ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಿ, ಇಲ್ಲ ಮುಡಾ ತನಿಖೆ ಸಿಬಿಐಗೆ ವಹಿಸಿ: ಕೊಡಗಿನ ಮಾಜಿ ಶಾಸಕದ್ವಯರು ಒತ್ತಾಯ

By Govindaraj S  |  First Published Sep 27, 2024, 5:53 PM IST

ತಾವು ಯಾವುದೇ ತಪ್ಪು ಮಾಡಿಯೇ ಇಲ್ಲ ಎನ್ನುವ ಸಿಎಂ ಸಿದ್ದರಾಮಯ್ಯನವರು ಕ್ಯಾಬಿನೆಟ್ ಸಭೆ ನಡೆಸಿ ಕ್ಯಾಬಿನೆಟ್ಟಿನ ಒಪ್ಪಿಗೆ ಇಲ್ಲದೆ ಯಾವುದೇ ತನಿಖೆ ಮಾಡಬಾರದು ಎಂದು ಸಿಬಿಐನ ಅಧಿಕಾರವನ್ನು ಕಿತ್ತುಕೊಂಡಿದ್ದೇಕೆ ಎಂದು ಕೊಡಗಿನ ಮಾಜಿ ಶಾಸಕದ್ವಯರು ಗಂಭೀರ ಪ್ರಶ್ನೆ ಎತ್ತಿದ್ದಾರೆ. 


ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಸೆ.27): ತಾವು ಯಾವುದೇ ತಪ್ಪು ಮಾಡಿಯೇ ಇಲ್ಲ ಎನ್ನುವ ಸಿಎಂ ಸಿದ್ದರಾಮಯ್ಯನವರು ಕ್ಯಾಬಿನೆಟ್ ಸಭೆ ನಡೆಸಿ ಕ್ಯಾಬಿನೆಟ್ಟಿನ ಒಪ್ಪಿಗೆ ಇಲ್ಲದೆ ಯಾವುದೇ ತನಿಖೆ ಮಾಡಬಾರದು ಎಂದು ಸಿಬಿಐನ ಅಧಿಕಾರವನ್ನು ಕಿತ್ತುಕೊಂಡಿದ್ದೇಕೆ ಎಂದು ಕೊಡಗಿನ ಮಾಜಿ ಶಾಸಕದ್ವಯರು ಗಂಭೀರ ಪ್ರಶ್ನೆ ಎತ್ತಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ನಡೆಸಿದ ಕೊಡಗಿನ ಮಾಜಿ ಶಾಸಕದ್ವಯರು ಸಿಎಂ ಸಿದ್ದರಾಮಯ್ಯ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಆರೋಪ ಬಂದ ತಕ್ಷಣವೇ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ ತನಿಖೆ ಎದುರಿಸಬೇಕಿತ್ತು. ಹಿಂದೆ ಯಡಿಯೂರಪ್ಪನವರಿಗೆ ಸಿದ್ದರಾಮಯ್ಯ ಹೇಳಿದ ಮಾತನ್ನ ಉಳಿಸಿಕೊಂಡು ರಾಜೀನಾಮೆ ನೀಡಬೇಕು. 

Tap to resize

Latest Videos

undefined

ತನಿಖೆ ನಡೆದು ಸಿದ್ದರಾಮಯ್ಯ ಅವರು ದೋಷಿ ಅಲ್ಲ ಅಂದ್ರೆ ಮತ್ತೆ ಅಧಿಕಾರಕ್ಕೆ ಏರಲಿ. ನಮ್ಮದೇನು ಅಭ್ಯಂತರವಿಲ್ಲ ಎಂದರು. ತಾವು ಏನೂ ತಪ್ಪು ಮಾಡಿಲ್ಲ ಎಂದರೆ ತನಿಖೆ ನಡೆಯಲು ಬಿಡುವುದಕ್ಕೆ ಏನು ಸಮಸ್ಯೆ. ಸಿಬಿಐ, ಲೋಕಾಯುಕ್ತ ಎಲ್ಲವೂ ನಿಮ್ಮ ಕೈಕೆಳಗೆ ಬರುತ್ತದೆ. ಹೀಗಿರುವಾಗ ರಾಜೀನಾಮೆ ನೀಡದೆ ನ್ಯಾಯಯುತ ತನಿಖೆ ಹೇಗೆ ನಡೆಯುತ್ತದೆ. ಸಿದ್ದರಾಮಯ್ಯನವರು ಎಲ್ಲವನ್ನೂ ಬೋಗಸ್ ಮಾಡುತ್ತಿದ್ದಾರೆ. ತಾನು ತಪ್ಪು ಮಾಡಿಲ್ಲ ಅಂದ್ರೆ  ಲೋಕಾಯುಕ್ತಕ್ಕೆ ಫ್ರೀ ಹ್ಯಾಂಡ್ ಕೊಡಿ. ಫ್ರೀ ಅಂಡ್ ಫೈಯರ್ ಆಗಿ ಲೋಕಾಯುಕ್ತ ಮುಂದೆ ಹೋಗಬೇಕು. ಲೋಕಾಯುಕ್ತಕ್ಕೆ ಫ್ರೀ ಹ್ಯಾಂಡ್ ಕೊಡಿ ಇಲ್ಲಾ ಅಂದ್ರೆ ಮುಡಾ ತನಿಖೆಯನ್ನು CBI ಗೆ ಕೊಡಿ. 

