ನಾಮಪತ್ರ ಸಲ್ಲಿಸಲು ತುಕ್ರವಾರ ಕೊನೆಯ ದಿನವಾಗಿದೆ. ಸದ್ಯ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಯೋಗೇಶ್ವರ್ ಅವರು ತಾವು ಗುರುವಾರ ಮಧ್ಯಾಹ್ನ 12 ಗಂಟೆಗೆ ನಾಮಪತ್ರ ಸಲ್ಲಿಸುವುದಾಗಿ ಘೋಷಿಸಿದ್ದಾರೆ. ಆದರೆ, ಯಾವ ಪಕ್ಷದಿಂದ ಎಂಬ ಗುಟ್ಟನ್ನು ಮಾತ್ರ ಬಿಟ್ಟುಕೊಟ್ಟಿಲ್ಲ, ಬಿಜೆಪಿಯಿಂದಲೇ ಸ್ಪರ್ಧಿಸಲು ಜೆಡಿಎಸ್ ಅವಕಾಶ ಕಲ್ಪಿಸಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿ ಕಾದು ನೋಡುತ್ತಿದ್ದಾರೆ.
ಬೆಂಗಳೂರು(ಅ.23): ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಪೈಕಿ ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಆತಂತ್ರವಾಗಿದ್ದು, ಬುಧವಾರ ಅಥವಾ ಗುರುವಾರ ಸಪ್ನ ಚಿತ್ರಣ ಹೊರಬೀಳುವ ನಿರೀಕ್ಷೆಯಿದೆ. ಇಡೀ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಇದೀಗ ಬಿಜೆಪಿಯ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ನಡೆಯ ಮೇಲೆ ನಿರ್ಧರಿತವಾಗಲಿದೆ.
ನಾಮಪತ್ರ ಸಲ್ಲಿಸಲು ತುಕ್ರವಾರ ಕೊನೆಯ ದಿನವಾಗಿದೆ. ಸದ್ಯ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಯೋಗೇಶ್ವರ್ ಅವರು ತಾವು ಗುರುವಾರ ಮಧ್ಯಾಹ್ನ 12 ಗಂಟೆಗೆ ನಾಮಪತ್ರ ಸಲ್ಲಿಸುವುದಾಗಿ ಘೋಷಿಸಿದ್ದಾರೆ. ಆದರೆ, ಯಾವ ಪಕ್ಷದಿಂದ ಎಂಬ ಗುಟ್ಟನ್ನು ಮಾತ್ರ ಬಿಟ್ಟುಕೊಟ್ಟಿಲ್ಲ, ಬಿಜೆಪಿಯಿಂದಲೇ ಸ್ಪರ್ಧಿಸಲು ಜೆಡಿಎಸ್ ಅವಕಾಶ ಕಲ್ಪಿಸಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿ ಕಾದು ನೋಡುತ್ತಿದ್ದಾರೆ. ಈ ನಡುವೆ ಆಡಳಿತಾರೂಢ ಕಾಂಗ್ರೆಸ್ ಪಕ್ಷ ನಾಯಕರು ಯೋಗೇಶ್ವರ್ ಅವರನ್ನು ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ಅದಾಗದಿದ್ದರೂ ಯೋಗೇಶ್ವರ್ ನಡೆ ನೋಡಿ ತಮ್ಮ ಪಕ್ಷದ ಅಭ್ಯರ್ಥಿಯನ್ನು ಅಖೈರುಗೊಳಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
undefined
ದಳಪತಿ ವಿರುದ್ಧ ಕುಸ್ತಿಗಿಳಿದ ಸೈನಿಕನಿಗೆ ದೋಸ್ತಿಯಾಗ್ತಾರಾ ಡಿಕೆ?
ಇದೆಲ್ಲದರ ಮಧ್ಯೆ ಮಂಗಳವಾರ ಸಮಾಜವಾದಿ ಪಕ್ಷದ ಮುಖಂಡರು ಯೋಗೇಶ್ವರ್ ಅವರನ್ನು ಭೇಟಿ ಮಾಡಿ ಪಕ್ಷದ ಪರ ಸ್ಪರ್ಧಿಸುವಂತೆ ಕೋರಿ ಬಿ ಫಾರಂ ಹಸ್ತಾಂತರಿಸಿದ್ದಾರೆ. ಹಿಂದೆ ಯೋಗೇಶ್ವರ್ ಅವರು ಇದೇ ಪಕ್ಷದ ಚಿಹ್ನೆಯ ಅಡಿಯಲ್ಲಿ ಸ್ಪರ್ಧಿಸಿ ಗೆಲುವು ರಾಷ್ಟ್ರೀಯ ಪಕ್ಷಗಳು ಅಲ್ಲದಿದ್ದರೆ ಯೋಗೇಶ್ವರ್ ಅವರು ಈ ಬಾರಿಯೂ ಸಮಾಜವಾದಿ ಪಕ್ಷದ ಸೈಕಲ್ ಹತ್ತುವ ಸಾಧ್ಯತೆ ಹೆಚ್ಚಾಗಿದೆ. ಯೋಗೇಶ್ವರ್ ಅವರಿಗೆ ಬಿಜೆಪಿಯಿಂದಲೇ ಟಿಕೆಟ್ ನೀಡಲು ಜೆಡಿಎಸ್ ನಾಯಕರನ್ನು ಮನವೊಲಿಸುವ ಕಡೆ ಕ್ಷಣದ ಪ್ರಯತ್ನವೂ ನಡೆಯುತ್ತಿದೆ.
