ಸಿ.ಪಿ.ಯೋಗೇಶ್ವರ್‌ಗೆ ಅವರದ್ಧೇ ಆದ ಮತ ಬ್ಯಾಂಕ್ ಇದೆ: ಸಚಿವ ರಾಮಲಿಂಗಾರೆಡ್ಡಿ

By Kannadaprabha News  |  First Published Nov 2, 2024, 8:22 AM IST

ಚನ್ನಪಟ್ಟಣ ಉಪ ಉಚುವಾಣೆ ಹಿನ್ನೆಲೆಯಲ್ಲಿ ಶುಕ್ರವಾರದಿಂದ ನಾನು ಸಹ ಡಿ.ಕೆ.ಸುರೇಶ್ ಹಾಗೂ ಚಲುವರಾಯಸ್ವಾಮಿ ಅವರೊಂದಿಗೆ ಒಗ್ಗಟ್ಟಿನಿಂದ ಚುನಾವಣಾ ಪ್ರಚಾರ ನಡೆಸಲಿದ್ದೇವೆ. ಈ ಉಪ ಚುನಾವಣೆ ಗೆಲ್ಲುವುದೇ ನಮ್ಮ ಪಕ್ಷದ ಗುರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. 


ರಾಮನಗರ (ನ.02): ಚನ್ನಪಟ್ಟಣ ಉಪ ಉಚುವಾಣೆ ಹಿನ್ನೆಲೆಯಲ್ಲಿ ಶುಕ್ರವಾರದಿಂದ ನಾನು ಸಹ ಡಿ.ಕೆ.ಸುರೇಶ್ ಹಾಗೂ ಚಲುವರಾಯಸ್ವಾಮಿ ಅವರೊಂದಿಗೆ ಒಗ್ಗಟ್ಟಿನಿಂದ ಚುನಾವಣಾ ಪ್ರಚಾರ ನಡೆಸಲಿದ್ದೇವೆ. ಈ ಉಪ ಚುನಾವಣೆ ಗೆಲ್ಲುವುದೇ ನಮ್ಮ ಪಕ್ಷದ ಗುರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಅವರದ್ದೇ ಆದ ಮತ ಬ್ಯಾಂಕ್ ಇದೆ. 

ಅವರು ಯಾವುದೇ ಪಕ್ಷಕ್ಕೆ ಹೋದರು, ಅವರದ್ದೆ ಆದ ಮತಗಳಿದ್ದು, ಸಿಪಿವೈಗೆ ಜನಸಂಪರ್ಕ ಚನ್ನಾಗಿದೆ. ಕಳೆದ ಚುನಾವಣೆಯಲ್ಲಿ 85 ಸಾವಿರ ಮತಗಳಲ್ಲಿ ಕೇವಲ 21 ಸಾವಿರ ಮತಗಳ ವ್ಯತ್ಯಾಸ ಇತ್ತು. ಜನ ಯೋಚನೆ ಮಾಡಿ ಮತ ಹಾಕಿದರೆ ಕಾಂಗ್ರೆಸ್ ಪಕ್ಷ ಬಹುಮತಗಳಿಂದ ಗೆಲ್ಲುವ ಎಲ್ಲಾ ಅವಕಾಶಗಳು ಇವೆ ಎಂದು ತಿಳಿಸಿದರು. ಉಪಮುಖ್ಯಮಂತ್ರಿ ಶಿವಕುಮಾರ್ ಅವರಿಗೆ ಕೆಲವು ಮಹಿಳೆಯರು ಕರೆ ಮಾಡಿ ನಮಗೆ ಬಸ್‌ನಲ್ಲಿ ಟಿಕೆಟ್ ತೆಗೆದುಕೊಳ್ಳುವ ಶಕ್ತಿ ಇದ್ದು, ಹಾಗಾಗಿ ನಮಗೆ ಉಚಿತ ಬಸ್‌ ಪ್ರಯಾಣ ಬೇಡ ಅಂತಾ ಹೇಳಿದ್ದರು.

