ಕರ್ನಾಟಕ ಚುನಾವಣಾ ಘೋಷಣೆ ಹಿನ್ನೆಲೆ: ಸರ್ಕಾರಿ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ

By Girish GoudarFirst Published Mar 29, 2023, 9:04 AM IST
Highlights

ಸರ್ಕಾರದ ಸೌಲಭ್ಯ ಬಳಸದಂತೆ ಬ್ರೇಕ್ ಬೀಳಲಿದ್ದು, ಸಚಿವರು ಸರ್ಕಾರಿ ವಾಹನ ಬಳಸುವಂತಿಲ್ಲ, ಸರ್ಕಾರಿ ಆದೇಶ ಹೊರಡಿಸಲು ಸಚಿವರಿಗಿಲ್ಲ ಅಧಿಕಾರವಿರುವುದಿಲ್ಲ. ಸಿಎಂ ಆಗಲಿ ಸಚಿವರಾಗಲಿ ಪ್ರಮುಖ ಘೋಷಣೆ, ಯಾವುದೇ ಭರವಗಳನ್ನ ನೀಡುವಂತಿಲ್ಲ. ಐಬಿ ಸೇರಿದಂತೆ ಸರ್ಕಾರಿ ಕಟ್ಟಡಗಳ ಬಳಕೆಗೂ ಕೂಡ ಬ್ರೇಕ್ ಬೀಳಲಿದೆ. 

ಬೆಂಗಳೂರು(ಮಾ.29): ಕರ್ನಾಟಕ ವಿಧಾನಸಭೆ ಚುನಾವಣೆಯ ದಿನಾಂಕವನ್ನ ಚುನಾವಣಾ ಆಯೋಗ ಇಂದು(ಬುಧವಾರ) ಬೆಳಿಗ್ಗೆ 11.30 ಕ್ಕೆ ಪ್ರಕಟಿಸಲಿದೆ. ಹೀಗಾಗಿ 11.30 ರ ಬಳಿಕ ಸರ್ಕಾರಿ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆಯಾಗಲಿದೆ. 

ಸರ್ಕಾರದ ಸೌಲಭ್ಯ ಬಳಸದಂತೆ ಬ್ರೇಕ್ ಬೀಳಲಿದ್ದು, ಸಚಿವರು ಸರ್ಕಾರಿ ವಾಹನ ಬಳಸುವಂತಿಲ್ಲ, ಸರ್ಕಾರಿ ಆದೇಶ ಹೊರಡಿಸಲು ಸಚಿವರಿಗಿಲ್ಲ ಅಧಿಕಾರವಿರುವುದಿಲ್ಲ. ಸಿಎಂ ಆಗಲಿ ಸಚಿವರಾಗಲಿ ಪ್ರಮುಖ ಘೋಷಣೆ, ಯಾವುದೇ ಭರವಗಳನ್ನ ನೀಡುವಂತಿಲ್ಲ. ಐಬಿ ಸೇರಿದಂತೆ ಸರ್ಕಾರಿ ಕಟ್ಟಡಗಳ ಬಳಕೆಗೂ ಕೂಡ ಬ್ರೇಕ್ ಬೀಳಲಿದೆ. ಸಚಿವಾಲಯ ಸಿಬ್ಬಂದಿ ಸೇವೆ ಬಳಕೆ ಮಾಡುವಂತಿಲ್ಲ. ಭದ್ರತಾ ಸಿಬ್ಬಂದಿಗಳ ಬಳಕೆಗೆ ಮಾತ್ರ ಅವಕಾಶ ಇರಲಿದೆ. ಸಚಿವರು ವಿಧಾನಸೌಧ ಅಥವಾ ವಿಕಾಸಸೌಧದಲ್ಲಿ ಸಭೆ ಸಮಾರಂಭಗಳನ್ನ ನಡೆಸಲು ಸಚಿವರಿಗೆ ಬ್ರೇಕ್ ಬೀಳಲಿದೆ. 

ಪದ್ಮನಾಭನಗರದಲ್ಲಿ ‘ಹ್ಯಾಟ್ರಿಕ್‌ ಹೀರೋ’ ಆರ್‌. ಅಶೋಕ್‌ರನ್ನು ಮಣಿಸೋರು ಯಾರು?

ರಾಜ್ಯ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ

ಕರ್ನಾಟಕ ವಿಧಾನಸಭೆ ಚುನಾವಣೆಗೆ ಏಪ್ರಿಲ್‌ ಮೊದಲ ವಾರದಲ್ಲಿ ದಿನಾಂಕ ಪ್ರಕಟ ಆಗಲಿದೆ ಎಂದು ಹೇಳಲಾಗಿತ್ತು. ಆದರೆ, ಇಂದೇ ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟ ಆಗಲಿದೆ. ಚುನಾವಣಾ ಆಯೋಗ ಇಂದು ಸುದ್ದಿಗೋಷ್ಠಿ ನಡೆಸಲಿದ್ದು, ಚುನಾವಣೆಯ ದಿನಾಂಕವನ್ನು ಘೋಷಣೆ ಮಾಡಲಿದೆ.

ಹೌದು, ಚುನಾವಣಾ ಆಯೋಗ ಇಂದು ಬೆಳಗ್ಗೆ 11. 30ಕ್ಕೆ ಸುದ್ದಿಗೋಷ್ಠಿ ನಡೆಸಲಿದ್ದು, ರಾಜ್ಯ ವಿಧಾನಸಭೆ ಚುನಾವಣೆಯ ದಿನಾಂಕ ಪ್ರಕಟ ಮಾಡಲಿದೆ. ಇಂದು ವಿಧಾನಸಭೆ ಚುನಾವಣೆಯ ಡೇಟ್‌ ಫಿಕ್ಸ್‌ ಆಗುತ್ತೆ ಅಂದ್ರೆ ನೀತಿ ಸಂಹಿತೆ ಸಹ ಇಂದಿನಿಂದಲೇ ಆರಂಭವಾಗಲಿದೆ ಎಂದು ತಿಳಿದುಬಂದಿದೆ. 

ಕೇಂದ್ರ ಚುನಾವಣಾ ಆಯೋಗ ರಾಷ್ಟ್ರ ರಾಜಧಾನಿ ದೆಹಲಿಯ ವಿಗ್ಯಾನ್‌ ಭವನದಲ್ಲಿ ಬೆಳಗ್ಗೆ 11.30 ಕ್ಕೆ ಮಹತ್ವದ ಸುದ್ದಿಗೋಷ್ಠಿ ನಡೆಸಲಿದೆ. ರಾಜ್ಯ ವಿಧಾನಸಭೆ ಚುನಾವಣೆ ಒಂದೇ ಹಂತದಲ್ಲಿ ನಡೆಯುತ್ತದೋ ಅಥವಾ ಎರಡು ಹಂತದಲ್ಲಿ ನಡೆಯುತ್ತದೋ ಎಂಬುದು ಸಹ ಇಂದೇ ನಿರ್ಧಾರವಾಗಲಿದೆ. 

click me!