ಗಣೇಶ ಚತು​ರ್ಥಿಯ ಮೇಲೆ ರಾಜ​ಕೀಯ ಛಾಯೆ..!

By Kannadaprabha News  |  First Published Aug 24, 2022, 11:30 PM IST

ಯುವಕರನ್ನು ತಮ್ಮತ್ತ ಸೆಳೆ​ಯಲು ವಿಘ್ನೇ​ಶ್ವರ ಬಳಕೆ, ರಾಜಕೀಯ ಪಕ್ಷಗಳಿಂದ ಗಣೇಶ ವಿಗ್ರಹಗಳ ವಿತರಣೆ


ಚನ್ನಪಟ್ಟಣ(ಆ.24):  ಕೋವಿಡ್‌ನಿಂದಾಗಿ ಕಳೆದ ಎರಡು ವರ್ಷಗಳಿಂದ ಗಣೇಶನ ಹಬ್ಬದ ಮೇಲೆ ಮೂಡಿದ್ದ ಕಾರ್ಮೋಡದ ಕರಿನೆರಳು ಸರಿಯುತ್ತಿದ್ದಂತೆ, ಈ ಬಾರಿ ಗಣೇಶನ ಚತುರ್ಥಿಯ ಮೇಲೆ ರಾಜಕೀಯದ ಛಾಯೆ ಆವರಿಸಿದೆ. ರಾಜಕೀಯ ಪಕ್ಷಗಳ ನಾಯಕರು ಗಣೇಶ ಮೂರ್ತಿ ವಿತರಣೆಗೆ ಮುಂದಾಗಿದ್ದು, ಇದರಿಂದ ಯುವಕರನ್ನು ತಮ್ಮತ್ತ ಸೆಳೆ​ಯಲು ವಿಘ್ನ ನಿವಾರಕ ವಿಘ್ನೇಶ್ವರನನ್ನೇ ಬಳಸಿಕೊಳ್ಳಲು ಮುಂದಾಗಿರುವುದು ಕುತೂಹಲ ಕೆರಳಿಸಿದೆ. ಕಳೆದ ಎರಡು ವರ್ಷಗಳಿಂದ ಕೋವಿಡ್‌ ಹಿನ್ನೆಲೆಯಲ್ಲಿ ಗಣೇಶನ ಹಬ್ಬವನ್ನು ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ ಸರ್ಕಾರದ ನಿಮಯಗಳು ಸಡಿಲಗೊಂಡಿದ್ದು, ತಾಲೂಕಿನ ಜನ ಹಬ್ಬಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವ ಹೊತ್ತಿನಲ್ಲೇ ರಾಜಕೀಯ ಪಕ್ಷಗಳ ಎಂಟ್ರಿ ಕೊಟ್ಟಿವೆ.

ತಾಲೂಕಿನ ಜನ ಸಡಗರದಿಂದ ಗಣೇಶನ ಹಬ್ಬ ಆಚರಿಸಲು ಸಿದ್ಧ​ರಾಗುತ್ತಿರುವ ಹೊತ್ತಿನಲ್ಲೆ ಅಖಾಡಕ್ಕಿಳಿದಿರುವ ರಾಜಕೀಯ ನಾಯಕರು ನಾ ಮುಂದು ತಾ ಮುಂದು ಎಂಬಂತೆ ಗಣೇಶ ಮೂರ್ತಿಗಳ ವಿತರಣೆಗೆ ಮುಂದಾಗಿದ್ದಾರೆ. ಒಂದು ಕಡೆ ಜೆಡಿಎಸ್‌ ತಾಲೂಕು ಅಧ್ಯಕ್ಷ ಜಯಮುತ್ತು ಪ್ರತಿ ವರ್ಷದಂತೆ ಈ ಬಾರಿಯೂ ಗಣೇಶ ಮೂರ್ತಿ ವಿತರಣೆ ಮಾಡುತ್ತಿದ್ದರೆ, ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಸಹ ಗಣೇಶ ಮೂರ್ತಿಗಳ ವಿತರಣೆಗೆ ಮುಂದಾಗಿದ್ದಾರೆ.

Tap to resize

Latest Videos

ಕರ್ನಾಟಕ ಕುರುಕ್ಷೇತ್ರದಲ್ಲಿ ಸಿದ್ಧಂತಾದ ಸಂಘರ್ಷ! ಚುನಾವಣೆಯಲ್ಲಿ ಇದೇ ಚರ್ಚಾ ವಿಷ್ಯಾ?

