* ಕುಮಾರಣ್ಣ ನನ್ನ ಬಗ್ಗೆ ಏನು ಹೇಳಿದರೂ ಸಂತೋಷ
* ಮೇಕೆದಾಟು ಪಾದಯಾತ್ರೆ ನಿಲ್ಲದು
* ನಮ್ಮದು ಪಕ್ಷಾತೀತ ಹೋರಾಟ
ಬೆಂಗಳೂರು(ಡಿ.30): ನನ್ನ ವಿರುದ್ಧ ಬಿಜೆಪಿ(BJP) ಮತ್ತು ಜೆಡಿಎಸ್(JDS) ಎರಡೂ ಷಡ್ಯಂತ್ರ ನಡೆಸಿವೆ. ದೆಹಲಿಯಲ್ಲಿ ಏನು ನಡೆದಿದೆ ಎಂದು ನನಗೆ ಗೊತ್ತು. ಯಾರು ಏನೇ ಮಾಡಿದರೂ ನಮ್ಮ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಹೇಳಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣ(Politics) ಹಾಗೂ ಪವಿತ್ರ ಕಾವೇರಿ(Holy Kaveri) ಯಾರ ಸ್ವತ್ತೂ ಅಲ್ಲ. ಇಡೀ ರಾಜ್ಯದ(Karnataka) ಜನರ ಆಸ್ತಿ. ಬಡವರು, ರೈತರಿಗೆ(Farmers) ಒಳ್ಳೆಯದಾಗಬೇಕು ಅಷ್ಟೆ. ನಮ್ಮದು ಪಕ್ಷಾತೀತ ಹೋರಾಟ. ಇದಕ್ಕೆ ಜೆಡಿಎಸ್‌ನವರು, ಬಿಜೆಪಿಯವರು, ಯಾವುದೇ ಸಂಘ ಸಂಸ್ಥೆಗಳು, ಸಿನಿಮಾ ಕ್ಷೇತ್ರದವರು, ಮಠಾಧೀಶರು, ಕಾಲೇಜು ವಿದ್ಯಾರ್ಥಿಗಳು ಸೇರಿ ಇಚ್ಛೆ ಇರುವ ಎಲ್ಲರೂ ಬರಲಿ ಎಂದು ಮನವಿ ಮಾಡಿದ್ದೇನೆ. ಬರುವುದು ಬಿಡುವುದು ಅವರಿಗೆ ಬಿಟ್ಟಿದ್ದು ಎಂದರು.
undefined
Mekedatu Project: 10 ಜಿಲ್ಲೆ, 87 ಅಖಾಡ, 163 ಕಿಮೀ, ಏನಿದು ಡಿಕೆಶಿ ಮೇಕೆದಾಟು ಲೆಕ್ಕಾಚಾರ.?
ಇನ್ನು ಕಾಂಗ್ರೆಸ್‌ನವರು(Congress) ಜನರಿಗೆ ‘ಮೇಕೆದಾಟು ಮಕ್ಮಲ್ ಟೋಪಿ’ ಹಾಕಲು ಹೊರಟಿದ್ದಾರೆ, ಮಾಜಿ ಪ್ರಧಾನಿ ದೇವೇಗೌಡರನ್ನು(HD Devegowda) ಮರೆತಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಅವರ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನ ಮೇಕೆದಾಟು ಯೋಜನೆ ಪಾದಯಾತ್ರೆ ಬಗ್ಗೆ ಹಾಗೂ ನನ್ನ ಬಗ್ಗೆ ಕುಮಾರಣ್ಣ ಏನು ಬೇಕಾದರೂ ಟೀಕೆ ಮಾಡಲಿ, ಏನೇ ಬಿರುದು ನೀಡಲಿ, ಸಂತೋಷ ಹಾಗೂ ನಮ್ರತೆಯಿಂದ ಸ್ವೀಕರಿಸುತ್ತೇವೆ. ಆದರೆ, ನಮ್ಮ ಹೋರಾಟದಿಂದ ನಾವು ಹಿಂದೆ ಸರಿಯುವುದಿಲ್ಲ ಎಂದರು.
ಈ ಹಿಂದೆ ನನ್ನ ಬಗ್ಗೆ ಬಂಡೆ, ಚಪ್ಪಡಿ, ವಿಗ್ರಹ, ಜಲ್ಲಿ ಹೀಗೆ ಏನೇನೋ ಹೇಳಿದ್ದೀರಿ. ನಮಗೆ ಬೇಸರವಿಲ್ಲ. ಕುಮಾರಸ್ವಾಮಿ ಅವರು ಇನ್ನೂ ಯಾವ್ಯಾವ ಬಿರುದು ಬೇಕಾದರೂ ನೀಡಲಿ. ನಾನು ಬಹಳ ಸಂತೋಷದಿಂದ ಸ್ವೀಕಾರ ಮಾಡುತ್ತೇನೆ ಎಂದರು. ಇದೇ ವೇಳೆ, ನನಗೆ 11 ದಿನಗಳ ಸೂತಕ ಇದ್ದ ಕಾರಣ ತಲಕಾವೇರಿಯಲ್ಲಿ ದೇವಾಲಯದ ಒಳಗೆ ಪ್ರವೇಶ ಮಾಡಲಿಲ್ಲ. ಧ್ರುವನಾರಾಯಣ್ ಹಾಗೂ ರೇವಣ್ಣ ಪೂಜೆ ಮಾಡಿಸಿದ್ದರು. ಧರ್ಮಪಾಲನೆಯಲ್ಲಿ ನಮ್ಮದೇ ಆದ ಸಂಪ್ರದಾಯವಿದೆ. ಹೀಗಾಗಿ ನಾನು ದೂರದಿಂದಲೇ ದೇವಿಗೆ ನಮಸ್ಕರಿಸಿದ್ದೆ. ಅದನ್ನೂ ಟೀಕೆ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು.
