ಬಿಜೆಪಿಯವರೆ ನಿಮ್ಮ ಹತ್ತಿರ ಇದೆಯಾ ಉತ್ತರ? ಕಾಂಗ್ರೆಸ್ ನಿಂದ ಅಭಿಯಾನ

Published : Aug 29, 2022, 01:07 PM IST
ಬಿಜೆಪಿಯವರೆ ನಿಮ್ಮ ಹತ್ತಿರ ಇದೆಯಾ ಉತ್ತರ? ಕಾಂಗ್ರೆಸ್ ನಿಂದ ಅಭಿಯಾನ

ಸಾರಾಂಶ

ಬಿಜೆಪಿ ತನ್ನ 90% ಭರವಸೆಗಳನ್ನು ಈಡೇರಿಸಲು ವಿಫಲವಾಗಿದೆ ಎಂಬ ವಿಚಾರ ಇಟ್ಟುಕೊಂಡು ಕಾಂಗ್ರೆಸ್  ಜನಜಾಗೃತಿಗೆ ಮುಂದಾಗಿದೆ. "90% ವಂಚನೆ ವಂಚನೆ" ಎಂಬ ಘೋಷವಾಕ್ಯದಡಿ ಬಿಜೆಪಿ ನಿಮ್ಮ ಹತ್ತಿರ ಇದೆಯಾ ಉತ್ತರ? ಎಂದು ಕಾಂಗ್ರೆಸ್  ಪ್ರಶ್ನೆ ಮಾಡುತ್ತಿದೆ.  

ಬೆಂಗಳೂರು (ಆ.29) ಬಿಜೆಪಿ ತನ್ನ 90% ಭರವಸೆಗಳನ್ನು ಈಡೇರಿಸಲು ವಿಫಲವಾಗಿದೆ ಎಂಬ ವಿಚಾರ ಇಟ್ಟುಕೊಂಡು ಕಾಂಗ್ರೆಸ್  ಜನಜಾಗೃತಿಗೆ ಮುಂದಾಗಿದೆ. ಬಿಜೆಪಿ ನಿಮ್ಮ ಹತ್ತಿರ ಇದೆಯಾ ಉತ್ತರ? ಎಂದು ಕಾಂಗ್ರೆಸ್  ಪ್ರಶ್ನೆ ಮಾಡುತ್ತಿದೆ. ಬಿಜೆಪಿಯ 2018ರ ಪ್ರಣಾಳಿಕೆಯಲ್ಲಿ ನಮ್ಮ ಕರ್ನಾಟಕಕ್ಕೆ ನಮ್ಮ ವಚನ ಎಂದಿತ್ತು. ಆದರೆ ವಾಸ್ತವದಲ್ಲಿ ಅದು ವಚನ ವಂಚನೆಯಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.  ಇದು ದುರ್ಬಲ ಸಿಎಂ ನೇತೃತ್ವದ 40% ಬಿಜೆಪಿ ಸರ್ಕಾರ. ತನ್ನ 600 ಭರವಸೆಗಳಲ್ಲಿ 90% ಕ್ಕಿಂತ ಹೆಚ್ಚು ಭರವಸೆಗಳನ್ನು ಈಡೇರಿಸಲು ವಿಫಲವಾಗಿದೆ. ಮಹಿಳೆಯರಿಗೆ ನೀಡಿದ ಶೇ.90ರಷ್ಟು ಭರವಸೆಗಳನ್ನು ಈಡೇರಿಸಿಲ್ಲ. ಹಿಂದುಳಿದ ಸಮುದಾಯಗಳಿಗೆ ನೀಡಿದ್ದ 77 ಭರವಸೆಗಳನ್ನು ಈಡೇರಿಸಿಲ್ಲ. ರೈತರ ಸಾಲ ಮನ್ನಾ ಮಾಡುವಲ್ಲಿ ವಿಫಲವಾಗಿದೆ. ರೈತರಿಗೆ ನೀಡಿದ ಭರವಸೆಗಳಲ್ಲಿ ಶೇ.10 ರಷ್ಟು ಸಹ ಈಡೇರಿಸಿಲ್ಲ. ಬೆಂಗಳೂರು ಅಭಿವೃದ್ಧಿಯ 90% ಭರವಸೆಗಳನ್ನು ಈಡೇರಿಸಲು ಸಂಪೂರ್ಣ ವಿಫಲವಾಗಿದೆ. ಸರಕಾರ ಯುವಕರಿಗೆ ನೀಡಿದ್ದ 90% ಭರವಸೆಗಳನ್ನು ಈಡೇರಿಸದೆ ನಿರುದ್ಯೋಗ ಹೆಚ್ಚಳವಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್  ಬಿಜೆಪಿ‌ ಈಡೇರಿಸದ ಭರವಸೆಗಳನ್ನ ವಂಚನೆ ಎಂದು ಬಣ್ಣಿಸಿದೆ. ವಂಚನೆಗಳ್ನ ಪಟ್ಟಿಮಾಡಿ ಬಿಡುಗಡೆಗೊಳಿಸಿದೆ.

