
ಬೆಂಗಳೂರು (ಜ.17): ‘ಬೆಲೆಯೇರಿಕೆಯಿಂದ ತತ್ತರಿಸಿರುವ ಜನರಿಗೆ ಆಸರೆಯಾಗಲು ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಪ್ರತಿ ಮನೆಯ ಮನೆಯೊಡತಿಗೆ ತಿಂಗಳಿಗೆ 2 ಸಾವಿರ ರು.ಗಳಂತೆ ವರ್ಷಕ್ಕೆ 24 ಸಾವಿರ ರು. ಸಹಾಯಧನ ನೀಡುತ್ತೇವೆ. ಇದು ನಾನು ಹಾಗೂ ಸಿದ್ದರಾಮಯ್ಯ ಅವರು ಮಾಡುತ್ತಿರುವ ಪ್ರತಿಜ್ಞೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ನಾ ನಾಯಕಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ‘ನಾ ನಾಯಕಿ’ ಕಾರ್ಯಕ್ರಮದ ಮೂಲಕ ದೇಶದ ಮಹಿಳೆಯರಿಗೆ ಶಕ್ತಿ ತುಂಬಲು ಹಾಗೂ ಅವರ ಧ್ವನಿಯಾಗಲು ಪ್ರಿಯಾಂಕಾ ಗಾಂಧಿ ರಾಜ್ಯಕ್ಕೆ ಬಂದಿದ್ದಾರೆ.
ಅವರ ಮುಂದೆ ನಾವು ಲಿಖಿತವಾಗಿ ಸಹಿ ಹಾಕಿ ಮಾತು ಕೊಡುತ್ತಿದ್ದೇವೆ. ನಾವು ಅಧಿಕಾರಕ್ಕೆ ಬಂದರೆ ರಾಜ್ಯದ ಎರಡನೇ ಭರವಸೆ (ಗ್ಯಾರಂಟಿ ನಂ.2) ಆಗಿರುವ ‘ಗೃಹ ಲಕ್ಷ್ಮೀ ಯೋಜನೆ’ ಜಾರಿಗೆ ತರುತ್ತೇವೆ ಎಂದು ಹೇಳಿದರು. ರಾಜ್ಯದಲ್ಲಿ ಒಂದೂವರೆ ಕೋಟಿ ಕುಟುಂಬಗಳಿಗೆ ಈ ಯೋಜನೆಯ ಲಾಭ ಉಂಟಾಗಲಿದೆ. ಗ್ಯಾಸ್ ಬೆಲೆ ಏರಿಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯಂತಹ ಸಮಸ್ಯೆಗಳಿಂದ ನರಳುತ್ತಿರುವ ಮಹಿಳೆಯರಿಗೆ ಯೋಜನೆ ನೆರವಾಗಲಿದೆ ಎಂದರು. ಪ್ರಿಯಾಂಕಾ, ನೆಹರೂ ಮರಿಮಗಳು, ದೇಶದ ಉಕ್ಕಿನ ಮಹಿಳೆ ಇಂದಿರಾಗಾಂಧಿ ಮೊಮ್ಮಗಳು ಮಾತ್ರವಲ್ಲ.