ಪಾದಯಾತ್ರೆಗೆ(Padayatra) ನಾನು ಯಾರ ಅನುಮತಿಯನ್ನೂ ಕೇಳುವುದಿಲ್ಲ. ಅದರ ಅಗತ್ಯವೂ ಇಲ್ಲ. ನೀರಿಗಾಗಿ ನಮ್ಮ ಹಕ್ಕು, ನಮ್ಮ ನಡಿಗೆ. ನಮ್ಮ ಪಾದಯಾತ್ರೆ ಸಂಜೆ 7 ಗಂಟೆಗೆ ಮುಗಿಯುತ್ತದೆ. ನಮ್ಮ ರಸ್ತೆಯಲ್ಲಿ ನಾವು ನಡೆಯಲು ಯಾರ ಅಪ್ಪಣೆ ಬೇಕು? ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಗಬಹುದು ಎಂದು ಡಬಲ್ ರೋಡನ್ನೇ ಪಾದಯಾತ್ರೆಗೆ ಆಯ್ಕೆ ಮಾಡಿದ್ದೇವೆ ಅಂತ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕಾಂಗ್ರೆಸ್ ಪಾದಯಾತ್ರೆ ಹಿಂದಿನ ಕಾರಣ ಬಿಚ್ಚಿಟ್ಟ ಸಚಿವ ಸೋಮಣ್ಣ
ಮೇಕೆದಾಟು ಯೋಜನೆ (Makedatu Project) ತಾರ್ಕಿಕ ಅಂತ್ಯಕ್ಕೆ ಬಂದಿದೆ. ಈಗ ಎಲ್ಲಿ ಯೋಜನೆಯ ಕ್ರೆಡಿಟ್ ಬಿಜೆಪಿಗೆ(BJP) ಹೋಗುತ್ತದೆಯೋ ಎಂದು ಕಾಂಗ್ರಸ್ ಪಾದಯಾತ್ರೆ (Congress Padayatre) ಹಮ್ಮಿಕೊಂಡಿದೆ ಎಂದು ವಸತಿ ಸಚಿವ ವಿ. ಸೋಮಣ್ಣ (V Somanna) ಟಾಂಗ್ ಕೊಟ್ಟಿದ್ದರು.
ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ನಡೆಸುವ ಮೂಲಕ ರಾಜಕೀಯ ಮಾಡುತ್ತಿದೆ. ಈ ಹಿಂದೆ ಅವರೇ ಸರ್ಕಾರದಲ್ಲಿ ಇದ್ದರು. ಈ ಯೋಜನೆ ಆರಂಭಿಸಲು ಕಾನೂನು ತೊಡಕು ಮುಗಿಸಿ, ತಾಂತ್ರಿಕ ಸಮಸ್ಯೆಗಳನ್ನು ಮುಗಿಸಿ ಒಂದು ಹಂತಕ್ಕೆ ಬಂದಿದೆ. ಇದನ್ನು ತಿಳಿದುಕೊಂಡು ಬಿಜೆಪಿ ಅವರಿಗೆ ಹೆಸರು ಬರಬಾರದು ಎಂದು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.
Mekedatu Padayatre ಡಿಕೆಶಿ ಆಯ್ತು ಈಗ ಸಿದ್ದರಾಮಯ್ಯನತ್ತ ಬಾಣ ತಿರುಗಿಸಿದ ಕುಮಾರಸ್ವಾಮಿ
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಕನಕಪುರ ತಾಲೂಕಿನವರು ಅವರ ಕರ್ತವ್ಯ ಮಾಡುತ್ತಿದ್ದಾರೆ. ಈ ಯೋಜನೆ ಆರಂಭಿಸುತ್ತೇವೆ ಎಂದು ಈಗಾಗಲೇ ಸಿಎಂ ಹೇಳಿದ್ದಾರೆ. ಹೀಗಾಗಿ ಈ ಯೋಜನೆ ಮಾಡುತ್ತೇವೆ. ಜನರಿಗೆ ಅನುಕೂಲವಾಗುವ ಯೋಜನೆಗಳನ್ನು ಸರ್ಕಾರ ಮಾಡುತ್ತದೆ ಎಂದು ಹೇಳಿದ್ದರು.
ಚುನಾವಣೆಗೆ(Election) ಇನ್ನೂ ಒಂದೂವರೆ ವರ್ಷ ಇದೆ, ಏನೋ ಮಾಡುತ್ತಿದ್ದಾರೆ. ಮೇಕೆದಾಟು ಯೋಜನೆ ನಿನ್ನೆ ಮೊನ್ನೆಯದ್ದಲ್ಲ. ಮಾಜಿ ಪ್ರಧಾನಿ ದೇವೇಗೌಡರು ಸಿಎಂ ಆದಾಗಲಿಂದಲೂ ಇದೆ. ಇದೀಗ ಒಂದು ಹಂತಕ್ಕೆ ಬಂದಿದೆ. ಮೇಕೆದಾಟು ಯೋಜನೆ ಆಗಬೇಕು ಎಂಬುದು ಎಲ್ಲರ ಆಶಯವಾಗಿದೆ. ಕಾನೂನು ಚೌಕಟ್ಟಿನಲ್ಲಿ ಮಾಡಬೇಕಾಗಿದ್ದು, ಕಾನೂನು ಮೀರಲು ಯಾರಿಂದಲೂ ಸಾಧ್ಯವಿಲ್ಲ. ಇದೀಗ ಕಾಂಗ್ರೆಸ್‌ನವರಿಗೆ ಜ್ಞಾನೋದಯ ಆಗಿದೆ ಎಂದು ದೂರಿದ್ದರು.