ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ: ಶೃಂಗೇರಿ ಶಾಸಕ ರಾಜೇಗೌಡರಿಗೆ ಕ್ಲಾಸ್!

By Govindaraj SFirst Published Sep 27, 2024, 10:55 PM IST
Highlights

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಕ್ಕೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಕೆಲ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಸೆ.27): ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಕ್ಕೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಕೆಲ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ದುರಸ್ತಿಪಡಸಿದೇ ಇರುವ ಸರ್ಕಾರದ ಕ್ರಮವನ್ನು ಖಂಡಿಸಿ ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೋವನ್ನು ವೈರಲ್ ಮಾಡಿದ್ದಾರೆ. ಹೌದು ನಾನು ಕಾಂಗ್ರೆಸ್ ಕಾರ್ಯಕರ್ತ. ನಾನು ಓಟ್ ಹಾಕೋದೇ ಕಾಂಗ್ರೆಸ್ಸಿಗೆ. ಶಾಸಕ ರಾಜೇಗೌಡರಿಗೆ ಮತ ಹಾಕೋದು. ಆದರೆ, ನಮ್ಮ ರಸ್ತೆಯಲ್ಲಿ ಓಡಾಡಲು ಆಗುತ್ತಿಲ್ಲ. ಶಾಸಕ ರಾಜೇಗೌಡ ಅವರ ಮನೆಯಿಂದ ಕೇವಲ 10 ಕಿ.ಮೀ. ದೂರದ ಈ ರಸ್ತೆ ಶಾಸಕ ರಾಜೇಗೌಡ ಅವರಿಗೆ ಕಾಣಿಸುವುದಿಲ್ಲವೋ ಅಥವಾ ಗೊತ್ತೇ ಇಲ್ಲವೋ ಎಂದು  ಎನ್.ಆರ್. ಪುರ ತಾಲೂಕಿನ ಖಾಂಡ್ಯ ಹೋಬಳಿಯ ಕಾಂಗ್ರೆಸ್ ಕಾರ್ಯಕರ್ತ ತಬ್ರೀಸ್ ಖಾನ್ ಕಾಂಗ್ರೆಸ್ ಸರ್ಕಾರ ಹಾಗೂ ಶಾಸಕ ಟಿ.ಡಿ.ರಾಜೇಗೌಡ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

Latest Videos

ದೇವಸ್ಥಾನಗಳಿಗೆ ತೆರಳುವ ರಸ್ತೆ ದುಸ್ಥಿತಿ: ಚಿಕ್ಕಮಗಳೂರು ಟು ಶೃಂಗೇರಿ ರಸ್ತೆಯಲ್ಲಿ ಅಡಿಗಟ್ಟಲೇ ಗುಂಡಿ ಬಿದ್ದಿರೋ ಈ ರಸ್ತೆಯಲ್ಲಿ ಓಡಾಡೋದು ಹೇಗೆ ಎಂದು ಪ್ರಶ್ನಿಸಿ ತಾವೇ ಸ್ವತಃ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಹಿಂದೆ ಯಾವಾಗಲೂ ಕೂಡ ರಸ್ತೆ ಇಷ್ಟು ಹಾಳಾಗಿರಲಿಲ್ಲ. ಖಾಂಡ್ಯಾದಿಂದ ಚಿಕ್ಕಮಗಳೂರು ಹೋಗುವ ರಸ್ತೆ, ಬಾಳೆಹೊನ್ನೂರು-ಶಿವಮೊಗ್ಗ ಹೋಗುವ ರಸ್ತೆಯೂ ಗುಂಡಿ-ಗೊಟರುಗಳಿಂದ ಸಂಪೂರ್ಣ ಹಾಳಾಗಿದೆ.ಪ್ರಮುಖ ದೇವಸ್ಥಾನಗಳು ಇರುವುದು  ಇದೇ ಶೃಂಗೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅದರಲ್ಲೂ ಶೃಂಗೇರಿಯ ಶಾರದಾಂಬೆಯ ದೇವಸ್ಥಾನ, ಕಿಗ್ಗಾದ ಋಷ್ಯಶೃಂಗ, ಹೊರನಾಡಿನ ಅನ್ನಪೂಣೇಶ್ವರಿಗೆ ಸನ್ನದಿ, ಬಾಳೆಹೊನ್ನೂರಿನ ರಂಭಾಪುರೀ ಪೀಠಕ್ಕೆ ತೆರಳುವ ಮಾರ್ಗದ ರಸ್ತೆಯಲ್ಲಿ ಈ ರೀತಿ ಗುಂಡಿ ಬಿದ್ದಿರುವುದು ಧಾರ್ಮಿಕ ಸ್ಥಳಗಳಿಗೆ ತೆರಳುವ ಭಕ್ತರು, ಪ್ರವಾಸಿಗರಿಗೆ ಪ್ರಯಾಣವೇ ದುಸ್ಥಿರವಾಗಿ ಪರಿಣಾಮಿಸಿದೆ. 

ರಾಮನಗರವನ್ನು ಬರಪೀಡಿತ ತಾಲೂಕಾಗಿ ಘೋಷಿಸಲು ಒತ್ತಾಯಿಸುವೆ: ಶಾಸಕ ಇಕ್ಬಾಲ್ ಹುಸೇನ್

ಗುಂಡಿಯನ್ನಾದರೂ ಮುಚ್ಚಿ ಎನ್ನುವ ಒತ್ತಾಯ: ಶಾಸಕರು ಹೊಸ ರಸ್ತೆಯನ್ನು ಮಾಡುವುದು ಬೇಡ  ಕಡೇ ಪಕ್ಷ ಗುಂಡಿಯನ್ನಾದರೂ ಮುಚ್ಚಿ ಎಂದು ಕೇಳುತ್ತಿದ್ದೇವೆ. ನಾನು‌ ಯಾವಾಗಲು ಕಾಂಗ್ರೆಸ್ ಪಕ್ಷಕ್ಕೆ ಓಟ್ ಹಾಕೋದು. ಈಗ ನಮ್ಮದೇ ಸರ್ಕಾರ ಇದೆ. ಆದರೂ ಏಕೆ ರೋಡ್ ರಿಪೇರಿ ಮಾಡಲು ಆಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ. ರಸ್ತೆಯಲ್ಲಿ ಅಡಿಗಟ್ಟಲೇ ಗುಂಡಿಗಳಿವೆ. ಇದರಿಂದ ಏನಾದರೂ ಅನಾಹುತವಾದ್ರೆ ಅದಕ್ಕೆ ಸರ್ಕಾರ ಹಾಗೂ ಶಾಸಕ ರಾಜೇಗೌಡರೇ ನೇರ ಹೊಣೆಯಾಗುತ್ತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

click me!