ಧಾರವಾಡ:  ಬೆಲ್ಲದ ರುಚಿ ಕೆಡಿಸಲು ಒಂದಾದ 11 ಜನ ಕಾಂಗ್ರೆಸಿಗರು!

By Ravi JanekalFirst Published Feb 11, 2023, 1:06 PM IST
Highlights
  • ಬೆಲ್ಲದ ರುಚಿ ಕೆಡಿಸಲು ಒಂದಾದ 11 ಜನ ಕಾಂಗ್ರೆಸಿಗರು!
  •  ಹುಬ್ಬಳ್ಳಿ_ಧಾರವಾಡ 74 ರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ಒಗ್ಗಟ್ಟಿನ ಮಂತ್ರ.

ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ

.! ಧಾರವಾಡ (ಫೆ.11) : ಧಾರವಾಡದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪತ್ರಿಕಾಗೋಷ್ಠಿ ನಡೆಸಿ ತಮ್ಮ ನಡೆಯನ್ನ ಹೇಳಿದರು, ಶಹರ ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ ಅಲ್ತಾಪ್ ಹಳ್ಳೂರು ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಿ ನಾವು 74 ರ ಕ್ಷೆತ್ರಕ್ಕೆ 11 ಜನ ಟಿಕೆಟ್ ಆಕಾಂಕ್ಷಿಗಳು ಇದ್ದೆವೆ, ನಾವು ಯಾವುದೆ ಕಾರಣಕ್ಕೂ ಯಾರಿಗೂ ಟಿಕೆಟ್ ಬಿಟ್ ಕೊಡುವುದಿಲ್ಲ ಹೊರಗಿನಿಂದ ಯಾರೇ ಬಂದರೂ ನಾವು ಒಪ್ಪಲ್ಲ ಎಂದು ಜಿಲ್ಲಾ ಅದ್ಯಕ್ಷ ಅಲ್ತಾಪ್ ಹಳ್ಳೂರು ಖಡಕ್ ಎಚ್ಚರಿಕೆ ನೀಡಿದರು..

ಪತ್ರಿಕಾಗೋಷ್ಠಿಯಲ್ಲಿ ದೀಪಕ್ ಚಿಂಚೋರೆ(Deepak chinchore), ನಾಗರಾಜ ಗೌರಿ, ಮಯೂರ ಮೋರೆ, ಅಲ್ತಾಪ್ ಹಳ್ಳೂರು, ಪಿ ಎಚ್ ನೀರಲಕೇರಿ,ಶರಣಪ್ಪ ಕೋಟಗಿ, ಬಾಗಿಯಾಗಿ ನಾವು ೧೧ ಜನರಲ್ಲಿ ಯಾರಿಗೆ ಟಿಕೆಟ್ ಸಿಕ್ಕರೂ ಒಗ್ಗಟ್ಟಾಗಿ ಚುಣಾವಣೆ ಮಾಡುತ್ತೆವೆ ಶಾಸಕ ಅರವಿಂದ ಬೆಲ್ಲದ(MLA Arvind bellad) ಅವರನ್ನ ಸೋಲಿಸಲು  ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಒಂದಾಗಿದ್ದೇವೆ. ಕಾಂಗ್ರೆಸ್ ನಲ್ಲಿ ಮನೆಯೊಂದು ಮೂರು ಬಾಗಿಲು ಇಲ್ಲ ನಾವು ಒಗ್ಗಟ್ಟಾಗಿದ್ದೇವೆ ಎಂದರು.

