ಮುಸ್ಲಿಂ ಸಮುದಾಯದವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಂಬಿಕೊಂಡು ಬಂದವರು. ಸಮುದಾಯ ಅವರ ಮೇಲೆ ವಿಶ್ವಾಸ ಇಟ್ಟುಕೊಂಡಿದೆ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅಭಿಪ್ರಾಯಪಟ್ಟಿದ್ದಾರೆ.
ಗಂಗಾವತಿ (ಅ.08): ಮುಸ್ಲಿಂ ಸಮುದಾಯದವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಂಬಿಕೊಂಡು ಬಂದವರು. ಸಮುದಾಯ ಅವರ ಮೇಲೆ ವಿಶ್ವಾಸ ಇಟ್ಟುಕೊಂಡಿದೆ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅಭಿಪ್ರಾಯಪಟ್ಟಿದ್ದಾರೆ. ತಮ್ಮ ನಿವಾಸದಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮುಸ್ಲಿಂ ಸಮುದಾಯದ ನಾಯಕರಾಗಿದ್ದಾರೆ ಎಂದು ಹೇಳಿದರು. ರಾಜ್ಯದಲ್ಲಿ ಸಿದ್ದರಾಮಯ್ಯಗೆ ಮುಸ್ಲಿಂ ಸಮುದಾಯದವರು ಶೇ.88ರಷ್ಟು ಬೆಂಬಲ ವ್ಯಕ್ತಪಡಿಸಿದ್ದಾರೆ.
ಅವರು ಸಮುದಾಯದ ನಾಯಕರಾಗಿದ್ದಾರೆ. ಅವರು ಅಭಿವೃದ್ಧಿ ಕಡೆಗೆ ಚಿಂತನೆ ಮಾಡುವ ನಾಯಕರು ಎಂದು ಪ್ರಶಂಸಿದರು. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅಧಿಕಾರಕ್ಕೆ ಬಂದು ಮೂರೇ ತಿಂಗಳಲ್ಲಿ ಮಹಿಳೆಯರಿಗೆ, ಹಿಂದುಳಿದ ವರ್ಗದ ಜನರಿಗೆ ಯೋಜನೆ ಜಾರಿಗೆ ತಂದಿರುವ ನಿದರ್ಶನಗಳಿವೆ ಎಂದರು. ಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೇ ರಾಜ್ಯದಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಲ್ಲಿ ಸಂಸದರು ಆಯ್ಕೆಯಾಗುತ್ತಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದರು.
undefined
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ರಾಜಕೀಯವಾಗಿ ಸೋಲಿಸಿದರೆ ಅನ್ಸಾರಿ ಇತಿಹಾಸ ಮುಗಿಯುತ್ತದೆ ಎಂದು ಪಕ್ಷದ ಕೆಲ ವಿರೋಧಿಗಳು ಅರಿತುಕೊಂಡಿದ್ದರು. ತಾವು ಸೋತರೂ ರಾಜಕೀಯವಾಗಿ ನನ್ನ ಜೀವನ ಇರುವವರಿಗೂ ಮುನ್ನಡೆಯುತ್ತದೆ ಎಂದು ವಿರೋಧಿಗಳಿಗೆ ಸವಾಲು ಹಾಕಿದರು. ರಾಜಕೀಯ ಎಂದರೆ ಕೇವಲ ಅಧಿಕಾರ, ಹಣವಲ್ಲ, ಜನ ಸೇವೆ ಮಾಡುತ್ತಾ ಬಂದಿದ್ದೇನೆ. ಅಧಿಕಾರ ಇರುತ್ತೇ, ಹೋಗುತ್ತದೆ. ಅದಕ್ಕೆ ನಾನು ತಲೆ ಕೆಡಿಸಿಕೊಳ್ಳುವವನಲ್ಲ ಎಂದರು.
ಶಾಮನೂರು ಸತ್ಯವನ್ನೇ ಹೇಳಿದ್ದಾರೆ, ರಾಜ್ಯ ಸರ್ಕಾರ ಚಿಂತಿಸಲಿ: ಜೋಶಿ
ಗಂಗಾವತಿ ನಗರದಲ್ಲಿ ಕೋಮು-ಸೌಹಾರ್ದ ಮುಖ್ಯ. ಎಲ್ಲರೂ ಶಾಂತಿ ಕಾಪಾಡಬೇಕು ಎಂದರು. ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಅಮರೇಶ ಗೋನಾಳ್, ವಿಠಾಲಾಪುರ ಯಮನಪ್ಪ, ಕೃಷ್ಣಪ್ಪನಾಯಕ, ಎಸ್.ಬಿ. ಖಾದ್ರಿ, ನಗರಸಭಾ ಸದಸ್ಯ ಮನೋಹರಸ್ವಾಮಿ ಹಿರೇಮಠ, ವಿಷ್ಣುತೀರ್ಥ ಜೋಷಿ, ವಿಶ್ವನಾಥ ಪಾಟೀಲ್ ಕೇಸರಹಟ್ಟಿ ಸೇರಿದಂತೆ ಹಲವರು ಇದ್ದರು.