ಬುಲ್‌ ಬುಲ್ ಪಕ್ಷಿ ಮೇಲೆ ಸಾವರ್ಕರ್ ಸವಾರಿ: ಸ್ಪಷ್ಟನೆ ಕೊಟ್ಟ ಸಿಟಿ ರವಿ

By Ramesh BFirst Published Aug 29, 2022, 6:08 PM IST
Highlights

ಪಠ್ಯ ಪುಸ್ತಕದಲ್ಲಿ ಸಾವರ್ಕರ್ ಬುಲ್ ಬುಲ್ ಪಕ್ಷಿ ಮೇಲೆ ಕುಳಿತು ಅಂಡಮಾನ ಜೈಲಿನಿಂದ ಭಾರಕ್ಕೆ ಬಂದಿದ್ರು ಉಲ್ಲೇಖವಾಗಿದ್ದು, ಇದೀಗ ಇದೀ ಭಾರೀ ಸದ್ದು ಮಾಡುತ್ತಿದೆ. ಇನ್ನು ಬಗ್ಗೆ ಸಿಟಿ ರವಿ ಹೇಳಿದ್ದಿಷ್ಟು.

ಬೆಂಗಳೂರು, (ಆಗಸ್ಟ್.29) :  ಪುಸ್ತಕದಲ್ಲಿ ವೀರ್ ಸಾವರ್ಕರ್ ಅವರ ಪಾಠದಲ್ಲಿ ಬುಲ್ ಬುಲ್ ಪಕ್ಷಿಯ ಮೂಲಕ ಅಂಡಮಾನ್ ಜೈಲಿನಿಂದ ಭಾರತಕ್ಕೆ ಹಾರಿ ಬರುತ್ತಿದ್ದರು ಎನ್ನುವ ಅಂಶ ಬಹಳ ಚರ್ಚೆಗೆ ಗ್ರಾಸವಾಗಿದೆ. 

ಅಂಡಮಾನ್​ ಜೈಲಿನಿಂದ ಬುಲ್​ ಬುಲ್ ಪಕ್ಷಿಯ ಮೇಲೆ ಕುಳಿತು ವೀರ ಸಾವರ್ಕರ್ ತಾಯ್ನಾಡನ್ನು ಸಂದರ್ಶಿಸಿ ಬರುತ್ತಿದ್ದರು ಅಂತಾ ಬರೆಯಲಾಗಿದೆ ಎಂದು 8ನೇ ತರಗತಿಯ ಪುಸ್ತಕದ ಪಠವೊಂದಲ್ಲಿ ಇದೆ. ಈ ಬಗ್ಗೆ ಸಾಮಾಜಿ ಜಾಲತಾಣಗಲ್ಲಿ ಟ್ರಾಲ್ ಮಾಡಲಾಗುತ್ತಿದೆ.
 
ಇನ್ನು ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬೆಂಗಳೂರಿನಲ್ಲಿ ಇಂದು(ಸೋಮವಾರ) ಸುದ್ದಿಗಾರರೊಂದಿಗೆ ಮಾತನಾಡಿದ್ದು, ವೀರ್ ಸಾವರ್ಕರ್  ಬುಲ್ ಬುಲ್ ಪಕ್ಷಿಯ ಮೂಲಕ ಅಂಡಮಾನ್ ಜೈಲಿನಿಂದ ಭಾರತಕ್ಕೆ ಹಾರಿದ್ದರು ಎನ್ನುವುದರ ಬಗ್ಗೆ ಅಭಿಪ್ರಾಯ ತಿಳಿಸಿದ್ದಾರೆ.

'ಗೋಮೂತ್ರ ಕುಡಿಯುವವರ ಬುದ್ದಿ ಹತ್ಯೆಯಾಗಿದೆ ಎಂದಿದ್ದ ಸಾವರ್ಕರ್!'

ವಿಚಾರಕ್ಕೆ ಪ್ರತಿಕ್ರಿಯಿಸಿ, ಮನೋವಿಜ್ಞಾನ ಅಂತ ಒಂದಿದೆ. ಒಬ್ಬ ಜೈಲಿನಲ್ಲಿದ್ದ ರಾಜಕೀಯ ಕೈದಿ ತಾನು ನೇರವಾಗಿ ತನ್ನ ದೇಶಕ್ಕೆ ಹೋಗಲು ಸಾಧ್ಯವಾಗದಿದ್ದಾಗ ಭಾವನೆಯನ್ನು ದೇಶದ ಒಳಗಿನ ಸಂಬಂಧವನ್ನು ಅಲ್ಲಿ ವ್ಯಕ್ತಪಡಿಸಲಾಗಿದೆ. ನಾವು ಇಲ್ಲಿದ್ದರೂ ಮನಸ್ಸಿನ ಮೂಲಕ, ಭಾವನೆಗಳ ಮೂಲಕ ವಿಹರಿಸಿ ಬರಬಹುದು. ತಾಂತ್ರಿಕವಾಗಿ, ವಿಪರೀತ ಅರ್ಥದಲ್ಲಿ ನೋಡಲು ಹೋಗಬೇಡಿ ಸ್ಪಷ್ಟಪಡಿಸಿದರು.

