ರೈತ ಆತ್ಮ​ಹ​ತ್ಯೆ: ಕುಟುಂಬ​ಗ​ಳಿಗೆ ಪರಿ​ಹಾರ ವಿಳಂಬ​ವಾ​ಗ​ದಂತೆ ಈಶ್ವರ್ ಖಂಡ್ರೆ ಖಡಕ್ ಸೂಚನೆ

By Kannadaprabha News  |  First Published Jun 13, 2023, 10:06 PM IST

 ಸಾಲದ ಬಾಧೆ​ಯಿಂದ ಆತ್ಮ​ಹತ್ಯೆ ಮಾಡಿ​ಕೊಂಡ ರೈತನ ಕುಟುಂಬಕ್ಕೆ 5ಲಕ್ಷ ರು.ಗಳ ಪರಿ​ಹಾರ ಹಾಗೂ ರೈತನ ಪತ್ನಿಗೆ 3ಸಾವಿರ ರು.ಗ​ಳ ಮಾಶಾ​ಸ​ನ ತಲು​ಪಿ​ಸು​ವಲ್ಲಿ ವಿಳಂಬ​ವಾ​ಗ​ದಿ​ರಲಿ ಎಂದು ಜಿಲ್ಲಾ ಉಸ್ತು​ವಾರಿ ಸಚಿವ ಈಶ್ವರ ಖಂಡ್ರೆ ಸೂಚಿ​ಸಿ​ದರು.


ಬೀದರ್‌ (ಜೂ.13) ಸಾಲದ ಬಾಧೆ​ಯಿಂದ ಆತ್ಮ​ಹತ್ಯೆ ಮಾಡಿ​ಕೊಂಡ ರೈತನ ಕುಟುಂಬಕ್ಕೆ 5ಲಕ್ಷ ರು.ಗಳ ಪರಿ​ಹಾರ ಹಾಗೂ ರೈತನ ಪತ್ನಿಗೆ 3ಸಾವಿರ ರು.ಗ​ಳ ಮಾಶಾ​ಸ​ನ ತಲು​ಪಿ​ಸು​ವಲ್ಲಿ ವಿಳಂಬ​ವಾ​ಗ​ದಿ​ರಲಿ ಎಂದು ಜಿಲ್ಲಾ ಉಸ್ತು​ವಾರಿ ಸಚಿವ ಈಶ್ವರ ಖಂಡ್ರೆ ಸೂಚಿ​ಸಿ​ದರು.

ಅವರು ಜಿಪಂ ಸಭಾಂಗ​ಣ​ದಲ್ಲಿ ನಡೆದ ಸಭೆ​ಯಲ್ಲಿ ಈ ಕುರಿತು ಮಾತ​ನಾಡಿ, ಕಳೆದ ಸಾಲಿ​ನಲ್ಲಿ ಆತ್ಮ​ಹತ್ಯೆ ಮಾಡಿ​ಕೊಂಡ 19 ಜನ ರೈತರ ಕುಟುಂಬ​ಗ​ಳಿಗೆ ಪರಿ​ಹಾರ ಧನ ಮತ್ತು ಮಾಶಾ​ಸನ ವ್ಯವ​ಸ್ಥೆ​ಯನ್ನು ಜಿಲ್ಲಾ​ಡ​ಳಿತ ಮುತು​ವರ್ಜಿ ವಹಿಸಿ ಮಾಡ​ಬೇ​ಕೆಂದರು.

Tap to resize

Latest Videos

undefined

 

ಸರ್ಕಾರಿ ಆಸ್ಪತ್ರೆ ಸೇವಾ ಗುಣಮಟ್ಟ ಹೆಚ್ಚಳ: ಸಿಎಂ ಸಿದ್ದರಾಮಯ್ಯ

ಪ್ರವಾಹದಲ್ಲಿ ಇಬ್ಬರ ಸಾವು​; ಕುಟುಂಬಕ್ಕೆ ತಲಾ 5ಲಕ್ಷ ರು. ಪರಿ​ಹಾರ ವಿತ​ರ​ಣೆ:

