
ಹೊಸಪೇಟೆ (ಜೂ.18): ಹೊಸದಾಗಿ ಬಂದ ಶಾಸಕರಿಗೆ ಸಚಿವ ಸ್ಥಾನ ನೀಡಬಾರದು ಎಂಬ ನಿರ್ಧಾರ ಆಗಿದೆ. ಆದರೂ, ಈ ಬಗ್ಗೆ ಮುಖ್ಯಮಂತ್ರಿ, ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸಚಿವ ಸಂಪುಟ ವಿಸ್ತರಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಹೊಸದಾಗಿ ಬಂದ ಶಾಸಕರಿಗೆ ಸಚಿವ ಸ್ಥಾನ ನೀಡಬಾರದು ಎಂಬ ನಿರ್ಧಾರ ಆಗಿದೆ.
ಆದರೂ, ಈ ಬಗ್ಗೆ ಸಿಎಂ, ಹೈಕಮಾಂಡ್ ನವರು ನಿರ್ಣಯ ಕೈಗೊಳ್ಳುತ್ತಾರೆ ಎಂದರು. ಸಿಎಂ ಬದಲಾವಣೆ ಕುರಿತ ಪ್ರಶ್ನೆಗೆ, ನಮ್ಮದೇ ಸಚಿವ ಸ್ಥಾನ ಉಳಿಸಿಕೊಳ್ಳೋದು ಕಷ್ಟ ಆಗಿದೆ. ಇನ್ನು ಸಿಎಂ ಬದಲಾವಣೆಯಾಗ್ತಾರೆ ಅಂದರೆ ನಾವೇನು ಹೇಳೋದು, ನೀವು ಬೆಂಗಳೂರಿಗೆ ಬಂದರೆ ನಾನೇ ಸಿಎಂ ಅವರನ್ನು ಭೇಟಿ ಮಾಡಿಸ್ತೀನಿ, ಅವರನ್ನೇ ಕೇಳಿ. ಅಷ್ಟಕ್ಕೂ, ಸಿಎಂ, ಕೆಪಿಸಿಸಿ ಅಧ್ಯಕ್ಷರ ಸ್ಥಾನ ಬದಲಾವಣೆ ಮುಗಿದ ಅಧ್ಯಾಯ ಎಂದರು.
ದಲಿತ ಸಿಎಂ ವಿಚಾರ ಸದ್ಯಕ್ಕಿಲ್ಲ: ದಲಿತ ಮುಖ್ಯಮಂತ್ರಿ ಪ್ರಸ್ತಾವನೆಗೆ ಫುಲ್‌ಸ್ಟಾಪ್ ಹಾಕಲಾಗಿದ್ದು, ಸದ್ಯ ಆ ವಿಷಯದ ಕುರಿತು ಚರ್ಚೆ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ. ನಗರದಲ್ಲಿ ಸುದ್ದಿಗರೊಂದಿಗೆ ಮಾತನಾಡಿ, ದಲಿತ ಸಿಎಂ ವಿಚಾರಕ್ಕೆ ಕಳೆದ 1 ವರ್ಷದಿಂದ ಫುಲ್‌ಸ್ಟಾಪ್ ಬಿದ್ದಿದ್ದು, ಈ ಅವಧಿಯಲ್ಲಿ ಆ ಬಗ್ಗೆ ಚರ್ಚೆ ಇಲ್ಲ. ಮುಂದಿನ ಅವಧಿಯಲ್ಲಿ ನೋಡೋಣ ಎನ್ನುವ ಮೂಲಕ ಮುಂದಿನ ವಿಧಾಸಸಭೆ ಚುನಾವಣೆ ಬಳಿಕ ಮತ್ತೇ ದಲಿತ ಸಿಎಂ ಕೂಗು ಎತ್ತುವ ಕುರಿತು ಮುನ್ಸೂಚನೆ ನೀಡಿದರು. ಸೆಪ್ಟೆಂಬರ್‌ನಲ್ಲಿ ಸಿಎಂ ಬದಲಾವಣೆ ಆಗಲಿದೆ ಎಂಬ ಎಚ್.ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಅವರ ಪಕ್ಷ ಬೇರೆ ನಮ್ಮ ಪಕ್ಷ ಬೇರೆ ಅವರ ಹೇಳಿಕೆಗೆ ನ್ಯಾನೇಕೆ ಉತ್ತರಿಸಬೇಕು? ಎಂದರು.
ಗ್ಯಾರಂಟಿ ಯೋಜನೆ ಸಮರ್ಪಕವಾಗಿ ಅನುಷ್ಠಾನಕ್ಕೆ ತರುತ್ತಿಲ್ಲ ಎನ್ನುವ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿ, ಬಿಜೆಪಿಯವರು ಕಳೆದ 2 ವರ್ಷದಿಂದ ಇದನ್ನೇ ಹೇಳುತ್ತಿದ್ದಾರೆ. ಬರುವ 2 ವರ್ಷ ಸಹ ಇದನ್ನೇ ಹೇಳುತ್ತಿರುತ್ತಾರೆ. ಆದರೆ, ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾತ್ರ ನಿಂತಿಲ್ಲ. ಗ್ಯಾರಂಟಿ ಯೋಜನೆಗಳ ಜೊತೆಗೆ ಇತರ ಅಭಿವೃದ್ಧಿ ಕೆಲಸಗಳೂ ಸಮರ್ಪಕವಾಗಿ ನಡೆಯುತ್ತಿವೆ. ಹಿಂದಿನ ಬೊಮ್ಮಾಯಿ ಸರ್ಕಾರದ ಬಜೆಟ್ ಹಾಗೂ ನಮ್ಮ ಸರ್ಕಾರದ ಬಜೆಟ್ ನೋಡಿ ಗೊತ್ತಾಗುತ್ತದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.