ಮಣಿಪಾಲದಲ್ಲಿ ಓದಿದ್ದ ದೀಪಕ್‌ ಬಿಹಾರ ಸಚಿವ

Kannadaprabha News   | Kannada Prabha
Published : Nov 23, 2025, 05:10 AM IST
Deepak Prakash Minister

ಸಾರಾಂಶ

ಬಿಹಾರದಲ್ಲಿ ಶಾಸಕರೇ ಅಲ್ಲದ ರಾಷ್ಟ್ರೀಯ ಲೋಕ ಮೋರ್ಚಾ ಯುವ ಮುಖಂಡ ಹಾಗೂ ಪಕ್ಷದ ಅಧ್ಯಕ್ಷ ಉಪೇಂದ್ರ ಕುಶ್ವಾಹಾ ಅವರ ಪುತ್ರ ದೀಪಕ್ ಪ್ರಕಾಶ್ ಅವರು ಇತ್ತೀಚೆಗೆ ನಿತೀಶ್ ಕುಮಾರ್‌ ಸಂಪುಟದಲ್ಲಿ ಪ್ರಮಾಣವಚನ ಸ್ವೀಕರಿಸಿ ಗಮನ ಸೆಳೆದಿದ್ದರು. ಇವರು ಕರ್ನಾಟಕದ ಮಣಿಪಾಲದಲ್ಲಿ ಬಿ-ಟೆಕ್ ಓದಿದ್ದರು ಎಂಬುದು ವಿಶೇಷ.

ಪಟನಾ: ಬಿಹಾರದಲ್ಲಿ ಶಾಸಕರೇ ಅಲ್ಲದ ರಾಷ್ಟ್ರೀಯ ಲೋಕ ಮೋರ್ಚಾ ಯುವ ಮುಖಂಡ ಹಾಗೂ ಪಕ್ಷದ ಅಧ್ಯಕ್ಷ ಉಪೇಂದ್ರ ಕುಶ್ವಾಹಾ ಅವರ ಪುತ್ರ ದೀಪಕ್ ಪ್ರಕಾಶ್ ಅವರು ಇತ್ತೀಚೆಗೆ ನಿತೀಶ್ ಕುಮಾರ್‌ ಸಂಪುಟದಲ್ಲಿ ಪ್ರಮಾಣವಚನ ಸ್ವೀಕರಿಸಿ ಗಮನ ಸೆಳೆದಿದ್ದರು. ಇವರು ಕರ್ನಾಟಕದ ಮಣಿಪಾಲದಲ್ಲಿ ಬಿ-ಟೆಕ್ ಓದಿದ್ದರು ಎಂಬುದು ವಿಶೇಷ.

ಉಪೇಂದ್ರ ಕುಶ್ವಾಹಾ ಪತ್ನಿ ಶಾಸಕಿ

ಉಪೇಂದ್ರ ಕುಶ್ವಾಹಾ ಪತ್ನಿ ಶಾಸಕಿ ಆಗಿದ್ದು, ಅವರಿಗೆ ಸಚಿವ ಪಟ್ಟ ಸಿಗಬಹುದು ಎನ್ನಲಾಗಿತ್ತು. ಆದರೆ ಅವರು, ‘ಮಗನನ್ನು ಮಂತ್ರಿ ಮಾಡಿ’ ಎಂದು ಕೋರಿದ್ದು ಕೆಲಸ ಮಾಡಿತು ಎನ್ನಲಾಗಿದ್ದು, ಹೀಗಾಗಿಯೇ ಶಾಸಕರೂ ಅಲ್ಲದ ದೀಪಕ್‌ಗೆ ಕೊನೇ ಕ್ಷಣದಲ್ಲಿ ಅದೃಷ್ಟ ಖುಲಾಯಿಸಿತು ಎನ್ನಲಾಗಿದೆ. ಆದ್ದರಿಂದ ಸರಿಯಾಗಿ ತಯಾರಾಗದೇ ಬಂದಿದ್ದ ದೀಪಕ್‌ ಜೀನ್ಸ್ ಪ್ಯಾಂಟ್‌ ಧರಿಸಿಯೇ ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದರು. ದೀಪಕ್‌ ಶನಿವಾರ ಪಂಚಾಯತ್ ರಾಜ್ ಇಲಾಖೆಯ ಹೊಣೆ ವಹಿಸಿಕೊಂಡರು.

ಮಣಿಪಾಲಲ್ಲಿ ಬಿ-ಟೆಕ್‌:

ದೀಪಕ್‌ ರಾಜಕೀಯಕ್ಕೆ ಬರುವ ಮುನ್ನ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದರು. ಇವರು 2011ರಲ್ಲಿ ಕರ್ನಾಟಕದ ಉಡುಪಿ ಜಿಲ್ಲೆ ಮಣಿಪಾಲದ ಎಂಐಟಿಯಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿ ಟೆಕ್ ಮುಗಿಸಿದ್ದರು. ಹಾಗೂ ನಂತರ, ಪ್ರಕಾಶ್ 4 ವರ್ಷಗಳ ಕಾಲ ಐಟಿ ವಲಯದಲ್ಲಿ ಕೆಲಸ ಮಾಡಿ, ನಂತರ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ
India Latest News Live: ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