
ಕೊಪ್ಪಳ (ಮಾ.30) : ಸಚಿವ ಹಾಲಪ್ಪ ಆಚಾರ್ ಅವರಿಗೆ ಮತ್ತೊಮ್ಮೆ ಆರ್ಶಿವಾದ ಮಾಡಬೇಕು ಎನ್ನುವ ಮೂಲಕ ಸಂಸದ ಸಂಗಣ್ಣ ಕರಡಿ ಹಾಗೂ ಸಚಿವ ಗೋವಿಂದ ಕಾರಜೋಳ ಅವರು ಹಾಲಪ್ಪ ಆಚಾರ್ ಪರ ಬ್ಯಾಟಿಂಗ್ ಮಾಡಿದ್ದಾರೆ.ಇವರಿಗೆ ಟಿಕೆಟ್ ಎನ್ನುವ ಸಂದೇಶ ರವಾನೆ ಮಾಡಿದ್ದಾರೆ.
ಯಲಬುರ್ಗಾ(Yalaburga)ದಲ್ಲಿ ನಡೆದ ಕೊಪ್ಪಳ ಏತನೀರಾವರಿ(Koppal lift irrigation inauguration) ಯೋಜನೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಉಭಯ ನಾಯಕರು,ಹಾಲಪ್ಪ ಆಚಾರ್(Halappa achar) ಅವರಿಗೆ ಟಿಕೆಟ್ ಪಕ್ಕಾ ಎನ್ನುವ ಅರ್ಥದಲ್ಲಿಯೇ ಮಾತನಾಡಿದರು.
ಕೊಪ್ಪಳದಲ್ಲಿ ಶುರುವಾಯಿತು ಮಾಟಮಂತ್ರ: ಸಚಿವ ಹಾಲಪ್ಪ ಆಚಾರ ಸೋಲಿಗೆ ವಿರೋಧಿಗಳಿಂದ 10 ವಾಮಾಚಾರ!
ಮೊದಲು ಮಾತನಾಡಿದ ಸಂಸದ ಸಂಗಣ್ಣ ಕರಡಿ(Sanganna Karadi), ಹಾಲಪ್ಪ ಆಚಾರ್ ಉತ್ತಮ ಕಾರ್ಯ ಮಾಡಿದ್ದು,ಮತ್ತೊಮ್ಮೆ ಆರ್ಶಿವಾದ ಮಾಡಿ ಎಂದು ಮನವಿ ಮಾಡಿದರು.
ಬಳಿಕ ಮಾತನಾಡಿದ ಸಚಿವ ಗೋವಿಂದ ಕಾರಜೋಳ ಅವರು, ಯಲಬುರ್ಗಾದಲ್ಲಿ ಕಮಲ ಮತ್ತೆ ಅರಳಬೇಕು ಮತ್ತು ಹಾಲಪ್ಪ ಆಚಾರ್ ಮೂರನೇ ಮಹಡಿಗೆ ಬರಬೇಕು ಎನ್ನುವ ಮೂಲಕ ಕೇವಲ ಶಾಸಕರಾಗುವುದು ಅಷ್ಟೇ ಅಲ್ಲ,ಸಚಿವರು ಆಗಬೇಕು ಎನ್ನುವ ಮೂಲಕ ಟಿಕೆಟ್ ನೀಡುವಂತೆ ಸಂದೇಶ ರವಾನಿಸಿದಂತೆ ಇತ್ತು.
ಪಕ್ಷ ತೊರೆಯುತ್ತಾರೆ ಎನ್ನುವ ಭಯದಲ್ಲಿ ಟಿಕೆಟ್ ಘೋಷಣೆ
ಕೊಪ್ಪಳ : ಕಾಂಗ್ರೆಸ್‌ಗೆ ಚುನಾವಣೆಯ ಭಯ ಇದೆ. ಇದಕ್ಕಾಗಿಯೇ ಅದು ಮೊದಲೇ ಟಿಕೆಟ್ ಘೋಷಣೆ ಮಾಡಿದೆ. ಟಿಕೆಟ್ ಕೊಡದಿದ್ದರೆ ಪಕ್ಷ ಬಿಟ್ಟಾರು ಎನ್ನುವ ಭಯದಿಂದಲೇ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿದೆ ಎಂದು ಸಚಿವ ಹಾಲಪ್ಪ ಆಚಾರ್(Halappa achar) ಲೇವಡಿ ಮಾಡಿದ್ದಾರೆ.
ಯಲಬುರ್ಗಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಅಂಥ ಭಯ ಇಲ್ಲವೇ ಇಲ್ಲ. ಭಯ ಇದ್ದವರು ಮೊದಲು ಘೋಷಣೆ ಮಾಡುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಯಾವುದೇ ನೆರೆರಾಜ್ಯದ ಭಾಷೆ ಪ್ರಭಾವಕ್ಕೊಳಗಾಗದ ಅಚ್ಚುಕನ್ನಡ ನಾಡು, ಕನ್ನಡದ ಗಟ್ಟಿಬೀಡು ಕೊಪ್ಪಳ: ಹಾಲಪ್ಪ ಆಚಾರ್
ನಮ್ಮದು ರಾಷ್ಟ್ರೀಯ ಪಕ್ಷವಾಗಿದೆ. ಪಾರ್ಲಿಮೆಂಟರಿ ಬೋರ್ಡಿನಲ್ಲಿ ಅಂತಿಮವಾದ ಮೇಲೆ ಹೈಕಮಾಂಡ್ ಟಿಕೆಟ್ ಘೋಷಣೆ ಮಾಡುತ್ತದೆ. ಅಲ್ಲದೆ ಚುನಾವಣೆ ಎದುರಿಸಲು ನಾವು ಸಜ್ಜಾಗಿದ್ದೇವೆ. ನಮಗೆ ಬೂತ್ ಹಂತದಲ್ಲಿಯೂ ಕಾರ್ಯಕರ್ತರು, ಪದಾಧಿಕಾರಿಗಳು ಇರುವುದರಿಂದ ಸಮಸ್ಯೆಯಾಗುವುದೇ ಇಲ್ಲ. ನಮ್ಮಲ್ಲಿಯೂ ಆಕಾಂಕ್ಷಿಗಳು ಇರುವುದು ಸಹಜ. ಪಕ್ಷ ಈ ಕುರಿತು ತೀರ್ಮಾನ ತೆಗೆದುಕೊಳ್ಳುತ್ತದೆ. ಎಲ್ಲರಿಗೂ ಆಪೇಕ್ಷೆ ಇದ್ದೇ ಇರುತ್ತದೆ. ನಾನು ಸಹ ಈ ಹಿಂದೆ ಟಿಕೆಟ್ ಆಕಾಂಕ್ಷಿಯಾಗಿದ್ದ ಆನಂತರವೇ ನನಗೆ ಟಿಕೆಟ್ ಸಿಕ್ಕಿದೆ. ಟಿಕೆಟ್ ಸಿಗದೆ ಇದ್ದಾಗಲೂ ಪಕ್ಷದ ಗೆಲುವಿಗಾಗಿ ಶ್ರಮಿಸಿದ್ದೇನೆ. ಆಪೇಕ್ಷೆ ಪಡುವುದು ತಪ್ಪಲ್ಲ. ಅದರಂತೆ ನಮ್ಮಲ್ಲಿಯೂ ಅಪೇಕ್ಷಿತರು ಇರುವುದು ನಿಜ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.