ಬಂಗಾರಪ್ಪ ಅವರ ಮೇಲೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಅಪಾರ ಆತ್ಮೀಯತೆ ಹಾಗೂ ಗೌರವವಿದೆ. ಇದರಿಂದಾಗಿ ಸೊರಬದಲ್ಲಿ ನನ್ನ ಪರ ಬಹಿರಂಗ ಪ್ರಚಾರ ಮಾಡಲು ಬರುತ್ತಿರುವುದು, ನನ್ನ ಸೌಭಾಗ್ಯ ಎಂದು ಸೊರಬ ವಿಧಾನಸಭೆ ಅಭ್ಯರ್ಥಿ ಎಸ್. ಮಧು ಬಂಗಾರಪ್ಪ ಹೇಳಿದರು.
ಆನವಟ್ಟಿ (ಏ.30): ಬಂಗಾರಪ್ಪ ಅವರ ಮೇಲೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಅಪಾರ ಆತ್ಮೀಯತೆ ಹಾಗೂ ಗೌರವವಿದೆ. ಇದರಿಂದಾಗಿ ಸೊರಬದಲ್ಲಿ ನನ್ನ ಪರ ಬಹಿರಂಗ ಪ್ರಚಾರ ಮಾಡಲು ಬರುತ್ತಿರುವುದು, ನನ್ನ ಸೌಭಾಗ್ಯ ಎಂದು ಸೊರಬ ವಿಧಾನಸಭೆ ಅಭ್ಯರ್ಥಿ ಎಸ್. ಮಧು ಬಂಗಾರಪ್ಪ (Madhu bangarappa)ಹೇಳಿದರು.
ಆನವಟ್ಟಿಯ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಕಾರ್ಯಕರ್ತರ ಸಭೆ ಹಾಗೂ ವಿವಿಧ ಪಕ್ಷದ ಮುಖಂಡರ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಏ.30 ರಂದು ಆನವಟ್ಟಿಯಲ್ಲಿ ಬೃಹತ್ ಸಮಾವೇಶ(Congress convention) ಹಾಗೂ ಕಾಂಗ್ರೆಸ್ ಪಕ್ಷದ ಬಹಿರಂಗ ಪ್ರಚಾರ ಸಭೆ ನಡೆಯುತ್ತದೆ. ಖರ್ಗೆ ಅವರೊಂದಿಗೆ ನಟ ಹ್ಯಾಟ್ರಿಕ್ ಹಿರೋ ಶಿವಕುಮಾರ್(Dr Shivarajkumar) ಹಾಗೂ ಗೀತಾ ಶಿವರಾಜ್‌ಕುಮಾರ್(Geeta shivarajkumar) ಆಗಮಿಸುತ್ತಿದ್ದಾರೆ ಎಂದು ತಿಳಿಸಿದರು.
ಸೊರಬ: ಕಾಂಗ್ರೆಸ್‌ನ ಮಧು ಬಂಗಾರಪ್ಪ ಪರ ಇಂದು ಶಿವರಾಜಕುಮಾರ್ ಪ್ರಚಾರ
ಬಂಗಾರಪ್ಪ ಅವರ ಎರಡು ಕಣ್ಣುಗಳಂತೆ ಧರ್ಮಸಿಂಗ್ ಹಾಗೂ ಮಲ್ಲಿಕಾರ್ಜುನ್ ಖರ್ಗೆ(Mallikarjun kharge) ಅವರು ಇದ್ದರು. ಗ್ರಾಮೀಣ ಕೃಪಾಂಕ, ಅಕ್ಷಯ, ಆರಾಧನಾ, ಉಚಿತ ವಿದ್ಯುತ್ ಸೇರಿದಂತೆ ಹಲವು ಯೋಜನೆಗಳನ್ನು ತಂದೆ ಜಾರಿಗೆ ತಂದಾಗ, ಯೋಜನೆಯ ಯಶಸ್ಸಿನಲ್ಲಿ ಅವರು ಸಹ ಪಾಲುಗಾರರಾಗಿದ್ದರು.
