ಬಿಜೆಪಿ ಸರ್ಕಾರವೇ ವಿದ್ಯುತ್ ದರವನ್ನು ಹೆಚ್ಚಿಸಿತ್ತು ಎಂಬ ಇಂಧನ ಸಚಿವ ಕೆ.ಜೆ. ಜಾಜ್‌ರ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಾರ್ವಜನಿಕ ಹಿತಾಸಕ್ತಿಯ ಕಾರಣ ಮುಂದಿಟ್ಟು ಹೆಚ್ಚಿರುವ ದರವನ್ನು ಇಳಿಸಲಿ ಎಂದು ಸವಾಲು ಹಾಕಿದ್ದಾರೆ.
ಉಡುಪಿ (ಜೂ.13) ಬಿಜೆಪಿ ಸರ್ಕಾರವೇ ವಿದ್ಯುತ್ ದರವನ್ನು ಹೆಚ್ಚಿಸಿತ್ತು ಎಂಬ ಇಂಧನ ಸಚಿವ ಕೆ.ಜೆ. ಜಾಜ್‌ರ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಾರ್ವಜನಿಕ ಹಿತಾಸಕ್ತಿಯ ಕಾರಣ ಮುಂದಿಟ್ಟು ಹೆಚ್ಚಿರುವ ದರವನ್ನು ಇಳಿಸಲಿ ಎಂದು ಸವಾಲು ಹಾಕಿದ್ದಾರೆ.
ಉಡುಪಿ(Udupi)ಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿವರ್ಷದಂತೆ ಜನವರಿ ತಿಂಗಳಲ್ಲಿ ಕೆಇಆರ್‌ಸಿ ವಿದ್ಯುತ್ ದರ ಏರಿಕೆಯ ಪ್ರಸ್ತಾವ ಸಲ್ಲಿಸಿತ್ತು. ಆದರೆ ಬಿಜೆಪಿ ಸರ್ಕಾರ ಅದಕ್ಕೆ ಅನುಮೋದನೆ ಕೊಟ್ಟಿರಲಿಲ್ಲ. ಚುನಾವಣೆ ಘೋಷಣೆಯಾದ ನಂತರ ಅಧಿಕಾರಿಗಳು ಅನುಮೋದನೆ ಕೊಟ್ಟಿರಬಹುದು ಎಂದು ಕೋಟ ಸಮಜಾಯಿಶಿ ನೀಡಿದ್ದಾರೆ.
undefined
ಸಂಘ ಪರಿವಾರದ ಭೂಮಿ ಹಿಂಪಡೆತಕ್ಕೆ ಕೋಟ ಆಕ್ರೋಶ
ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಗೋಹತ್ಯೆ ಕಾಯ್ದೆಯನ್ನು ರದ್ದು ಮಾಡುತ್ತೇವೆ, ಮತಾಂತರ ನಿಷೇಧ ಕಾಯ್ದೆಯನ್ನು ಹಿಂದಕ್ಕೆ ಪಡೆಯುತ್ತೇವೆ ಎಂದೆಲ್ಲಾ ಹೇಳುವ ಕಾಂಗ್ರೆಸ್ ಸರ್ಕಾರ ವಿದ್ಯುತ್ ದರ ಪರಿಷ್ಕರಣೆ ಆದೇಶವನ್ನು ವಾಪಸ್ ಪಡೆಯಲಿ ಎಂದರು. ವಿದ್ಯುತ್ ದರ ಹೆಚ್ಚಳ ಏನೂ ಕಾಯ್ದೆ ತಿದ್ದುಪಡಿಯ ವಿಚಾರ ಅಲ್ಲ, ಅದೊಂದು ಸುತ್ತೋಲೆ, ಅದನ್ನು ವಾಪಸ್ ಪಡೆಯಿರಿ ಎಂದು ನಾನು ಸಿದ್ದರಾಮಯ್ಯ, ಡಿಕೆಶಿ, ಜಾಜ್‌ರ್ ಗೆ ವಿನಂತಿ ಮಾಡುತ್ತೇನೆ ಎಂದರು. 200 ಯುನಿಟ್ ಉಚಿತ ಕೊಡುತ್ತೇವೆ ಎಂದು ಹೇಳಿ 2 - 3 ಪಟ್ಟು ವಿದ್ಯುತ್ ದರ ಏರಿಸುವುದು ಸಮಂಜಸ ಅಲ್ಲ, ಹಿಂದಿನ ದರವನ್ನೇ ನಿಗದಿಪಡಿಸಿ ರಾಜ್ಯದ ಜನರಿಗೆ ಉಪಕಾರ ಮಾಡಿ ಎಂದವರು ಒತ್ತಾಯಿಸಿದರು.
