ನಾವು ಶ್ರೀರಾಮನ ಮಕ್ಕಳೇ, ಅದೇ ಸಂಸ್ಕೃತಿಯಲ್ಲಿ ಬೆಳೆದವರು: ಸಿಎಂ ಜಿಲ್ಲೆಯಲ್ಲಿ ಗುಡುಗಿದ ಡಿಕೆಶಿ

By Suvarna NewsFirst Published Mar 13, 2021, 5:11 PM IST
Highlights

ಭದ್ರಾವತಿ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಗರಂ ಆಗಿದ್ದು, ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಶಿವಮೊಗ್ಗ, (ಮಾ.13): ನಾವು ಶ್ರೀರಾಮನ ಮಕ್ಕಳೇ. ಅದೇ ಸಂಸ್ಕೃತಿಯಲ್ಲಿ ಬೆಳೆದು ಬಂದವರು. ನಾನು ಶಿವಕುಮಾರ್, ಸಿದ್ದರಾಮಯ್ಯ, ಪರಮೇಶ್ವರ್, ರಮೇಶ್ ಕುಮಾರ್ ಎಂದು ಎಲ್ಲರೂ ಹೆಸರಿಟ್ಟುಕೊಂಡಿದ್ದೇವೆ. ನಮ್ಮದೂ ಹಿಂದುತ್ವವೇ, ಜೊತೆಗೆ ಮಾನವತ್ವವೂ ನಮ್ಮಲ್ಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.

ಜೈ ಶ್ರೀರಾಮ್, ಭಾರತ್​ ಮಾತಾ ಕೀ ಜೈ ಅಂದರೆ ಶಾಸಕ ಸಂಗಮೇಶ್​ ಹಾಗೂ ಅವರ ಮಕ್ಕಳಿಗೆ ಯಾಕೆ ಅಷ್ಟೊಂದು ಕೋಪ? ಪಾಕಿಸ್ತಾನದ ಪರ ಘೋಷಣೆ ಕೂಗಿದ್ದರೆ​, ಅಲ್ಲಾಹು ಅಕ್ಬರ್ ಎಂದಿದ್ದರೆ ಅವರಿಗೆ ಸಮಾಧಾನ ಆಗುತ್ತಿತ್ತೇನೋ? ಎಂದು ಪ್ರಶ್ನಿಸಿದ್ದರು.

ಶಿವಮೊಗ್ಗ ಚಲೋ: ಕಾಂಗ್ರೆಸ್‌ಗೊಂದು ಸಚಿವ ಈಶ್ವರಪ್ಪ ಬಹಿರಂಗ ಸವಾಲ್

ಈ ಬಗ್ಗೆ ಇಂದು (ಸನಿವಾರ) ಶಿವಮೊಗ್ಗದ ಕಾಂಗ್ರೆಸ್ ಜನಾಕ್ರೋಶ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಪಕ್ಷದ ಶಾಸಕರು ಹಾಗೂ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಹಾಕಲಾಗಿದೆ. ಬಿಜೆಪಿ ಸರ್ಕಾರ ಅಧಿಕಾರ ಹಾಗೂ ಅಧಿಕಾರಿಗಳನ್ನು ಬಳಸಿಕೊಂಡು ಕೇಸ್ ಹಾಕುತ್ತಿದೆ. ಇದನ್ನು ವಿರೋಧಿಸಿ, ನಾವು ಎಲ್ಲರೂ ಇಲ್ಲಿಗೆ ಬಂದಿದ್ದೇವೆ. ಪ್ರತಿಯೊಬ್ಬ ಕಾರ್ಯಕರ್ತರ ರಕ್ಷಣೆಗೆ ಕಾಂಗ್ರೆಸ್ ಪಕ್ಷದ ಇದೆ. ಇದೇ ಸಂದೇಶ ಕೊಡಲು ನಾವು ಶಿವಮೊಗ್ಗಕ್ಕೆ ಬಂದಿದ್ದೇವೆ ಎಂದರು.

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಕಾಂಗ್ರೆಸ್ ಶಾಸಕ ಸಂಗಮೇಶ್ ಪುತ್ರ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆಯಾಗಿದ್ದು, ಇದು ರಾಜ್ಯ  ನಾಯಕರ ನಡುವೆ ರಾಜಕೀಯ ಆರೋಪ-ಪ್ರತ್ಯಾರೋಪಗಳು ಮಾಡಲಾಗುತ್ತಿದೆ.

click me!