BJP Politics: ಮಂಡಿ ನೋವಿದ್ದ ಅಟಲ್‌ರನ್ನು ಬದಲಿಸದ ನಾವು ಸಿಎಂ ಬದ್ಲಿಸ್ತೀವಾ?: ಪ್ರತಾಪ್‌ ಸಿಂಹ

By Kannadaprabha News  |  First Published Dec 30, 2021, 6:58 AM IST

*   ವಿಧಾನಸಭೆಯ ಕಟ್ಟಡದಲ್ಲಿ ವಾಸ್ತು ದೋಷ
*   ಸಿಎಂ ಬಿಟ್ಟು ಉಳಿದ 223 ಜನರಿಗೂ ಸಿಎಂ ಆಗಬೇಕೆಂಬ ಆಸೆ ಇರುತ್ತದೆ
*   ಮಂಡಿ ನೋವಿಗೆ ಚಿಕಿತ್ಸೆ ಕೊಡಿಸುತ್ತೇವೆ, ಸಿಎಂ ಬದಲಾಯಿಸುವುದಿಲ್ಲ
 


ಮೈಸೂರು(ಡಿ.30): ಮಾಜಿ ಪ್ರಧಾನಿ ವಾಜಪೇಯಿ(Atal Bihari Vajpayee) ಅವರಿಗೆ ಎರಡು ಮಂಡಿ ನೋವಿತ್ತು. ಪ್ರಧಾನಿಯನ್ನೇ ಬದಲಾಯಿಸದ ನಾವು ಸಿಎಂ(Chief Minister Of Karnataka) ಬದಲಾಯಿಸುತ್ತೇವಾ? ಇದೆಲ್ಲಾ ಕೇವಲ ಊಹಾಪೋಹ ಅಷ್ಟೇ ಎಂದು ಸಂಸದ ಪ್ರತಾಪ(Pratap Simha) ಸಿಂಹ ಹೇಳಿದ್ದಾರೆ. 

ರಾಜ್ಯದಲ್ಲಿ(Karnataka) ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದ ಪ್ರತಿಕ್ರಿಯಿಸಿದ ಅವರು, ವಿಧಾನಸಭೆಯ ಕಟ್ಟಡದಲ್ಲಿ ವಾಸ್ತು ದೋಷವಿದೆ. ಸಿಎಂ ಬಿಟ್ಟು ಉಳಿದ 223 ಜನರಿಗೂ ಸಿಎಂ ಆಗಬೇಕೆಂಬ ಆಸೆ ಇರುತ್ತದೆ. ಇದೇ ಕಾರಣಕ್ಕೆ ಇಂತಹ ಮಾತುಗಳು ಕೇಳಿ ಬರುತ್ತವೆ ಎಂದರು. ಬಸವರಾಜ ಬೊಮ್ಮಾಯಿ(Basavaraj Bommai) ಅವರಿಗೆ ಮಂಡಿ ನೋವು(Knee Pain) ಅಂತಾ ಸಿಎಂ ಬದಲಾಯಿಸಲು ಸಾಧ್ಯವಿಲ್ಲ. ಮಂಡಿ ನೋವಿಗೆ ಚಿಕಿತ್ಸೆ(Treatment) ಕೊಡಿಸುತ್ತೇವೆ. ಸಿಎಂ ಬದಲಾಯಿಸುವುದಿಲ್ಲ ಎಂದರು.

Tap to resize

Latest Videos

Hanuman Birthplace: ಅಯೋಧ್ಯೆ, ರಾಮಮಂದಿರ ಬಳಿಕ ಅಂಜನಾದ್ರಿ ಅಭಿವೃದ್ಧಿ: ಸಿಎಂ ಬೊಮ್ಮಾಯಿ

ಇನ್ನು ಕಾಂಗ್ರೆಸ್‌(Congress) ಅಧಿಕಾರಕ್ಕೆ ಬಂದರೆ ಮತಾಂತರ ಕಾಯ್ದೆ(Anti-Conversion Act) ವಾಪಸ್‌ ಪಡೆಯುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಅವರ ಹೇಳಿಕೆ ಕುರಿತು, ಇಂತಹ ಮನಸ್ಥಿತಿಯಿಂದಲೇ ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡಿದೆ. ಆದ್ದರಿಂದ ಮುಂದೆಯೂ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದಿಲ್ಲ. ಮುಂದೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ತಾಲಿಬಾನ್‌(Taliban) ಮಾದರಿ ಸರ್ಕಾರ ಎಂಬುದು ಜನರಿಗೆ ಗೊತ್ತಿದೆ ಎಂದು ಹೇಳಿದರು.

ಸಿಎಂಗೆ ಮಂಡಿ ನೋವು, ರಾಜೀನಾಮೆ 

ಮಂಡಿ ನೋವಿನಿಂದ ಬಳಲುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳುತ್ತಾರೆ ಎಂಬ ವದಂತಿ ಹಬ್ಬಿದ್ದು, ಇದನ್ನು ಮುಖ್ಯಮಂತ್ರಿಗಳ(Karnataka CM Office) ಕಚೇರಿ ಬಲವಾಗಿ ಅಲ್ಲಗಳೆದಿದೆ.

ಆ ವದಂತಿಗೆ ರೆಕ್ಕೆಪುಕ್ಕ ಬೆಳೆದು ಸುಮಾರು ಎರಡು ಅಥವಾ ಮೂರು ತಿಂಗಳ ಕಾಲ ಶಸ್ತ್ರಚಿಕಿತ್ಸೆ ಮತ್ತು ವಿಶ್ರಾಂತಿ ಪಡೆಯಬೇಕಾಗಿರುವುದರಿಂದ ಮುಖ್ಯಮಂತ್ರಿ ಬೊಮ್ಮಾಯಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ (Resignation)ನೀಡುತ್ತಾರೆ ಎಂಬ ಸುಳ್ಳುಸುದ್ದಿ ಕೂಡ ಹಬ್ಬಿತ್ತು.