ಗ್ಯಾರಂಟಿಗಳಿಗೆ(Congress guarantees) ವಿರೋಧವಿಲ್ಲ: ಕಾಂಗ್ರೆಸ್ ಸರ್ಕಾರ ಬಡವರಿಗೆ ಕೊಟ್ಟಯೋಜನೆಯನ್ನು ಬಿಜೆಪಿ ವಿರೋಧಿಸಿಲ್ಲ, ಶಕ್ತಿ ಯೋಜನೆ(Shakti scheme)ಯನ್ನು ನಾವು ಸ್ವಾಗತ ಮಾಡುತ್ತೇವೆ. ಆದರೆ ಆರ್ಥಿಕ ತಜ್ಞರು, ನಿವೃತ್ತ ಅಧಿಕಾರಿಗಳು ಗ್ಯಾರೆಂಟಿಗಳ ಜಾರಿ ಕಷ್ಟಎಂದು ಹೇಳಿದ್ದಾರೆ. ಆಗ ಸಂದೇಹ ಸಂಶಯವನ್ನು ಬಿಜೆಪಿ ವ್ಯಕ್ತಪಡಿಸಿದ್ದು ನಿಜ ಎಂದು ಕೋಟ ಸಮರ್ಥಿಸಿದರು. ಈಗ ಉಳಿದ ನಾಲ್ಕು ಗ್ಯಾರಂಟಿ ಜಾರಿಯ ಜವಾಬ್ದಾರಿ ಸರ್ಕಾರದ ಮೇಲಿದೆ. ಕೇಂದ್ರ ಸರ್ಕಾರ 5 ಕೆ.ಜಿ ಅಕ್ಕಿ ಕೊಡುತ್ತಿದೆ. ನೀವು ಪ್ರತ್ಯೇಕ 10 ಕೆ.ಜಿ ಕೊಡುತ್ತೀರಾ ? 200 ಯೂನಿಟ್ ವಿದ್ಯುತ್ ಉಚಿತ ಗ್ಯಾರಂಟಿಯಲ್ಲಿ ಬದಲಾವಣೆಗಳನ್ನು ಮಾಡಿದ್ದು ಯಾಕೆ ? ನಿರುದ್ಯೋಗ ಭತ್ಯೆ ಪಡೆಯಲು ಅರ್ಹತೆಯನ್ನು ಒಂದೇ ವರ್ಷಕ್ಕೆ ಇಳಿಸಿದ್ದು ಯಾಕೆ ? ಎಂದು ಪ್ರಶ್ನಿಸಿದ ಮಾಜಿ ಸಚಿವರು, ಕಾಂಗ್ರೆಸ್ ಪ್ರತಿಪಕ್ಷವಾಗಿದ್ದಾಗ ಏನು ಮಾಡಿತ್ತೋ ನಾವೂ ಅದನ್ನೇ ಮಾಡುತ್ತಿದ್ದೇವೆ. ಕೊಟ್ಟಮಾತು ಜಾರಿಗೆ ತನ್ನಿ, ಅದುವರೆಗೆ ಬಿಜೆಪಿ ಜನರ ಜೊತೆ ಹೋರಾಟ ಮಾಡುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಉಚಿತ ಯೋಜನೆಗಳ ಆಶ್ವಾಸನೆ ನೀಡಿರುವ ಪರಿಣಾಮ ಬಿಜೆಪಿಗೆ ಸೋಲು: ಕೋಟ ಶ್ರೀನಿವಾಸ ಪೂಜಾರಿ