ಮುಂದಿನ ಚುನಾವಣೆಯಲ್ಲಿ ಕುಮಾರಸ್ವಾಮಿಯನ್ನು ಯೋಗೇಶ್ವರ್ ಸೋಲಿಸ್ತಾರೆ: ಹೀಗೊಂದು ಭವಿಷ್ಯ

By Suvarna News  |  First Published Feb 28, 2021, 3:38 PM IST

ರಾಮನಗರ ಜಿಲ್ಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮಧ್ಯೆ ರಾಜಕೀಯ ಕಿತ್ತಾಟ ಶುರುವಾಗಿದ್ದು, ಕುಮಾರಸ್ವಾಮಿ ಮತ್ತು ಸಿ.ಪಿ.ಯೋಗೇಶ್ವರ್ ನಡುವಿನ ರಾಜಕೀಯ ಫೈಟ್ ಮಧ್ಯೆ ಡಿಸಿಎಂ ಭವಿಷ್ಯ ನುಡಿದಿದ್ದಾರೆ.


ಬೆಂಗಳೂರು, (ಫೆ.28): ರಾಮನಗರದಲ್ಲಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ವರ್ಸಸ್ ಸಚಿವ ಸಿ. ಪಿ. ಯೋಗೇಶ್ವರ್ ನಡುವೆ ಪ್ರತಿಷ್ಠೆಯ ಸಂಘರ್ಷ ಶುರುವಾಗಿದೆ. ಇನ್ನೂ ವಿಧಾನಸಭಾ ಚುನಾವಣೆ ದೂರ ಇದೆ. ಆಗಲೇ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ರಾಜಕೀಯ ಆರೋಪ-ಪ್ರತ್ಯಾರೋಪಗಳ ಜೋರಾಗಿವೆ.

ಹೌದು...ಈಗಾಗಲೇ ಸಚಿವ ಸಿ.ಪಿ. ಯೋಗೇಶ್ವರ್ ಅವರು ಮುಂದಿನ ಚುನಾವಣೆಯಲ್ಲಿ ಚನ್ನಪಟ್ಟಣದ ಬಿಜೆಪಿ ಅಭ್ಯರ್ಥಿ ನಾನೇ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಹಾಗೂ ಯೋಗೇಶ್ವರ್ ನಡುವೆ ಹಣಾಹಣಿ ನಡೆಯುವುದು ಪಕ್ಕಾ ಆದಂತಾಗಿದೆ.

Tap to resize

Latest Videos

ಇದರ ಮಧ್ಯೆ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಅವರು ಭವಿಷ್ಯ ಹೇಳಿದ್ದಾರೆ. ಮುಂದಿನ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ಸಿ.ಪಿ ಯೋಗೇಶ್ವರ್​, ಕುಮಾರಸ್ವಾಮಿಯವರನ್ನ ಸೋಲಿಸುತ್ತಾರೆ ಎಂದು ಭವಿಷ್ಯ ನುಡಿದ್ದಿದ್ದಾರೆ.

'ಸಿ.ಪಿ. ಯೋಗೇಶ್ವರ್‌ ರಾಜ್ಯ ರಾಜಕಾರಣದಲ್ಲಿ ಗೆಲ್ಲುವ ಕುದುರೆ'

ರಾಮನಗರದಲ್ಲಿ ಹೆಚ್‌ಡಿ ಕುಮಾರಸ್ವಾಮಿ ವರ್ಸಸ್​ ಸಿ.ಪಿ.ಯೋಗೇಶ್ವರ್​ ಸಂಘರ್ಷದ ವಿಚಾರವಾಗಿ ಮಾತನಾಡಿದ ಅಶ್ವಥ್​ ನಾರಾಯಣ್,​ ಮುಂದಿನ ಚುನಾವಣೆಯಲ್ಲಿ ಯೋಗೇಶ್ವರ್​ ಜೆಡಿಎಸ್​ನ ಎದುರಾಳಿ. ಅವರು ಕುಮಾರಸ್ವಾಮಿಯನ್ನ ಸೋಲಿಸುತ್ತಾರೆ. ಕುಮಾರಸ್ವಾಮಿ ವಿರುದ್ಧ ಅವರು ನೀಡಿರುವ ಹೇಳಿಕೆಗಳು ಸ್ಪಷ್ಟವಾಗಿದೆ ಎಂದರು.

ಕೇರಳ ಚುನಾವಣೆಯ ಭವಿಷ್ಯ ನುಡಿದ ಡಿಸಿಎಂ
ಇದೇ ವೇಳೆ ಕೇರಳದಲ್ಲಿ ವಿಧಾನಸಭಾ ಚುನಾವಣೆಯ ಬಗ್ಗೆ ಮಾತನಾಡಿ ಡಿಸಿಎಂ, ಕೇರಳದಲ್ಲಿ ಎಲ್‌ಡಿಎಫ್​ ಮತ್ತು ಯುಡಿಎಫ್​ ಪಕ್ಷಗಳು ವೋಟ್​ ಬ್ಯಾಂಕ್​ ರಾಜಕಾರಣ ಮಾಡುತ್ತಿವೆ. ನಮ್ಮ ಸಂಸ್ಕೃತಿಗೆ ವಿರುದ್ಧವಾಗಿ ರಾಜಕಾರಣ ಮಾಡುತ್ತಿವೆ. ಕಮ್ಯುನಿಸ್ಟರು ದೇಶದೆಲ್ಲೆಡೆ ಅಧಿಕಾರ ಕಳೆದುಕೊಳ್ತಿದ್ದಾರೆ. ಕೇರಳದಲ್ಲೂ ಕಮ್ಯುನಿಸ್ಟರು ನೆಲೆ ಕಳೆದುಕೊಳ್ಳೋದು ನಿಶ್ಚಿತ ಎಂದು ಹೇಳಿದರು.

 ಎಲ್‌ಡಿಎಫ್​, ಯುಡಿಎಫ್​ ಪಕ್ಷಗಳಿಗೆ ಭವಿಷ್ಯ ಇಲ್ಲ, ಕೇರಳದಲ್ಲಿ ನಮ್ಮ ಪಕ್ಷದ ಪರ ಅಲೆ ಇದೆ. ನಮ್ಮ ಪಕ್ಷ ಕೇರಳದಲ್ಲಿ ಬೇರೂರುತ್ತದೆ. ಈ ಚುನಾವಣೆಯಲ್ಲಿ ನಮ್ಮ ಪಕ್ಷ ಉತ್ತಮ ಸಾಧನೆ ಮಾಡಲಿದೆ ಅಂತಾ ವಿಶ್ವಾಸ ವ್ಯಕ್ತಪಡಿಸಿದರು.

click me!