ಮುಖ್ಯಮಂತ್ರಿಗಳಿಗೆ ಮಂಡಿ ನೋವು ಇರುವುದು ನಿಜ. ಆದರೆ, ಅದಕ್ಕೆ ಸ್ವದೇಶದಲ್ಲೇ, ಅದರಲ್ಲೂ ಕರ್ನಾಟಕದಲ್ಲೇ, ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಒಂದು ವೇಳೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಅನಿವಾರ್ಯತೆ ಎದುರಾದರೂ ಅದನ್ನು ರಾಜ್ಯದಲ್ಲೇ ಮಾಡಿಸಿಕೊಳ್ಳಲಿದ್ದಾರೆ. ಯಾವುದೇ ಕಾರಣಕ್ಕೂ ವಿದೇಶಕ್ಕೆ ತೆರಳುವ ಯೋಚನೆ ಇಲ್ಲ ಎಂದು ಅವರ ಆಪ್ತರು ಸ್ಪಷ್ಟಪಡಿಸಿದ್ದಾರೆ.

Karnataka Economy: ರಾಜ್ಯದ ಆರ್ಥಿಕತೆ 500 ಶತಕೋಟಿ ಡಾಲರ್‌ಗೆ ಏರಿಸಲು ಸಿಎಂ ಪ್ಲಾನ್‌

ಕಳೆದ ಹಲವು ದಿನಗಳಿಂದ ಬೊಮ್ಮಾಯಿ ಅವರು ಮಂಡಿ ನೋವಿನಿಂದ ಬಳಲುತ್ತಿದ್ದಾರೆ. ಸಭೆ ಸಮಾರಂಭಗಳಿಗೆ ತೆರಳಿದಾಗ ಅದು ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ಇತ್ತೀಚೆಗೆ ಅವರು ಲಿಫ್ಟ್‌ ಇಲ್ಲದೆ ಮೆಟ್ಟಿಲು ಹತ್ತುವಂಥ ಕಾರ್ಯಕ್ರಮಗಳನ್ನೇ ಒಪ್ಪಿಕೊಳ್ಳುತ್ತಿಲ್ಲ. ಈ ಚಿಕಿತ್ಸೆಗೆ ವಿಶ್ರಾಂತಿ ಅಗತ್ಯವಿದೆ. ಆದರೆ, ಅವರು ಕಾರ್ಯಬಾಹುಳ್ಯದಿಂದಾಗಿ ವಿಶ್ರಾಂತಿ ತೆಗೆದುಕೊಳ್ಳದೆ ಸತತ ಪ್ರವಾಸ ಮಾಡುತ್ತಿದ್ದಾರೆ.

ಪ್ರಸಕ್ತ ಮುಂದಿನ ವಾರದಿಂದ ಆರಂಭವಾಗಲಿರುವ ಬೆಳಗಾವಿ ಅಧಿವೇಶನ ಮುಗಿದ ಬಳಿಕ ಕೆಲವು ದಿನಗಳ ಕಾಲ ಬೆಂಗಳೂರಿನಲ್ಲೇ ತಮ್ಮ ಮಂಡಿನೋವಿಗೆ ಚಿಕಿತ್ಸೆ ಪಡೆದುಕೊಳ್ಳುವ ಸಾಧ್ಯತೆಯಿದೆ ಇದೆ ಎಂದು ತಿಳಿದು ಬಂದಿದೆ.
ಆ ವದಂತಿಗೆ ರೆಕ್ಕೆಪುಕ್ಕ ಬೆಳೆದು ಸುಮಾರು ಎರಡು ಅಥವಾ ಮೂರು ತಿಂಗಳ ಕಾಲ ಶಸ್ತ್ರಚಿಕಿತ್ಸೆ ಮತ್ತು ವಿಶ್ರಾಂತಿ ಪಡೆಯಬೇಕಾಗಿರುವುದರಿಂದ ಮುಖ್ಯಮಂತ್ರಿ ಬೊಮ್ಮಾಯಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ವದಂತಿ ಕೂಡ ಹಬ್ಬಿತ್ತು.

ಇದಕ್ಕೆ ಸಷ್ಟನೆ ನೀಡಿರುವ ಮುಖ್ಯಮಂತ್ರಿಗಳ ಆಪ್ತರು, ಅವರಿಗೆ ಮಂಡಿನೋವು ಇರುವುದು ನಿಜ. ಅದಕ್ಕೆ ಶಸ್ತ್ರಚಿಕಿತ್ಸೆಯೇ ಆಗಬೇಕಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಒಂದು ವೇಳೆ, ಮಂಡಿಯ ಸಮಸ್ಯೆಗೆ ಶಸ್ತ್ರಚಿಕಿತ್ಸೆಯೇ ಆಗಬೇಕಿದ್ದಲ್ಲಿ ಮುಖ್ಯಮಂತ್ರಿಗಳು ಸ್ವದೇಶದಲ್ಲೇ, ಅದರಲ್ಲೂ ರಾಜ್ಯದಲ್ಲೇ ಮಾಡಿಸಿಕೊಳ್ಳುತ್ತಾರೆ. ಯಾವುದೇ ಕಾರಣಕ್ಕೂ ವಿದೇಶಕ್ಕೆ ತೆರಳುವ ಚಿಂತನೆ ಮಾಡಿಲ್ಲ ಎಂದು ಹೇಳಿದ್ದಾರೆ.
 

click me!