ಭಾವ ಪ್ರಚಾರ:
ಅಕ್ಕ ಗೀತಾ ಶಿವರಾಜ್‌ಕುಮಾರ್ ಕಾಂಗ್ರೆಸ್ ಸೇರ್ಪಡೆಯಿಂದ ಇನ್ನಷ್ಟುಪಕ್ಷಕ್ಕೆ ಬಲಬಂದಿದೆ. ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಮೊದಲ ಬಾರಿಗೆ ನನ್ನ ಪರ ಪ್ರಚಾರ ಮಾಡಲು ಬರುತ್ತಿರುವುದು ಹೆಚ್ಚು ಸಂತಸ ನೀಡಿದೆ. ಏ.30ರಂದು ಆನವಟ್ಟಿಯ ವಿಠ್ಠಲ ದೇವಸ್ಥಾನದಿಂದ ತಿಮ್ಮಾಪುರ ಕ್ರಾಸ್‌ವರೆಗೂ ಮೆರೆವಣಿಗೆ ನಡೆಯುವುದರಿಂದ 25 ಸಾವಿರಕ್ಕೂ ಹೆಚ್ಚು ಜನ ಆಗಮಿಸುವ ನಿರೀಕ್ಷೆ ಇದೆ ಎಂದರು.
ಕೈ ಸೇರಿದ ನಮೋ ವೇದಿಕೆ ಮುಖಂಡರು:
ನಮೋ ವೇದಿಕೆಯ ಮುಖಂಡ ಮಂಜಪ್ಪ ಮರದರ್ ಸೇರಿದಂತೆ ಆನವಟ್ಟಿಭಾಗದ ಬಹುತೇಕ ನಮೋ ವೇದಿಕೆ ಮುಖಂಡರು ಮಧು ಬಂಗಾರಪ್ಪ ಅವರ ನಾಯಕತ್ವ ಮೆಚ್ಚಿ ಕಾಂಗ್ರೆಸ್ ಸೇರ್ಪಗೊಂಡರು.
ನಾಮದೇವ ಸಿಂಪಿ ಸಮಾಜದ ಮುಖಂಡ ಗಜಾನನ ಬಟ್ಟೆಅಂಗಡಿ ಮಾಲೀಕ ರಮೇಶ್ ಬೊಂಗಾಳೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ನಂತರ ಮಾತನಾಡಿದ ಅವರು, ಬಂಗಾರಪ್ಪ ಅವರು ನಮ್ಮನ್ನು ವಿರೋಧಿಗಳಂತೆ ನೋಡಲಿಲ್ಲ. ಜಾತಿ, ಧರ್ಮ ನೋಡದೆ, ಎಲ್ಲಾ ಸಮುದಾಯಗಳನ್ನು ಗೌರವದಿಂದ ಕಂಡಿದ್ದಾರೆ. ತಂದೆಯ ಗುಣಗಳನ್ನೇ ಬೆಳೆಸಿಕೊಂಡಿರುವ ಮಧು ಬಂಗಾರಪ್ಪ ಅವರ ನಾಯಕತ್ವ ಗುಣಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇನೆ ಎಂದರು.
ಕಾಂಗ್ರೆಸ್ ಸೇರಿದ ಗೀತಾ ಶಿವರಾಜ್ ಕುಮಾರ್: ಸಹೋದರನ ಪರ ಸೊರಬದಲ್ಲಿ ಪ್ರಚಾರ
ಸಭೆಯಲ್ಲಿ ಆನವಟ್ಟಿಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದ ಬಿ. ಪಾಟೀಲ್ ಬಿಳಗಲಿ, ಜಿ ಮುಖಂಡರಾದ ಕೆ.ಪಿ. ರುದ್ರಗೌಡ, ತಬಲಿ ಬಂಗರಪ್ಪ, ವೀರೇಶ್ ಕೊಟಗಿ, ಶಿವಲಿಂಗೇಗೌಡ, ಕೇಶವ ರಾಯ್ಕರ್, ರುದ್ರಪ್ಪ ಕಡ್ಲೇರ್, ರಾಜೇಂದ್ರ ನಾಯಕ್, ಮಧುಕೇಶ್ವರ್ ಪಾಟೀಲ್, ವೀರೇಂದ್ರ ಪಾಟೀಲ್ ಜಡೆ, ಮಮತಾ, ಸಿದ್ದಲಿಂಗೇಶ್, ಎಚ್.ಜಯಪ್ಪ, ಶಿವಾನಿ ಹನುಮಂತಪ್ಪ. ಎಲ್.ಜಿ.ಮಾಲತೇಶ್, ರವಿಕಿರಣ ಕುಬಟೂರು ಇದ್ದರು.