9 ರಾಜ್ಯದಲ್ಲಿ ಅಶ್ವಮೇಧಕ್ಕೆ ಬಿಜೆಪಿ ಸಜ್ಜು: ಕಾರ್ಯಕಾರಿಣಿಯಲ್ಲಿ ತೀರ್ಮಾನ

Published : Jan 17, 2023, 07:27 AM IST
9 ರಾಜ್ಯದಲ್ಲಿ ಅಶ್ವಮೇಧಕ್ಕೆ ಬಿಜೆಪಿ ಸಜ್ಜು: ಕಾರ್ಯಕಾರಿಣಿಯಲ್ಲಿ ತೀರ್ಮಾನ

ಸಾರಾಂಶ

ಸೋಮವಾರ ಆರಂಭವಾದ ಬಿಜೆಪಿ ರಾಷ್ಟ್ರೀಯ ಕಾರ‍್ಯಕಾರಿಣಿ ಸಮಿತಿ ಸಭೆಯಲ್ಲಿ 9 ರಾಜಕೀಯ ಪ್ರಮುಖ ಗೊತ್ತುವಳಿಗಳನ್ನು ಮಂಡಿಸಲಾಗಿದೆ.

ನವದೆಹಲಿ: ಸೋಮವಾರ ಆರಂಭವಾದ ಬಿಜೆಪಿ ರಾಷ್ಟ್ರೀಯ ಕಾರ‍್ಯಕಾರಿಣಿ ಸಮಿತಿ ಸಭೆಯಲ್ಲಿ 9 ರಾಜಕೀಯ ಪ್ರಮುಖ ಗೊತ್ತುವಳಿಗಳನ್ನು ಮಂಡಿಸಲಾಗಿದೆ. ‘2024ರ ಲೋಕಸಭಾ ಚುನಾವಣೆಗೆ ಮುನ್ನುಡಿಯಾಗಿ 2023ರಲ್ಲಿ ನಡೆಯುತ್ತಿರುವ ಕರ್ನಾಟಕ ಸೇರಿದಂತೆ 9 ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಯಾವ ರಾಜ್ಯದಲ್ಲೂ ಸೋಲದಂತೆ ನೋಡಿಕೊಳ್ಳಿ’ ಎಂದು ಬಿಜೆಪಿ ರಾಷ್ಟಾ್ರಧ್ಯಕ್ಷ ಜೆ.ಪಿ.ನಡ್ಡಾ ಕರೆ ನೀಡಿದ್ದಾರೆ. ಇದೇ ವೇಳೆ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲಬೇಕು ಎಂಬ ಅಂಶವನ್ನು ಗೊತ್ತುವಳಿಯಲ್ಲೂ ಒತ್ತಿ ಹೇಳಲಾಗಿದೆ.

ಸಭೆಯಲ್ಲಿ ಮಾತನಾಡಿದ ನಡ್ಡಾ (JP Nadda) ಅವರು, 2024ರ ಲೋಕಸಭಾ ಚುನಾವಣೆಗೆ ಮುನ್ನುಡಿಯಾಗಿ ಹಲವು ಚುನಾವಣೆಗಳಿರುವ (Election) ಈ ವರ್ಷ ಪಕ್ಷದ ಪಾಲಿಗೆ ಮಹತ್ವಪೂರ್ಣದ್ದು. ಭಾರತ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿ (Economy) ಬೆಳೆದಿದೆ. ಮೊಬೈಲ್‌ ಫೋನ್‌ಗಳ ಉತ್ಪಾದನೆಯಲ್ಲಿ 2ನೇ ಅತಿದೊಡ್ಡ ದೇಶವಾಗಿದೆ. ಅಲ್ಲದೇ ಬಡವರ ಸಬಲೀಕರಣದ ಪರವಾಗಿಯೂ ಸರ್ಕಾರ ಕೆಲಸ ಮಾಡುತ್ತಿದೆ. ಹಾಗಾಗಿ ಮುಂದಿನ ಚುನಾವಣೆಗಳಲ್ಲಿ ಪಕ್ಷ ಸೋಲದಂತೆ ನೋಡಿಕೊಳ್ಳಬೇಕು ಎಂದು ಕರೆ ನೀಡಿದರು.