ಕೊರೋನಾ ಕಾಲದಲ್ಲಿ ಸರ್ಕಾರಿ ನೌಕರರ ಸೇವೆ ಶ್ಲಾಘನೀಯ: ಡಿ.ಕೆ.ಶಿವಕುಮಾರ್
ದೇಶದ ಹಿತಕ್ಕಾಗಿ ಪ್ರಧಾನಿ ಹುದ್ದೆ ತ್ಯಾಗ ಮಾಡಿದ ಸೋನಿಯಾಗಾಂಧಿ ಪುತ್ರಿಯೂ ಹೌದು. ರಾಜ್ಯದಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರಲ್ಲಿನ ನಾಯಕತ್ವ ಗುಣ ಬೆಳಕಿಗೆ ತರಲು ‘ನಾ ನಾಯಕಿ’ ಕಾರ್ಯಕ್ರಮ ರೂಪಿಸಿದ್ದೇವೆ. ಮಹಿಳೆಯರಿಗೆ ಪೂರ್ಣ ಪ್ರಮಾಣದ ಸಾಮರ್ಥ್ಯ ಬೆಳೆಸಿಕೊಳ್ಳಲು ಅನುವು ಮಾಡಿಕೊಡಬೇಕು. ಇದನ್ನು ಕಲ್ಪಿಸಿದ ಕ್ಷಣದಿಂದ ಆಕೆ ಶಿಕ್ಷಕಿ ಪಾತ್ರ ವಹಿಸುತ್ತಾಳೆ. ಆಕೆ ಉತ್ತಮ ಪತ್ನಿ ಹಾಗೂ ತಾಯಿಯಾಗಿರುತ್ತಾಳೆ. ಅವಳೇ ‘ನಾ ನಾಯಕಿ’ ಎಂದು ಕಾರ್ಯಕ್ರಮದ ಉದ್ದೇಶ ಎಂದರು. ಹೆಣ್ಣು ಕುಟುಂಬದ ಕಣ್ಣು, ಹೆಣ್ಣು ದೇಶದ ಶಕ್ತಿ. ಮಹಿಳೆಯರು ಯುವಕರಿಗೆ ಶಕ್ತಿ ತುಂಬಿದರೆ ದೇಶದಲ್ಲಿ ಬದಲಾವಣೆ ಖಂಡಿತವಾಗಿಯೂ ಆಗುತ್ತದೆ.
ಪ್ರಕರಣಗಳಿಗೆ ಹೆದರದೆ ಹೋರಾಟ ಮುಂದುವರೆಸಿದ್ದೇವೆ: ಡಿ.ಕೆ.ಶಿವಕುಮಾರ್
ಮಹಿಳೆಯರು ಪ್ರಸ್ತುತ ಬೆಲೆಯೇರಿಕೆ, ಭ್ರಷ್ಟಾಚಾರಕ್ಕೆ ಕಾರಣವಾಗಿರುವ ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆಯಲು ತೀರ್ಮಾನಿಸಿದ್ದಾರೆ ಎಂದು ಹೇಳಿದರು. ಮಾಜಿ ಸಚಿವರಾದ ಉಮಾಶ್ರೀ ಮಾತನಾಡಿ, ‘ನಾ ನಾಯಕಿ’ ಎಂಬುದು ಶಿವಕುಮಾರ್ ಪರಿಕಲ್ಪನೆಯಿಂದ ಮೂಡಿ ಬಂದ ಕಾರ್ಯಕ್ರಮ. ದೇಶದಲ್ಲಿರುವ ಮೋದಿ ಸರ್ಕಾರ ಹಾಗೂ ರಾಜ್ಯದಲ್ಲಿರುವ ಭ್ರಷ್ಟಬಿಜೆಪಿಯ ಸರ್ಕಾರವನ್ನು ಕಿತ್ತೊಗೆಯಬೇಕು. ಇಲ್ಲಿ ಬಂದಿರುವ ಎಲ್ಲ ನಾಯಕಿಯರು ನಿಮ್ಮ ಹಳ್ಳಿಗಳಲ್ಲಿ ಹೋಗಿ ನಿಮ್ಮ ಬದುಕಿನಲ್ಲಿ ಬೆಲೆ ಏರಿಕೆ, ಮಕ್ಕಳ ನಿರುದ್ಯೋಗ ಸಮಸ್ಯೆ, ಮಹಿಳೆಯರ ಮೇಲಿನ ದೌರ್ಜನ್ಯದಿಂದ ಆಗಿರುವ ಅನಾನುಕೂಲ ನೆನೆದು ಬಿಜೆಪಿ ಸರ್ಕಾರ ಕಿತ್ತೊಗೆಯಲು ಪ್ರತಿಜ್ಞೆ ಮಾಡಬೇಕು ಎಂದು ಕರೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.