ಹೊಸ ಬಾರ್‌ಗೆ ಲೈಸೆನ್ಸ್ ಕೊಡುವ ಯಾವ ವಿಚಾರವೂ ಸದ್ಯ ಸರ್ಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಮೈಸೂರು (ಅ.08): ಹೊಸ ಬಾರ್‌ಗೆ ಲೈಸೆನ್ಸ್ ಕೊಡುವ ಯಾವ ವಿಚಾರವೂ ಸದ್ಯ ಸರ್ಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹೊಸ ಬಾರ್‌ಗಳಿಗೆ ಲೈಸೆನ್ಸ್ ಕೊಡುವ ನಿರ್ಧಾರವಂತೂ ಸರ್ಕಾರ ತೆಗೆದುಕೊಂಡಿಲ್ಲ ಎಂದರಲ್ಲದೆ, ಇನ್ನು ಈ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಲ್ಲೂ ಕೂಡ ಹೊಸ ಲೈಸೆನ್ಸ್ ಕೊಡುತ್ತೇವೆ ಎಂದು ಹೇಳಿಲ್ಲ ಎಂದೂ ಪ್ರತಿಪಾದಿಸಿದರು. ಸದ್ಯಕ್ಕೆ ಆ ವಿಚಾರದಲ್ಲಿ ಯಾವುದೇ ಚರ್ಚೆಗಳೂ ಅನವಶ್ಯ. ರಾಜ್ಯದ ಜನರ ಭಾವನೆಗಳನ್ನು ನಾವು ಕೇಳಬೇಕಿದೆ. ಹಾಗಾಗಿ ನಾನು ಸ್ಪಷ್ಟವಾಗಿ ಹೇಳುತ್ತಿ ದ್ದೇನೆ ಹೊಸ ಬಾರ್‌ಗೆ ಲೈಸೆನ್ಸ್ ನೀಡುವ ನಿರ್ಧಾರವಿಲ್ಲ ಎಂದು ಖಚಿತವಾಗಿ ಹೇಳಿದರು.
ಹೊಸ ಮದ್ಯದಂಗಡಿಗೆ ಅನುಮತಿ ಬೇಸರ ತಂದಿತ್ತು: ರಾಜ್ಯದಲ್ಲಿ ಹೊಸ ಮದ್ಯದಂಗಡಿಗಳಿಗೆ ಅನುಮತಿ ಇಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದರಿಂದ ನಾನು ಇವತ್ತಿನ ಗಾಂಧಿಸ್ಮೃತಿ, ಮದ್ಯ ವ್ಯಸನಮುಕ್ತ ಸಾಧಕರ ಸಮಾವೇಶಕ್ಕೆ ಬಂದಿದ್ದೇನೆ, ಇಲ್ಲದಿದ್ದರೆ ಬರುತ್ತಿರಲಿಲ್ಲ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಮದ್ಯ ವ್ಯಸನ ಮುಕ್ತ ಜಾಗೃತಿ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಹೊಸ ಮದ್ಯದಂಗಡಿಗಳಿಗೆ ಸರ್ಕಾರ ಅನುಮತಿ ಎಂದು ಮಾಧ್ಯಮಗಳಲ್ಲಿ ಪ್ರಸಾರ ಕಂಡು ನಿಜಕ್ಕೂ ವೈಯಕ್ತಿಕವಾಗಿ ನೋವಾಗಿತ್ತು.
ಏಕೆಂದರೆ ಈಗಾಗಲೇ ಬರದಿಂದ ರೈತರು ಕಂಗಲಾಗಿದ್ದಾರೆ, ಇನ್ನೂ ಪ್ರತಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಮದ್ಯದಂಗಡಿಗೆ ಪರವಾನಗಿ ನೀಡಿದರೆ ಮಹಿಳೆಯರು ಗ್ರಾಮದೊಳಗೆ ಸೇರಿಸುತ್ತಿರಲಿಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿತ್ರದುರ್ಗದಲ್ಲಿ ಶುಕ್ರವಾರ ಹೊಸ ಮದ್ಯದಂಗಡಿಗಳಿಗೆ ಪರವಾನಗಿ ಕೊಡುವುದಿಲ್ಲ ಎಂದು ಹೇಳಿದ್ದರಿಂದ ನಾನು ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ ಎಂದು ಶಾಸಕರು ಹೇಳಿದರು. ಮದ್ಯ ವ್ಯಸನಿಗಳಿಗೆ ಜಾಗೃತಿ ಮೂಡಿಸಿ ಶಿಬಿರಗಳ ಮೂಲಕ ಮದ್ಯಪಾನ ಮುಕ್ತರಾಗಿ ಮಾಡುತ್ತಿರುವ ಡಾ. ವೀರೇಂದ್ರ ಹೆಗ್ಗಡೆಯವರಿಗೆ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಶಾಮನೂರು ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಉತ್ತರಿಸಲಿ: ಬೊಮ್ಮಾಯಿ
ಖಾಸಗಿ ಬಸ್ ನಿಲ್ದಾಣದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಹಿರೇಕಲ್ಮಠದವರೆಗೂ ಮಹಿಳೆಯರು ಮದ್ಯವ್ಯಸನ ಮುಕ್ತ ಘೋಷಣೆಗಳ ಕೂಗಿ ಜಾಗೃತಿ ಜಾಥಾ ನಡೆಸಿದರು. ಯೋಜನಾಧಿಕಾರಿಗಳಾದ ಬಾಬು, ನವೀನ್, ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಹೊಸಕೇರಿ ಸುರೇಶ್,ಕುಮಾರಸ್ವಾಮಿ,ಕತ್ತಿಗೆ ನಾಗರಾಜ,ಬಸವರಾಜು, ಇತರರಿದ್ದರು.