ವಿಶ್ವದ ಅನೇಕ ದೇಶಗಳು ಆರ್ಥಿಕ ದಿವಾಳಿ ಅಂಚಿಗೆ ಬಂದಾಗಲೂ ಭಾರತ ವಿಶ್ವದ 5ನೇ ಆರ್ಥಿಕ ಸುಸ್ಥಿರತೆ ಹೊಂದಿರುವ ದೇಶವಾಗಿ ಹೊರ ಹೊಮ್ಮಿದ್ದು, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅತೀ ಹೆಚ್ಚು ರಫ್ತು ಮಾಡಿದ ದೇಶವಾಗಿಯೂ ಹೊರ ಹೊಮ್ಮಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ಹೇಳಿದರು.
ದಾವಣಗೆರೆ (ಸೆ.05): ವಿಶ್ವದ ಅನೇಕ ದೇಶಗಳು ಆರ್ಥಿಕ ದಿವಾಳಿ ಅಂಚಿಗೆ ಬಂದಾಗಲೂ ಭಾರತ ವಿಶ್ವದ 5ನೇ ಆರ್ಥಿಕ ಸುಸ್ಥಿರತೆ ಹೊಂದಿರುವ ದೇಶವಾಗಿ ಹೊರ ಹೊಮ್ಮಿದ್ದು, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅತೀ ಹೆಚ್ಚು ರಫ್ತು ಮಾಡಿದ ದೇಶವಾಗಿಯೂ ಹೊರ ಹೊಮ್ಮಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ಹೇಳಿದರು.
ನಗರದ ಪೂಜಾ ಇಂಟರ್ ನ್ಯಾಷನಲ್ ಹೋಟೆಲ್ ಸಭಾಂಗಣದಲ್ಲಿ ಶನಿವಾರ ಬಿಜೆಪಿ ಎಸ್ಟಿಮೋರ್ಚಾ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಎಸ್ಟಿಮೋರ್ಚಾದ ರಾಜ್ಯ ಕಾರ್ಯಕಾರಿಣಿ ಹಾಗೂ 3 ದಿನದ ಪ್ರಶಿಕ್ಷಣ ವರ್ಗ ಉದ್ಘಾಟಿಸಿ, ನೀತಿ, ನೇತಾ, ನಿಯತ್ತು ಆಧಾರದಲ್ಲಿ ಬಿಜೆಪಿ ಬೆಳೆದಿದೆ. ಪಕ್ಷವನ್ನು ಸರ್ವ ಸ್ಪರ್ಶಿ, ಸರ್ವವ್ಯಾಪಿ ಮಾಡುವ ಉದ್ದೇಶದಿಂದ ಮೋರ್ಚಾಗಳನ್ನು ರಚಿಸಲಾಗಿದೆ. ಪಕ್ಷದ ಕಾರ್ಯ ವಿಸ್ತರಣೆ ಹಿನ್ನೆಲೆಯಲ್ಲಿ ಮೋರ್ಚಾಗಳ ಸ್ಥಾಪನೆ ಮಾಡಲಾಗಿದೆ. ಕಾರ್ಯದ ವಿಸ್ತಾರವಾಗಿ ಪ್ರಕೋಷ್ಟಗಳ ರಚನೆಯಾಗಿದೆ. ಪ್ರಶಿಕ್ಷಣ ವರ್ಗ ನಮ್ಮನ್ನು ನಾವು ತಿಳಿದುಕೊಳ್ಳುವುದಾಗಿದೆ. ಬಿಜೆಪಿ ಮಾತ್ರ ಮಂಡಲ ಮಟ್ಟದಿಂದ ರಾಷ್ಟ್ರೀಯ ಮಟ್ಟದವರೆಗೆ ಇರುವ ಏಕೈಕ ಪಕ್ಷ ಎಂದು ತಿಳಿಸಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ಸಿಗನೂ ಗಲ್ಲಿಗೇರಿಲ್ಲ: ಸಿ.ಟಿ. ರವಿ
ಮೋರ್ಚಾಗಳ ಸಹಕಾರ ಮುಖ್ಯ: ಸಂಸದ, ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ಮಾತನಾಡಿ, ಪಕ್ಷ ಸಂಘಟನೆಯಲ್ಲಿ ಈಚೆಗೆ ಮೋರ್ಚಾಗಳ ಪಾತ್ರ ಸಕ್ರಿಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಎಲ್ಲಾ ವರ್ಗಕ್ಕೂ ಅನುದಾನ ನೀಡಿ, ಸ್ಪಂದಿಸುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಮೋರ್ಚಾಗಳ ಸಹಕಾರ ಅತೀ ಮುಖ್ಯ. ಕೇಂದ್ರ, ರಾಜ್ಯ ಸರ್ಕಾರಗಳ ಸಾಧನೆಯನ್ನು ಪ್ರತಿ ಮನೆ ಮನೆಗೂ ತಲುಪಿಸುವ ಕೆಲಸ ನಮ್ಮೆಲ್ಲ ಮುಖಂಡರು, ಕಾರ್ಯಕರ್ತರಿಂದ ಆಗಬೇಕು ಎಂದು ಕರೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ ಭೈರತಿ ಮಾತನಾಡಿ, ಶೀಘ್ರವೇ ವಿಧಾನಸಭೆ ಚುನಾವಣೆ ಬರಲಿದೆ. ಎಲ್ಲರೂ ಹೆಚ್ಚು ಹೆಚ್ಚು ಕೆಲಸ ಮಾಡುವ ಮೂಲಕ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು. ಪಕ್ಷ ಸಂಘಟನೆಗೆ ಮೊದಲು ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಎಸ್‌ಟಿ ಮೋರ್ಚಾದ ರಾಜ್ಯಾಧ್ಯಕ್ಷ ತಿಪ್ಪರಾಜು ಹವಾಲ್ದಾರ್, ಸತ್ಯನಾರಾಯಣ ರೆಡ್ಡಿ, ಗಂಗಾಧರ ನಾಯಕ, ಮಹೇಶ ತೆಂಗಿನಕಾಯಿ, ಶಾಸಕರಾದ ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ಎಸ್.ವಿ.ರಾಮಚಂದ್ರ, ಮಾಡಾಳ್ ವಿರುಪಾಕ್ಷಪ್ಪ, ಪ್ರೊ.ಎನ್.ಲಿಂಗಣ್ಣ, ವಿಪ ಸದಸ್ಯ ಕೆ.ಎನ್.ನವೀನ್, ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ ಹನಗವಾಡಿ, ಉಪಾಧ್ಯಕ್ಷ ಟಿ.ಶ್ರೀನಿವಾಸ ದಾಸಕರಿಯಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ, ರಾಜ್ಯ ಮುಖಂಡರಾದ ಮಾಜಿ ಮೇಯರ್ ಸುಧಾ ಜಯರುದ್ರೇಶ ಇತರರಿದ್ದರು.
ಕಾಂಗ್ರೆಸ್ ಆತ್ಮ ಪರಿವಾರ, ಜೆಡಿಎಸ್ ಆತ್ಮ ಜಾತೀಯತೆ: ಆಧ್ಯಾತ್ಮವೇ ದೇಶದ ಆತ್ಮವಾಗಿದ್ದು, ಉಪಕಾರ ಮಾಡುವ ಪ್ರತಿಯೊಂದರಲ್ಲೂ ದೇವರ ಕಾಣುವ ದೇಶ ನಮ್ಮದು. ಪಕ್ಷಕ್ಕೂ ಒಂದು ಆತ್ಮವಿದೆ. ಜೆಡಿಎಸ್ ಆತ್ಮ ಜಾತೀಯತೆ, ಕಾಂಗ್ರೆಸ್ಸಿನ ಆತ್ಮ ಪರಿವಾರವಾದರೆ, ಬಿಜೆಪಿ ಆತ್ಮ ಹಿಂದುತ್ವ, ರಾಷ್ಟ್ರೀಯತೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ರಾಷ್ಟ್ರ ಮೊದಲು ಎಂಬ ತತ್ವ ನಮ್ಮದು. ಆದರೆ, ಕಾಂಗ್ರೆಸ್ಸಿನ ಮಾಲೀಕರು ನೆಹರು ಪರಿವಾರವಾದರೆ, ಜೆಡಿಎಸ್ ಮಾಲೀಕರು ದೊಡ್ಡ ಗೌಡರು ಮತ್ತು ಮರಿಗೌಡರು ಎಂದು ವ್ಯಂಗ್ಯವಾಡಿದರು. ಸಮಾಜವಾದಿ ಪಕ್ಷದ ಮಾಲೀಕರು ಯಾದವ್ ಪರಿವಾರ. ಆದರೆ, ಬಿಜೆಪಿ ಮಾಲೀಕರು ಕಾರ್ಯಕರ್ತರು. ಕಾರ್ಯಕರ್ತರೇ ಮಾಲೀಕರಾಗಿರುವ ಏಕೈಕ ಪಕ್ಷವೆಂದರೆ ಅದು ಬಿಜೆಪಿ. ಇಲ್ಲಿ ಟೀ ಮಾರುವ ಹುಡುಗ ದೇಶದ ಪ್ರಧಾನಿ ಆಗಬಹುದು. ವನವಾಸಿ ಮಹಿಳೆ ಪ್ರಥಮ ಪ್ರಜೆ ಆಗಬಹುದು ಎಂದು ತಿಳಿಸಿದರು.
‘ಭಾರತ್ ಜೋಡೋ’ ಮಾಡಲು ಕಾಂಗ್ರೆಸ್‌ಗೆ ನೈತಿಕ ಹಕ್ಕಿಲ್ಲ: ಸಿ.ಟಿ.ರವಿ
ದಾವಣಗೆರೆಯಲ್ಲೂ ಬಿಜೆಪಿ ಐತಿಹಾಸಿಕ ಸಮಾವೇಶ ನಡೆಸಲು ಚಿಂತನೆ ನಡೆಸಿದೆ. ಅದೇ ರೀತಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಜನೋತ್ಸವ ಕಾರ್ಯಕ್ರಮ ಆಯೋಜಿಸುವ ವಿಚಾರವೂ ಇದೆ. ನಮ್ಮೆಲ್ಲಾ ಕಾರ್ಯಕರ್ತರು ಮತ್ತೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಕೆಲಸ ಮಾಡಬೇಕು.
-ಬಿ.ಎ.ಬಸವರಾಜ ಭೈರತಿ, ನಗರಾಭಿವೃದ್ಧಿ ಸಚಿವ