ಬಿಜೆಪಿ ಸೋಲಿಸದಿದ್ದರೆ ಸಂವಿಧಾನಕ್ಕೆ ಅಪಾಯ: ಕೇಂದ್ರ ಮಾಜಿ ಸಚಿವ ಮಣಿ ಶಂಕರ್ ಅಯ್ಯರ್ ಆತಂಕ

Published : Mar 20, 2023, 09:46 AM IST
ಬಿಜೆಪಿ ಸೋಲಿಸದಿದ್ದರೆ ಸಂವಿಧಾನಕ್ಕೆ ಅಪಾಯ: ಕೇಂದ್ರ ಮಾಜಿ ಸಚಿವ ಮಣಿ ಶಂಕರ್ ಅಯ್ಯರ್ ಆತಂಕ

ಸಾರಾಂಶ

ವಿರೋಧ ಪಕ್ಷಗಳೆಲ್ಲಾ ಮೈತ್ರಿ ರಚಿಸಿಕೊಂಡು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ನರೇಂದ್ರ ಮೋದಿಯನ್ನು ಸೋಲಿಸದಿದ್ದರೆ ಭಾರತದ ಸಂವಿಧಾನ ಮತ್ತು ಐದು ಸಾವಿರ ವರ್ಷಗಳ ನಾಗರಿಕ ಪರಂಪರೆಗೆ ಅಪಾಯ  ಎಂದು ಕೇಂದ್ರ ಮಾಜಿ ಸಚಿವ ಮತ್ತು ಸಂಸದ ಮಣಿಶಂಕರ್‌ ಅಯ್ಯರ್‌ ಆತಂಕ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಮಾ.20) : ವಿರೋಧ ಪಕ್ಷಗಳೆಲ್ಲಾ ಮೈತ್ರಿ ರಚಿಸಿಕೊಂಡು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ನರೇಂದ್ರ ಮೋದಿಯನ್ನು ಸೋಲಿಸದಿದ್ದರೆ ಭಾರತದ ಸಂವಿಧಾನ ಮತ್ತು ಐದು ಸಾವಿರ ವರ್ಷಗಳ ನಾಗರಿಕ ಪರಂಪರೆಗೆ ಅಪಾಯ ಒದಗಲಿದ್ದು, ಎರಡನೇ ಸ್ವಾತಂತ್ರ್ಯ ಸಮರಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಕೇಂದ್ರ ಮಾಜಿ ಸಚಿವ ಮತ್ತು ಸಂಸದ ಮಣಿಶಂಕರ್‌ ಅಯ್ಯರ್‌(ManiShankar Iyer) ಆತಂಕ ವ್ಯಕ್ತಪಡಿಸಿದ್ದಾರೆ.

ಭಾನುವಾರ ನಗರದ ಗಾಂಧಿ ಭವನ(Gandhi bhavan)ದಲ್ಲಿ ಆಯೋಜಿಸಲಾಗಿದ್ದ ಐಡಿಯಾ ಆಫ್‌ ಇಂಡಿಯಾ(Idea of ​​India)’ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮಣಿಶಂಕರ್ ಅಯ್ಯರ್‌ ಪುತ್ರಿ ಎನ್‌ಜಿಒದ ವಿದೇಶಿ ದೇಣಿಗೆ ಲೈಸೆನ್ಸ್‌ ಅಮಾನತು

ಜಾತ್ಯಾತೀತ ರಾಷ್ಟ್ರವಾಗಿ ಭಾರತವನ್ನು ಪುನರ್‌ ಸ್ಥಾಪಿಸಬೇಕಿದೆ. ಸದ್ಯ ದೇಶದಲ್ಲಿ ಇಡೀ ರಾಜಕೀಯ ವ್ಯವಸ್ಥೆಯೇ ಗೊಂದಲದಲ್ಲಿದೆ. ಬಿಜೆಪಿ ಕೇವಲ 3ನೇ ಒಂದು ಭಾಗದ ಮತಗಳನ್ನು ಪಡೆದಿದೆ. ವಿರೋಧ ಪಕ್ಷಗಳೇ 3ನೇ ಎರಡು ಭಾಗದಷ್ಟುಮತ ಪಡೆದಿವೆ. ಅಂದರೆ ಬಿಜೆಪಿಗಿಂತ ವಿರೋಧ ಪಕ್ಷೆಗಳೇ ಹೆಚ್ಚಿನ ಮತಗಳು ಮತ್ತು ಸಂಸತ್‌ ಸದಸ್ಯ ಸ್ಥಾನ ಪಡೆದುಕೊಂಡಿವೆ ಎಂದರು.