ತಮ್ಮ ಪಕ್ಷದ ಚಿಹ್ನೆಯಿಂದ ಸ್ಪರ್ಧಿಸಲು ಪ್ರಸ್ತಾಪ ಮುಂದಿಟ್ಟಿದ್ದ ಜೆಡಿಎಸ್ ನಾಯಕರು ಬಿಜೆಪಿಗೆ ಬಿಟ್ಟುಕೊಡಲು ಮೀನಮೇಷ ಎಣಿಸುತ್ತಿದ್ದಾರೆ. ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೇ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್ .ಡಿ.ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿ ಯೋಗೇಶ್ವರ್ ಅವರಿಗೆ ಜೆಡಿಎಸ್ ಪಕ್ಷದ ಚಿಹ್ನೆಯಡಿ ಸರ್ಧಿಸಲು ಅವಕಾಶ ಕೊಡಿ ಎಂದು ಹೇಳಿದ್ದಾರೆ. ಆದರೆ, ಇದಕ್ಕೆ ಯೋಗೇಶ್ವರ್ ಬಿಲ್‌ಕುಲ್ ಒಪ್ಪುತ್ತಿಲ್ಲ. ಹಗ್ಗಜಗ್ಗಾಟ ಮುಂದುವರೆದಿದೆ.
ಮಂಗಳವಾರ ಜೆಡಿಎಸ್ ನಾಯಕರಾದ ಎಚ್ .ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಬೆಂಗಳೂರಿನಲ್ಲಿ ನಡೆಯಿತು. ಈ ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು ಹಾಗೂ ಕಾರ್ಯಕರ್ತರು ಚನ್ನಪಟ್ಟಣ ಕ್ಷೇತ್ರವನ್ನು ಜೆಡಿಎಸ್ ಉಳಿಸಿಕೊಳ್ಳಬೇಕು. ಯೋಗೇಶ್ವರ್ ಬೇಕಾದರೆ ಜೆಡಿಎಸ್‌ನಿಂದ ಸ್ಪರ್ಧಿಸಲಿ, ಇಲ್ಲದಿದ್ದರೆ ನಿಖಿಲ್ ಕುಮಾರಸ್ವಾಮಿಗೆ ಟಿಕೆಟ್ ನೀಡಬೇಕು ಎಂಬ ಒತ್ತಾಯ ಮುಂದಿಟ್ಟರು. ಹೇಗಿದರೂ ನಾಮಪತ್ರ ಸಲ್ಲಿಸಲು ಇನ್ನೂ ಮೂರು ದಿನ ಇದೆ ನೋಡೋಣ ಎಂದು ಹೇಳುವ ಮೂಲಕ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಚನ್ನಪಟ್ಟಣದ ಟಿಕೆಟ್ ನೀಡುವ ಬಗ್ಗೆ ಕುತೂಹಲ ಉಳಿಸಿದ್ದಾರೆ.
ದೋಸ್ತಿಗೆ 'ಯೋಗಿ' ಟೆನ್ಷನ್.. ಸೈನಿಕನ ಜೊತೆ ಸಂಧಾನ..!
ನಾಳೆ ನಾಮಪತ್ರ: ಪಕ್ಷ? ಕಾದುನೋಡಿ!
ಮುಖಂಡರ ಜತೆ ಚರ್ಚಿಸಿದ್ದೇನೆ. ಗುರುವಾರ ಬೆಳಗ್ಗೆ 11ಕ್ಕೆ ನಾಮಪತ್ರ ಸಲ್ಲಿಸುತ್ತೇನೆ. ಯಾವ ಪಕ್ಷದಿಂದ ಎಂಬುದನ್ನು ಕಾದು ನೋಡಿ ಎಂದು ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ.
ಸಾಕಷ್ಟು ಬಗ್ಗಿದ್ದೇನೆ, ಇನ್ನೆಷ್ಟು ಬಗ್ಗಲಿ? ಚನ್ನಪಟ್ಟಣ ಟಿಕೆಟ್ ವಿಚಾರದಲ್ಲಿ ನೆಲದವರೆಗೂ ಬಗ್ಗಿದ್ದೇನೆ. ಇನ್ನೂ ಬಗ್ಗಿ ಎಂದರೆ ಎಲ್ಲಿಗೆ ಬಗ್ಗಲಿ? ಯೋಗೇಶ್ವರ್ ಗೆ ಕ್ಷೇತ್ರ ಬಿಟ್ಟುಕೊಡಿ ಎಂದು ಪ್ರಹ್ಲಾದ ಜೋಶಿ ಹೇಳಿದ್ದಾರೆ. ಜೆಡಿಎಸ್ ಚಿಹ್ನೆಯಡಿ ಯೋಗೇಶ್ವರ್ ಸ್ಪರ್ಧಿಸಲಿ ಎಂದು ನಡ್ಡಾ ಹೇಳಿದ್ದಾರೆ. ಸಮಯ ಇದೆ. ನೋಡೋಣ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಯೋಗಿಗೆ ಬಂತು ಎಸ್ಪಿ ಬಿ ಫಾರಂ
ಬೆಂಗಳೂರು: ಸಮಾಜವಾದಿ ಪಕ್ಷದ ನಿಯೋಗವು ಎನ್‌ಡಿಎ ಮೈತ್ರಿಕೂಟದ ಟಿಕೆಟ್ ಆಕಾಂ ಕ್ಷಿಯಾಗಿದ್ದ ಸಿ.ಪಿ.ಯೋಗೇ ಶ್ವರ್ ಅವರನ್ನು ಭೇಟಿಯಾಗಿ 'ಬಿ' ಫಾರಂ ಹಸ್ತಾಂತರಿಸಿದೆ. ಯೋಗೇಶ್ವರ್ ಕೇಳದಿದ್ದರೂ ಕೊಟ್ಟಿದೆ.