ದೊಡ್ಡ ತಿಮಿಂಗಿಲ ಬಲೆಗೆ ಬಿದ್ದಿಲ್ಲ: ಸ್ಫೋಟಕ ಹೇಳಿಕೆ ಕೊಟ್ಟ ಜಾರಕಿಹೊಳಿ

By Suvarna News  |  First Published Mar 13, 2021, 4:18 PM IST

ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ. ಪ್ರಕರಣದ ತನಿಖೆಯನ್ನು ಎಸ್‌ಐಟಿ ತ್ರೀವ್ರಗೊಳಿಸಿದ್ದು, ಕೆಲವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಹಿತಿ ಕಲೆಹಾಕುತ್ತಿದೆ. ಇನ್ನು ಈ ಬಗ್ಗೆ ಬಾಲಚಂದ್ರಜಾರಕಿಹೊಳಿ ಪ್ರತಿಕ್ರಿಯಿಸಿದ್ದು ಹೀಗೆ...


ಬೆಳಗಾವಿ, (ಮಾ.13): ನಾವು ಗಾಳಿಯಲ್ಲಿ ಗುಂಡು ಹೊಡೆಯುತ್ತಿಲ್ಲ. ಕಾನೂನು ಹೋರಾಟದಿಂದಲೂ ಹಿಂದೆ ಸರಿಯೋ ಮಾತೇ ಇಲ್ಲ. ಸಿಡಿ ಪ್ರಕರಣದಲ್ಲಿ ಪಕ್ಕಾ ಎವಿಡೆನ್ಸ್ ಕಲೆಕ್ಟ್ ಮಾಡಿ, ಕಿಂಗ್ ಪಿನ್ ಗಳ ಬಗ್ಗೆಯೂ ಆದಷ್ಟು ಬೇಗ ದೂರು ನೀಡಲಾಗುತ್ತದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

 ಎಸ್‌ಐಟಿ ಪ್ರಕರಣದ ತನಿಖೆ ಕುರಿತಂತೆ ಬೆಳಗಾವಿಯಲ್ಲಿ ಇಂದು (ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡುವ ಕುರಿತು, ರಮೇಶ್ ಜಾರಕಿಹೊಳಿ ಅವರೊಂದಿಗೆ ಚರ್ಚಿಸಲಾಗಿದೆ. ಮೂವರ ವಿರುದ್ಧ ದೂರು ನೀಡುತ್ತೇವೆ ಎಂದರು.

Tap to resize

Latest Videos

SIT ಮಹಾಬೇಟೆ : 'ಮಹಾನ್ ನಾಯಕ', 'ಶೋ ಪೀಸ್‌' ಗೆ ಟೆನ್ಷನ್

ಸಿಡಿ ಪ್ರಕರಣದ ಕಿಂಗ್‍ಪಿನ್‍ಗಳ ಬಗ್ಗೆಯೂ ಆದಷ್ಟು ಬೇಗ ದೂರು ನೀಡುತ್ತೇವೆ. ಕಿಂಗ್‍ಪಿನ್‍ಗಳಿಗೆ ಸಹಕರಿಸಿದವರನ್ನು ವಶಕ್ಕೆ ಪಡೆಯಲಾಗಿದೆ. ಆದರೆ ದೊಡ್ಡ ತಿಮಿಂಗಿಲವನ್ನು ವಶಕ್ಕೆ ಪಡೆದಿಲ್ಲ ಎಂದು ತಿಳಿಸಿದರು.

, ನಾವು ಗಾಳಿಯಲ್ಲಿ ಗುಂಡು ಹೊಡೆಯುತ್ತಿಲ್ಲ. ಕಾನೂನು ಹೋರಾಟದಿಂದ ಹಿಂದೆ ಸರಿಯುವುದೂ ಇಲ್ಲ. ಸಾಕ್ಷ್ಯಾಧಾರಗಳನ್ನು ಖಾಸಗಿಯಾಗಿ ಸಂಗ್ರಹ ಮಾಡುವ ಕಾರ್ಯ ನಡೆಸಲಾಗುತ್ತಿದೆ. ಪಕ್ಕಾ ಎವಿಡೆನ್ಸ್ ಕಲೆಕ್ಟ್ ಮಾಡಿ, ಸಿಡಿ ಪ್ರಕರಣದಲ್ಲಿ ಕಿಂಗ್ ಪಿನ್ ಗಳ ಬಗ್ಗೆಯೂ ಆದಷ್ಟು ಬೇಗ ದೂರು ನೀಡುತ್ತೇವೆ ಎಂದು ಹೇಳಿದರು.

ಇನ್ನು ಮೂವರ ವಿರುದ್ಧ ದೂರು ಕೊಡುತ್ತೇವೆ ಎನ್ನುವ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚನ ಮೂಡಿಸಿದೆ. ಹಾಗಾದ್ರೆ ಆ ಮೂವರು ಯಾರು..? ಅವರು ರಾಜಕಾರಣಿಗಳಾ..? ರಾಜಕಾರಣಿಗಳಾದ್ರೆ ಯಾವ ಪಕ್ಷದವರು? ಹೀಗೆ ಹಲವು ಪ್ರಶ್ನೆಗಳು ಉದ್ಭವಿಸಿವೆ.

click me!