ಪಶ್ಚಿಮ ಬಂಗಾಳ(West bengal)ದಲ್ಲಿ ಮಮತಾ ಬಾನರ್ಜಿಯ ತೃಣಮೂಲ ಕಾಂಗ್ರೆಸ್‌, ಆಂಧ್ರ ಪ್ರದೇಶದಲ್ಲಿ ಜಗನ್‌ ಮೋಹನ ರೆಡ್ಡಿ ಅವರ ವೈಎಸ್‌ಆರ್‌ ಕಾಂಗ್ರೆಸ್‌, ತಮಿಳುನಾಡಿನಲ್ಲಿ ಸ್ಟ್ಯಾಲಿನ್‌ ಅವರ ಡಿಎಂಕೆ, ಒರಿಸ್ಸಾದಲ್ಲಿ ನವೀನ್‌ ಪಟ್ನಾಯಕ್‌ ಅವರ ಬಿಜು ಜನತಾದಳ, ತೆಲಂಗಾಣದಲ್ಲಿ ಕೆ.ಚಂದ್ರಶೇಖರ ರಾವ್‌ ಅವರ ಬಿಆರ್‌ಎಸ್‌ ಪಕ್ಷ ಅಧಿಕಾರದಲ್ಲಿದ್ದು, ಹೆಚ್ಚಿನ ಸಂಸತ್‌ ಸ್ಥಾನಗಳನ್ನು ಗೆದ್ದಿದೆ. ಅದೇ ರೀತಿ ನಿತೀಶ್‌ ಕುಮಾರ್‌, ಅಖಿಲೇಶ್‌ ಯಾದವ್‌, ಕೇಜ್ರಿವಾಲ್‌ ಅವರು ಪ್ರಾಬಲ್ಯ ಹೆಚ್ಚಿದೆ. ಕಾಂಗ್ರೆಸ್‌ ಸಹ ಹಲವು ವಿರೋಧ ಪಕ್ಷದಲ್ಲಿದೆ. ಹಾಗಾಗಿ, ಕಾಂಗ್ರೆಸ್‌ ಪಕ್ಷವು ಎಲ್ಲಾ ವಿರೋಧ ಪಕ್ಷಗಳ ಮೈತ್ರಿ ಸಾಧಿಸಿ, ಒಬ್ಬರ ನಾಯಕತ್ವದಲ್ಲಿ ಚುನಾವಣೆಗೆ ಹೋದರೆ ಗೆಲುವು ಸಾಧಿಸಬಹುದು ಎಂದು ಸಲಹೆ ನೀಡಿದರು.

