ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಯಾವುದೇ ರೀತಿಯ ಭ್ರಷ್ಟಾಚಾರ ಆರೋಪ ಗುತ್ತಿಗೆದಾರರು ಮಾಡಿಲ್ಲ, ಬಿಲ್ ಪಾವತಿ ವಿಳಂಬವಾಗುತ್ತಿದೆ ಎಂದಿದ್ದಾರಷ್ಟೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕೂಡಾ ಬಿಲ್ ಪಾವತಿ ವಿಳಂಬವಾಗಿದೆ ಅಂತ ಮಾತ್ರ ಸ್ಪಷ್ಟವಾಗಿ ಹೇಳಿದ್ದಾರೆ.
ಕಲಬುರಗಿ (ಆ.12): ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಯಾವುದೇ ರೀತಿಯ ಭ್ರಷ್ಟಾಚಾರ ಆರೋಪ ಗುತ್ತಿಗೆದಾರರು ಮಾಡಿಲ್ಲ, ಬಿಲ್ ಪಾವತಿ ವಿಳಂಬವಾಗುತ್ತಿದೆ ಎಂದಿದ್ದಾರಷ್ಟೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕೂಡಾ ಬಿಲ್ ಪಾವತಿ ವಿಳಂಬವಾಗಿದೆ ಅಂತ ಮಾತ್ರ ಸ್ಪಷ್ಟವಾಗಿ ಹೇಳಿದ್ದಾರೆ. ಇದನ್ನೇ ದೊಡ್ಡದು ಮಾಡುತ್ತ ಬಿಜೆಪಿಯವರು ಕಾಂಗ್ರೆಸ್ ವಿರುದ್ಧ ದೂರುತ್ತಿದ್ದಾರೆಂದು ಆರ್‌ಡಿಪಿಆರ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಚುನಾವಣೆ ಸಮಯದಲ್ಲಿ ಟೆಂಡರ್ ಮಾಡಿರೋ ಕಾಮಗಾರಿಗಳನ್ನು ಪರಿಶೀಲನೆ ಮಾಡಿ ಬಿಲ್ ಪಾವತಿ ಮಾಡಲಾಗುತ್ತದೆ. ಇದೀಗ ಅಶ್ವತ್ಥನಾರಾಯಣ ಬಿಲ್ ವಿಚಾರದಲ್ಲಿ ಮಾತನಾಡುತ್ತಿದ್ದಾರೆ. ಈ ಅಶ್ವಥ್ ನಾರಾಯಣರನ್ನು ಡಿಸಿಎಂನಿಂದ ಮಂತ್ರಿ ಮಾಡಿದ್ದರು. ಅವರ ಕಾರ್ಯಕ್ಷಮತೆಯ ಮೇಲೆ ಅವರನ್ನು ಡಿಗ್ರೇಡ್ ಮಾಡಲಾಗಿತ್ತು. ಅವರು ಇದೀಗ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆಂದು ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದರು.
ಮಣಿಪುರದಲ್ಲಿ ಶಾಂತಿ ಸ್ಥಾಪಿಸಲು ಏಕೆ ಆಗುತ್ತಿಲ್ಲ: ದಿಗ್ವಿಜಯ್ ಸಿಂಗ್ ಪ್ರಶ್ನೆ
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಬಿಜೆಪಿಯವರು ಹತಾಶೆಗೊಂಡಿದ್ದಾರೆ, ಫೇಕ್ ಲೆಟರ್ ಸೃಷ್ಟಿಮಾಡುತ್ತಿದ್ದಾರೆ, ಬಿಆರ್ ಪಾಟೀಲ್, ಚೆಲುವರಾಯಸ್ವಾಮಿ ಸೇರಿದಂತೆ ಹಲವರು ನಕಲಿ ಪತ್ರದ ಬಗ್ಗೆ ದೂರು ನೀಡಿದ್ದು ತನಿಖೆ ಸಾಗಿದೆ. ಬಿಜೆಪಿ ಐಟಿ ಸೆಲ್ ಇವೆಲ್ಲ ಕುತಂತ್ರ ಹುಟ್ಟುಹಾಕುತ್ತಿದೆ. ಇವತ್ತಿನ ಅನೇಕ ಘಟನೆಗಳು ಆಗ್ತಾಯಿರೋದು ಬಿಜೆಪಿ ಐಟಿ ಸೆಲ್‌ನಿಂದಾಗಿ ಅನ್ನೋದು ಸುಳ್ಳಲ್ಲ ಎಂದರು.