  • ರೈತರಿಗೆ ಸಾಲ ಮನ್ನಾ - ವಂಚನೆ
  • ಮಹಿಳೆಯರಿಗೆ 10000 ಕೋಟಿ ರೂ. ಸ್ತ್ರೀ ಉನ್ನತಿ ನಿಧಿ - ವಂಚನೆ
  • ಯುವ ಜನತೆಗೆ ಹೊಸ ಪಿಯುಸಿ ಕಾಲೇಜುಗಳ ನಿರ್ಮಾಣಕ್ಕೆ 1300 ಕೋಟಿ ರೂ. ಮಂಜೂರು - ವಂಚನೆ
  • ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ 4500 ಕೋಟಿ ರೂ. ವಿದ್ಯಾರ್ಥಿ ವೇತನ - ವಂಚನೆ
  • ಕನ್ನಡ ನಾಡು ನುಡಿಗೆ  ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಕಡ್ಡಾಯ - ವಂಚನೆ 

ಕಾಂಗ್ರೆಸ್ ಕೇಳಿರುವ ಪ್ರಶ್ನೆಗಳ ಸುರಿಮಳೆ ಇಲ್ಲಿದೆ

ರೈತರ ಪ್ರಶ್ನೆಗೆ ನಿಮ್ಮ ಹತ್ತಿರ ಇದೆಯಾ ಉತ್ತರ?
- ಯಾವಾಗ ಕೊಡುವಿರಿ ನಿರಂತರ ವಿದ್ಯುತ್?
- ಯಾವಾಗ ಸಿಗುತ್ತದೆ ಬೆಳೆಗಳಿಗೆ ಬೆಂಬಲ ಬೆಲೆ? * 
- ಹೈನುಗಾರಿಕೆಗೆ 3000 ಕೋಟಿ ರೂಪಾಯಿ ನಿಧಿ ಕೊಟ್ಟಿದ್ದೀರಾ?
- ಸ್ವಸಹಾಯ ಸಂಘಗಳಿಗೆ ಮತ್ತು ರೈತಸಂಘಗಳಿಗೆ ಕಡಿಮೆ ಬಡ್ಡಿದರದಲ್ಲಿ ನೀಡುವ ಸಾಲದ ಯೋಜನೆ ಏನಾಯಿತು?
- ರೈತರಿಗೆ ಕೃಷಿ ಅಧ್ಯಯನದ ಚೀನಾ ಮತ್ತು ಇಸ್ರೇಲ್ ಪ್ರವಾಸ ಯಾವಾಗ?

ಮಹಿಳೆಯರ ಪ್ರಶ್ನೆಗೆ ನಿಮ್ಮ ಹತ್ತಿರ ಇದೆಯಾ ಉತ್ತರ?
- ಏನಾಯಿತು ಮಹಿಳೆಯರ ಉಚಿತ ಸ್ಮಾರ್ಟ್ ಫೋನ್ ಯೋಜನೆ?
- ಮಹಿಳೆಯರ ರಕ್ಷಣೆಗಾಗಿ ವಿಶೇಷ ತನಿಖಾ ದಳ ರಚನೆಯ ಭರವಸೆ ಏನಾಯಿತು?
- ಮಹಿಳಾ ಉದ್ಯಮಿಗಳಿಗೆ 100 ಕೋಟಿ ರೂ. ನೀಡುವ ಭರವಸೆ ಏನಾಯಿತು?
- ಮಹಿಳೆಯರ ಆರ್ಥಿಕ ಸ್ವಾವಲಂಬನೆ ನೀಡುವ ಸ್ತ್ರೀ ಉನ್ನತಿ ಕೇಂದ್ರಗಳು ಎಲ್ಲಿದೆ? * ವಿವಾಹ ಮಂಗಳ ಯೋಜನೆಯ ಅನುಷ್ಠಾನವೆಲ್ಲಿ?