ನಮ್ಮದು ಮೋದಿ ಸಂಸ್ಕೃತಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮೋಹನ್ ನಿಂಬಿಕಾಯಿ ಕಾಂಗ್ರೆಸ್‌ ಪಕ್ಷದ ಬಾಗಿಲು ತಟ್ಟಿದ ವಿಚಾರವಾಗಿ ನಾವು ವಿರೋಧ ಮಾಡುತ್ತೇವೆ. ನಿಂಬಿಕಾಯಿ ಕಾಂಗ್ರೆಸ್ ಟಿಕೆಟ್ ಕೇಳಿರುವ ವಿಚಾರ ನಮಗೆ ಗೊತ್ತಿಲ್ಲ ನಮ್ಮಲ್ಲಿ ಯಾರಿಗೂ ಕೊಟ್ಟರೆ ನಾವು ಒಗ್ಗಾಟ್ಟಾಗಿ ದುಡಿಯುತ್ತೆವೆ ಮೋಹನ್ ನಿಂಬಿಕಾಯಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟರೆ ಮಾತ್ರ ನಾವು ಒಪ್ಪಲ್ಲ ನಾವು ವಿರೋಧ ಮಾಡುತ್ತೆವೆ.  11 ಜನರಲ್ಲಿ ಹೈ ಕಮಾಂಡ್ ಯಾರಿಗೆ ಟಿಕೆಟ್ ಕೊಟ್ಟರೂ ನಾವು ಕಾಂಗ್ರೆಸ್ ಗೆ ಪರ ಚುಣಾವಣೆ ಮಾಡುತ್ತೆವೆ ಎಂದರು.

 ಮೋಹನ್ ನಿಂಬಿಕಾಯಿ ನನ್ನನ್ನು ಭೇಟಿ ಮಾಡಿಲ್ಲ. ಅವರು ಕಾಂಗ್ರೆಸ್ ಸೇರ್ಪಡೆ ವಿಚಾರ ನನಗೆ ಗೊತ್ತಿಲ್ಲ ಎಂದು ಅಲ್ತಾಪ್ ಹಳ್ಳೂರು ಹೇಳಿದ್ದಾರೆ. ನಾಗರಾಜ್ ಗೌರಿ, ದೀಪಕ್ ಚಿಂಚೋರೆ ಅವರು ಬಂದ್ರೆ ಎಲ್ಲರ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡ್ತೇವೆ. ನನಗೆ ಕೆಪಿಸಿಸಿಯಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ಧಾರವಾಡದಲ್ಲಿ ಅಲ್ತಾಪ್ ಹಳ್ಳೂರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಇನ್ನು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಮಾದ್ಯಮ ಸಂಚಾಲಕರಾದ ಪಿ ಎಚ್ ನೀರಲಕೇರಿ ಅವರು ನರೇಂದ್ರ ಮೋದಿಯವರೇ ಬಂದು 74 ರ ಕ್ಷೇತ್ರಕ್ಕೆ ನಿಂತರೂ ನಾವು ಸಪೋರ್ಟ ಮಾಡಲ್ಲ. ನಮ್ಮಲ್ಲಿ 11 ಜ‌ನ ಆಕಾಂಕ್ಷಿಗಳು ಒಗ್ಗಟ್ಟಾಗಿ ಇದ್ದೇವೆ. ನಮ್ಮಲ್ಲಿ ಯಾರಿಗೂ ಕೊಟ್ಟರು ನಾವು ಸಪೋರ್ಟ ಮಾಡುತ್ತೇವೆ ಎಂದು ಹೇಳಿದರು

ಧಾರವಾಡ: ಮೊಬೈಲ್‌ ಟವರ್‌ ಏರಿ ಕುಳಿತ ಜಲ ಮಂಡಳಿ ಗುತ್ತಿಗೆ ಕಾರ್ಮಿಕ

ಇನ್ನು ದೀಪಕ್ ಚಿಂಚೋರೆ ಮಾತನಾಡಿ, ನಾವು ಒಗ್ಗಟ್ಟಾಗಿದ್ದೇವೆ, 20 ವರ್ಷದಿಂದ ಪಕ್ಷಕ್ಕಾಗಿ ದುಡಿದವರು ನಾವು.ಯಾಕೆ ಕ್ಷೇತ್ರವನ್ನು ಹೊರಗಿನವರಿಗೆ ಬಿಟ್ಟು ಕೊಡಬೇಕು? ಎಂದು ಪ್ರಶ್ನಿಸಿದ ಅವರು,  ಯಾವುದೇ ಕಾರಣಕ್ಕೂ ಮೋಹನ್ ನಿಂಬಿಕಾಯಿಗೆ ಬಿಟ್ಟು ಕೊಡಲ್ಲ ಎಂದರು.

click me!