ದೆಹಲಿಗೆ ನೂತನ ಸಿಎಂ ಆಯ್ಕೆಯಾಗಿದೆ. ಅತಿಶಿ ಮರ್ಲೆನಾ, ಸಿಎಂ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ. ವಿದೇಶದಲ್ಲಿ ಓದಿರುವ ಅತಿಶಿ, ಸಿಂಪಲ್ ಆದ್ರೂ ಕೋಟ್ಯಾಧಿಪತಿ ರಾಜಕಾರಣಿಗಳಲ್ಲಿ ಒಬ್ಬರು. ಅವರ ಓದು, ಆಸ್ತಿ ಮತ್ತು ಪತಿ ಬಗ್ಗೆ ಮಾಹಿತಿ ಇಲ್ಲಿದೆ.
ದೆಹಲಿ ಗದ್ದುಗೆಗೆ ಹೊಸ ಸಿಎಂ ಘೋಷಣೆಯಾಗಿದೆ. ಅತಿಶಿ ಮರ್ಲೆನಾ (Aatishi Marlena) ಶಾಸಕಾಂಗ ಪಕ್ಷದ ನೂತನ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸಿಎಂ ಸ್ಪರ್ಧೆಯಲ್ಲಿದ್ದ ಕೈಲಾಶ್ ಗೆಹ್ಲೋಟ್ ಅವರನ್ನು ಹಿಂದಿಕ್ಕಿ ಅತಿಶಿ ಮರ್ಲೆನಾ, ಸಿಎಂ ಹುದ್ದೆಯನ್ನು ಅಲಂಕರಿಸಲಿದ್ದಾರೆ. ವಿದೇಶದಲ್ಲಿ ಓದು ಮುಗಿಸಿರುವ ಈ ಅತಿಶಿ ಮರ್ಲೆನಾ ಯಾರು, ಅವರ ನೆಟ್ ವರ್ತ್ (Net Worth ) ಎಷ್ಟು ಎಂಬೆಲ್ಲ ಮಾಹಿತಿ ಇಲ್ಲಿದೆ.
ಹೊಸ ಸಿಎಂ ಬಳಿ ಇದೆ 1.41 ಕೋಟಿ ಮೌಲ್ಯದ ಆಸ್ತಿ ?: ದೆಹಲಿಯ ಸಿಎಂ (Delhi CM) ಆಗಿ ಅಧಿಕಾರ ಸ್ವೀಕರಿಸಲಿರುವ ಅತಿಶಿ ಮರ್ಲೆನಾ ದೆಹಲಿಯ ಕಲ್ಕಾಜಿ ದಕ್ಷಿಣದಿಂದ ಚುನಾವಣೆಯಲ್ಲಿ ಗೆದ್ದಿದ್ದರು. ಚುನಾವಣೆ ಸಮಯದಲ್ಲಿ ಅವರು ಹಂಚಿಕೊಂಡ ಅಫಿಡೆವಿಟ್ ಪ್ರಕಾರ ಅವರ ಬಳಿ 1.41 ಕೋಟಿ ಮೌಲ್ಯದ ನಿವ್ವಳ ಆಸ್ತಿ ಇದೆ. ದೆಹಲಿಯ ಕೋಟ್ಯಾಧಿಪತಿ ಮಂತ್ರಿಗಳ ಪಟ್ಟಿಯಲ್ಲಿ ಸೇರಿದ್ರೂ ಅತಿಶಿ ಮರ್ಲೆನಾ ವಿರುದ್ಧ ಯಾವುದೇ ಕೇಸ್ ಇಲ್ಲ. ಅತಿಶಿ ಮರ್ಲೆನಾ, ಎಲೆಕ್ಷನ್ ಕಮಿಷನ್ ಮುಂದೆ ತಮ್ಮ ಆಸ್ತಿಯ ವಿವರ ನೀಡಿದ್ದರು. ಅದ್ರ ಪ್ರಕಾರ, ಅವರ ಬಳಿ 30000 ರೂಪಾಯಿ ಕ್ಯಾಶ್ ಇದೆ. ಹಾಗೆಯೇ ಎಫ್ ಡಿ ಸೇರಿದಂತೆ 1.22 ಕೋಟಿ ರೂಪಾಯಿ ಬ್ಯಾಂಕ್ ನಲ್ಲಿದೆ.
undefined
ಶೀಲಾ ದೀಕ್ಷಿತ್ ನಂತರ ದೆಹಲಿಗೆ ಮತ್ತೆ ಮಹಿಳಾ ಸಿಎಂ: ಅತಿಶಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಿದ ಕೇಜ್ರಿವಾಲ್
ಕೋಟಿ ರೂಪಾಯಿ ಆಸ್ತಿ ಹೊಂದಿದ್ದರು, ಅತಿಶಿ ಮರ್ಲೆನಾ ಯಾವುದೇ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿಲ್ಲ. ಅವರು ಎಲ್ ಐಸಿ ಪಾಲಿಸಿ ಒಂದನ್ನು ಹೊಂದಿದ್ದಾರೆ. ಐದು ಲಕ್ಷ ರೂಪಾಯಿಯ ಎಲ್ ಐಸಿ ಹೆಲ್ತ್ ಇನ್ಶುರೆನ್ಸ್ ಪಾಲಿಸಿ ಹೊಂದಿರುವ ಅತಿಶಿ ಮರ್ಲೆನಾ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಆಸಕ್ತಿ ತೋರಿಸಿಲ್ಲ.
