ರಾಸಲೀಲೆ ಸಿ.ಡಿ. ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ರಮೇಶ್ ಜಾರಕಿಹೊಳಿಗೆ ಬಿಗ್ ರಿಲೀಫ್

By Suvarna NewsFirst Published Mar 7, 2021, 3:02 PM IST
Highlights

ರಾಷ್ಟ್ರ ಮಟ್ಟದವರೆಗೆ ಸುದ್ದಿಯಾಗಿದ್ದ ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ. ಪ್ರಕರಣಕ್ಕೆ ಮೆಗಾ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ರಮೇಶ್ ಜಾರಕಿಹೊಳಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

ಬೆಂಗಳೂರು, (ಮಾ.07):  ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ರಮೇಶ್ ಜಾರಕಿಹೊಳಿ CD ಕೇಸ್​ಗೆ ಮೆಗಾ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ದೂರುದಾರ ದಿನೇಶ್ ಕಲ್ಲಹಳ್ಳಿ ಅವರು ಯುಟರ್ನ್ ಆಗಿದ್ದಾರೆ.

ಹೌದು.. ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  ನೀಡಿದ್ದ ದೂರನ್ನು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ವಾಪಸ್ ಪಡೆದಿದ್ದಾರೆ.

"

ಮಾರ್ಚ್ 2 ರಂದು ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ದಿನೇಶ್ ಕಲ್ಲಹಳ್ಳಿ, ಇಂದು (ಭಾನುವಾರ) ದೂರನ್ನು ತಮ್ಮ ವಕೀಲರ ಮೂಲಕ ವಾಪಸ್ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಆದ್ರೆ, ಇದನ್ನು ಠಾಣೆಯ ಪೊಲೀಸರು ಖಚಿತಪಡಿಸಬೇಕಿದೆ.

ಸಾಹುಕಾರ್ ರಾಸಲೀಲೆ ಸೀಡಿ : ಸಂತ್ರಸ್ತ ಯುವತಿ ಇದ್ದದ್ದು ಪಿಜಿಯಲ್ಲಲ್ಲ, ಇವರ ಮನೆಯಲ್ಲಿ! 

ಈ ರಾಸಲೀಲೆ ಸಿ.ಡಿ. ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಅಲ್ಲದೇ ರಮೇಶ್ ಜಾರಕಿಹೊಳಿ ಅವರ ಸಚಿವ ಸ್ಥಾನವನ್ನೂ ಸಹ ನುಂಗಿತ್ತು. ಇದೀಗ ದಿನೇಶ್ ಕಲ್ಲಹಳ್ಳಿ ಬಹುದೊಡ್ಡ ಯೂ-ಟರ್ನ್ ಹೊಡೆದಿದ್ದು, ರಮೇಶ್ ಜಾರಕಿಹೊಳಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

ತಮ್ಮ ವಕೀಲರ ಮುಖಾಂತರ ಪೊಲೀಸ್ ಠಾಣೆಗೆ ದೂರು ಹಿಂಪಡೆಯುವ ಪತ್ರವನ್ನು ದಿನೇಶ್ ರವಾನೆ ಮಾಡಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

 ದಿನೇಶ್ ಕಲ್ಲಹಳ್ಳಿ ಏಕೆ ಈ ನಿರ್ಧಾರ ಕೈಗೊಂಡಿದ್ದಾರೆ? ಏನಾದ್ರೂ ಬೆದರಿ ಇದ್ಯಾ..? ಎನ್ನುವ ಹಲವು ಪ್ರಶ್ನೆಗಳು ಉದ್ಭವಿಸಿವೆ. ಇನ್ನೂ ಈ ಪ್ರಕರಣದಲ್ಲಿ ಸಿ.ಡಿ.ಯಲ್ಲಿರುವ ಯುವತಿಗಾಗಿ ಪೊಲೀಸರು ಎಲ್ಲಾ ಕಡೆ ಜಾಲಾಡುತ್ತಿದ್ದಾರೆ. ಆದ್ರೆ, ಈ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.

click me!