ಸೋಮ​ವಾರ ಕುಂಟೆ​ಸಿರ್ಸಿ ಮಾರ್ಗ ಮಧ್ಯದ ಸೇತುವೆ ಮೇಲಿನ ಪ್ರವಾ​ಹಕ್ಕೆ ಹರಿ​ದು​ಹೋಗಿ ಸಾವ​ನ್ನ​ಪ್ಪಿದ್ದ ಇಬ್ಬರು ವ್ಯಕ್ತಿ​ಗಳ ಕುಟುಂಬ​ಸ್ಥ​ರಿಗೆ ತಲಾ 5ಲಕ್ಷ ರು.ಗಳ ಪರಿ​ಹಾರ ಧನ​ವನ್ನು ಸಭೆ​ಯಲ್ಲಿ ಜಿಲ್ಲಾ ಉಸ್ತು​ವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಪೌರಾ​ಡ​ಳಿತ ಸಚಿವ ರಹೀಮ್‌ ಖಾನ್‌ ಸೇರಿ​ದಂತೆ ಮತ್ತಿ​ತ​ರರು ವಿತ​ರಿ​ಸಿ​ದರು.

ಈ ಸಂದ​ರ್ಭ​ದಲ್ಲಿ ಮಾತ​ನಾಡಿದ ಡಾ. ಶೈಲೇಂದ್ರ ಬೆಲ್ದಾಳೆ, ಬೀದರ್‌ ದಕ್ಷಿಣ ಕ್ಷೇತ್ರದ ಬುಧೇರಾ ಗ್ರಾಮ​ದಲ್ಲಿ ಭಾರಿ ಗಾಳಿ ಮಳೆ​ಯಿಂದ ಮನೆಯ ಛಾವಣಿ ಶೀಟ್‌ ಹಾರಿ​ಬಿದ್ದು ಗಾಯ​ಗೊಂಡಿದ್ದ ಬಾಲಕಿ ಚಿಕಿತ್ಸೆ ಫಲ​ಕಾ​ರಿ​ಯಾ​ಗದೆ ಸಾವ​ನ್ನ​ಪ್ಪಿದ್ದು ಇವರ ಕುಟುಂಬಕ್ಕೂ ಪರಿ​ಹಾರ ಧನ ಒದ​ಗಿ​ಸ​ಬೇ​ಕೆಂಬ ಬೇಡಿ​ಕೆಗೆ ಸಚಿವ ಖಂಡ್ರೆ ತಕ್ಷ​ಣವೇ 5ಲಕ್ಷ ರು. ಪರಿ​ಹಾರವನ್ನು ಬಿಡು​ಗಡೆ ಮಾಡಿ ಎಂದು ಅಧಿ​ಕಾ​ರಿ​ಗ​ಳಿಗೆ ಆದೇ​ಶಿ​ಸಿ​ದ​ರು.

 

ಬಸವಕಲ್ಯಾಣದಲ್ಲಿ ಶೀಘ್ರ ಅನುಭವ ಮಂಟಪ ಕಟ್ಟಡ ಉದ್ಘಾಟನೆ: ಈಶ್ವರ ಖಂಡ್ರೆ

ಬೀದರ್‌ ಜಿಪಂ ಸಭಾಂಗ​ಣ​ದಲ್ಲಿ ನಡೆದ ಜಿಲ್ಲಾಮಟ್ಟದ ಅಧಿ​ಕಾ​ರಿ​ಗಳ ಸಭೆ​ಯಲ್ಲಿ ಇತ್ತೀ​ಚೆಗೆ ಕುಂಟೆಸಿರ್ಸಿ ಮಾರ್ಗದ ಸೇತು​ವೆಯ ಪ್ರವಾ​ಹ​ದಲ್ಲಿ ಕೊಚ್ಚಿ ಹೋಗಿ ಸಾವ​ನ್ನ​ಪ್ಪಿ​ರುವ ಇಬ್ಬರು ವ್ಯಕ್ತಿ​ಗಳ ಕುಟುಂಬಕ್ಕೆ ತಲಾ 5ಲಕ್ಷ ರು.ಗಳ ಪರಿ​ಹಾರ ಧನ ಚೆಕ್‌ ವಿತ​ರಿ​ಸ​ಲಾ​ಯಿತು.

click me!