ಮೈಸೂರು ಮೇಯರ್ ಸ್ಥಾನ 'ಕೈ' ತಪ್ಪಿದ್ದು ಯಾರಿಂದ? ಬಹಿರಂಗಪಡಿಸಿದ ಬಿಜೆಪಿ ನಾಯಕ

By Suvarna NewsFirst Published Feb 28, 2021, 6:16 PM IST
Highlights

ಮೈಸೂರು ಮೇಯರ್ ಚುನಾವಣೆ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡಿದೆ. ಅದರಲ್ಲೂ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. 

ಚಾಮರಾಜನಗರ, (ಫೆ.28): ಮೈಸೂರು ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಮೇಯರ್ ಕೈ ತಪ್ಪಲು ಧ್ರುವನಾರಾಯಣ ಫೇಲ್ಯೂರ್ ಕಾರಣ ಎಂದು ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಮಹಾದೇವಯ್ಯ ಅಭಿಪ್ರಾಯಪಟ್ಟರು.

ನಗರದಲ್ಲಿ ಇಮದು (ಭಾನುವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಾಧ್ಯಕ್ಷರನ್ನಾಗಿ ಮಾಡಿ, ಚುನಾವಣೆ ವೀಕ್ಷಕನಾಗಿ ನೇಮಿಸಿ ಮೇಯರ್ ಮಾಡಿಕೊಂಡು ಬನ್ನಿ ಎಂದರೆ ಧ್ರುವನಾರಾಯಣ ವೈಫಲ್ಯದಿಂದ ಮೇಯರ್ ಗಿರಿ ಕೈ ತಪ್ಪಿತು. ಈಗ, ಸ್ಥಳೀಯರಿಂದ ಮೇಯರ್ ಗಿರಿ ತಪ್ಪಿತು, ಬಿಜೆಪಿಯವರು ಹತಾಶರಾಗಿದ್ದಾರೆ ಎಂದು ಧ್ರುವ ನಾರಾಯಣ ಹೇಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಸಿದ್ದರಾಮಯ್ಯ ಯಾವತ್ತೂ ಹುಲಿನೇ, ಇಲಿಗಳು ಮಾತಾಡಬಾರದು

 ಕಾಂಗ್ರೆಸ್ ಅವರಿಗೆ ಸಿದ್ದರಾಮಯ್ಯ ಹುಲಿಯಾದರೇ ಪ್ರತಾಪ್ ಸಿಂಹ ಅವರು ಕೂಡ ನಮ್ಮ ನಾಯಕರು ಅವರು ಕೂಡ ಹುಲಿ, ಪ್ರತಾಪ್ ಅವರಂತೆ ಕೆಲಸ ಮಾಡಿದರೇ ಎಲ್ಲಾ ಜಿಲ್ಲೆಗಳು ಮಾದರಿ ಆಗಲಿದೆ. ಆದರೆ, ಧ್ರುವನಾರಾಯಣ ಅವರ ಗುರುತರ ಸಾಧನೆ ಏನು ಎಂದು ಪ್ರಶ್ನಿಸಿದರು.

ತಮಿಳುನಾಡು, ಪಶ್ಚಿಮ ಬಂಗಾಲಕ್ಕೆ ಕೊಟ್ಟಂತೆಯೇ ನಮಗೂ ಅನುದಾನ ಕೊಡುತ್ತಾರೆ. ಕೇಂದ್ರ ಸರ್ಕಾರವೇನೂ ಮಲತಾಯಿ ಧೋರಣೆ ಅನುಸರಿಸುತ್ತಿಲ್ಲ. ಬೆಲೆ ಏರಿಕೆಯೂ ಶೀಘ್ರ ತಹಬದಿಗೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

click me!