ಕೈಲಾಗದವ ಮೈ ಪರಚಿಕೊಂಡ ಎಂಬಂತೆ ಬಿಜೆಪಿಯವರು ಮೈ ಪರಚಿಕೊಳ್ಳುತ್ತಿದ್ದಾರೆ, ಪರಚಿಕೊಳ್ಳಲಿ. ಕಮಿಷನ್ ಕೇಳಿಲ್ಲಾ ಅಂದ್ರೆ ಪ್ರಮಾಣ ಮಾಡಲಿ ಎಂದಿರುವ ಆರ್.ಅಶೋಕ್ ಅವರು ಹೇಳಿದಂತೆ ನಾವು ಸರ್ಕಾರ ನಡೆಸಲು ಆಗಲ್ಲಾ, ಈ ಹಿಂದೆ ಯತ್ನಾಳ ಅವರು ಪ್ರಮಾಣ ಮಾಡಲು ಕರೆದಾಗ ಅವರ ಪ್ರಮಾಣಿಕತೆ ಎಲ್ಲಿತ್ತು? ಬಿಜೆಪಿಯವರು ಸಾಕ್ಷಿ ಇಟ್ಟು ಮಾತಾಡಲಿ, ಸಾಕ್ಷಿ ಇದ್ದರೆ ದೇವಸ್ಥಾನ ಯಾಕೆ, ಕೋರ್ಚ್‌ಗೆ ಹೋಗೋಣಾ ಬನ್ನಿ ಎಂದು ಪ್ರಿಯಾಂಕ್ ಸವಾಲು ಹಾಕಿದರು.
ನಿಮ್ಮ ಬಳಿ ಸಾಕ್ಷಿ ಇದ್ದರೆ ಕೋರ್ಚ್‌ಗೆ ಹೋಗಿ, ದೇವಸ್ಥಾನಕ್ಕೆ ಹೋದ್ರೆ ನ್ಯಾಯ ಸಿಗಲ್ಲ, ಕೋರ್ಚ್‌ಗೆ ಹೋದ್ರೆ ನ್ಯಾಯ ಸಿಗುತ್ತದೆ. ವಿರೋಧ ಪಕ್ಷದ ನಾಯಕರಾಗಲು ಲಾಬಿ ನಡೆಸೋ ಸ್ಥಿತಿಗೆ ಬೊಮ್ಮಾಯಿ ಬಂದಿದ್ದಾರೆ. ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷದ ನಾಯಕರು ಇರಬೇಕು ಅನ್ನೋದು ನಮ್ಮ ಅಪೇಕ್ಷೆ. ಜನ ಯಾಕೆ ಅವರನ್ನು ಮನೆಗೆ ಕಳುಹಿಸಿದ್ದಾರೆ ಅನ್ನೋದನ್ನ ಬೊಮ್ಮಾಯಿ, ಅಶೋಕ್ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಸಕ್ರೆಬೈಲಿನಲ್ಲಿ ವಿಶ್ವ ಆನೆಗಳ ದಿನಾಚರಣೆ: ವಿಶಿಷ್ಟವಾಗಿ ಸಿಂಗಾರಗೊಂಡ ಗಜಪಡೆ!
ಶಾಸಕ ಪ್ರಭು ಚೌವ್ಹಾಣ್, ಕೇಂದ್ರ ಸಚಿವ ಖೂಬಾ ವಿರುದ್ಧ ಆರೋಪ ಮಾಡಿರುವ ಬಗ್ಗೆ ಹೇಳಿಕೆ ನೀಡಿದ ಖರ್ಗೆ ಸ್ವತ ಬಿಜೆಪಿ ಶಾಸಕ ಕೇಂದ್ರ ಸಚಿವರ ಮೇಲೆ ಕೊಲೆಗೆ ಸಂಚು ಆರೋಪ ಮಾಡುತ್ತಿದ್ದಾರೆ, ದೂರು ನೀಡಿದ್ರೆ ನಾವು ತನಿಖೆ ಮಾಡಿಸಲು ರೆಡಿ ಇದ್ದೇವೆ. ಬರೀ ಜನ ಸಾಮಾನ್ಯರಿಗೆ ಅಷ್ಟೇ ಅಲ್ಲ, ಬಿಜೆಪಿ ಶಾಸಕರಿಗೂ ನ್ಯಾಯ ಕೊಡಿಸಲು ನಾವು ರೆಡಿ ಇದ್ದೇವೆ. ಒಬ್ಬ ಶಾಸಕರು ಒಬ್ಬ ಕೇಂದ್ರ ಮಂತ್ರಿಯ ಮೇಲೆ ಈ ರೀತಿಯ ಆರೋಪ ಮಾಡುವುದು ಅಂದ್ರೆ ಅತ್ಯಂತ ಗಂಭೀರ ವಿಚಾರ. ಅಶೋಕ, ಬೊಮ್ಮಾಯಿ, ಅಶ್ವತ್ಥ ನಾರಾಯಣ ಮೊದಲು ಈ ಬಗ್ಗೆ ಮಾತಾಡಲಿ ನಂತರ ನಮ್ಮ ಬಗ್ಗೆ ಮಾತಾಡಲಿ ಎಂದು ಪ್ರಿಯಾಂಕ್ ಖರ್ಗೆ ತಿವಿದರು.