Tap to resize

Latest Videos

undefined

ಈ ವಿಚಾರವನ್ನು ಶಿವಕುಮಾರ್ ಪ್ರಸ್ತಾಪ ಮಾಡಿ, ಶಕ್ತಿ ಯೋಜನೆ ರಾಜ್ಯದಲ್ಲಿ ಇನ್ನು 8.5 ವರ್ಷ ಇರಲಿದೆ ಎಂದು ಹೇಳಿದರು. ನಮ್ಮ ಸರ್ಕಾರದ ಈ ಅವಧಿಯ 3.5 ವರ್ಷ ಹಾಗೂ ಮುಂದಿನ ಅವಧಿ 5 ವರ್ಷ ಇರುತ್ತದೆ. ಶಕ್ತಿ ಕಾರ್ಯಕ್ರಮದಲ್ಲಿ 318 ಕೋಟಿ ಜನ ಪ್ರಯಾಣಿಸಿದ್ದಾರೆ. ಗೃಹಜ್ಯೋತಿ 1.20 ಕೋಟಿ ಜನ ಆನ್‌ಲೈನ್‌ನಲ್ಲಿ ಅಪ್ಲಿಕೇಷನ್ ಹಾಕಿ ಸದುಪಯೋಗ ಪಡೆದಿದ್ದಾರೆ. ಗೃಹಲಕ್ಷ್ಮಿಗೆ 1.61 ಕೋಟಿ ಫಲಾನುಭವಿಗಳಿದ್ದಾರೆ. ಶಕ್ತಿ ಯೋಜನೆ ಬೇಡ ಎನ್ನುವವರು ಬಹಳ ಕಡಿಮೆ ಇದ್ದಾರೆ. ಸಮಾಜದಲ್ಲಿ ಉಳ್ಳವರು ಅದರಲ್ಲೂ ಯಾರೋ ಬೆನ್ಸ್ ಕಾರಿನಲ್ಲಿ ಓಡಾಡುವವರು ವಿರೋಧ ಮಾಡುತ್ತಾರೆ ಎಂದು ತಿಳಿಸಿದರು.

ಕನ್ನಡಿಗರ ಅವಹೇಳನ ಮಾಡಿದರೆ ಕಠಿಣ ಕ್ರಮ: ಸಿಎಂ ಸಿದ್ದರಾಮಯ್ಯ ಗುಡುಗು

ಶಕ್ತಿ ಯೋಜನೆ ಪರಿಷ್ಕರಣೆ ಬೈ ಎಲೆಕ್ಷನ್ ಮೇಲೆ ಎಫೆಕ್ಟ್ ಆಗೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿ - ಜೆಡಿಎಸ್ ಬಡವರಿಗೆ ಏನಾದರೂ ಕಾರ್ಯಕ್ರಮ ಕೊಟ್ಟಿದ್ದಾರಾ. ನಾವು ಕೊಟ್ಟ ಕಾರ್ಯಕ್ರಮವನ್ನು ಅವರು ಸಹಿಸಿಕೊಳ್ಳುತ್ತಿಲ್ಲ. ನಾವು ಬಡವರಿಗೆ 5 ಕೆ.ಜಿ ಅಕ್ಕಿ ಕೊಟ್ಟಾಗ ಎಲ್ಲರನ್ನ ಸೋಂಬೇರಿ ಮಾಡುತ್ತಾರೆ ಅಂತ ಟೀಕೆ ಮಾಡಿದ್ದರು. 50 ವರ್ಷಗಳ ಹಿಂದೆ ಜನರನ್ನ ಜನರಾಗಿ ನೋಡುತ್ತಿದ್ದರಾ? ಜನರನ್ನ ಮೇಲೆತ್ತುವ ಕೆಲಸ ಕಾಂಗ್ರೆಸ್ ಹೊರತು ಬೇರೆ ಯಾರು ಮಾಡಿಲ್ಲ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

click me!