ಯುವಜನತೆಯ ಪ್ರಶ್ನೆಗೆ ನಿಮ್ಮ ಹತ್ತಿರ ಇದೆಯಾ ಉತ್ತರ?
- ಶಿಕ್ಷಣ ಸಂಸ್ಥೆಗಳ 57, 000 ಅಧ್ಯಾಪಕರ ಖಾಲಿ ಹುದ್ದೆ ಭರ್ತಿ ಯಾವಾಗ? 
- ಶಾಲಾ-ಕಾಲೇಜುಗಳ ಶುಲ್ಕ ನಿಯಂತ್ರಣ ಪ್ರಾಧಿಕಾರದ ಅನುಷ್ಠಾನವೆಲ್ಲಿ? 
- ಪದವಿಯವರೆಗಿನ ಉಚಿತ ಶಿಕ್ಷಣ ನೀಡುವುದು ಯಾವಾಗ?
- 70 ಪದವಿ ಕಾಲೇಜುಗಳ ನಿರ್ಮಾಣದ ಭರವಸೆ ಏನಾಯಿತು?
- ಕರ್ನಾಟಕ ವಿದ್ಯಾರ್ಥಿವೇತನ ಮತ್ತು ಸಾಲ ಪ್ರಾಧಿಕಾರದ ಸ್ಥಾಪನೆಯ ಭರವಸೆ ಏನಾಯಿತು?

ಬಿಬಿಎಂಪಿಯ ಚುನಾವಣೆಗಾಗಿ ಕಾಂಗ್ರೆಸ್‌ನ ವಿಷನ್‌ ಡಾಕ್ಯೂಮೆಂಟ್‌ ರಚನೆಗೆ ನಿರ್ಧಾರ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪ್ರಶ್ನೆಗೆ ನಿಮ್ಮಹತ್ತಿರ ಇದೆಯಾ ಉತ್ತರ?
- ಎಲ್ಲಿ ಕೊಟ್ಟಿದ್ದೀರಾ 3000 ಕೋಟಿ ರೂ. ವಿದ್ಯಾರ್ಥಿವೇತನ
- 15000 ಕೋಟಿ ರೂ. ವಸತಿ ಯೋಜನೆ ಅನುಷ್ಠಾನ ಯಾವಾಗ? ವಾಲ್ಮೀಕಿ ಭವನಗಳ ನಿರ್ಮಾಣ ಎಲ್ಲಾಯಿತು?
- 1500 ಕೋಟಿ ರೂ. ಮಹರ್ಷಿ ವಾಲ್ಮೀಕಿ ವಿದ್ಯಾರ್ಥಿವೇತನವೇನಾಯಿತು?
- ಸರ್ಕಾರಿ ಹುದ್ದೆಗಳಲ್ಲಿ ವಿಶೇಷ ನೇಮಕಾತಿ ಯೋಜನೆ ಏನಾಯಿತು?

ಮುನಿಯಪ್ಪ ಓಲೈಸಲು ಕಾಂಗ್ರೆಸ್‌ ಕಸರತ್ತು, ರಾಜ್ಯ ಉಸ್ತುವಾರಿ ಸುರ್ಜೇವಾಲಾ ಭೇಟಿ

ಕನ್ನಡಿಗರ ಪ್ರಶ್ನೆಗೆ ನಿಮ್ಮ ಹತ್ತಿರ ಇದೆಯಾ ಉತ್ತರ?
- ವಿಶ್ವಗುರು ಬಸವಣ್ಣ, ಕುವೆಂಪು, ಶ್ರೀ ನಾರಾಯಣ ಗುರು ಇವರುಗಳನ್ನು ಅಪಮಾನವೇಕೆ ಮಾಡಿದಿರಿ?
- ಕಸ ಮುಕ್ತ ಬೆಂಗಳೂರಿನ ಭರವಸೆ ಏನಾಯಿತು?
- 500 ಕೋಟಿ ರೂ. ದೇವಸ್ಥಾನ ಹಾಗೂ ಮಠಗಳ ಜೀರ್ಣೋದ್ದಾರ ಯೋಜನೆ ಏನಾಯಿತು?
- ಕೇಂದ್ರ ಸರ್ಕಾರದ ಹುದ್ದೆಗಳ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯುವ ಅವಕಾಶ ಕಲ್ಪಿಸುವುದು ಯಾವಾಗ?
-  ಕೇಂದ್ರ ಸರ್ಕಾರದ ವೆಬ್‌ಸೈಟ್‌ಗಳು ಕನ್ನಡ ಭಾಷೆಯಲ್ಲಿ ಇನ್ನೂ ಯಾಕಿಲ್ಲ?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಗೊಂದಲಕ್ಕೆ ಮತ್ತೆ ಬೆಂಕಿ: ಸಿದ್ದರಾಮಯ್ಯ 5 ವರ್ಷ ಸಿಎಂ, ಬದಲಾದರೆ ಡಿಕೆಶಿ ಒಬ್ರೇ ರೇಸ್‌ನಲ್ಲಿಲ್ಲ..; - ಕೆಎನ್ ರಾಜಣ್ಣ
CM-DCM ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಸಿದ್ದರಾಮಯ್ಯ ಪುತ್ರ ಶಾಕಿಂಗ್ ಹೇಳಿಕೆ