ಜಿಪಂ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣದ ಆರೋಪಿ, ಮಾಜಿ ಸಚಿವ ವಿನಯ್ ಕುಲಕರ್ಣಿ, ತಾವು ಸ್ಪರ್ಧಿಸಿದ್ದ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ ಕಾಲಿಡದೆಯೇ ಗೆಲುವು ಸಾಧಿಸುವ ಮೂಲಕ ಕ್ಷೇತ್ರದಲ್ಲಿನ ತಮ್ಮ ಪ್ರಭಾವ ಸಾಬೀತುಪಡಿಸಿದ್ದಾರೆ.
ಧಾರವಾಡ: ಜಿಪಂ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣದ ಆರೋಪಿ, ಮಾಜಿ ಸಚಿವ ವಿನಯ್ ಕುಲಕರ್ಣಿ, ತಾವು ಸ್ಪರ್ಧಿಸಿದ್ದ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ ಕಾಲಿಡದೆಯೇ ಗೆಲುವು ಸಾಧಿಸುವ ಮೂಲಕ ಕ್ಷೇತ್ರದಲ್ಲಿನ ತಮ್ಮ ಪ್ರಭಾವ ಸಾಬೀತುಪಡಿಸಿದ್ದಾರೆ. ಜತೆಗೆ ಈ ಗೆಲುವಿನೊಂದಿಗೆ, ಕ್ಷೇತ್ರದ ಹೊರಗಿದ್ದುಕೊಂಡು ವಿಧಾನಸಭಾ ಚುನಾವಣೆ ಎದುರಿಸಿ ಗೆಲುವು ಸಾಧಿಸಿದ ಮತ್ತು ಕ್ಷೇತ್ರದ ಇತಿಹಾಸದಲ್ಲಿ 3 ಬಾರಿ ಗೆಲುವಿನ ದಾಖಲೆ ಬರೆದಿದ್ದಾರೆ.
ಕ್ಷೇತ್ರ ಪ್ರವೇಶಿಸಲಾಗದ ವಿನಯ್ ವಚ್ರ್ಯುವಲಿಯಾಗಿ ಕ್ಷೇತ್ರದ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಮತ್ತೊಂದೆಡೆ ವಿನಯರ್‌ರ ಪತ್ನಿ ಶಿವಲೀಲಾ ಕುಲಕರ್ಣಿ, ಬೆಂಬಲಿಗರು ಹಾಗೂ ಕಾರ್ಯಕರ್ತರು ತಮಗಾದ ಅನ್ಯಾಯವನ್ನು ಎಳೆಎಳೆಯಾಗಿ ಜನರ ಮುಂದೆ ಬಿಚ್ಚಿಟ್ಟ ಪರಿಣಾಮ ಅನುಕಂಪ ಸೃಷ್ಟಿಯಾಗಿತ್ತು. ಇದು ಅಂತಿಮವಾಗಿ ಬಿಜೆಪಿ ಅಭ್ಯರ್ಥಿ, ಹಾಲಿ ಶಾಸಕ ಅಮೃತ ದೇಸಾಯಿ ವಿರುದ್ಧ ವಿನಯ್‌ಗೆ 18114 ಮತಗಳ ಅಂತರ ಜಯ ತಂದುಕೊಟ್ಟಿದೆ.
ವಿನಯ್ ಕುಲಕರ್ಣಿ ಅನುಪಸ್ಥಿತಿಯಲ್ಲಿ ಶಕ್ತಿ ಪ್ರದರ್ಶನ: ಶಿವಲೀಲಾ ಕುಲಕರ್ಣಿ ನಾಮಪತ್ರ ಸಲ್ಲಿಕೆ
ವಿಜಯಪುರ ಇಂಡಿ ಕ್ಷೇತ್ರದಿಂದ ಪಕ್ಷೇತರರಾಗಿ (Independent candidate) ಸ್ಪರ್ಧಿಸಿದ್ದ ರವಿಕಾಂತ ಪಾಟೀಲ ಜೈಲಿನಲ್ಲಿದ್ದುಕೊಂಡು ಚುನಾವಣೆ ಎದುರಿಸಿ ಜಯ ದಾಖಲಿಸಿದ್ದರು. ಇದಾದ ನಂತರ ವಿನಯ ಕುಲಕರ್ಣಿ ಕ್ಷೇತ್ರದ ಹೊರಗಿದ್ದುಕೊಂಡು ಜಯ ಸಾಧಿಸಿದ್ದು ರಾಜ್ಯದಲ್ಲಿಯೇ 2ನೇ ಇತಿಹಾಸ.
3 ಬಾರಿ ಶಾಸಕರು: ಧಾರವಾಡ ಗ್ರಾಮೀಣದಲ್ಲಿ 1972 ಹಾಗೂ 1978ರ ಚುನಾವಣೆಯಲ್ಲಿ ಸುಮತಿ ಮಡಿಮನ್ (sumati madiman) ಹಾಗೂ 1981 ಹಾಗೂ 1983ರ ಚುನಾವಣೆಯಲ್ಲಿ ಸಿ.ವಿ. ಪುಡಕಲಕಟ್ಟಿ (CV pudalakatti) ಎರಡು ಬಾರಿ ಆಯ್ಕೆಯಾಗಿದ್ದರು. ಇದಾದ ನಂತರ ಯಾರೊಬ್ಬರು ಮೂರು ಬಾರಿ ಆಯ್ಕೆಯಾಗಿರಲಿಲ್ಲ. ಇದೀಗ ವಿನಯ ಕುಲಕರ್ಣಿ 2004, 2013 ಹಾಗೂ 2023ರಲ್ಲಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಮತ್ತೊಂದು ಇತಿಹಾಸ ಬರೆದಿದ್ದಾರೆ.
ಎಲೆಕ್ಷನ್‌ಗೆ ನಿಲ್ಬಹುದು, ಕ್ಷೇತ್ರಕ್ಕೆ ಹೋಗೋ ಹಾಗಿಲ್ಲ: ವಿನಯ್ ಕುಲಕರ್ಣಿಗೆ ಕೋರ್ಟ್ ಶಾಕ್!