Koppal: ಜನಾರ್ಧನ ರೆಡ್ಡಿಯಿಂದ 'ಕಲ್ಯಾಣ ರಾಜ್ಯ ಪ್ರಗತಿ ಪಕ್ಷ' ಸ್ಥಾಪನೆ?

By Sathish Kumar KHFirst Published Dec 12, 2022, 2:47 PM IST
Highlights

* ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟಿರುವ ಮಾಜಿ ಸಚಿವ ಜನಾರ್ಧನ ರೆಡ್ಡಿ
* ಜೈಲಿಗೆ ಹೋಗಿ ಬಂದ ನಂತರ ಸಾರ್ವಜನಿಕ ಜೀವನಕ್ಕೆ ಮರಳಲು ತೀರ್ಮಾನ
* ಬಿಜೆಪಿ ಟಿಕೆಟ್‌ ಸಿಗದಿದ್ದರೆ ಪರ್ಯಾಯವಾಗಿ ಹೊಸ ಪಕ್ಷ ಸ್ಥಾಪಿಸಲು ಚಿಂತನೆ
* ಕೇಂದ್ರ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಕೆ ಸಿದ್ಧತೆ

ಕೊಪ್ಪಳ (ಡಿ.12): ಬಳ್ಳಾರಿಯ ಮಾಜಿ ಸಚಿವ ಜನಾರ್ದನ್ ರೆಡ್ಡಿ ಬಿಜೆಪಿ ಸೇರ್ಪಡೆಯಾಗುವುದು ಅನುಮಾನವಾಗಿದೆ. ಇನ್ನು ಬಿಜೆಪಿ ಸೇರ್ಪಡೆಗೆ ಹೈಕಮಾಂಡ್ ತೊಡಕು ಉಂಟಾದರೆ ಬಿಜೆಪಿಗೆ ಸೆಡ್ಡು ಹೊಡೆಯಲು 'ಕಲ್ಯಾಣ ರಾಜ್ಯ ಪ್ರಗತಿ ಪಕ್ಷ' ಎಂಬ ಹೊಸ ಪಕ್ಷವನ್ನು ಸ್ಥಾಪನೆ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಗಂಗಾವತಿಯ ಮನೆ ಮಾಡಿರುವ ಜನಾರ್ಧನ ರೆಡ್ಡಿ, ಇದೇ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಸ್ಪಷ್ಟ ಸಂದೇಶವನ್ನು ಹೊರ ಹಾಕಿದ್ದಾರೆ.

ಕಳೆದ ಒಂದೆರಡು ತಿಂಗಳಿಂದ ಮಾಜಿ ಸಚಿವ ಜನಾರ್ಧನ ರೆಡ್ಡಿ ಸಾರ್ವಜನಿಕ ಜೀವನಕ್ಕೆ ಮರಳುವುದಾಗಿ ಸೂಚನೆ ನೀಡಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸೂಚನೆಯನ್ನು ನೀಡಿದ್ದರು. ಇದರ ಬೆನ್ನಲ್ಲೇ ಗಂಗಾವತಿ ನಗರದ ಕನಕಗಿರಿ ರಸ್ತೆಯಲ್ಲಿ ದೊಡ್ಡ ಮನೆಯೊಂದನ್ನು ನಿರ್ಮಿಸಿ ಇನ್ನೆರಡು ದಿನಗಳಲ್ಲಿ ಗೃಹ ಪ್ರವೇಶವನ್ನೂ ಮಾಡಲಿದ್ದಾರೆ. ಆದರೆ, ಅದಕ್ಕಿಂತಲೂ ಮುಂಚಿತವಾಗಿ ವಿಧಾನಸಭಾ ಕ್ಷೇತ್ರದ ಹುಡುಕಾಟದ ದೃಷ್ಟಿಯಿಂದ ಗಂಗಾವತಿ ಕ್ಷೇತ್ರದ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ಮತ್ತು ಇತರೆ ಗ್ರಾಮೀಣ ಪ್ರದೇಶಗಳಲ್ಲಿ ಪ್ರವಾಸ ಮಾಡಿದ್ದಾರೆ. ಜೊತೆಗೆ, ಗದಗ ನಗರಕ್ಕೂ ಭೇಟಿ ಮಾಡಿದ್ದರು. ಈ ವೇಳೆ ನನ್ನ ದೇಹದಲ್ಲಿ ಬಿಜೆಪಿ ಇದ್ದು, ಪಕ್ಷ ಸೇರ್ಪಡೆ ಮತ್ತು ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆಯೂ ಇಂಗಿತ ವ್ಯಕ್ತಪಡಿಸಿದ್ದರು.