1001 ಗಣೇಶ ಮೂರ್ತಿ ವಿತರಣೆ

ಈ ಬಾರಿ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿರುವ ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌, ಇದೇ ಮೊದಲ ಬಾರಿಗೆ ಗಣೇಶಮೂರ್ತಿಗಳ ವಿತರಣೆಗೆ ಮುಂದಾಗಿದ್ದಾರೆ. ತಮ್ಮ ಜನ್ಮದಿನದ ಆಚರಣೆಯ ಬದಲಿಗೆ ತಾಲೂಕಿನಾದ್ಯಂತ ಅದ್ಧೂರಿಯಾಗಿ ಗಣೇಶ ಚತುರ್ಥಿಯನ್ನು ಆಚರಿಸುವುದಾಗಿ ಘೋಷಿಸಿದ್ದಾರೆ. 1001 ಗಣೇಶನ ವಿಗ್ರಹಗಳನ್ನು ವಿತರಿಸಲು ಮುಂದಾಗಿರುವ ಯೋಗೇಶ್ವರ್‌, ಕೋವಿಡ್‌ ಕಾರಣದಿಂದ ತಾಲೂಕಿನ ಜನ ಕಳೆದ ಎರಡು ವರ್ಷಗಳಿಂದ ಗಣೇಶನ ಹಬ್ಬವನ್ನು ಆಚರಿಸಿಲ್ಲ. ಆದ್ದರಿಂದ ಈ ಬಾರಿ ತಾಲೂಕಿನ ಜನರೆಲ್ಲ ಅದ್ದೂರಿಯಾಗಿ ಗಣೇಶನ ಹಬ್ಬ ಆಚರಿಸಲು ಅನುವಾಗುವಂತೆ ಮಾಡಲು ಗಣೇಶನ ಮೂರ್ತಿಗಳನ್ನು ವಿತರಿಸಲಾಗುತ್ತಿದೆ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಜಯಮುತ್ತುರಿಂದ 501 ಮೂರ್ತಿ ವಿತರಣೆ: 

ಕಳೆದ ಕೆಲ ವರ್ಷಗಳಿಂದ ಗಣೇಶ ಮೂರ್ತಿಗಳನ್ನು ವಿತರಿಸುತ್ತಿರುವ ತಾಲೂಕು ಜೆಡಿಎಸ್‌ ಅಧ್ಯಕ್ಷ ಎಚ್‌.ಸಿ.ಜಯಮುತ್ತು. ಪ್ರತಿ ವರ್ಷದಂತೆ ಈ ಬಾರಿಯೂ ಗಣೇಶನ ವಿಗ್ರಹಗಳನ್ನು ವಿತರಿಸಲು ಅನುವಾಗಿದ್ದಾರೆ. 501 ಗಣೇಶನ ವಿಗ್ರಹಗಳನ್ನು ವಿತರಿಸಲು ಯೋಚನೆ ರೂಪಿಸಲಾಗಿದೆಯಾದರೂ, ಇನ್ನು ಹೆಚ್ಚಿನ ಬೇಡಿಕೆ ಬಂದರೆ ಇನ್ನು ಹೆಚ್ಚು ಮೂರ್ತಿಗಳನ್ನು ತರಿಸಲು ಕ್ರಮಕೈಗೊಂಡಿದ್ದಾರೆ.

ಎರಡು ಕಡೆಯವರು ಗಣೇಶ ಮೂರ್ತಿ ವಿತರಣೆಗೆ ತಾಲೂಕಿನ ಮಳೂರು ಗ್ರಾಮವನ್ನೇ ಆಯ್ಕೆ ಮಾಡಿಕೊಂಡಿರುವುದು ವಿಶೇಷ. ಮಳೂರು ಗ್ರಾಮದ ಪಾರ್ವತಿ ಕೈಲಾಸೇಶ್ವರ ದೇವಸ್ಥಾನವನ್ನು ಜಯಮುತ್ತು ಗಣೇಶನ ಮೂರ್ತಿಗಳನ್ನು ವಿತರಿಸಲು ಆರಿಸಿಕೊಂಡಿದ್ದಾರೆ. ಅದೇ ಗ್ರಾಮದ ಸಾಯಿ ಮಂದಿರದಲ್ಲಿ ಯೋಗೇಶ್ರ್ವ ವಿತರಿಸಲು ಗಣೇಶನ ಮೂರ್ತಿಗಳನ್ನು ತಂದಿಟ್ಟಿದ್ದಾರೆ. ಇದಲ್ಲದೇ ಹೊಂಗನೂರಿನ ಅರಸು ಭವನ ಮತ್ತು ತಿಮ್ಮಮ್ಮ ಕಲ್ಯಾಣ ಮಂಟಪದಲ್ಲೂ ಸಹ ಮೂರ್ತಿ ವಿತರಣೆ ಮಾಡಲು ಸಿಪಿವೈ ತಯಾರಿ ನಡೆಸಿದ್ದಾರೆ.

