ಕೊನೆಗೂ ಅನರ್ಹ ಶಾಸಕರ ಅರ್ಜಿ ವಿಚಾರಣೆ ಅಂತ್ಯ: ತೀರ್ಪು ಕಾಯ್ದಿರಿಸಿದ ಸುಪ್ರೀಂ

By Web DeskFirst Published Oct 25, 2019, 3:19 PM IST
Highlights

ಅನರ್ಹ ಶಾಸಕರ ವಿಚಾರಣೆ ಆಲಿಸಿದ ಸುಪ್ರೀಂ ಕೋರ್ಟ್| ವಾದ ಪ್ರತಿವಾದ ಆಲಿಸಿದ ಎನ್. ವಿ ರಮಣ ನೇತೃತ್ವದ ತ್ರೀಸದಸ್ಯ ಪೀಠ|ದೀಪಾವಳಿ ಬಳಿಕ ಅನರ್ಹ ಶಾಸಕರ ತೀರ್ಪು ಪ್ರಕಟಿಸಲಿರುವ ನ್ಯಾಯಾಲಯ| ಅನರ್ಹ ಶಾಸಕರಿಗೆ ಮತ್ತೆ ನಿರಾಸೆ|

ನವದೆಹಲಿ/ಬೆಂಗಳೂರು[ಅ.25]: ರಾಜ್ಯದ 17 ಕಾಂಗ್ರೆಸ್ ಹಾಗೂ ಜೆಡಿಎಸ್ ಅನರ್ಹ ಶಾಸಕರ ಅರ್ಜಿ ವಿಚಾರಣೆ  ಇಂದು [ಶುಕ್ರವಾರ] ಕೊನೆಗೂ ಅಂತ್ಯವಾಗಿದೆ. ವಾದ-ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್ ತೀರ್ಪು ಕಾಯ್ದಿರಿಸಿದೆ.

10 ದಿನಗಳ ಬಳಿಕ ತೀರ್ಪು ಪ್ರಕಟಿಸುವುದಾಗಿ ನ್ಯಾಯಮೂರ್ತಿ ಎನ್. ವಿ ರಮಣ ನೇತೃತ್ವದ ತ್ರಿಸದಸ್ಯ ಪೀಠ ತಿಳಿಸಿದೆ. ಇದ್ರಿಂದ  ಇಂದು ನಮ್ಮ ಪರ ತೀರ್ಪು ಬರಲಿದೆ ಅಂದು ಕೊಂಡಿದ್ದ ಅನರ್ಹ ಶಾಸಕರಿಗೆ ಮತ್ತೆ ನಿರಾಸೆಯಾಗಿದೆ.ಅಷ್ಟೇ ಅಲ್ಲದೇ ಕೋರ್ಟ್ ಏನು ತೀರ್ಪು ನೀಡಲಿದೆ ಎಂದು ಅನರ್ಹ ಶಾಸಕರಲ್ಲಿ ಢವ-ಢವ ಶುರುವಾಗಿದೆ.

ಪಕ್ಷಾಂತರಿಗಳ ಸೋಲು : ಅನರ್ಹರಿಗೆ ತಳಮಳ

ಕಾಂಗ್ರೆಸ್ ನ 14 ಹಾಗೂ ಜೆಡಿಎಸ್‌ನ 3 ಶಾಸಕರನ್ನು ಹಿಂದಿನ ಮೈತ್ರಿ ಸರ್ಕಾರದ ಸ್ಫೀಕರ್ ಆಗಿದ್ದ ರಮೇಶ್ ಕುಮಾರ್ ಅವರು ಅನರ್ಹಗೊಳಿಸಿದ್ದರು. ಇದನ್ನು ಪ್ರಶ್ನಿಸಿ 17 ಅನರ್ಹ ಶಾಸಕ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಇದೀಗ ಅನರ್ಹರ ಅರ್ಜಿ ವಿಚಾರಣೆ ಮುಗಿದಿದ್ದು, ದೀಪಾವಳಿ ಬಳಿ  ಅಂದ್ರೆ ತೀರ್ಪು 10 ದಿನಗಳ ಒಳಗೆ  ಹೊರಬೀಳಲಿದೆ. ಕಾಂಗ್ರೆಸ್ ಪರ ಕಪಿಲ್ ಸಿಬಲ್  ವಾದ ಮಂಡಿಸಿದರು. ಇನ್ನು ಒಬ್ಬೊಬ್ಬ ಅನರ್ಹ ಶಾಸಕರ ಪರ ಒಬ್ಬ ವಕೀಲ ವಾದ ಮಂಡಿಸಿದರು. 

 ಅನರ್ಹ ಶಾಸಕರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಗೆ ಅವಕಾಶ ನೀಡಬಾರದು ಎಂದು ವಾದ ಮಂಡಿಸಿದರು.ರಾಜೀನಾಮೆ ನೈಜತೆಯನ್ನು ಕೋರ್ಟ್ ಸಹ ಪರಿಶೀಲಿಸಬಹುದು, ಶಾಸಕರ ರಾಜೀನಾಮೆ ಪರಿಶೀಲನೆ ಮಾಡುವುದು ಸ್ಪೀಕರ್ ಅವರ ಜವಾಬ್ದಾರಿಯಾಗಿದೆ. ಹೀಗಾಗಿ ಅಂದಿನ ಸ್ಪೀಕರ್ ಅವರು ತೆಗೆದುಕೊಂಡ ನಿರ್ಣಯ ಸರಿಯಾಗಿಯೇ ಇದೆ ಎಂದು ಸಿಬಲ್ ವಾದ ಮಂಡಿಸಿದ್ದಾರೆ. ಇನ್ನು ಅನರ್ಹಗೊಂಡ ಶಾಸಕರ ಪರ ವಕೀಲರೂ ಸಹ ತಮ್ಮ ವಾದವನ್ನು ಮಂಡಿಸಿದ್ದಾರೆ. 

ರಾಜ್ಯದ ಉಪಚುನಾವಣೆ ಅನುಮಾನ: ರಾಜಕೀಯ ವಲಯದಲ್ಲಿ ಗುಸುಗುಸು

ಈಗಾಗಲೇ ಉಪಚುನಾವಣೆ ದಿನಾಂಕ ಘೋಷಣೆಯಗಿದ್ದರಿಂದ ಯಾವುದೇ ಕಾರಣಕ್ಕೂ ವಿಚಾರಣೆಯನ್ನು ಪದೇ-ಪದೇ ಮುಂದೂಡಬಾರದು. ಅನರ್ಹರು ಉಪಚುನಾವಣೆಗೆ ಸ್ಪರ್ಧಿಸಬಹುದು. ಇದಕ್ಕೆ ಯಾವುದೇ ತಕರಾರು ಇಲ್ಲ ಎಂದು ಕೇಂದ್ರ ಚುನಾವಣೆ ಆಯೋಗದ ಪರ ವಕೀಲ ವಾದ ಮಂಡಿಸಿದರು.

ಅಕ್ಟೋಬರ್ 25ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!