ಕಾಂಗ್ರೆಸ್‌ ರಾಷ್ಟ್ರೀಯ ವಕ್ತಾರ ರಾಜೀವ್‌ ಗೌಡ, ಬಿಜೆಪಿ ಮುಖಂಡರು ಹಿಜಾಬ್‌, ಹಲಾಲ್‌, ಆಜಾನ್‌ ಇನ್ನಿತರ ಅನಗತ್ಯ ವಿಷಯಗಳನ್ನು ಮುಂದಿಟ್ಟುಕೊಂಡು ದೇಶದ ಅಲ್ಪಸಂಖ್ಯಾತ ಸಮುದಾಯದವರನ್ನು ತುಳಿಯಲು ಪ್ರಯತ್ನಿಸುತ್ತಿದ್ದಾರೆ. ಸಮಾಜದಲ್ಲಿ ಕೋಮುವಾದ ಎಂಬ ವಿಷಯ ಬೀಜವನ್ನು ಬಿತ್ತುತ್ತಿದ್ದಾರೆ. ಟಿಪ್ಪು ಬಗ್ಗೆ ಸುಳ್ಳು ಮಾಹಿತಿಯನ್ನು ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪ್ರಾಬಲ್ಯವಿರುವ ಪ್ರದೇಶದಲ್ಲಿ ಇತಿಹಾಸದಲ್ಲಿ ಉಲ್ಲೇಖವಿಲ್ಲದ ಉರಿಗೌಡ ಮತ್ತು ನಂಜೇಗೌಡ ಎಂಬ ಕಾಲ್ಪನಿತ ವ್ಯಕ್ತಿಗಳನ್ನು ಸೃಷ್ಟಿಸಿ ವಿವಿಧ ಸಮುದಾಯಗಳ ನಡುವೆ ದ್ವೇಷ ಹುಟ್ಟು ಹಾಕುತ್ತಿದ್ದಾರೆ. ಏಕರೂಪತೆ ಹೆಸರಿನಲ್ಲಿ ಭಾರತದ ವೈವಿಧ್ಯತೆಯನ್ನು ನಾಶಪಡಿಸಲು ಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್‌ ಮಾತನಾಡಿ, ದೇಶದಲ್ಲಿ ಬಿಜೆಪಿ ಸರ್ಕಾರ ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ದಿ ಯೋಜನೆ ಹಮ್ಮಿಕೊಳ್ಳುತ್ತಿಲ್ಲ. ಅನಗತ್ಯ ವಿಚಾರಗಳನ್ನು ಮುನ್ನೆಲೆಗೆ ತಂದು ರಾಜಕೀಯ ಮಾಡುತ್ತಿದ್ದಾರೆ. ಗ್ರಂಥಾಲಯ, ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುತ್ತಿಲ್ಲ. ಬದಲಾಗಿ ದೇವಸ್ಥಾನ ಮತ್ತು ಬೃಹತ್‌ ಪ್ರತಿಮೆಗಳನ್ನು ನಿರ್ಮಿಸುತ್ತಿದೆ. ಸರ್ವಾಧಿಕಾರ ಮತ್ತು ದಬ್ಬಾಳಿಕೆಯ ಆಡಳಿತ ನಡೆಸುತ್ತಿದೆ. ಮಹಿಳೆ ಮತ್ತು ಮಕ್ಕಳ ಮೇಲೆ ದೊಡ್ಡ ಪ್ರಮಾಣದಲ್ಲಿ ದೌರ್ಜನ್ಯಗಳು ನಡೆಯುತ್ತಿವೆ. ದೇವಸ್ಥಾನದಿಂದ ಜ್ಞಾನ ಸಂಪಾದನೆ ಸಾಧ್ಯವಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಪ್ರಜಾಪ್ರಭುತತ್ವ, ಬುದ್ಧ, ಬಸವಣ್ಣ ಮತ್ತು ಸಂವಿಧಾನದ ತತ್ವ-ಮೌಲ್ಯಗಳು ಉಳಿಯಬೇಕಾದರೆ ಜಾತ್ಯಾತೀತತೆ ಸಿದ್ಧಾಂತವನ್ನು ನಂಬಿರುವ ಎಲ್ಲಾ ಪಕ್ಷಗಳು ಒಟ್ಟಾಗಬೇಕಿದೆ ಎಂದು ಕರೆ ನೀಡಿದರು.

Congress Tweet ಮೋದಿ ಭಾಷಣದ ಬೆನ್ನಲ್ಲೇ ಮಣಿಶಂಕರ್ ಅಯ್ಯರ್ ಫೋಟೋ ಟ್ವೀಟ್ ಮಾಡಿ ಗೊಂದಲ ಸೃಷ್ಟಿಸಿದ ಕಾಂಗ್ರೆಸ್!

ಕಾರ್ಯಕ್ರಮದಲ್ಲಿ ತಮಿಳುನಾಡು ನಿವೃತ್ತ ಮುಖ್ಯ ಕಾರ್ಯದರ್ಶಿ ಎಂ.ಜಿ. ದೇವ ಸಹಾಯಂ, ಸಮಾಜವಾದಿ ಮುಖಂಡ ಮೈಕೆಲ್‌ ಫರ್ನಾಡಿಸ್‌ ಮತ್ತಿತತರರ ಉಪಸ್ಥಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