ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿರುವ ರಮೇಶ್ ಜಾಕಕಿಹೊಳಿ ಸೆಕ್ಸ್ ಸಿಡಿ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಕೊನೆಗೂ ರಮೇಶ್ ಜಾರಕಿಹೊಳಿ ದೂರು ನೀಡಿದ್ದಾರೆ.
ಬೆಂಗಳೂರು, (ಮಾ.13): ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ. ಕೇಸ್ ಭಾರೀ ಸುದ್ದಿಯಲ್ಲಿದ್ದು, ಎಸ್‌ಐಟಿ ತಂಡ ವಿಡಿಯೋ ಲೀಕಾಸೂರರ ಬೆನ್ನುಬಿದ್ದಿದೆ.
ಇದರ ಮಧ್ಯೆ ಕೊನೆಗೂ ರಮೇಶ್ ಜಾರಕಿಹೊಳಿ ಅವರು ದೂರು ದಾಖಲಿಸಿದ್ದಾರೆ. ಬೆಂಗಳೂರಿನ ಸದಾಶಿವ ನಗರದ ಪೊಲೀಸ್ ಠಾಣೆಯಲ್ಲಿ ರಮೇಶ್ ಜಾರಕಿಹೊಳಿ ಆಪ್ತ ಎಂ.ವಿ ನಾಗರಾಜ್ ʼಬ್ಲ್ಯಾಕ್ ಮೇಲ್ ಕೇಸ್ʼ ದಾಖಲಿಸಲಿದ್ದಾರೆ.
ಸ್ವತಃ ರಮೇಶ್ ಜಾರಕಿಹೊಳೆಯವ್ರೇ ಲಿಖಿತ ರೂಪದಲ್ಲಿ ಈ ದೂರನ್ನ ನೀಡಿದ್ದು, ಆಪ್ತ ಎಂ.ವಿ ನಾಗಾರಾಜ್ ಅವರ ಕೈಯಲ್ಲಿ ಠಾಣೆಗೆ ಕೊಟ್ಟು ಕಳಿಸಿದ್ದಾರೆ.
ದೊಡ್ಡ ತಿಮಿಂಗಿಲ ಬಲೆಗೆ ಬಿದ್ದಿಲ್ಲ: ಸ್ಫೋಟಕ ಹೇಳಿಕೆ ಕೊಟ್ಟ ಜಾರಕಿಹೊಳಿ
ಲಿಖಿತ ರೂಪದಲ್ಲಿರುವ ಈ ದೂರಿನಲ್ಲಿ ರಮೇಶ್ ಜಾರಕಿಹೊಳಿ ಸಹಿ ಇದ್ದು, ಈ ಸಿಡಿಯಿಂದ ತನ್ನ ತೇಜೋವಧೆ ಆಗಿದೆ. ನನ್ನನ್ನ ಬ್ಲ್ಯಾಕ್ ಮೇಲ್ ಮಾಡಲಾಗಿದ್ದು, ತನಿಖೆ ಮಾಡಿ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಆದ್ರೆ, ದೂರಿನಲ್ಲಿ ಯಾರ ಹೆಸರು ಉಲ್ಲೇಖ ಮಾಡಿಲ್ಲ.
ರಾಸಲೀಲೆ ವಿಡಿಯೋ ಮಾ.2ರಂದು ರಿಲೀಸ್ ಮಾಡಲಾಗಿದ್ದು, ಯುವತಿಗೆ ಮೋಸ ಮಾಡಿದ್ದಾರೆ ಎಂದು ಸಾಮಾಜಿ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಿದ್ದರು. ಆದ್ರೆ, ಏಕಾಏಕಿ ಕಲ್ಲಹಳ್ಳಿ ಅವರು ತಮ್ಮ ದೂರನ್ನು ವಾಪಸ್ ಪಡೆದುಕೊಂಡಿದ್ದಾರೆ.
ಈ ಪ್ರಕರಣವನ್ನು ಎಸ್‌ಐಟಿ ಕೈಗೆತ್ತಿಕೊಂಡಿದ್ದು, ಈಗಾಗಲೇ ಕೆಲವರನ್ನ ವಶಕ್ಕೆ ಪಡೆದು ವಿಚಾರಣೆ ಮಾಡಿದೆ. ಇನ್ನು ಈ ಪ್ರಕರಣ ಮುಂದೆ ಯಾವ ರೀತಿಯ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ಕಾದು ನೋಡಾಬೇಕಿದೆ.