ಗಣೇಶಮೂರ್ತಿ ವಿತರಣೆಯ ಹಿಂದೆ ಸಂಘಟನೆ ಪ್ಲಾನ್‌:

ಚುನಾವಣಾ ವರ್ಷವಾದ ಕಾರಣ ಗಣೇಶ ಮೂರ್ತಿಗಳ ವಿತರಣೆಯ ಹಿಂದೆ ಯುವಕರ ಸಂಘಟನೆಯ ಉದ್ದೇಶವಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ.ಗಣೇಶ ಮೂರ್ತಿಗಳ ವಿತರಣೆಯ ಹಿಂದೆ ಯೋಗೇಶ್ವರ್‌ ಯುವಕರ ಸಂಘಟನೆಯ ಮಾಸ್ಟರ್‌ ಪ್ಲಾನ್‌ ಹೆಣೆದಿದ್ದಾರೆ. ಗಣೇಶ ವಿಗ್ರಹ ಪಡೆಯಲು ಬರುವ ಯುವಕರು ಮಾಹಿತಿಯನ್ನು ಸಂಗ್ರಹಿಸಲು ತಂತ್ರವನ್ನು ರೂಪಿಸಿದ್ದಾರೆ. ಒಂದು ಗಣೇಶ ಮೂರ್ತಿಯನ್ನು ಪಡೆಯಲು ಬರುವವರು ಕನಿಷ್ಠ 20 ಜನರ ತಂಡದೊಂದಿಗೆ ಬರಬೇಕು. ಕಡ್ಡಾಯವಾಗಿ ಎಲ್ಲರೂ ಆಧಾರ್‌ ಕಾರ್ಡ್‌ ನೀಡಬೇಕು ಎಂಬ ಷರತ್ತನ್ನು ವಿಧಿಸಲಾಗಿದೆ.

ಇನ್ನು ಜಯ​ಮುತ್ತು ಅವರು ಈ ಬಾರಿ ತಾವು ಸಹ ಗಣೇಶನ ವಿಗ್ರಹಗಳನ್ನು ವಿತರಿಸುವುದರೊಂದಿಗೆ ಯುವಕರನ್ನು ಸಂಘಟಿಸಬಹುದು ಎಂಬ ತಂತ್ರ ಇದರ ಹಿಂದೆ ಅಡಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಜಯ​ಮುತ್ತು ಕೂಡ ಮೂರ್ತಿ ಪಡೆ​ಯಲು ಬರು​ವ​ವ​ರಿಂದ 5 ಫೋಟೋ ಮತ್ತು 5 ಆಧಾರ್‌ ಕಾರ್ಡ್‌ಗಳನ್ನು ಪಡೆ​ಯು​ತ್ತಿ​ದ್ದಾ​ರೆ.

ಬಿಎಸ್‌ವೈಗೆ ಸಂಸದೀಯ ಮಂಡಳಿಯಲ್ಲಿ ಸ್ಥಾನ, ಬಿಜೆಪಿಗೆ ಬಲ: ಎಂಟಿಬಿ ನಾಗರಾಜ್‌

ಕೋವಿಡ್‌ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಜನ ಗಣೇಶನ ಹಬ್ಬವನ್ನು ಆಚರಿಸಿರಲಿಲ್ಲ. ನೀರಾವರಿ ಯೋಜನೆಯಿಂದಾಗಿ ತಾಲೂಕಿನ ಕೆರೆಗಳು ನಳನಳಿಸುತ್ತಿದ್ದು, ಈ ಬಾರಿ ಜನ ಸಂಭ್ರಮದಿಂದ ಗಣೇಶನ ಹಬ್ಬ ಆಚರಿಸಲಿ ಎಂಬ ಉದ್ದೇಶದಿಂದ ಗಣೇಶನ ಮೂರ್ತಿಗಳನ್ನು ವಿತರಿಸುತ್ತಿದ್ದೇನೆಯೇ ಹೊರತು ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ ಅಂತ ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ತಿಳಿಸಿದ್ದಾರೆ.  

ನಮ್ಮ ತಾಯಿಯ ಹೆಸರಿನಲ್ಲಿರುವ ಚನ್ನಮ್ಮ ಚಾರಿಟೆಬಲ್‌ ಟ್ರಸ್ಟ್‌ ನಿಂದ ಕಳೆದ 13 ವರ್ಷಗಳಿಂದ ಗಣೇಶನ ಮೂರ್ತಿಗಳನ್ನು ವಿತರಿಸುತ್ತಿದ್ದೇನೆ. ಕೋವಿಡ್‌ ನಿಬಂಧನೆಗಳ ಕಾರಣದಿಂದ ಎರಡು ವರ್ಷ ಗಣೇಶನ ಮೂರ್ತಿಗಳನ್ನು ವಿತರಿಸಲು ಆಗಿರಲಿಲ್ಲ. ಗಣೇಶನ ಮೂರ್ತಿಗಳ ವಿತರಣೆ ಕಾರ್ಯವನ್ನು ನಾನೇನು ಹೊಸದಾಗಿ ಮಾಡುತ್ತಿಲ್ಲ ಅಂತ ಜೆಡಿಎಸ್‌ ತಾಲೂಕು ಅಧ್ಯ​ಕ್ಷ ಎಚ್‌.ಸಿ.ಜಯಮುತ್ತು ಹೇಳಿದ್ದಾರೆ. 
 

click me!