ನಿಮ್ಮ ಹೆಂಡ್ತಿಯನ್ನು ತೋರಿಸಿ: ಮಾಜಿ ಸಿಎಂ ಪತ್ನಿಯ ಟ್ಯಾಟೂ ಎದೆ ಮೇಲೆ ಹಾಕಿ ಯುವಕನ ಹೈಡ್ರಾಮಾ

Published : Jun 30, 2026, 05:43 PM IST
Dimple Yadav

ಸಾರಾಂಶ

ಉತ್ತರ ಪ್ರದೇಶದಲ್ಲಿ, ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ್ ಅವರ ಅಭಿಮಾನಿಯೊಬ್ಬರು ತಮ್ಮ ಎದೆಯ ಮೇಲೆ ಅವರ ಫೋಟೋವನ್ನು ಹಚ್ಚೆ ಹಾಕಿಸಿಕೊಂಡು, ಅವರನ್ನು ಭೇಟಿಯಾಗಲು ಅಖಿಲೇಶ್ ಯಾದವ್ ಅವರ ಬೆಂಗಾವಲು ವಾಹನಕ್ಕೆ ಅಡ್ಡಹಾಕಿದ್ದಾರೆ. ಈ ಘಟನೆಯು ರಾಜಕಾರಣಿಗಳ ಮೇಲಿನ ಅಭಿಮಾನವು ಹೇಗೆ ಅತಿರೇಕಕ್ಕೆ ಹೋಗಬಹುದು ಎಂಬುದನ್ನು ತೋರಿಸುತ್ತದೆ.

ಸಿನಿಮಾ ತಾರೆಯರು ಮತ್ತು ರಾಜಕಾರಣಿಗಳಿಗೆ ಅಭಿಮಾನಿಗಳು ಸಿಕ್ಕಾಪಟ್ಟೆ ಇರುತ್ತಾರೆ. ಇವರನ್ನೇ ದೇವರು ಎಂದು ನಂಬಿ ಅತಿರೇಕದಿಂದ ವರ್ತಿಸುವ ಅಭಿಮಾನಿಗಳೂ ಇದ್ದಾರೆ. ಇವರನ್ನು ಒಂದೇ ಒಂದು ಸಲ ನೋಡುವುದಕ್ಕಾಗಿ ಜೀವವನ್ನೂ ಪಣಕ್ಕಿಡುವವರೂ ಇದ್ದಾರೆ. ತಮ್ಮನ್ನೇ ನಂಬಿರುವ ಕುಟುಂಬಸ್ಥರಿಗಿಂತಲೂ ಹೆಚ್ಚಾಗಿ ಯಾವುದೋ ಒಬ್ಬ ಸೆಲೆಬ್ರಿಟಿಯ ಹುಚ್ಚಿನಲ್ಲಿ ಹುಚ್ಚಾಟ ಮಾಡುವವರಿಗೂ ಕಡಿಮೆ ಏನಿಲ್ಲ. ಅಭಿಮಾನ ಅಭಿಮಾನವಾಗಿದ್ದರೆ ಚೆನ್ನ. ಆದರೆ ಅದು ಅತಿರೇಕಕ್ಕೆ ಎಷ್ಟೋ ಬಾರಿ ಹೋಗಿ ಜೀವವನ್ನೂ ಕಳೆದುಕೊಂಡವರಿದ್ದಾರೆ. ಯಾರಿಗಾಗಿ ಅವರು ಜೀವ ಕಳೆದುಕೊಂಡರೋ, ಅವರಿಗೂ ಈ ವಿಷ್ಯವೂ ಗೊತ್ತಿರಲ್ಲ, ಗೊತ್ತಿದ್ದರೂ ಕೆಲವೊಮ್ಮೆ ಒಂದಿಷ್ಟು ಪರಿಹಾರ ಘೋಷಿಸಿ, ಮತ್ತೆ ಕೆಲವೊಮ್ಮೆ ಸಾಂತ್ವನದ ಮಾತುಗಳನ್ನಾಡಿ ಸುಮ್ಮನಾಗುತ್ತಾರೆ. ಆದರ ಆ ಜೀವವನ್ನು ಕಳೆದುಕೊಂಡವರ ಕುಟುಂಬಸ್ಥರ ಗೋಳು ಕೇಳಲು ಸಾಧ್ಯವಿಲ್ಲ. ಆದರೂ ಈ ಅವಿವೇಕತನದ ಅತಿರೇಕ ಮಾತ್ರ ಅಭಿಮಾನದ ಹೆಸರಿನಲ್ಲಿ ಬಿಡುವುದಿಲ್ಲ.

