ಮಣಿಕಂಠ ರಾಥೋಡ್, ವಿಜಯೇಂದ್ರ ವಿರುದ್ಧ ಮಾನನಷ್ಟ ಕೇಸ್‌ ಹಾಕುವೆ: ಪ್ರಿಯಾಂಕ್‌ ಖರ್ಗೆ

By Kannadaprabha News  |  First Published Dec 7, 2023, 7:11 AM IST

ಬಿಜೆಪಿ ಮುಖಂಡ ಮಣಿಕಂಠ ರಾಥೋಡ್‌ ಅವರ ಮೇಲೆ ನಾನು ಹಲ್ಲೆ ನಡೆಸಿದ್ದೇನೆ ಎಂದು ಆರೋಪಿಸಿದ ಮಣಿಕಂಠ ರಾಥೋಡ್‌ ಹಾಗೂ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಸೇರಿ ಹಲವು ಬಿಜೆಪಿ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.


- ಸುವರ್ಣಸೌಧ (ಡಿ.7) :  ಬಿಜೆಪಿ ಮುಖಂಡ ಮಣಿಕಂಠ ರಾಥೋಡ್‌ ಅವರ ಮೇಲೆ ನಾನು ಹಲ್ಲೆ ನಡೆಸಿದ್ದೇನೆ ಎಂದು ಆರೋಪಿಸಿದ ಮಣಿಕಂಠ ರಾಥೋಡ್‌ ಹಾಗೂ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಸೇರಿ ಹಲವು ಬಿಜೆಪಿ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಮಣಿಕಂಠ ರಾಥೋಡ್‌ ಅವರು ಕಳೆದ ನ.19ರಂದು ತಮ್ಮ ಮೇಲೆ ಹಲ್ಲೆಯಾಗಿದೆ, ಅದಕ್ಕೆ ಸರ್ಕಾರದ ಅಧಿಕಾರಗಳು ಹಾಗೂ ರಾಜಕೀಯ ವಿರೋಧಿಗಳು ಕಾರಣ ಎಂದು ಆರೋಪಿಸಿ ದೂರು ನೀಡಿದ್ದರು. ಆದರೆ, ಈಗ ಅದರ ವಿಧಿವಿಜ್ಞಾನ ವರದಿ ಬಂದಿದ್ದು, ಮಣಿಕಂಠ ರಾಥೋಡ್‌ ಅವರು ಮದ್ಯಪಾನ ಮಾಡಿ ವಾಹನ ಚಲಾಯಿಸಿ ಅಪಘಾತಕ್ಕೀಡಾದಾಗ ಅವರಿಗೆ ಗಾಯಗಳಾಗಿವೆ. ಅವರ ಮೇಲೆ ಯಾರೂ ಹಲ್ಲೆ ಮಾಡಿಲ್ಲ ಎಂದು ತಿಳಿದುಬಂದಿದೆ.

Tap to resize

Latest Videos

ಬಿಜೆಪಿ ಅಧಿಕಾರದಲ್ಲಿದ್ದ 4 ವರ್ಷ ಬೆಂಗ್ಳೂರಿನ ಗುಂಡಿ ಮುಚ್ಚಲಾಗಲಿಲ್ಲ: ಸಿಎಂ ತಿರುಗೇಟು!

ಆದರೆ, ಅವರ ಮೇಲೆ ನಾನು ಹಲ್ಲೆ ಮಾಡಿದ್ದೇನೆ ಎಂದು ಮಣಿಕಂಠ ರಾಥೋಡ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ಸೇರಿದಂತೆ ಹಲವು ಆರೋಪಿಸಿದ್ದರು. ಹೀಗೆ ನನ್ನ ತೇಜೋವಧೆ ಮಾಡಲು ನನ್ನ ವಿರುದ್ಧ ಆರೋಪ ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ. ಈ ಕುರಿತು ವಕೀಲರೊಂದಿಗೆ ಚರ್ಚಿಸುತ್ತೇನೆ ಎಂದರು.

ಮಣಿಕಂಠ ರಾಥೋಡ್‌ ಅವರ ವಿರುದ್ಧ 33 ಪ್ರಕರಣಗಳಿದ್ದು, ಪಡಿತರ ಅಕ್ಕಿ, ಅಂಗನವಾಡಿಗೆ ಸರಬರಾಜಾಗುತ್ತಿದ್ದ ಹಾಲಿ ಪೌಡರ್‌ ಕಳ್ಳತನ ಮಾಡಿದ ಕುರಿತು ಪ್ರಕರಣವೂ ಅವರ ವಿರುದ್ಧ ದಾಖಲಾಗಿದೆ. ಅಂತಹವರನ್ನು ವಹಿಸಿಕೊಂಡು ಬಿಜೆಪಿ ನಾಯಕರು ನನ್ನ ವಿರುದ್ಧ ಆರೋಪ ಮಾಡುವುದು ದುರಾದೃಷ್ಟಕರ. ಅದರಲ್ಲೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ನಾನೇ ಹೋಗಿ ಹಲ್ಲೆ ಮಾಡಿದ್ದೇನೆ ಎನ್ನುವಂತೆ ಮಾಧ್ಯಮಗಳಲ್ಲಿ ಮಾತನಾಡಿದ್ದಾರೆ. ಇದರಿಂದ ನನ್ನ ಹಕ್ಕಿಗೆ ಧಕ್ಕೆಯಾಗಿದ್ದು, ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸುವ ಕುರಿತಂತೆ ಮುಖ್ಯಮಂತ್ರಿಗಳ ಜತೆ ಚರ್ಚಿಸುತ್ತೇನೆ ಎಂದು ಹೇಳಿದರು.

ಬಿಜೆಪಿ ಕಾರ್ಯಕರ್ತನ ಮೇಲೆ ಹೆಬ್ಬಾಳ್ಕರ್ ಸಹೋದರ ಹಲ್ಲೆ ಪ್ರಕರಣ; ಸದನದಲ್ಲಿ ಬಿಜೆಪಿ ಗದ್ದಲ!

ಇದಕ್ಕೂ ಮುನ್ನ ಪ್ರಿಯಾಂಕ್‌ ಖರ್ಗೆ ಅವರು ವಿಧಾನಸಭೆ ಕಲಾಪದಲ್ಲಿ ಮಣಿಕಂಠ ರಾಥೋಡ್‌ ಅವರು ಸುಳ್ಳು ಪ್ರಕರಣ ದಾಖಲಿಸುವ ಕುರಿತಂತೆ ಪ್ರಸ್ತಾಪಿಸಿ, ಬಿಜೆಪಿಗರ ಕಾಲೆಳೆದಿದ್ದರು. ಜತೆಗೆ ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕರ್ತ ಪೃಥ್ವಿ ಸಿಂಗ್‌ ಪ್ರಕರಣದಲ್ಲೂ ಹೀಗೆ ಆಗಲಿದೆ ಎಂದು ವ್ಯಂಗ್ಯವಾಡಿದರು.

click me!