆ ಸಾವಿರ ಪಟ್ಟು ಆಗುತ್ತೆ. ಯಾರು ಏನೇ ಮಾಡಿದರೂ ದೈವ ಸಂಕಲ್ಪದ ಮುಂದೆ ಯಾವುದೂ ನಡೆಯೋದಿಲ್ಲ ಎಂದು ಹೇಳಿದ್ದಾರೆ.
ಅವರು ಇನ್ನೆರಡು ದಿನಗಳಲ್ಲಿ ಮುಖ್ಯಮಂತ್ರಿ ಆಗುವುದು ಶತಸಿದ್ಧ. ಇದನ್ನು ಅವರ ಗ್ರಹಗತಿಗಳು ಹೇಳುತ್ತಿವೆ. ಮಕರ ರಾಶಿಯಿಂದ ಮೂರನೇ ರಾಶಿಯಾದ ಮೀನ ರಾಶಿಯಲ್ಲಿ ಶನೇಶ್ವರ ಇರುವುದು ಲಾಭ ಸ್ಥಾನ, ಶುಭ್ರಪ್ರದವಾಗಿದೆ. ಇದರಿಂದ ಅವರಿಗೆ ಅಧಿಕಾರ ಪ್ರಾಪ್ತಿಯಾಗುವುದು ಶತಸಿದ್ಧ. ಒಂದು ವೇಳೆ ಈಗ ಆಗಲಿಲ್ಲ ಎಂದರೆ ಜನ್ಮದಲ್ಲಿ ಅವರು ಮುಖ್ಯಮಂತ್ರಿ ಆಗುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.