ಇದೀಗ ಅಂಥದ್ದೇ ಒಂದು ಹುಚ್ಚಾಟ, ಉತ್ತರ ಪ್ರದೇಶದಲ್ಲಿ ನಡೆದಿದೆ. ಮುಂದಿನ ವರ್ಷ ಅರ್ಥಾತ್​ 20207ರ ಮಾರ್ಚ್​ ವೇಳೆಗೆ ವಿಧಾನಸಭಾ ಚುನಾವಣೆ ಇದೆ. ಅದರ ಹೊಸ್ತಿಲಿನಲ್ಲಿಯೇ ರಾಜಕಾರಣಿಗಳ ಅಭಿಮಾನಿಗಳು ಅತಿರೇಕದ ವರ್ತನೆ ಇದಾಗಲೇ ಆರಂಭವಾಗಿದೆ. ಏತನ್ಮಧ್ಯೆ, ಮೈನ್‌ಪುರಿಯ ಸಮಾಜವಾದಿ ಪಕ್ಷದ ಸಂಸದೆ ಮತ್ತು ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ಅವರ ಕಟ್ಟಾ ಅಭಿಮಾನಿಯೊಬ್ಬರ ಹುಚ್ಚಾಟ ಎಲ್ಲರನ್ನೂ ಸುಸ್ತು ಮಾಡಿರುವ ಘಟನೆ ನಡೆದಿದೆ.

ನಾನು ನಿಮ್ಮ ಪತ್ನಿ ಅಭಿಮಾನಿ

ತಾನು ಡಿಂಪಲ್​ ಯಾದವ್​ ಅವರ ಅಭಿಮಾನಿ ಎಂದು ಹೇಳಿಕೊಂಡಿರುವ ಯುವಕನೊಬ್ಬ, ಡಿಂಪಲ್​ ಅವರ ಫೋಟೋವನ್ನು ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾನೆ. ಅವರನ್ನು ನೋಡಲು ಶತಪ್ರಯತ್ನ ಪಟ್ಟು ಸೋತಿದ್ದಾನೆ. ಬಳಿಕ ಅಖಿಲೇಶ್​ ಅವರ ಹೋಗುತ್ತಿದ್ದ ಬೆಂಗಾವಲು ವಾಹನಕ್ಕೇ ಅಡ್ಡ ಹಾಕಿದ್ದಾನೆ. ಅಖಿಲೇಶ್ ಯಾದವ್ ಇತ್ತೀಚೆಗೆ ಅಜಮ್‌ಗಢಕ್ಕೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಯುವಕನೊಬ್ಬ ಅಖಿಲೇಶ್ ಯಾದವ್ ಅವರ ಬೆಂಗಾವಲು ಪಡೆಯನ್ನು ತಡೆದು, "ಸಹೋದರ, ನೀವು ನನಗೆ ಡಿಂಪಲ್ ಬಾಬಿಯನ್ನು ಪರಿಚಯಿಸುವುದಾಗಿ ಭರವಸೆ ನೀಡಿದ್ದೀರಿ" ಎಂದು ಹೇಳಿದ್ದಾನೆ. ಅವನ ಮನವೊಲಿಸುವಷ್ಟರಲ್ಲಿ ಎಲ್ಲರಿಗೂ ಸುಸ್ತಾಗಿ ಹೋಗಿದೆ.