ಕೆಲವರು ಭಾರತದಲ್ಲೇ ಇದ್ದಾರೆ. ಆದರೆ ಭಾರತೀಯತೆಯೇ ಇರುವುದಿಲ್ಲ. ಸಾವರ್ಕರ್ ಅವರು ಬ್ರಿಟಿಷರೊಂದಿಗೆ ರಾಜಿ ಮಾಡಿಕೊಂಡಿರಲಿಲ್ಲ. ರಾಜಿ ಮಾಡಿಕೊಂಡಿದ್ದರೆ ಪುಸ್ತಕ ಬರೆಯಲು ಅವಕಾಶವೂ ಸಿಗುತ್ತಿತ್ತು. ಡಿಸ್ಕವರಿ ಆಫ್ ಇಂಡಿಯಾ ಬರೆಯಲು ಅವಕಾಶ ಸಿಗುತ್ತಿತ್ತು. ಲಾರ್ಡ್ ಮೌಂಟ್ ಬ್ಯಾಟನ್ ಪತ್ನಿಯ ಹೆಗಲ ಮೇಲೆ ಕೈ ಹಾಕುವ ಅವಕಾಶವೂ ಸಿಗುತ್ತಿತ್ತು. ಆ ಅವಕಾಶ ಸಿಗಲಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್‌ಗೆ ತಿವಿದರು.

ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ
ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ವಿಚಾರಕ್ಕೆ ಸಮಬಂಧಿಸಿ ಪ್ರತಿಕ್ರಿಯಿಸಿ,ನನ್ನಂತಹ ಕಾರ್ಯಕರ್ತರ ಭಾವನೆಗಳನ್ನು ಗೌರವಿಸಿಯೇ ಸರಕಾರ ಆನಂದ ಪಡಲು ಅವಕಾಶ ಮಾಡಿ ಕೊಡುತ್ತದೆ. ಹಿಂದೂ, ಮುಸ್ಲಿಂ, ಕ್ರೈಸ್ತ ಎಲ್ಲರಿಗೂ ಆನಂದ ಪಡಲು ಅವಕಾಶ ಮಾಡಿ ಕೊಡುತ್ತದೆ ಎಂದರು.

ಹಿಂದೆ ಕೋರ್ಟ್ ನಮಾಜ್ ಮಾಡಲು ಅವಕಾಶ ಕೊಟ್ಟಾಗ ಸಂಭ್ರಮಿಸಿದವರು ಈಗ ಗಣೇಶೋತ್ಸವ ಮಾಡಲು ಅವಕಾಶ ಮಾಡಿ ಕೊಟ್ಟಿರುವುದನ್ನೂ ಸ್ವೀಕರಿಸಬೇಕಲ್ಲವೇ. ಇನ್ನೊಬ್ಬರ ಸಂಭ್ರಮವನ್ನು ಸ್ವೀಕರಿಸುವುದು ನಿಜಾರ್ಥದಲ್ಲಿ ಧರ್ಮ ಅಲ್ಲವೇ ಎಂದು ಟಾಂಗ್ ಕೊಟ್ಟರು.

ಮುರುಘಾ ಶ್ರೀ ಕೇಸ್‌ ಬಗ್ಗೆ ಅಭಿಪ್ರಾಯ
ನದಿ ಮೂಲ, ಋಷಿ ಮೂಲ, ಡ್ಯಾಶ್ ಮೂಲ ಕೆದಕಲು ಹೋಗಬಾರದು ಎಂಬ ಹಳೆಯ ಗಾದೆ ಮಾತಿದೆ ಅದರ ಹಾಗೆ ಮುರುಘಾ ಶ್ರೀಗಳ ಮೇಲಿನ ಆರೋಪದ ಕುರಿತು ನಾನು ಹೆಚ್ಚೇನೂ ಮಾತನಾಡಲು ಹೋಗುವುದಿಲ್ಲ. ತನಿಖೆಗೆ ಮೊದಲೇ ಅಪರಾಧದ ಹಣೆ ಪಟ್ಟಿ ಕಟ್ಟಲು ಬರುವುದಿಲ್ಲ, ನಿರಪರಾಧಿ ಎಂದು ಹೇಳಲೂ ಆಗುವುದಿಲ್ಲ. ಸ್ವಾಮೀಜಿ ಮೂರು ದಶಕಗಳಿಂದ ದುರ್ಬಲ ವರ್ಗದವರ ಸೇವೆ ಮಾಡುತ್ತಾ ಬಂದಿದ್ದಾರೆ. ಆಳಿ ನಿಂದ ಹಿಡಿದು ಅರಸನವರೆಗೆ ಎಲ್ಲರಿಗೂ ಈ ನೆಲದ ಕಾನೂನು ಒಂದೇ, ಈ ವಿಷಯದಲ್ಲಿ ನಾವು ಯಾವುದೇ ಹೇಳಿಕೆ ಕೊಟ್ಟರೂ ತಪ್ಪು ಅರ್ಥ ಬರುತ್ತದೆ. ನಾನು ಹೆಚ್ಚೇನೂ ಹೇಳುವುದಿಲ್ಲ ಎಂದು ಸ್ಪಷ್ಟಪಡಿಸಿರು.
 

click me!