ಅತಿಶಿ ಮರ್ಲೆನಾ ಬಳಿ ಇಲ್ಲ ಸ್ವಂತ ಮನೆ, ಆಸ್ತಿ : 2012 ರಲ್ಲಿ ಭ್ರಷ್ಟಾಚಾರ ವಿರೋಧಿ ಆಂದೋಲನದ ಸಮಯದಲ್ಲಿ ರಾಜಕೀಯ ಪ್ರವೇಶಿಸಿದ ಅತಿಶಿ ಮರ್ಲೆನಾ ಅವರು ಆಮ್ ಆದ್ಮಿ ಪಕ್ಷದ (ಎಎಪಿ) ಸ್ಥಾಪಕ ಸದಸ್ಯರಲ್ಲಿ ಒಬ್ಬರು. 2019 ರ ಲೋಕಸಭಾ ಚುನಾವಣೆಯಲ್ಲಿ ಪೂರ್ವ ದೆಹಲಿ ಕ್ಷೇತ್ರದಿಂದ ಅತಿಶಿ ಮರ್ಲೆನಾ ಸ್ಪರ್ಧಿಸಿದ್ದರು. ಆದ್ರೆ ಬಿಜೆಪಿಯ ಗೌತಮ್ ಗಂಭೀರ್ ವಿರುದ್ಧ ಸೋತಿದ್ದರು. ಪಕ್ಷದ ವಿಶ್ವಾಸ ಗಳಿಸಿದ್ದ ಅತಿಶಿ, 2020 ರಲ್ಲಿ ದೆಹಲಿಯ ಕಲ್ಕಾಜಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅಲ್ಲಿಂದ ಆಮ್ ಆದ್ಮಿ ಪಕ್ಷದ ಶಾಸಕರಾಗಿದ್ದಾರೆ. ಅತಿಶಿ ಮರ್ಲೆನಾ ಬಳಿ ಸ್ವಂತ ಮನೆಯಿಲ್ಲ. ಸ್ವಂತ ಆಸ್ತಿ, ಜಮೀನನ್ನು ಕೂಡ ಅವರು ಹೊಂದಿಲ್ಲ.
43 ವರ್ಷದ ಅತಿಶಿ ಮರ್ಲೆನಾ, ಜೂನ್ 8, 1981ರಲ್ಲಿ ಜನಿಸಿದ್ದಾರೆ. ತಾಯಿಯ ಹೆಸರು ತ್ರಿಪ್ತ ವಾಹಿ ಮತ್ತು ತಂದೆಯ ಹೆಸರು ವಿಜಯ್ ಕುಮಾರ್ ಸಿಂಗ್, ಇವರು ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ಅತಿಶಿ ತನ್ನ ಶಾಲಾ ದಿನಗಳಲ್ಲಿ ತನ್ನ ಹೆಸರಿನೊಂದಿಗೆ ಮಾರ್ಕ್ಸ್ ಮತ್ತು ಲೆನಿನ್ ಪದ ಸೇರಿಸಿ ಮರ್ಲೆನಾ ಮಾಡಿ ತಮ್ಮ ಹೆಸರಿಗೆ ಜೋಡಿಸಿಕೊಂಡಿದ್ದರು. ಅತಿಶಿ ದೆಹಲಿಯ ಸ್ಪ್ರಿಂಗ್‌ಡೇಲ್ ಶಾಲೆಯಲ್ಲಿ ಪ್ರಾರಂಭಿಕ ಅಧ್ಯಯನ ನಡೆಸಿದ್ದರು. ನಂತರ ಅವರು ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ರೋಡ್ಸ್ ವಿದ್ಯಾರ್ಥಿವೇತನ ಪಡೆದ ಅವರು, ಲಂಡನ್ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು.
ಛಾನ್ಸೆ ಇಲ್ಲ, ಪ್ರಧಾನಿ ನರೇಂದ್ರ ಮೋದಿಗೆ ಅನ್ವಯವಾಗಲ್ಲ 75 ಪ್ಲಸ್ ರೂಲ್ಸ್
ಅತಿಶಿ ಮರ್ಲೆನಾ ಪತಿ : ದೆಹಲಿ ನೂತನ ಸಿಎಂ ಅತಿಶಿ ಮರ್ಲೆನಾ ಪತಿ ಹೆಸರು ಪ್ರವೀಣ್ ಸಿಂಗ್ (Praveen Singh). ಪ್ರವೀಣ್ ಸಿಂಗ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂದರೆ ಐಐಟಿ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಹಮದಾಬಾದ್ ಅಂದರೆ ಐಐಎಂನಲ್ಲಿ ಅಧ್ಯಯನ ಮಾಡಿದ್ದಾರೆ. ನಮ್ಮಷ್ಟಕ್ಕೆ ತಾವು ಕೆಲಸ ಮಾಡುವ ಅವರು ಇನ್ನೂ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿಲ್ಲ.