
ಬೆಂಗಳೂರು(ಮಾ.29): ಚುನಾವಣಾ ಘೋಷಣೆ ನಿರೀಕ್ಷಿತ ಇತ್ತು. ನೀತಿ ಸಂಹಿತೆ ಸಹ ಜಾರಿಯಾಗುತ್ತೆ, ಫ್ರೀ ಅಂಡ್ ಫೇರ್ ಎಲೆಕ್ಷನ್‌ಗೆ ಎಲ್ಲ ಸಹಕಾರ ನೀಡಬೇಕು. ಇಡೀ ರಾಜ್ಯ ಸುತ್ತಿ ಬಂದಿದ್ದೇನೆ. ಸಂಪೂರ್ಣ ವಿಶ್ವಾಸವಿದೆ. ನಮಗೆ ಸ್ಪಷ್ಟವಾದ ಬಹುಮತ ಬರಲಿದೆ. ಮತ್ತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಈ ಬಾರಿ ನಾಯಕರ ವ್ಯಾಪಕ ಪ್ರಚಾರವಿರುತ್ತದೆ. ಎಲ್ಲ ರಾಷ್ಟ್ರೀಯ ನಾಯಕರು ರಾಜ್ಯದಲ್ಲಿ ಪ್ರಚಾರಕ್ಕೆ ಬರ್ತಾರೆ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ಇಂದು(ಬುಧವಾರ) ನಗರದಲ್ಲಿ ಮಾತನಾಡಿದ ಅವರು, ಇವತ್ತಿನ ಜಿಲ್ಲಾ ಪ್ರವಾಸಗಳನ್ನ ರದ್ದಗೊಳಿಸಲಾಗಿದೆ. ಚುನಾವಣಾ ಘೋಷಣೆ ನಂತರ ನಮ್ಮದು ಟಿಕೆಟ್ ಘೋಷಣೆ ಮಾಡುತ್ತೇವೆ. ಒಳಮೀಸಲಾತಿಯಲ್ಲಿ ಯಾವುದೇ ಗೊಂದಲವಿಲ್ಲ. ಕಾಂಗ್ರೆಸ್ ಸುಳ್ಳು ಮಾಹಿತಿ ನೀಡುತ್ತಿದೆ. ಡಿ.ಕೆ. ಶಿವಕುಮಾರ್‌ಗೆ ಎಂತಹ ಪರಿಸ್ಥಿತಿ ಬಂದಿದೆ ಅಂದರೆ ಅವರು ನಮ್ಮ ಶಾಸಕರಿಗೆ ಫೋನ್ ಮಾಡಿ ಬನ್ನಿ ಬನ್ನಿ ಅಂತಿದ್ದಾರೆ. ವಲಸೆ ಬಂದ ಸಚಿವರೇ ಅಲ್ಲ, ಎಲ್ಲ ಶಾಸಕರಿಗೂ ಕರೆಯುತ್ತಿದ್ದಾರೆ. ಆದರೆ ಅವರ್ಯಾರು ಪಕ್ಷ ಬಿಟ್ಟು ಹೋಗಲ್ಲ. ಅವರು ನನಗೆ ಹೇಳಿದ್ದಾರೆ ನಾವು ಹೋಗಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆಗೆ ಡೇಟ್ ಫಿಕ್ಸ್: ಇಂದಿನ ಸಿಎಂ ಕಾರ್ಯಕ್ರಮ ರದ್ದಾಗುತ್ತಾ?
ಪ್ರಧಾನಿ ನರೇಂದ್ರ ಮೋದಿ ಅವರು ಹುಲಿಗಳ ಸಂರಕ್ಷಣಾ ದಿನಾಚರಣೆಗೆ ಮೈಸೂರಿಗೆ ಬರುತ್ತಾರೆ. ಆ ಕಾರ್ಯಕ್ರಮ ಮೊದಲೇ ನಿಗಿದಿಯಾಗಿತ್ತು. ಒಳಮೀಸಲಾತಿ ಹಂಚಿಕೆ ನ್ಯಾಯ ಸಮ್ಮತವಾಗಿದೆ. ಯಾರಿಗೂ ಅನ್ಯಾಯ ಆಗಿಲ್ಲ. ನಡೆಯುತ್ತಿರುವ ಪ್ರತಿಭಟನೆಗಳು ಕಾಂಗ್ರೆಸ್ ಪ್ರೇರಿತವಾಗಿವೆ. ಒಳ ಮೀಸಲಾತಿ ಜಾರಿಯಾಗುತ್ತೆ, ಅದೆಲ್ಲ ಆಗುವಂತಹ ಪ್ರಕ್ರಿಯೆಗಳು. ಕೇಂದ್ರದಲ್ಲೂ ನಮ್ಮದೇ ಸರ್ಕಾರ ಇದೆ. ಒಳ ಮೀಸಲಾತಿ ಜಾರಿಯಾಗುತ್ತೆ ಅಂತ ತಿಳಿಸಿದ್ದಾರೆ..
ಒಂದು ಹಂತ ಅಥವಾ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, ಕಾದು ನೋಡಿ ಎಂದಷ್ಟೇ ಹೇಳಿ ತೆರಳಿದ್ದಾರೆ.
ಕರ್ನಾಟಕ ಚುನಾವಣಾ ಘೋಷಣೆ ಹಿನ್ನೆಲೆ: ಸರ್ಕಾರಿ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಇಷ್ಟು ದಿನ ಮನೆಗೆ ಬಂದ ಜನರ ಅಹವಾಲುಗಳನ್ನ ಸ್ವೀಕರಿಸಿದ್ದೇನೆ. ನಾಳೆಯಿಂದ ಸ್ವೀಕರಿಸಲು ನೀತಿ ಸಂಹಿತೆ ಅಡ್ಡಿ ಬರುತ್ತದೆ. ಅಧಿಕಾರ ಇದ್ದಾಗ ನಾನು ನೋಡಿದ್ದೇನೆ, ಕಾನೂನು ಪ್ರಕಾರ ನಾವು ನಡೆದುಕೊಳ್ಳಬೇಕಲ್ವಾ ಅಂತ ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಬಿಜೆಪಿ ಪಟ್ಟಿ ಯಾವಾಗ ಬಿಡುಗಡೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ನಮ್ಮದು ಯಾವಾಗಲೂ ಚುನಾವಣಾ ದಿನಾಂಕ ಘೋಷಣೆ ಬಳಿಕವೇ ಆಗೋದು. ನಮ್ಮ ಬಳಿ ಸರ್ವೇ ರಿಪೋರ್ಟ್ ಇದೆ. ಅದು ಸಂಸದೀಯ ಮಂಡಳಿ ಸಭೆಯಲ್ಲಿ ಚರ್ಚೆ ಮಾಡಿ ಅಂತಿಮ ಮಾಡ್ತಾರೆ. ಟಿಕೆಟ್ ಫೈನಲ್ ವಿಚಾರದ ದಿನಾಂಕ ಹೇಳಲು ಆಗೋದಿಲ್ಲ ಅಂತ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.