
ಬೆಂಗಳೂರು(ಆ.17): ‘ನಮ್ಮ ಮೇಲೆ ಆರೋಪ ಮಾಡುವವರು ಯಾರಾರಯರು ಏನೆಲ್ಲಾ ಹೇಳಬೇಕೋ ಹೇಳಲಿ. ಅವರದ್ದು ಏನಿದೆಯೋ ಎಲ್ಲವೂ ಹೊರಬರಲಿ. ಅವರ ಮಾತು ಮುಗಿದ ಬಳಿಕ ನಮ್ಮ ಬಳಿಕ ಇರುವುದನ್ನು ಬಯಲು ಮಾಡುತ್ತೇವೆ. ಸದ್ಯದಲ್ಲೇ ತಕ್ಕ ಉತ್ತರ ಕೊಡುತ್ತೇವೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾಜಿ ಸಚಿವರಾದ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಹಾಗೂ ಆರ್. ಅಶೋಕ್ ಅವರ ಆರೋಪಗಳಿಗೆ ಈ ರೀತಿ ಟಾಂಗ್ ನೀಡಿದರು.
‘ನಮ್ಮ ಬಳಿ ಇರುವ ಮಾಹಿತಿ ಬಹಿರಂಗ ಪಡಿಸಲು ಸಾಕಷ್ಟುಸಮಯವಿದೆ. ನಮ್ಮ ಬಗ್ಗೆ ತುಂಬಾ ಚರ್ಚೆ ನಡೆಸುತ್ತಿದ್ದಾರೆ. ಯಾರಾರಯರು ಏನೇನು ಮಾತನಾಡಬೇಕೋ ಎಲ್ಲವೂ ಮುಗಿಯಲಿ. ಅವರಿಗೆಲ್ಲರಿಗೂ ಉತ್ತರ ನೀಡುವ ಕಾಲ ಸಮೀಪಿಸಿದೆ, ಉತ್ತರ ನೀಡೋಣ’ ಎಂದು ಹೇಳಿದರು.
ನಾನು ಸಂಘದ ಸ್ವಯಂ ಸೇವಕ, ಡಿಕೆಶಿ ಕೊತ್ವಾಲ್ ರಾಮಚಂದ್ರನ ಶಿಷ್ಯ: ಸಿ.ಟಿ ರವಿ
ಕಾಮಗಾರಿಗಳು ಆಗದೆಯೇ ಬಿಲ್ ನೀಡಲು ಆಗುವುದಿಲ್ಲ. ಜನರಿಗೆ ನಾವು ಜವಾಬ್ದಾರರಾಗಿರಬೇಕು. ಹಿಂದಿನ ಸರ್ಕಾರದ ಭ್ರಷ್ಟಾಚಾರದ ವಿರುದ್ಧವಾಗಿಯೇ ಜನರು ನಮಗೆ ಅಧಿಕಾರ ನೀಡಿದ್ದಾರೆ. ಹೀಗಾಗಿ ಯಾವ ಗುತ್ತಿಗೆದಾರರು ಕೆಲಸ ಮಾಡಿದ್ದಾರೋ ಅವರಿಗೆ ಬಿಲ್ ಪಾವತಿಯಾಗಲಿದೆ. ಈ ವಿಚಾರದಲ್ಲಿ ಯಾರೂ ಆತುರಪಡಬಾರದು. ಯಾರಾರಯರು ಅಕ್ರಮಗಳನ್ನು ಮಾಡಿದ್ದಾರೋ ಅದೆಲ್ಲವೂ ಹೊರಗೆ ಬರಲೇಬೇಕು ಎಂದು ಪರೋಕ್ಷ ಎಚ್ಚರಿಕೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.