'ಗಣಿಧಣಿ'ಯಿಂದ ಹೊಸ ಪಕ್ಷ ಸ್ಥಾಪನೆ: ಇಂದು 'ಕಲ್ಯಾಣ ರಾಜ್ಯ ಪ್ರಗತಿ ಪಕ್ಷ' ನೋಂದಣಿ

ಚುನಾವಣಾ ಆಯೋಗಕ್ಕೂ ಹೊಸ ಪಕ್ಷದ ಅರ್ಜಿ: ಜನಾರ್ಧನ ರೆಡ್ಡಿಗೆ ಬಿಜೆಪಿ ಸೇರ್ಪಡೆಗೆ ತೊಡಕು ಉಂಟಾದ ಬೆನ್ನಲ್ಲೇ ಹೊಸ ಪಕ್ಷದ ಮೂಲಕ ಬಿಜೆಪಿಗೆ ಸೆಡ್ಡು ಹೊಡೆಯಲು ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದಾರೆ. ಈ ಮೂಲಕ ಬಿಜೆಪಿ ನಾಯಕರಿಗೆ ಜನಾರ್ದನ್ ರೆಡ್ಡಿ ಮಾಸ್ಟರ್ ಸ್ಟ್ರೋಕ್ ಕೊಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ದೆಹಲಿಯ ಚುನಾವಣೆ ಆಯೋಗವನ್ನು ಭೇಟಿ ಮಾಡಲಿದ್ದು, ಹೊಸ ಪಕ್ಷದ ರೂಪುರೇಶಗಳ ಬಗ್ಗೆ ಚುನಾವಣೆ ಆಯೋಗಕ್ಕೆ ಅರ್ಜಿ ಸಲ್ಲಿಕೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ನಾಳಿದ್ದು ಗೃಹಪ್ರವೇಶ: ಇನ್ನು ಗಂಗಾವತಿಯ ಕನಕಗಿರಿ ರಸ್ತೆಯಲ್ಲಿ ನಿರ್ಮಿಸಲಾಗಿರುವ ಹೊಸ ಮನೆಯನ್ನು ಇದೇ 14 ರಂದು ಜನಾರ್ದನ ರೆಡ್ಡಿ ಅವರು ತಮ್ಮ ಪತ್ನಿ ಲಕ್ಷ್ಮೀ ನೇತೃತ್ವದಲ್ಲಿ ಗೃಹಪ್ರವೇಶ ಮಾಡಲಿದ್ದಾರೆ. ಈ ಮೂಲಕ ಗೃಹ ಪ್ರವೇಶಕ್ಕೆ ಬರುವ ನಾಯಕರ ಮೇಲೆ ಒತತಡ ಹೇರುವ ತಂತ್ರವನ್ನು ರೂಪಿಸಿಕೊಂಡಿದ್ದಾರೆ. ಈಗ ಬಿಜೆಪಿಗೆ ಕಲ್ಲು ಎಸೆಯುತ್ತಿದ್ದು, ಹಣ್ಣು ಬಿದ್ದರೆ ತಿನ್ನುವುದು. ಇಲ್ಲವಾದರೆ ಬೇರೊಂದು ಅಸ್ತ್ರ ಸಿದ್ಧತೆ ಮಾಡಿಕೊಳ್ಳಲು ಹೊಸ ಪಕ್ಷ ಕಟ್ಟಲು ಮುಂದಾಗಿದ್ದಾರೆ.

ಗಂಗಾವತಿಯಲ್ಲೇ ನನ್ನ ಸ್ಪರ್ಧೆ, ರೆಡ್ಡಿ ಕಣಕ್ಕಿಳಿದರೆ ಭಯವಿಲ್ಲ: ಶಾಸಕ ಪರಣ್ಣ

ರಾಷ್ಟ್ರೀಯ ಪಕ್ಷ ಸ್ಥಾಪನೆಯ ಉದ್ದೇಶ: ಜನಾರ್ದನ್ ರೆಡ್ಡಿಗೆ ಒಂದು ವೇಳೆ ಬಿಜೆಪಿಯಿಂದ ಟಿಕೆಟ್‌ ಸಿಗದಿದ್ದರೆ ರಾಷ್ಟ್ರ ರಾಜಕಾರಣದ ಮೇಲೆಯೇ ಕಣ್ಣಿಡಲು ಚಿಂತನೆ ನಡೆಸಿದ್ದಾರೆ. ‌ಕೇವಲ ಪ್ರಾದೇಶಿಕ ಪಕ್ಷವಲ್ಲ, ರಾಷ್ಟ್ರೀಯ ಪಕ್ಷ ಸ್ಥಾಪನೆ ಮಾಡಲು ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದಾರೆ. ಕೇವಲ ಕರ್ನಾಟಕ ವಿಧಾನ ಸಭಾ ಮಾತ್ರವಲ್ಲದೆ ಸಂಸತ್ತು ಚುನಾವಣೆ ಮೇಲೂ ಕಣ್ಣಿಟ್ಟಿದ್ದಾರೆ. ಈ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ತಂತ್ರ ರೂಪಿಸಿದ್ದಾರೆ.

click me!