ಸಿದ್ದರಾಮಯ್ಯ ನಾನು ತಪ್ಪು ಮಾಡಿಲ್ಲ ಅಂತ ಕಾನ್ಫಿಡೆಂಟ್ ನಿಂದ ಹೇಳುತ್ತಾರೆ. ಲೋಕಾಯುಕ್ತೆ ತನಿಖೆ ಕೊಟ್ಟಿರೋದ್ರಿಂದ ಕಾನ್ಫಿಡೆಂಟ್ ನಲ್ಲಿ ಇದ್ದಾರೆ. CBI ಗೆ ಕೊಟ್ಟು ನೇರವಾಗಿ ತನಿಖೆ ಎದುರಿಸಲೆಂದು ಮಡಿಕೇರಿ ಮಾಜಿ ಶಾಸಕ ಅಪ್ಪಚ್ಚು ರಂಜನ್ ಒತ್ತಾಯಿಸಿದರು. ಕಾಂಗ್ರೆಸ್ನವರು ರಾಜ್ಯಪಾಲರನ್ನ ಹೀನಾ ಮಾನವಾಗಿ ನಡೆಸಿದುಕೊಂಡಿದ್ದಾರೆ. ಸಂವಿಧಾನದ ಮುಖ್ಯಸ್ಥರಿಗೆ ಹೀಗೆ ಮಾಡಿರೋದು ಸರಿಯಲ್ಲ. ರಾಜ್ಯಾಪಾಲರನ್ನ ಹೀನಾಮಾನವಾಗಿ  ನಡೆಸಿಕೊಂಡಿರುವ ಕಾಂಗ್ರೆಸ್ ನಡೆ ಸರಿಯಲ್ಲ. ಹೈಕೋರ್ಟ್ ಪಾಯಿಂಟ್ ಬೈ ಪಾಯಿಂಟ್ ಉತ್ತರ ಕೊಟ್ಟಿದೆ. ಭಾರತೀಯ ನೀತಿ ಸಂಹಿತೆ ಪ್ರಕಾರ ವರದಿಕೊಡಿ ಅಂದಿದೆ. 

ಚುನಾವಣೆ ಘೋಷಣೆಯಾದರೇ ಕಾಂಗ್ರೆಸ್‌ಗೆ ಸೋಲು ಖಚಿತ: ನಿಖಿಲ್ ಕುಮಾರಸ್ವಾಮಿ ಭವಿಷ್ಯ

ಅದರ ಪ್ರಕಾರ ಸಿದ್ದರಾಮಯ್ಯ ನಡೆದುಕೊಳ್ಳಬೇಕು, ಆದರೆ ಲೋಕಾಯುಕ್ತವನ್ನೆ ಸಂಶಯದ ದೃಷ್ಟಿಯಿಂದ ನೋಡುವಂತೆ ಮಾಡಿದ್ದಾರೆ. ಆದೇಶದ  ಕಂಪ್ಲೀಟ್ ಕಾಫಿ ಲೋಕಾಯುಕ್ತೆ ನ್ಯಾಯಾಲಯವೇ ಕಳುಹಿಸಿ ಕೊಡುತ್ತೆ. ಹೀಗಿರುವಾಗ ಲೋಕಾಯುಕ್ತ ಅಧಿಕಾರಿಗಳು ಬೆಂಗಳೂರಿಗೆ ಹೋಗಿ ತಂದ್ರು?. ಸಿದ್ದರಾಮಯ್ಯ ಒಂದು ಪ್ರಕರಣ ಉಳಿಸಲು ಏನು ಬೇಕಾದ್ರು ಮಾಡಬಹುದಾ?. ಪ್ರಜಾಪ್ರಭುತ್ವವನ್ನೆ ಬುಡಮೇಲು ಮಾಡಲು ಹೊರಟಿದೆ ಕಾಂಗ್ರೆಸ್ ಸರ್ಕಾರ, ಕ್ಯಾಬಿನೆಟ್ ಮೀಟಿಂಗ್ ಮಾಡಿ ಮಾಡಿರುವ ನಿರ್ಧಾರ ಸಂವಿಧಾನ ವಿರೋಧಿ. ರಾಜೀನಾಮೆ ಕೊಡದೆ  ಲೋಕಾಯುಕ್ತ ತನಿಖೆ ಎದುರಿಸೋದು ಸರಿಯಲ್ಲ ಎಂದು ವಿರಾಜಪೇಟೆ ಮಾಜಿ ಶಾಸಕ ಕೆ.ಜಿ ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

click me!