ಪ್ರಧಾನಿ ಮೋದಿಯಿಂದ ಮೆಗಾ ರೋಡ್‌ಶೋ: ದೆಹಲಿಯಲ್ಲಿ 2 ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಆರಂಭ

ಗೆಲ್ಲಲು ಪಣ- 9 ಗೊತ್ತುವಳಿ:

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ವಿರುದ್ಧ ಪ್ರತಿಪಕ್ಷಗಳು ಬಳಸುತ್ತಿರುವ ಭಾಷೆಯನ್ನು ರಾಜಕೀಯ ಗೊತ್ತುವಳಿಯಲ್ಲಿ ಖಂಡಿಸಲಾಗಿದೆ ಹಾಗೂ ವಿಪಕ್ಷಗಳು ಸರ್ಕಾರದ ಎಲ್ಲ ಯೋಜನೆಗಳ ವಿರುದ್ಧ ಋುಣಾತ್ಮಕ ಪ್ರಚಾರ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ. ಇದೇ ವೇಳೆ, ಕರ್ನಾಟಕ ಸೇರಿ 9 ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಗಳನ್ನು ಗೆಲ್ಲುವ ಸಂಕಲ್ಪ ತೊಡಲಾಗಿದೆ. ಗೊತ್ತುವಳಿಯನ್ನು ಕೇಂದ್ರ ಸಚಿವ ಕಿರಣ್‌ ರಿಜಿಜು ಮಂಡಿಸಿದರು. ಕರ್ನಾಟಕದ ಸಚಿವ ಗೋವಿಂದ ಕಾರಜೋಳ ಅನುಮೋದಿಸಿದರು.

ಗುಜರಾತ್‌ ಚುನಾವಣೆಯಲ್ಲಿ ಬಿಜೆಪಿ 182 ಸೀಟು ಪೈಕಿ 150ರಲ್ಲಿ ಗೆದ್ದಿದ್ದು ಅಭೂತಪೂರ್ವ ಸಾಧನೆ. ಇದು ಖಂಡಿತವಾಗಿಯೂ 2024ರ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಹಿಮಾಚಲ ಪ್ರದೇಶದಲ್ಲಿ ಸೋತರೂ ಬಿಜೆಪಿ ಮತಗಳಿಕೆ ಕಾಂಗ್ರೆಸ್‌ಗಿಂತ ಕೇವಲ ಶೇ.1ರಷ್ಟುಕಡಿಮೆ ಇದೆ. ಇಂದು ಆಡಳಿತ ವಿರೋಧಿ ಅಲೆ ಹೋಗಿ ಆಡಳಿತ ಪರ ಅಲೆ ಬಂದಿದೆ. ಈ ವರ್ಷ ನಡೆಯುವ ಎಲ್ಲ 9 ವಿಧಾನಸಭೆ ಚುನಾವಣೆಗಳಲ್ಲಿ ಪಕ್ಷ ಗೆಲ್ಲಬೇಕು ಎಂಬ ಅಂಶ ಗೊತ್ತುವಳಿಯಲ್ಲಿ ಇವೆ.

ಮುಂದಿನ 30 ರಿಂದ 40 ವರ್ಷ ಬಿಜೆಪಿ ಯುಗ, ಅಮಿತ್ ಶಾ ವಿಶ್ವಾಸ!

ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷರ ಜತೆ ನಡೆಸಿದ ಶಾಂತಿ ಮಾತುಕತೆ, ಬಾಲಿ ಜಿ-20 ಶೃಂಗದ ಯಶಸ್ಸಿಗೆ ಮೋದಿ ಕೊಡುಗೆ ಮೊದಲಾದವನ್ನು ಶ್ಲಾಘಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದಯಮಾಡಿ ಅರ್ಥ ಮಾಡಿಕೊಳ್ಳಿ ತಪ್ಪು ತಿಳಿಯಬೇಡಿ: ಸೋದರನ ಪೋಸ್ಟ್‌ಗೆ ಹೆಬ್ಬಾಳ್ಕರ್ ಪ್ರತಿಕ್ರಿಯೆ
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