ವಿಡಿಯೋ ವೈರಲ್​

ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅಖಿಲೇಶ್ ಯಾದವ್ ಅವರ ಅಜಮ್‌ಗಢ ಭೇಟಿಯ ವೈರಲ್ ವೀಡಿಯೊವು ಅವರನ್ನು ಅಭಿಮಾನಿಗಳು ಸುತ್ತುವರೆದಿರುವುದನ್ನು ತೋರಿಸುತ್ತದೆ. ಅವರು ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ಅವರ ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ, ಶರ್ಟ್ ಬಟನ್‌ಗಳಲ್ಲಿ ಒಂದನ್ನು ತೆರೆದಿದ್ದಾರೆ. ಅವರು ಅಖಿಲೇಶ್ ಯಾದವ್ ಅವರನ್ನು ಡಿಂಪಲ್ ಯಾದವ್ ಅವರಿಗೆ ಪರಿಚಯಿಸುವಂತೆ ಪದೇ ಪದೇ ಕೇಳುತ್ತಿದ್ದಾರೆ.

ಆದಾಗ್ಯೂ, ಅಖಿಲೇಶ್ ಯಾದವ್ ಅವರ ಪತ್ನಿ ಮತ್ತು ಮೈನ್‌ಪುರಿಯ ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ್ ಅವರಿಗೆ ಉತ್ತರ ಪ್ರದೇಶ ರಾಜಕೀಯದಲ್ಲಿ ಲಕ್ಷಾಂತರ ಬೆಂಬಲಿಗರಿದ್ದಾರೆ. ಇಂತಹ ಚಿತ್ರಗಳು ಈ ಹಿಂದೆ ಹಲವಾರು ಸಂದರ್ಭಗಳಲ್ಲಿ ಕಾಣಿಸಿಕೊಂಡಿವೆ. ಉತ್ತರ ಪ್ರದೇಶದ ಔರೈಯಾದಲ್ಲಿ, ಅಖಿಲೇಶ್ ಯಾದವ್ ಮತ್ತು ಡಿಂಪಲ್ ಯಾದವ್ ಅವರನ್ನು ದೇವರಂತೆ ಪೂಜಿಸುವ ಪತಿ-ಪತ್ನಿ ದಂಪತಿಗಳಿದ್ದಾರೆ. ವಾಸ್ತವವಾಗಿ, ಔರೈಯಾದಲ್ಲಿರುವ ಸಮಾಜವಾದಿ ಪಕ್ಷದ ಕಾರ್ಯಕರ್ತೆ ರಾಂಪಾಲ್ ಯಾದವ್ ಮತ್ತು ಅವರ ಪತ್ನಿ ಪ್ರೀತಿ ಯಾದವ್ ಅವರ ತೋಳುಗಳ ಮೇಲೆ ಡಿಂಪಲ್ ಯಾದವ್ ಅವರ ಹಚ್ಚೆಗಳಿವೆ. ಆದರೆ ರಾಂಪಾಲ್ ತಮ್ಮ ಎದೆಯ ಮೇಲೆ ಅಖಿಲೇಶ್ ಯಾದವ್ ಅವರ ಹಚ್ಚೆ ಹಾಕಿಸಿಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

LPG: ಹಾರ್ಮುಜ್ ಸಂಕಟಕ್ಕೆ ಫುಲ್‌ಸ್ಟಾಫ್‌ ಇಡಲು ಮುಂದಾದ ಭಾರತದ! ಮೋದಿ ಸರ್ಕಾರದಿಂದ ಮಹಾಪ್ಲಾನ್‌! ಅಷ್ಟಕ್ಕೂ ಆಗಿದ್ದೇನು ಗೊತ್ತಾ?
ಸಿದ್ದರಾಮಯ್ಯ ಎದುರು 'ನಂಗೆ ಚಪ್ಪಲಿ ಎಸೆದರು, ನಮ್ಮ ಕುಟುಂಬ ನಿಂದಿಸಿದರು' ಎಂದು ಕಣ್ಣೀರಿಟ್ಟ ಶಾಸಕ ಪ್ರದೀಪ್ ಈಶ್ವರ್!